
ಕನ್ನಡ ಕಿರುತೆರೆ ರಿಯಾಲಿಟಿ ಶೋ ಹಾಗೂ ಚಿತ್ರರಂಗದಲ್ಲಿ ಮಿಂಚುತ್ತಿರುವ ಬಾರ್ಬಿಡಾಲ್ ಖ್ಯಾತಿಯ ರೀಲ್ಸ್ ರಾಣಿ ನಿವೇದಿತಾ ಗೌಡಾ ಇದೀಗ ವಿಯೆಟ್ನಾಂ ಬೀದಿಯಲ್ಲಿ ಕಾಣಿಸಿಕೊಂಡಿದ್ದಾಳೆ. ವಿಯೆಟ್ನಾಂ ಬೀದಿಯಲ್ಲಿ ರಾತ್ರಿ ವೇಳೆ ನಿವೇದಿತಾ ಗೌಡ ಕಣ್ಣೀರು ಹಾಕುತ್ತಾ ಗಳಗಳನೇ ಅಳುತ್ತಿರುವ ದೃಶ್ಯವು ವೈರಲ್ ಆಗುತ್ತಿದೆ.
ರಾಜ್ಯದ ಜನತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಚಿರಪರಿಚಿತವಾದ ಸುಂದರಿ ನಿವೇದಿತಾ ಗೌಡ ವೈಯಕ್ತಿಕ ಜೀವನದಲ್ಲಿಯೂ ಹಲವು ಏರಿತಗಳನ್ನು ಕಂಡಿದ್ದಾಳೆ. ನನಗಿನ್ನೂ ಚಿಕ್ಕ ವಯಸ್ಸು, ಸಿನಿಮಾದಲ್ಲಿ ಕೆರಿಯರ್ ಆರಂಭವಾಗುತ್ತಿರುವಾಗಲೇ ಸಂಸಾರ, ಮಕ್ಕಳು ಬೇಡವೆಂದು ಗಂಡನಿಗೆ ಡಿವೋರ್ಸ್ ಕೊಟ್ಟ ಸುಂದರಿ ಇದೀಗ ಜಗತ್ತನ್ನು ಸುತತಾಡುತ್ತಾ ಲೈಫ್ ಎಂಜಾಯ್ ಮಾಡುತ್ತಿದ್ದಾಳೆ. ಸಿನಿಮಾ ಹಾಗೂ ಕಿರುತೆರಯ ರಿಯಾಲಿಟಿ ಶೋಗಳಲ್ಲಿ ಬ್ಯೂಸಿ ಆಗಿರುವ ನಿವೇದಿತಾ ಗೌಡ ಗ್ಯಾಪ್ ಇದ್ದಾಗಲೆಲ್ಲಾ ಪ್ರಪಂಚ ಪರ್ಯಟನೆ ಮಾಡುತ್ತಾಳೆ.
ಇತ್ತೀಚೆಗೆ ಅಮೇರಿಕಾಗೆ ಪ್ರವಾಸಕ್ಕೆ ಹೋಗಿ ಬಂದ ನಿವೇದಿತಾ ಇದೀಗ ವಿಯಟ್ನಾಂಗೆ ಹೋಗಿದ್ದಾರೆ. ವಿಭಿನ್ನ ಜೀವನ ಶೈಲಿ ಹೊಂದಿರುವವರ ನಡುವೆ ಹಾಗೂ ವಿಭಿನ್ನ ರಾತ್ರಿ ಪ್ರಪಂಚ ತೆರೆದುಕೊಳ್ಳುವ ಈ ವಿಯೆಟ್ನಾಂನಲ್ಲಿ ಲೈಫ್ ಎಂಜಾಯ್ ಮಾಡಲು ಹೋಗಿರುವ ನಿವೇದಿತಾ ಗೌಡ ಅಲ್ಲಿ ರಾತ್ರಿ ವೇಳೆ ಬೀದಿಯಲ್ಲಿ ನಿಂತು ಕಣ್ಣೀರು ಹಾಕಿದ್ದಾರೆ. ಜೊತೆಗೆ, ಆಕೆಯ ಸ್ನೇಹಿತೆ ಅಲ್ಲಿದ್ದರೂ, ನಿವೇದಿತಾ ಅಳುವಾಗ ಒಂದಿನಿತೂ ಸಹಾಯ ಮಾಡದೇ ಸುಮ್ಮನೇ ಕುಳಿತಿದ್ದಾಳೆ. ಆದರೆ, ಯಾಕೆ ಕಣ್ಣೀರು ಹಾಕುತ್ತಿದ್ದಾರೆ ಎಂಬ ವಿಚಾರ ಮಾತ್ರ ಗೊತ್ತಾಗಿಲ್ಲ.
