ಬೆಳ್ಳುಳ್ಳಿ ಕಬಾಬ್​ ಮಾಲೀಕಂಗೂ ವಿಕ್ಕಿಪಿಡಿಯಾಗೂ 'ಸಂಧಾನ'! ಗಿಫ್ಟ್ ನೋಡಿ ಚಂದ್ರು ಏನಂದ್ರು?

By Suvarna News  |  First Published Mar 10, 2024, 5:22 PM IST

ಬೆಳ್ಳುಳ್ಳಿ ಕಬಾಬ್​ ಮಾಲೀಕ ಚಂದ್ರು ವಿಕ್ಕಿಪಿಡಿಯಾ ತಂಡದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಂತೆಯೇ ವಿಕಾಸ್​ಮೀಟ್​ ಆಗಿದ್ದಾರೆ. ಮುಂದೇನಾಯ್ತು?  ನೆಟ್ಟಿಗರು ಏನಂದ್ರು? 
 


ಈಗ ಸೋಷಿಯಲ್​ ಮೀಡಿಯಾದಲ್ಲಿ ಕರಿಮಣಿ ಮಾಲೀಕನದ್ದೇ ಹವಾ. ಏನಿಲ್ಲ... ಏನಿಲ್ಲ... ಕರಿಮಣಿ ಮಾಲಿಕ ನೀನಲ್ಲ ಎಂದು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ರೀಲ್ಸ್​ ಮಾಡುತ್ತಿದ್ದಾರೆ. ಉಪೇಂದ್ರ ನಾಯಕನಾಗಿ ನಟಿಸಿದ್ದ 'ಉಪೇಂದ್ರ' ಸಿನಿಮಾದ ಹಾಡುಗಳು ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದವು. ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಒಬ್ಬೊಬ್ಬ ನಾಯಕಿಗೆ ಒಂದೊಂದು ಹಾಡನ್ನು ಇಡಲಾಗಿತ್ತು. ಅದರಲ್ಲಿ ಉಪ್ಪಿ ಹಾಗೂ ಪ್ರೇಮಗೆ ಅಂತ ಕಂಪೋಸ್ ಮಾಡಿದ್ದ ಹಾಡೇ 'ಏನಿಲ್ಲ.. ಏನಿಲ್ಲ..'. ಆಗತಾನೇ 'ಎ' ಸಿನಿಮಾಗೆ ಭರ್ಜರಿ ಮ್ಯೂಸಿಕ್ ಕೊಟ್ಟು ಗೆದ್ದಿದ್ದ ಗುರುಕಿರಣ್ 'ಉಪೇಂದ್ರ'ಗೂ ಮಸ್ತ್ ಟ್ಯೂನ್ ಹಾಕಿದ್ದರು. ಇದೀಗ ಮತ್ತೆ 25 ವರ್ಷಗಳ ಬಳಿಕ ಹಲ್​ಚಲ್​ ಸೃಷ್ಟಿಸುತ್ತಿದೆ.  

