ರಣರಂಗವಾಯ್ತು ಬಿಗ್ ಬಾಸ್ ಮನೆ, ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು, ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ!

Published : Oct 28, 2023, 12:59 PM ISTUpdated : Oct 28, 2023, 04:24 PM IST
ರಣರಂಗವಾಯ್ತು ಬಿಗ್ ಬಾಸ್ ಮನೆ,  ಡಾಮಿನೇಟ್ ಮಾಡೋಕೆ ಯಾವಳೋ ಅವ್ಳು, ತನಿಶಾ ವಿರುದ್ಧ ಹರಿಹಾಯ್ದ ನಮ್ರತಾ!

ಸಾರಾಂಶ

ನಮ್ರತಾ ಕೂಗಾಡಿದ್ದಕ್ಕೆ ಟೆಂಪರ್ ಕಳೆದುಕೊಳ್ಳದ ತನಿಷಾ ತನ್ನದೇನೂ ತಪ್ಪಿಲ್ಲ ಎಂಬಂತೆ ಕೂಲಾಗಿ ಸಮಜಾಯಿಸಿ ನೀಡಿದ್ದಾರೆ. ಆದರೆ, ನಮ್ರತಾ ಕೂಗಾಡಿದ್ದು ಕೇಳಿ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಅಕ್ಷರಶಃ 'ಸ್ಟನ್' ಆಗಿದ್ದಾರೆ. ಸದ್ಯಕ್ಕೆ ಅಲ್ಲಿ ಯಾವುದೇ ಸಪೋರ್ಟ್‌ ಅಥವಾ ವಿರೋಧ ಅವರಿಬ್ಬರಲ್ಲಿ ಯಾರ ಬಗ್ಗೆಯೂ ಬಂದಿಲ್ಲ.

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಎಲ್ಲವೂ ಬದಲಾಗುತ್ತಿದೆ. ನಿನ್ನೆ ಇದ್ದಂತೆ ಇವತ್ತು ಇರುವುದಿಲ್ಲ. ತುಂಬಾ ದಿನಗಳಿಂದ ಇದ್ದು ಸದ್ಯಕ್ಕೆ ಬದಲಾಗದಿರುವುದು ಕಾರ್ತಿಕ್-ಸಂಗೀತಾ ಲವ್ ಮಾತ್ರ ಎನ್ನಬಹುದು. ಇಶಾನಿ-ಮೈಕಲ್ ಲವ್ ಸ್ಟೋರಿ ಶುರುವಾದ ಬೆನ್ನಲ್ಲೇ, ಇದೀಗ ಹೊಸ ಜಗಳದ ಬಾಂಬ್ ಬಿಗ್ ಬಾಸ್ ಮನೆಯಲ್ಲಿ ಸ್ಪೋಟಿಸಿದೆ. ಇಷ್ಟು ದಿನ ಎಲ್ಲವೂ ಸರಿ ಇದೆ ಎಂಬಂತೆ ಇದ್ದ ತನಿಷಾ ಕುಪ್ಪುಂದ-ನಮ್ರತಾ ಗೌಡ ನಡುವೆ ಭಾರೀ ಮನಸ್ತಾಪ ತಲೆದೋರಿದೆ. 

ಹೌದು, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ತನಿಷಾ ವಿರುದ್ಧ ಜೋರಾದ ಧ್ವನಿಯಲ್ಲಿ ಕೂಗಾಡಿ ದೊಡ್ಡ ರಂಪವನ್ನೇ ಮಾಡಿದ್ದಾರೆ. ಟೆಂಪರ್ ಕಳೆದುಕೊಂಡು ಮಾತನಾಡಿರುವ ನಮ್ರತಾ 'ಯಾಕೆ ಅವ್ಳು ಅಷ್ಟೊಂದು ಡಾಮಿನೇಟ್ ಮಾಡ್ತಾಳೆ, ಮಾಡ್ಬೇಕು? ಏನೇ ಅಂದ್ರೂ ನಿನ್ನೆ ನಾನು ಸುಮ್ನೆ ಇದ್ದೆ. ಆದರೆ, ಅವ್ಳದು ತುಂಬಾ ಜಾಸ್ತಿ ಆಯ್ತು. ಅವ್ಳು ಯಾರು ಹೇಳೋಕೆ, ನೀನು ಬಿಗ್ ಬಾಸ್ ಅಲ್ಲ, ಬಿಗ್ ಬಾಸ್ ಮಾತ್ರ ಹೇಳ್ಬೇಕು ಇಲ್ಲಿ' ಎಂದು ತನಿಷಾ ವಿರುದ್ಧ ಕೂಗಾಡಿದ್ದಾರೆ ನಮ್ರತಾ. 

ಟ್ರೈಲರ್ ರಿಲೀಸ್, 'ಸಪ್ತ ಸಾಗರದಾಚೆ ಎಲ್ಲೋ B'ಸಿನಿಮಾ ಬಿಡುಗಡೆ ಕನ್ಫರ್ಮ್

ನಮ್ರತಾ ಕೂಗಾಡಿದ್ದಕ್ಕೆ ಟೆಂಪರ್ ಕಳೆದುಕೊಳ್ಳದ ತನಿಷಾ ತನ್ನದೇನೂ ತಪ್ಪಿಲ್ಲ ಎಂಬಂತೆ ಕೂಲಾಗಿ ಸಮಜಾಯಿಸಿ ನೀಡಿದ್ದಾರೆ. ಆದರೆ, ನಮ್ರತಾ ಕೂಗಾಡಿದ್ದು ಕೇಳಿ ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳು ಅಕ್ಷರಶಃ 'ಸ್ಟನ್' ಆಗಿದ್ದಾರೆ. ಸದ್ಯಕ್ಕೆ ಅಲ್ಲಿ ಯಾವುದೇ ಸಪೋರ್ಟ್‌ ಅಥವಾ ವಿರೋಧ ಅವರಿಬ್ಬರಲ್ಲಿ ಯಾರ ಬಗ್ಗೆಯೂ ಬಂದಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ವೀಕ್ಷಕರು ತನಿಷಾ ಪರವಾಗಿ ಹಾಗೂ ನಮ್ರತಾ ವಿರುದ್ಧವಾಗಿ ಬಹಳಷ್ಟು ಕಾಮೆಂಟ್ ಮಾಡಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯನ್ನು ರಣರಂಗ ಮಾಡುವ ಪ್ರಯತ್ನವಂತೂ ನಡೆದಿದೆ. 

ಡ್ರೋನ್ ವಿಷಯ ಮತ್ತೆ ಎಳೆದು ತಂದ ವಿನಯ್-ಸ್ನೇಹಿತ್, ಸಂದೇಹಗಳಿಗೆ ಬೆಚ್ಚಿಬಿದ್ರಾ ಪ್ರತಾಪ್?

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ
Brahmagantu Serial ದೀಪಾ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?