Naa Ninna Bidalaare: ಶರತ್​ ಜೊತೆ ಬಂದೇಬಿಟ್ಟಳು ಮೊದಲ ಪತ್ನಿ ಅಂಬಿಕಾ! ದುರ್ಗಾ ಗತಿ ಏನೀಗ?

Published : Oct 02, 2025, 04:32 PM IST
Naa Ninna Bidalaare Serial actors

ಸಾರಾಂಶ

ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ಅಂಬಿಕಾಳ ಆತ್ಮದ ಸಹಾಯದಿಂದ ದುರ್ಗಾ ಶರತ್‌ನನ್ನು ಮದುವೆಯಾಗುತ್ತಾಳೆ. ಇದೀಗ ಜೀ5 ಬಿಡುಗಡೆ ಮಾಡಿರುವ ಹಬ್ಬದ ವಿಶೇಷ ಪ್ರೊಮೋದಲ್ಲಿ, ಶರತ್ ಜೊತೆ ಅಂಬಿಕಾ ಮತ್ತು ದುರ್ಗಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ ಬಹಳ ವೀಕ್ಷಕರಿಗೆ ಅಚ್ಚುಮೆಚ್ಚು. ವಾಸ್ತವದಿಂದ ದೂರವಾಗಿರುವ ಆತ್ಮ, ಮಾಟ, ಮಂತ್ರ-ತಂತ್ರಗಳ ರೋಚಕ ಸ್ಟೋರಿ ಇದಾಗಿದ್ದರೂ, ಇದನ್ನು ನೋಡುವ ದೊಡ್ಡ ವರ್ಗವೇ ಇದೆ. ಒಟ್ಟಿನಲ್ಲಿ ರೋಚಕತೆ ಇರಬೇಕು ಅಷ್ಟೇ. ಅದರಲ್ಲಿಯೂ ಇಲ್ಲಿ ಆತ್ಮ ಆಗಿರುವ ಅಂಬಿಕಾ, ಒಳ್ಳೆಯ ಮನಸ್ಸಿನ ಹೆಣ್ಣಾಗಿರುವ ಕಾರಣ, ಆ ಆತ್ಮಕ್ಕೆ ನ್ಯಾಯ ಸಿಗಬೇಕು ಎನ್ನುವುದು ಈ ಸೀರಿಯಲ್​ ವೀಕ್ಷಕರ ಆಶಯ. ಅಂಬಿಕಾ ಮತ್ತು ಶರತ್​ ದಂಪತಿಯ ಸ್ಟೋರಿ ಇದು. ಅವರ ಮುದ್ದು ಮಗಳೇ ಹಿತಾ. ಆದರೆ ಶರತ್​ ಚಿಕ್ಕಮ್ಮ ಮತ್ತು ಮತ್ತಿರರು ಸೇರಿ ಅಂಬಿಕಾಳನ್ನು ಬ*ಲಿ ಪಡೆಯುತ್ತಾರೆ. ಆದರೆ ಶರತ್​ಗೆ ಇದರ ಅರಿವೇ ಇಲ್ಲ. ಅಂಬಿಕಾ ಹೇಗೆ ಸತ್ತಳು ಎನ್ನುವುದು ಆತನಿಗೆ ಗೊತ್ತಿಲ್ಲ. ಆದರೆ ಆಕೆಯ ಸಾವಿಗೆ ಅಪ್ಪನೇ ಕಾರಣ ಎಂದು ಮಗಳು ಹಿತಾ ಅಪ್ಪನ ಬಳಿ ಮಾತನಾಡುವುದಿಲ್ಲ.

ಇದನ್ನೂ ಓದಿ: Bigg Bossಗೆ ಯಾಕ್ರೀ ಹೋಗ್ಬೇಕು- ಇಲ್ಲೇ ಹುಡುಗಿಯರು ಸಿಗಲ್ವೇನ್ರಿ? ಬೆಳಿಗ್ಗೆನೂ ತಗೋತೇನ್ರಿ: ಕಾಕ್ರೋಚ್​ ಸುಧಿ ವಿಡಿಯೋ ವೈರಲ್

ಅಂಬಿಕಾ ತಂಗಿ ದುರ್ಗಾ ಎಂಟ್ರಿ:

