ದುಬೈ ಉದ್ಯಮಿ ಅಲ್ಲ ಪಕ್ಕಾ RR ನಗರದ ಗೌಡ್ರು; ಪತಿ ಬಗ್ಗೆ ಸತ್ಯ ಬಿಚ್ಚಿಟ್ಟ ದೀಪಿಕಾ ದಾಸ್

By Vaishnavi Chandrashekar  |  First Published Mar 11, 2024, 10:04 AM IST

ಪಕ್ಕಾ ದೇಸಿ ಹುಡುಗನನ್ನು ಪ್ರೀತಿಸಿ ಮದುವೆಯಾಗಿರುವೆ ಎಂದು ಹೆಮ್ಮೆಯಿಂದ ಹೇಳಿಕೊಂಡ ದೀಪಿಕಾ ದಾಸ್. ನಿಜಕ್ಕೂ ದೀಪಕ್ ಯಾರು. 


ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಗ್ ಟಫ್‌ ಸ್ಪರ್ಧಿ ದೀಪಿಕಾ ದಾಸ್ ಮತ್ತು ಬಹುಕಾಲದ ಗೆಳೆಯ ದೀಪಕ್ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡು ಸಿನಿಮಾ ಮತ್ತು ಕಿರುತೆರೆ ಸ್ನೇಹಿತರನ್ನು ಆಹ್ವಾನಿಸಿದ್ದರು. ಮದುವೆ ವಿಚಾರಕ್ಕೆ ಸುದ್ದಿಯಲ್ಲಿ ದೀಪಿಕಾ ದಾಸ್ ಮೊದಲ ಸಲ ತಮ್ಮ ಬಾಳಸಂಗಾತಿ ಬಗ್ಗೆ ಮಾತನಾಡಿದ್ದಾರೆ.

' ದೀಪಕ್ ಯಾರು ಅನ್ನೋ ಕುತೂಹಲ ಎಲ್ಲರಿಗೂ ಇದೆ ಅಲ್ಲದೆ ದೀಪಕ್ ಹೇಗೆ ಸಡನ್ ಆಗಿ ಪರಿಚಯ ಆದ್ರು ಅಂತ. ಹಲವು ವರ್ಷಗಳಿಂದ ದೀಪಕ್ ಪರಿಚಯ ಆದರೆ ಡೇಟಿಂಗ್ ಮಾಡಲು ಶುರು ಮಾಡಿ ಒಂದು ವರ್ಷ ಆಯ್ತು. ನಮ್ಮ ಹುಡುಗ ಪಕ್ಕಾ ದೇಸಿ ಕನ್ನಡದವರು ಬೆಂಗಳೂರು ಹುಡುಗ...ಇಲ್ಲೇ ಅಕ್ಕ ಪಕ್ಕ ಅಂದ್ರೂ ರಾಜರಾಜೇಶ್ವರಿ ನಗರದ ಹುಡುಗ. ಓಡಾಡುವುದರಲ್ಲಿ ಸುತ್ತಾಡುವುದರಲ್ಲಿ ನಾವು ಎಲ್ಲೂ ಗೌಪ್ಯವಾಗಿ ಇರಲಿಲ್ಲ...ಎಲ್ಲರಂತೆ ಕ್ಯಾಶುಯಲ್ ಆಗಿ ಎಂಜಾಯ್ ಮಾಡಿಕೊಂಡು ಓಡಾಡಿದ್ದೀವಿ. ದೀಪಿಕಾ ದಾಸ್ ಮದುವೆ ಯಾಕೆ ಇಷ್ಟೊಂದು ಸದ್ದು ಮಾಡುತ್ತಿದೆ ಎಂದು ನನಗೂ ಗೊತ್ತಿಲ್ಲ' ಎಂದು ದೀಪಿಕಾ ದಾಸ್ ಮಾತನಾಡಿದ್ದಾರೆ.

Tap to resize

Latest Videos

'ನಾಗಿಣಿ' ಖ್ಯಾತಿಯ ದೀಪಿಕಾ ದಾಸ್‌ ಕರಿಮಣಿ ಮಾಲೀಕ ಯಾರು ಗೊತ್ತಾ?: ಸೀಕ್ರೆಟ್ ಆಗಿ ಮದುವೆಯಾಗಿದ್ದು ಯಾಕೆ?