ನಟಿ ನಿವೇದಿತಾ ಗೌಡ ವಿಯೆಟ್ನಾಂ ಪ್ರವಾಸದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ತುಂಡುಡುಗೆ ಧರಿಸಿಕೊಂಡು ಚಿಕ್ಕ ಗೊಂಬೆಯೊಂದನ್ನು ಹಿಡಿದು ಅದನ್ನು ಆಟವಾಡಿಸುತ್ತಾ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ. ಇಲ್ಲಿ ಅವರ ಮುದ್ದಾದ ನಗು, ಮಂದಹಾಸ ಹಾಗೂ ಸೈಡ್ ಪೋಸ್ ಮೂಲಕ ಎಂಜಾಯ್ ಮಾಡುವುದನ್ನು ಪ್ರದರ್ಶನ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಹಗಲು ಹೊತ್ತಿನಲ್ಲಿ ವಿಯೆಟ್ನಾಂ ಶಾಪಿಂಗ್ ಮಾರ್ಕೆಟ್‌ನ ಮಧ್ಯದಲ್ಲಿಯೇ ಹಾದು ಹೋಗಿರುವ ರೈಲು ಹಳಿಯಲ್ಲಿ ಕ್ಯಾಟ್ ವಾಕ್ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ರಾತ್ರಿ ವೇಳೆ ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟು 6 ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದು, ಉಳಿದ 3ರಲ್ಲಿ ಮೇಕಪ್, ಕೇಶ ವಿನ್ಯಾಸ ಮತ್ತು ಫ್ಲೈಟ್‌ನಲ್ಲಿ ಭಾರತಕ್ಕೆ ವಾಪಸ್ ಬರುವಂತಹ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಿವೇದಿತಾ ಕೂದಲನ್ನು ಸ್ಪಾ ಒಂದರಲ್ಲಿ ಮೂವರು ಸೇರಿಕೊಂಡು ಸುಂದರ ವಿನ್ಯಾಸ ರೂಪಿಸುತ್ತಿದ್ದಾರೆ. ಇದಾದ ನಂತರ ತನ್ನ ಸ್ಟೈಲ್ ಲುಕ್ ಅನ್ನು ಸ್ಪಾದ ಆವರಣದಲ್ಲಿ ತೋರಿಸಿದ್ದಾರೆ. ಕೊನೆಗೆ ಎಲ್ಲವೂ ಮುಗಿದ ನಂತರ ಭಾರತಕ್ಕೆ ವಾಪಸ್ ಬರುವಾಗ ತನ್ನ ಸುಂದರ ಮುಖದಲ್ಲಿ ನಗುವನ್ನು ಬೀರುತ್ತಾ ತನ್ನ ಅಭಿಮಾನಿಗಳೊಂದಿಗೆ ಸೌಂದರ್ಯದ ಸಂತಸವನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಇದೆಲ್ಲವನ್ನೂ ನೋಡಿದರೆ, ಕೇಶವಿನ್ಯಾಸಕ್ಕಾಗಿಯೇ ನಿವೇದಿತಾ ಗೌಡ ವಿಯೆಟ್ನಾಂಗೆ ಹೋಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈಕೆ ತನ್ನ ದುಡಿಮೆಯ ಬಹುತೇಕ ಹಣವನ್ನು ಬ್ಯೂಟಿ ಪಾರ್ಲರ್ ಮತ್ತು ಸೌಂದರ್ಯವರ್ಧನೆಗೆ ಖರ್ಚು ಮಾಡಿದಂತೆ ಕಂಡುಬರುತ್ತದೆ. ಇಷ್ಟೊಂದು ದುಬಾರಿ ಖರ್ಚು ಮಾಡುವ ನಿವೇದಿತಾಗೆ, ಚಂದನ್ ