ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿ ನಟಿ ಸಪ್ನಾ ದೀಕ್ಷಿತ್ ಅವರು ಇಂದಿನ ಸಮಾಜದಲ್ಲಿ ನಡೆಯುತ್ತಿರುವ ಮದುವೆ, ಡಿವೋರ್ಸ್ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇನ್ನು ಎರಡನೇ ಮದುವೆ ಆದವರ ಬಗ್ಗೆ ಮಾತನಾಡಿದ್ದಾರೆ.
ಇಂದು ಡಿವೋರ್ಸ್, ಬ್ರೇಕಪ್, ಅಕ್ರಮ ಸಂಬಂಧ ಎನ್ನುವಂತದ್ದು ಸಾಮಾನ್ಯವಾಗಿಬಿಟ್ಟಿದೆ. ಸೆಲೆಬ್ರಿಟಿಗಳು ಕೂಡ ಹದಿನೈದು, ಇಪ್ಪತ್ತು ವರ್ಷ ಸಂಸಾರ ಮಾಡಿ ಡಿವೋರ್ಸ್ ತಗೊಳ್ತಿದ್ದಾರೆ. ಈ ಬಗ್ಗೆ ʼಶ್ರೀರಸ್ತು ಶುಭಮಸ್ತುʼ ಧಾರಾವಾಹಿ ನಟಿ ಸಪ್ನಾ ದೀಕ್ಷಿತ್ ಅವರು Asianet Suvarna News ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಇಂದಿನ ಯುವಜನತೆಯಲ್ಲಿ ಕೆಲವರು ಮದುವೆ ಆಗೋದಕ್ಕೆ ಭಯ ಅಂತ ಹೇಳುತ್ತಾರೆ. ಅವರಿಗೆ ಯಾವುದೇ ರಿಲೇಶನ್‌ಶಿಪ್ ಕೂಡ ಇರೋದಿಲ್ಲ.
ಹೌದು, ನನಗೂ ಕೆಲವರು ಹೇಳಿದ್ದಿದೆ. ಇತ್ತೀಚೆಗ ಒಂದು ಹುಡುಗ ಮದುವೆ ಆಗಲ್ಲ ಅಂದ. ಅದಕ್ಕೆ ನಾನು ಕಾರಣ ಕೇಳಿದಾಗ ಅವನು, ಯಾಕೆ ಬೇಕೆ ಮೇಡಂ ಮದುವೆ ಅಂತ ಅಂದ. ಆಗ ನಾನು ಯಾಕೋ ಹಂಗಂತೀಯಾ? ಎಲ್ಲವೂ ಅನುಭವ ಆಗಬೇಕು. ಜೀವನದಲ್ಲಿ ನಾನಂತೂ 25ನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡ್ಕೋಬೇಕು, 60ನೇ ವರ್ಷದ ಶಾಂತಿ ಮಾಡ್ಕೋಬೇಕು, ಇನ್ನೊಂದು ಬಾರಿ ತಾಳಿ ಕಟ್ಟಿಸಿಕೊಳ್ಳಬೇಕು ಅಂತಿದೀನಿ.
'ಶ್ರೀರಸ್ತು ಶುಭಮಸ್ತು' ಧಾರಾವಾಹಿ: ಅತ್ತ ಶಾರ್ವರಿ ಪಾಪ ಬಯಲಾಗ್ತಿದ್ರೆ, ಇತ್ತ ತುಳಸಿ ಜೀವ ಹೋಗೋ ನ್ಯೂಸ್ ಬಂತು!
ಇವತ್ತು ಸಣ್ಣ ಸಣ್ಣ ವಿಷಯಕ್ಕೆ ಬ್ರೇಕಪ್ ಆಗ್ತಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಡಿವೋರ್ಸ್ ತಗೊಂಡಿದ್ದಾರೆ. ನಾವಿಬ್ಬರು ಪರಸ್ಪರ ಗೌರವದಿಂದ ದೂರ ಆಗ್ತಿದ್ದೀವಿ ಅಂತ ಹೇಳುತ್ತಾರೆ. ಇದಕ್ಕೆ ಕಾರಣ ಏನು?
ಒಂದು ನಾಲ್ಕೈದು ಬಾರಿ ಮಾತುಕಥೆ ಮಾಡಿ. ಯಾವಾಗಲೂ ಅವರು ತಿದ್ದುಕೊಂಡಿಲ್ಲ, ಅದೇ ಸ್ಥಿತಿಯಲ್ಲೇ ಇದ್ದಾರೆ ಅಂದ್ರೆ ಅಂತವರನ್ನ ಬಿಟ್ಟುಬಿಡಿ.
ಪ್ರೀತಿ ಮಾಡೋದು ಬೇರೆ ಮದುವೆಯಾಗಿ ಸಂಸಾರ ಮಾಡೋದೇ ಬೇರೆ ಅಲ್ವಾ?