ಇದೇ ವೇಳೆ ದುರ್ಗಾಳ ಎಂಟ್ರಿಯಾಗುತ್ತದೆ. ದುರ್ಗಾ ಅಂಬಿಕಾಳ ತಂಗಿ. ಆದರೆ ಅದು ದುರ್ಗಾಗೆ ಗೊತ್ತಿಲ್ಲ. ಆತ್ಮ ಆಗಿರೋ ಅಂಬಿಕಾಳ ಸಹಾಯದಿಂದ ದುರ್ಗಾ ಶರತ್​ ಮನೆಗೆ ಎಂಟ್ರಿ ಕೊಡುತ್ತಾಳೆ. ಮಗಳು ಹಿತಾಗೆ ಹತ್ತಿರವಾಗುತ್ತಾಳೆ. ಶರತ್​ನನ್ನು ಮದುವೆಯಾಗುವ ಹೊಂಚು ಹಾಕಿರುತ್ತಾಳೆ ಇನ್ನೋರ್ವ ವಿಲನ್​ ಮಾಯಾ. ಆದರೆ ಅಂಬಿಕಾಳ ಶಕ್ತಿಯಿಂದಾಗಿ ಅನಿವಾರ್ಯ ಸ್ಥಿತಿಯಲ್ಲಿ ಶರತ್​ ಮತ್ತು ದುರ್ಗಾ ಸಮ್ಮೋಹನಕ್ಕೆ ಒಳಗಾಗಿ ಮದುವೆಯಾಗುತ್ತಾರೆ. ಅದು ಹೇಗೆ ಆಯ್ತು ಎನ್ನುವುದು ಇಬ್ಬರಿಗೂ ತಿಳಿದಿಲ್ಲ. ಅಂಬಿಕಾಳ ಶಕ್ತಿಯನ್ನು ಕುಗ್ಗಿಸಬೇಕಾದರೆ ಶರತ್​ ಮತ್ತು ಮಾಯಾ ಮದುವೆ ಮಾಡಬೇಕು ಎಂದುಕೊಂಡಿದ್ದ ಮಾಳವಿಕಾಳಿಗೆ ಅದು ಸಾಧ್ಯವಾಗುವುದಿಲ್ಲ. ಆದರೆ ಅವಳಿಗೆ ದುರ್ಗಾಳ ಅಸಲಿಯತ್ತು ಗೊತ್ತಿಲ್ಲ.

ರೋಚಕ ತಿರುವಿನಲ್ಲಿ ಸೀರಿಯಲ್​

ಹೀಗೆ ರೋಚಕ ತಿರುವಿನಲ್ಲಿ ಸೀರಿಯಲ್​ ಸಾಗಿದೆ. ಇದರ ನಡುವೆಯೇ ಇದೀಗ ಜೀ5 ಪ್ರೊಮೋ ಒಂದನ್ನು ರಿಲೀಸ್​ ಮಾಡಿದೆ. ಅದರಲ್ಲಿ ಶರತ್​ ಜೊತೆ ಅಂಬಿಕಾ ಮತ್ತು ದುರ್ಗಾ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಹಾಗಂತ ಅಂಬಿಕಾ ಶರತ್​ಗೂ ಕಾಣಿಸಿಕೊಂಡಳಾ ಎಂದು ಅಂದುಕೊಳ್ಳುವುದು ಬೇಡ. ಇದೇ ಪ್ರೊಮೋದಲ್ಲಿ, ಕರ್ಣ ಸೀರಿಯಲ್​ ನಿಧಿ-ನಿತ್ಯಾ ಸೇರಿದಂತೆ ವಿವಿಧ ನಟ-ನಟಿಯರು ಕಾಣಿಸಿಕೊಂಡಿದ್ದಾರೆ.

ನಟರು ಬಂದಿದ್ಯಾಕೆ?

ಅಷ್ಟಕ್ಕೂ ಇದು ಜೀ5ನಲ್ಲಿ ಹಬ್ಬದ ನಿಮಿತ್ತ ಹಲವಾರು ಎಂಟರ್​ಟೈನ್​ಮೆಂಟ್ ಕಾರ್ಯಕ್ರಮಗಳು ಇದ್ದು, ಅದನ್ನು ವೀಕ್ಷಿಸಿ ಎಂದು ಹೇಳಲು ಈ ಎಲ್ಲಾ ನಟ-ನಟಿಯರು ಬಂದಿದ್ದಾರೆ. ಈ ವಿಷಯವನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ತೋರಿಸಲಾಗಿದೆ. ಅದರ ವಿಡಿಯೋ ಈ ಕೆಳಗಿದೆ.

ಇದನ್ನೂ ಓದಿ: Bigg Boss 12ಕ್ಕೆ ಡಾ.ಬ್ರೋ ಹೋಗದ ಕಾರಣ ಕೊನೆಗೂ ರಿವೀಲ್! ಗಗನ್​ ಹೇಳಿದ್ದೇನು ಕೇಳಿ

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!