'Finally ನಾನು ಮದುವೆ ಆಗಿದ್ದೀನಿ...ದೀಪಕ್‌ರನ್ನು ಮದುವೆಯಾಗಿದ್ದೀನಿ. 3D ವರ್ಲ್ಡ್‌ನಲ್ಲಿ ಇದ್ದೀವಿ ನಾವು ಸದ್ಯಕ್ಕೆ. ಮಾಧ್ಯಮಗಳು ಇರಲಿಲ್ಲ ಅಂದಿದ್ರೆ ದೀಪಿಕಾ... ದೀಪಿಕಾ ದಾಸ್ ಆಗಿ ಗುರುತಿಸಿಕೊಳ್ಳಲು ಆಗುತ್ತಿರಲಿಲ್ಲ. ನಮ್ಮ ಮದುವೆಯನ್ನು ನಾವು ಸೀಕ್ರೆಟ್‌ ಆಗಿ ಇಟ್ಟಿರಲಿಲ್ಲ ಹಲವು ತಿಂಗಳುಗಳಿಂದ ತಯಾರಿ ಮಾಡಿಕೊಂಡಿದ್ದೀವಿ. ಡೆಸ್ಟಿನೇಷನ್‌ ಮದುವೆ ಆಗಬೇಕು ಎಂದು ಆಸೆ ತುಂಬಾನೇ ಇತ್ತು...ಹೀಗಾಗಿ ಅಲ್ಲಿ ಮದುವೆ ಮಾಡಿಕೊಂಡಿದ್ದು. ದೀಪಿಕ್‌ ಅವರದ್ದು ದೊಡ್ಡ ಕುಟುಂಬ ಆಗಿದ್ದು ಎಲ್ಲರೂ ಬೆಂಗಳೂರಿನಲ್ಲಿ ಇರುವುದು...ಆದರೂ ಅವರು ನನ್ನ ಮಾತಿಗೆ ಒಪ್ಪಿಗೆ ಕೊಟ್ಟು ನನ್ನ ಆಸೆ ಎಂಥ ಮದುವೆ ಮಾಡಿಕೊಂಡರು. ತಿಂಗಳಿಗೆ ಎರಡು ಮೂರು ಸಲ ನಾವು ಗೋವಾಗೆ ಪ್ರಯಾಣ ಮಾಡಿ ಮದುವೆ ತಯಾರಿ ಮಾಡಿದ್ದು. ದೀಪಕ್‌ ಮತ್ತು ನಾನು ನಾಲ್ಕೈದು ವರ್ಷಗಳಿಂದ ಪರಿಚಯ. ನಾವು ಮದುವೆ ಮಾಡಿಕೊಳ್ಳಬೇಕು ಅನ್ನೋ ಯೋಚನೆ ಇರಲಿಲ್ಲ. ಒಂದು ಕಾರ್ಯಕ್ರಮದಲ್ಲಿ ಭೇಟಿ ಮಾಡಿದ ಮೇಲೆ ಮದುವೆ ಅನ್ನೋ ಯೋಚನೆ ಇಟ್ಟುಕೊಂಡು ಡೇಟ್ ಮಾಡೋಣ ಅಂತ ಅಂದುಕೊಂಡ್ವಿ..ಒಂದು ವರ್ಷ ಕಳೆಯಿತ್ತು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಅಂದ್ಮೇಲೆ ಖಂಡಿತಾ ಮದುವೆ ಆಗಬೇಕು ಅನ್ನೋ ನಿರ್ಧಾರ ಮುಂದುವರೆಸಿದೆ' ಎಂದು ದೀಪಿಕಾ ದಾಸ್ ಹೇಳಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ದಾಸ್ ಮದುವೆ ಸುದ್ದಿ ವೈರಲ್; ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದೇಕೆ?

'ನಾನು ಮೊದಲೇ ಮಾತನಾಡುವುದು ಕಡಿಮೆ ಆದರೆ ನನಗೆ ಸಿಕ್ಕಿರುವ ಹುಡುಗ ನನಗಿಂತ ಕಡಿಮೆ ಮಾತನಾಡುತ್ತಾರೆ. ಅಲ್ಲಿ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿ ರಿಸೆಪ್ಶನ್ ಮತ್ತು ಬೀಗರ ಊಟ ಪ್ಲ್ಯಾನ್ ಮಾಡಿದ್ವಿ. ನಮ್ಮ ಹುಡುಗ ಈ ಇಂಡಸ್ಟ್ರಿ ಅವರು ಅಲ್ಲಲ ದಯವಿಟ್ಟು ಹೆದರಿಸಬೇಡಿ. ಇಷ್ಟು ದಿನ ಟ್ರೋಲ್ ಮತ್ತು ಸೋಷಿಯಲ್ ಮೀಡಿಯಾಗಳ ಬಗ್ಗೆ ನನ್ನಿಂದ ಕೇಳಿಸಿಕೊಳ್ಳುತ್ತಿದ್ದರು ಆದರೆ ಇಂದಿನಿಂದ ಅದನ್ನು ನೇರವಾಗಿ ನೋಡುತ್ತಾಳೆ ಕೇಳಿಸಿಕೊಳ್ಳುತ್ತಾರೆ ಹೀಗಾಗಿ ದಯವಿಟ್ಟು ಯಾರೂ ಅವರಿಗೆ ಹೆದರಿಸಬೇಡಿ. ಅವರು ಲೈಮ್‌ಲೈಟ್‌ನಿಂದ ದೂರ ಇದ್ದಾರೆ' ಎಂದಿದ್ದಾರೆ ದೀಪಿಕಾ. 

ತಮ್ಮನ್ನು ತಾವು ಪರಿಚಯ ಮಾಡಿಕೊಂಡ ಮಾಡಿಕೊಳ್ಳುವಾಗ ದೀಪಕ್‌ ರಿಯಲೆಸ್ಟೇಟ್‌ ಡೆವಲಪರ್‌ ಎಂದು ರಿವೀಲ್ ಮಾಡಿದ್ದರು. ದುಬೈ ಉದ್ಯಮಿ ಎಂದು ಎಲ್ಲೆಡೆ ಸುದ್ದಿಯಾಗುತ್ತಿರುವ ಕಾರಣ ಪ್ರಶ್ನಿಸಲಾಗಿತ್ತು 'ದುಬೈನಲ್ಲಿ ನಾನು ಸ್ಟಾರ್ಟಪ್‌ ಓಪನ್ ಮಾಡಿರುವೆ ಆದರೆ ನಾನು ಬೆಂಗಳೂರು ಹುಡುಗ ಬೆಂಗಳೂರಿನಲ್ಲಿ ಇರುವುದು' ಎಂದು ಹೇಳಿದ್ದಾರೆ. 

click me!