ನಿವೇದಿತಾ ಕನ್ನಡಕ್ಕೆ ನೆಟ್ಟಿಗರು ಕಿಡಿಕಿಡಿ: 'ನಾಟಕ ಏಕೆ? ಕರ್ನಾಟಕದಲ್ಲಿ ಏಕೆ ಬಾಳ್ತಿದ್ದಿ' ಕೇಳ್ತಿದ್ದಾರೆ ನೆಟ್ಟಿಗರು

By Suvarna News  |  First Published Mar 10, 2024, 5:59 PM IST

ರಿಯಾಲಿಟಿ ಷೋ ಒಂದರಲ್ಲಿ ಆಗಮಿಸಿರುವ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಕನ್ನಡ ಓದಲು, ಮಾತನಾಡಲು ಬಾರದವರಂತೆ ವರ್ತಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 
 


ಕೆಲವರು ಹುಟ್ಟಿನಿಂದಲೂ ಕರ್ನಾಟಕದಲ್ಲಿಯೇ ಇದ್ದರೂ, ಕನ್ನಡ ಎಂದರೆ ಅಲರ್ಜಿ ಎನ್ನುವಂತೆ ವರ್ತಿಸುತ್ತಾರೆ. ಇನ್ನು ಕೆಲವರು ನಾವ್ಯಾಕೆ ಕನ್ನಡ ಕಲಿಯಬೇಕು ಎಂದು ಕೇಳುವವರು ಉಂಟು. ಇನ್ನು ಬೆಂಗಳೂರಿನ ವಿಷ್ಯವಂತೂ ಬಿಡಿ. ಕನ್ನಡ ಬಿಟ್ಟು ಬಹುತೇಕ ಎಲ್ಲಾ ಭಾಷೆಗಳೂ ಇಲ್ಲಿ ಕೇಳಿಬರುತ್ತವೆ. ಇನ್ನು ಕೆಲವರಿಗೆ ಕನ್ನಡ ಬಂದರೂ ಕನ್ನಡ ಬಾರದವರಂತೆ ಅರ್ಧಂಬರ್ಧ ಮಾತನಾಡುವುದು ಎಂದರೆ ಹೆಮ್ಮೆಯ ವಿಷಯ. ಇದೇ ಕಾರಣಕ್ಕೆ ಕನ್ನಡ ಭಾಷೆಯ ಕುರಿತು ಆಗಾಗ್ಗೆ ಗಲಾಟೆ ಆಗುವುದೂ ಉಂಟು.

ಇದೀಗ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.  ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಗೆ ಬಿಗ್​ಬಾಸ್​ ನಿವೇದಿತಾ ಗೌಡ ಮತ್ತು ತನಿಷಾ ಕುಪ್ಪಂಡ ಬಂದಿದ್ದು, ಅದರ ವಿಡಿಯೋ ಅನ್ನು ಕಲರ್ಸ್​ ಕನ್ನಡ ವಾಹಿನಿ ರಿಲೀಸ್​ ಮಾಡಿದೆ.   ಅಡುಗೆ ರೆಸಿಪಿಯನ್ನು ನೋಡುತ್ತಾ ಇವರಿಬ್ಬರೂ ಅಡುಗೆ ಮಾಡಬೇಕು. ಸದಾ ರೀಲ್ಸ್​ ಮಾಡುತ್ತಲೇ ಕಾಲು ಕಳೆಯುತ್ತಿರುವ ನಿವೇದಿತಾ ಬಹುಶಃ ಇದೇ ಮೊದಲ ಬಾರಿಗೆ ಅಡುಗೆ  ಮನೆಗೆ ಕಾಲಿಟ್ಟಿದ್ದೋ ಗೊತ್ತಿಲ್ಲ. ಅಡುಗೆ ಮಾಡಲು ಬರದೇ ಪೇಚಿಗೆ ಸಿಲುಕಿದ್ದಾರೆ! ಇದನ್ನು ನೋಡಿ ಅಲ್ಲಿದ್ದ ತೀರ್ಪುಗಾರರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಮಾಡುತ್ತಿರುವ ಅಡುಗೆಗೆ ಹಾಲನ್ನು ಸೇರಿಸಬೇಕು ಎಂದಾಗ ಎಲ್ಲಿ ಸೇರಿಸಲಿ ಎಂದು ಕೇಳಿದ್ದಾರೆ. ಇದನ್ನು ಕೇಳಿ ತನಿಷಾ ಗೊಳ್​ ಎಂದು ನಕ್ಕಿದ್ದಾರೆ.

Tap to resize

Latest Videos

ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!

 ಇದು ತಮಾಷೆಯಾಗಿ ಕಂಡಿದೆ. ಆದರೆ ಅಡುಗೆ ಮನೆಯಲ್ಲಿ ಅಡುಗೆ ಹೇಗೆ ಮಾಡಬೇಕು ಎಂದು ನಿವೇದಿತಾ ಹೇಳುವ ಸಮಯದಲ್ಲಿ ಕನ್ನಡವನ್ನು ವಿಚಿತ್ರವಾಗಿ ಓದಿದ್ದಾರೆ. ಅದೂ ಅಲ್ಲದೇ ಮಾತನಾಡಲು ಬಾರದ ಚಿಕ್ಕಮಕ್ಕಳು ಆಡುವಂತೆ ಕನ್ನಡ ಹೇಳಿದ್ದು ಕೇಳಿ ಹಲವರು ಕಿಡಿ ಕಾರುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಚಿಕ್ಕಮಕ್ಕಳಂತೆ ಆಡುವುದನ್ನು ಮೊದಲು ನಿಲ್ಲಿಸು ಎಂದು ಕೆಲವರು ಹೇಳಿದ್ದರೆ, ಇಂಥ ಕನ್ನಡ ಬಾರದವರನ್ನು ಕನ್ನಡ ಚಾನೆಲ್​ಗೆ ಯಾಕೆ ಕರೆಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಎಷ್ಟೋ ಮಂದಿ ಹೊರನಾಡಿನಿಂದ ಬಂದು ಕನ್ನಡವನ್ನು ಮಾತನಾಡುತ್ತಿದ್ದರೆ, ಇದೇ ನೆಲದಲ್ಲಿ ಹುಟ್ಟಿ ಇಲ್ಲದೇ ಬೆಳೆದರೂ ಕನ್ನಡ ಮಾತನಾಡಲು ನಾಟಕ ಮಾಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 

ಅಂದಹಾಗೆ ಬಿಗ್​ಬಾಸ್​ ಬಳಿಕ ರೀಲ್ಸ್​ನಿಂದಲೇ ಸಕತ್​ ಫೇಮಸ್​ ಆಗಿರುವವರು ನಟಿ ನಿವೇದಿತಾ ಗೌಡ. ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಈಗ ಕನ್ನಡ ಭಾಷೆಯನ್ನು ವಿಚಿತ್ರವಾಗಿ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ನನ್ನ ಫೆವರೇಟ್​ ನಾನೇ ಎನ್ನುತ್ತ ರೀಲ್ಸ್​ ಮಾಡಿದ ನಿವೇದಿತಾ: ಕೂದಲೇನಾಯ್ತು ಕೇಳಿದ ಫ್ಯಾನ್ಸ್​!

click me!