ಅದರ ಜೊತೆಗೆನೇ 'ಬೆಳ್ಳುಳ್ಳಿ ಕಬಾಬ್' ಎನ್ನುವುದು ಇನ್ನೊಂದೆಡೆ ಸಾಕಷ್ಟು ವೈರಲ್​ ಆಗುತ್ತಿದೆ.  ಚಂದ್ರು ಎನ್ನುವವರು ಯೂಟ್ಯೂಬ್ ಚಾನಲ್‌ನಲ್ಲಿ ಬೆಳ್ಳುಳ್ಳಿ ಕಬಾಬ್ ರೆಸಿಪಿ ವಿಡಿಯೋ ಮಾಡಿದ್ದರು. ರಾಹುಲ್ ಎನ್ನುವ ತಮ್ಮ ಸಹಾಯಕನನ್ನು ಅವರು ಕರೆದಿದ್ದ ರೀತಿ ಸಖತ್ ವೈರಲ್ ಆಗಿತ್ತು. ರಾವುಲ್ಲಾ ಎಂದು ಆಡುಭಾಷೆಯಲ್ಲಿ ಅವರು ಕರೆದಿದ್ದು ಟ್ರೆಂಡ್ ಹುಟ್ಟುಹಾಕಿದೆ. ಇಂಥ ವೈರಲ್​ ಕಂಟೆಂಟ್​ ಸಿಕ್ಕ ಮೇಲೆ ರೀಲ್ಸ್​ ಮಾಡುವವರು ಸುಮ್ಮನೆ ಬಿಡುತ್ತಾರೆಯೆ? ಅದರಲ್ಲಿಯೂ ನಾನು ನಂದಿನಿ ಖ್ಯಾತಿಯ ವಿಕಾಸ್​(ವಿಕಿಪಿಡಿಯಾ ಎಂದೇ ಫೇಮಸ್​ ಆಗಿದ್ದಾರೆ) ಕರಿಮಣಿ ಮಾಲಿಕ ಹಾಗೂ ಬೆಳ್ಳುಳ್ಳಿ ಕಬಾಬ್​ ಎರಡನ್ನೂ ಸೇರಿಸಿ ಒಂದು ರೀಲ್ಸ್​  ಮಾಡಿದ್ದರು.  ಸ್ಪೆಷಲ್ ಸ್ಕಿಟ್ ತಯಾರಿಸಿದ್ದರು.  ಉಪೇಂದ್ರ ಬರೆದ ಕರಿಮಣಿ ಮಾಲಿಕ ಹಾಡಿಗೆ ಗುರು ಕಿರಣ ಸಂಗೀತ ಕೊಟ್ಟಿದ್ದಾರೆ. ಈ ಹಾಡಿನ ಸಾಲುಗಳನ್ನು ವಿಕ್ಕಿ ಮತ್ತವರ ತಂಡ ಸ್ಕಿಟ್​ ಜೊತೆ  ಡೈಲಾಗ್ ಮಾಡಿಕೊಂಡಿದೆ.  ಕರಿಮಣಿ ಮಾಲೀಕಾ ನೀನಲ್ಲ. ನನ್ನ ಈ ಕರಿಮಣಿ ಮಾಲಿಕ ರಾವುಲ್ಲಾ ಎಂದು ತಮಾಷೆಯಾಗಿ ತೋರಿಸಿದ್ದರು. ಬೆಳ್ಳುಳ್ಳಿ ಕಬಾಬ್​ ಹಿಡಿದುಕೊಂಡು ಬಂದ ಯುವಕನನ್ನು ತೋರಿಸುತ್ತಾ, ಆತನೇ ರಾವುಲ್ಲಾ ಎಂದಿದ್ದರು. ಇದಾದ ಬಳಿಕ ನೀನಲ್ಲ... ನೀನಲ್ಲ... ಕರಿಮಣಿ ಮಾಲಿಕ ರಾವುಲ್ಲಾ... ಎನ್ನುವ ರೀಲ್ಸ್​ ಸಕತ್​ ಫೇಮಸ್​ ಆಯಿತು.

Tap to resize

Latest Videos

ಕೊನೆಗೂ ಸಿಕ್ಕ ಒರಿಜಿನಲ್​ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್​ ಓನರ್​ ಜೊತೆ ಕರಿಮಣಿ ಮಾಲೀಕನ ಎಂಟ್ರಿ!

ಇಷ್ಟೆಲ್ಲಾ ಆದ ಮೇಲೆ ಚಂದ್ರು ಅವರು ಮಾಧ್ಯಮಗಳ ಎದುರು ಬಂದು ವಿಕ್ಕಿಪಿಡಿಯಾ ತಂಡದವರು ತಮಗೆ ಥ್ಯಾಂಕ್ಸ್​ ಹೇಳಲಿಲ್ಲ. ದುಡ್ಡು ಕೊಡಲಿಲ್ಲ. ಅವರು ಪ್ರಚಾರ ಗಿಟ್ಟಿಸಿಕೊಂಡರು ಎಂದೆಲ್ಲಾ ಸಂದರ್ಶನ ಕೊಡಲು ಶುರು ಮಾಡಿದರು. ವಿಕ್ಕಿಪಿಡಿಯಾ ಹಾಡು ಸಕತ್​ ವೈರಲ್​ ಆದ ಮೇಲೆ ಬೆಳ್ಳುಳ್ಳಿ ಕಬಾಬ್​ಗೆ ಡಿಮ್ಯಾಂಡ್​ ಹೆಚ್ಚುತ್ತಲೇ ಸಾಗಿದೆ ಎನ್ನುವುದನ್ನು ಒಪ್ಪಿಕೊಂಡರೂ ತಮಗೆ ತಂಡದಿಂದ ಯಾವುದೇ ಧನ್ಯವಾದ ಬರಲಿಲ್ಲ ಎಂದು ಹೇಳಿದರು. ಕೆಲವು ಮಾಧ್ಯಮದವರ ಎದುರು ಈ ವಿಷಯವನ್ನು ಅವರು ಪ್ರಸ್ತಾಪಿಸತೊಡಗಿದರು. ತಂಡದ ವಿರುದ್ಧ ಅಸಮಾಧಾನ ಹೊರಹಾಕತೊಡಗಿದರು. ಈ ಹಿಂದೆ ವಿಕ್ಕಿ ಅವರು ಚಂದ್ರು ಅವರ ಜೊತೆಗೂ ಒಂದು ರೀಲ್ಸ್​ ಮಾಡಿದ್ದು, ಅದು ಕೂಡ ಸಕತ್​ ವೈರಲ್​ ಆಗಿದೆ. ಇವೆಲ್ಲವುಗಳ ಹೊರತಾಗಿಯೂ ಚಂದ್ರು ಅವರಿಗೆ ತಂಡದ ಮೇಲೆ ಅಸಮಾಧಾನವಿತ್ತು. 