ಅದು ನಿಜವಾಗಿಯೂ ಸತ್ಯ. ಪ್ರೀತಿ ಮಾಡುವಾಗ ಪಾಸಿಟಿವ್ ಆಗಿದ್ದು, ಮದುವೆ ಆಗಿ ನೆಕ್ಸ್ಟ್ ಸಂಸಾರ ಮಾಡೋವಾಗ ನೆಗೆಟಿವ್ ಆಗುವುದು. ಪ್ರೀತಿ ಮಾಡುವಾಗ ಅರ್ಥ ಮಾಡಿಕೊಳ್ಳೋದು ಒಬ್ಬರಿಗೊಬ್ಬರು ಅಷ್ಟೇ. ಮದುವೆ ಆದಮೇಲೆ ಫ್ಯಾಮಿಲಿ ಬರುವುದು. ಮದುವೆಗಿಂತ ಮುಂಚೆ ಅವರು ನನ್ನ ಜೊತೆ ಚೆನ್ನಾಗಿದ್ರು ಬಟ್ ಮದುವೆ ಆದ್ಮೇಲೆ ಟೈಮ್ ಕೊಡ್ತಿಲ್ಲ ಅಂತ ಹೇಳ್ತಾರೆ. ಅವಳು ಬೇಡ ಅಂದಾಗ ನೀವು ಹಟಕ್ಕೆ ಬೀಳಬೇಡಿ, ನನಗೆ ನೀನು ಬೇಕೇ ಬೇಕು ಅಂತ ಕೂರಬೇಡಿ.
ಇಂದು ಗಂಡನನ್ನು ಕೊಂದು ಡ್ರಮ್ ಅಲ್ಲಿ ಹಾಕ್ತಾರೆ. ಇನ್ನು ಹೆಂಡತಿಯನ್ನ ಕೊಂದು ಸೂಟ್‌ಕೇಸ್‌ನಲ್ಲಿ ಹಾಕ್ತಾರೆ. ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಾಯಿಸೋ ಮನಸ್ಥಿತಿ ಬಂದಿದೆ ಅಂದ್ರೆ ಬೆಟರ್ ನಿಮ್ಮ ಸಂಗಾತಿಯನ್ನು ಬಿಟ್ಟುಬಿಡಿ. ಅವರನ್ನು ಆರಾಮಾಗಿ ಇರೋಕೆ ಬಿಡಿ. ನೀವು ಸಾಯಿಸಿ ಜೈಲಿಗೆ ಹೋಗಿ ನೀವು ಅನುಭವಿಸ್ತೀರಾ. ಹೀಗಾಗಿ ದೂರ ಇರೋದು ಒಳ್ಳೆಯದು. ಬಹುಶಃ ನಿಮ್ಮ ಹಣೆಯಲ್ಲಿ ಇನ್ನೊಬ್ಬರ ಹೆಸರನ್ನು ದೇವರು ಬರೆದಿರಬಹುದು. ಮೊದಲನೇ ಮದುವೆಯಿಂದ ಸಮಸ್ಯೆ ಆಗಿರತ್ತೆ, ಆಮೇಲೆ ಡಿವೋರ್ಸ್ ತಗೊಂಡು ಎರಡನೇ ಮದುವೆ ಆದ ಕೆಲವರು ಆರಾಮಾಗಿ ಇರೋದನ್ನು ನಾನು ನೋಡಿದೀನಿ, ಕೇಳಿದೀನಿ. ಸಾವು ಒಂದೇ ಪರಿಹಾರ ಅಲ್ಲ ಅನ್ನೋದು ನನ್ನ ಅಭಿಪ್ರಾಯ.
ಶ್ರೀರಸ್ತು ಶುಭಮಸ್ತು ಧಾರಾವಾಹಿ ತಂಡದೊಂದಿಗೆ ವಿಶೇಷ ಸಂದರ್ಶನ: ಮಾಧವನ ಪಾತ್ರದ ಬಗ್ಗೆ ಸುಧಾರಾಣಿ ಹೇಳಿದ್ದೇನು?
ಮದುವೆಯಾಗಿ 10 ವರ್ಷ ಆದಮೇಲೆ ಅಕ್ರಮ ಸಂಬಂಧ ಶುರುವಾಗ್ತಿದೆ.
ಟೈಮ್ ಕೊಡ್ತಿಲ್ಲ ಅನ್ನುವ ಕಾರಣಕ್ಕೆ ಅಕ್ರಮ ಸಂಬಂಧ ಹುಟ್ಟಿಕೊಳ್ಳಬಹುದು. ಮಾತಾಡಿ ಬಗೆಹರಿಸಿಕೊಳ್ಳಿ. ಒಂದು ವಾರ ಬ್ರೇಕ್ ತಗೋಳಿ, ಸಂಗಾತಿ ಜೊತೆ ಟೈಮ್ ಕಳೆಯಿರಿ. ನಿಮ್ಮ ಸಂಗಾತಿ ಜೊತೆಗೆ ಚೆನ್ನಾಗಿದ್ದರೆ ಈ ರೀತಿ ಸಮಸ್ಯೆಗಳು ಬರೋದಿಲ್ಲ. ನೀವು ಇಷ್ಟಪಟ್ಟು ಮದುವೆ ಆಗಿರೋರನ್ನ ಉಳಿಸಿಕೊಳ್ಳಿ.