ಇಷ್ಟೆಲ್ಲಾ ಪ್ರಚಾರ ಆಗುತ್ತಿದ್ದಂತೆಯೇ ವಿಕಾಸ್​ ಅವರು ಹೂವು-ಹಣ್ಣು ಗಿಫ್ಟ್​ ಜೊತೆ ಚಂದ್ರು ಅವರ ಮನೆಗೆ ಹೋಗಿದ್ದಾರೆ. ಚಂದ್ರು ಅವರಿಗೆ ಕಾಲಿಗೆ ಏಟಾಗಿದ್ದ ಹಿನ್ನೆಲೆಯಲ್ಲಿ, ಅವರನ್ನು ನೋಡಲು ಬಂದಿರುವುದಾಗಿ ಹೇಳಿ ಗಿಫ್ಟ್​ ಕೊಟ್ಟಿದ್ದಾರೆ. ಇಷ್ಟಾದ ಮೇಲೆ ಚಂದ್ರು ಅವರು ಈಗ ನಾವು ಚೆನ್ನಾಗಿದ್ದೇವೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಇವರು ಇಷ್ಟು ವಿಶ್ವಾಸ ಕೊಟ್ಟಿದ್ದಾರೆ. ಇದೇ ನನಗೆ ಬೇಕಾಗಿತ್ತು. ಖುಷಿಯಾಗಿ ಇರ್ತೀವಿ. ಮೀಡಿಯಾ ಮುಂದೆ ಏನೇನೋ ಹೇಳಿದೆ. ಅದೆಲ್ಲಾ ಏನೂ ಇಲ್ಲ ಎಂದಿದ್ದಾರೆ. ಇದನ್ನು ವಿಕ್ಕಿಪಿಡಿಯಾ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕನ್​ಫ್ಯೂಷನ್​ ಏನೂ ಬೇಡ. ಚಂದ್ರು ಅವರನ್ನು ಡೈರೆಕ್ಟ್​ ಆಗಿ ಮೀಟ್​ ಆಗಿ ಆರೋಗ್ಯ ವಿಚಾರಿಸಿದ್ವಿ ಎಂದು ಬರೆದುಕೊಂಡಿದ್ದಾರೆ. ಚಂದ್ರು ಅವರು ಇಷ್ಟು ಫೇಮಸ್​ ಆದರೂ ಮಾಧ್ಯಮದವರ ಮುಂದೆ ಹೀಗೆಲ್ಲಾ ಹೇಳಿರುವುದಕ್ಕೆ ವಿಕ್ಕಿಪಿಡಿಯಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಏನೆಲ್ಲಾ ಕಮೆಂಟ್​ ಮಾಡಿದ್ದಾರೆ ಎಂದು ನೋಡಿ...

ಅಮ್ಮನ ಜೊತೆ ಡ್ರೋನ್​ ಪ್ರತಾಪ್​ ಭರ್ಜರಿ ಡ್ಯಾನ್ಸ್​: ನಿಮ್ಗೂ ಇಂಥ ಆಸೆ ಇದ್ಯಾ ಕೇಳಿದ ವಾಹಿನಿ!
 

click me!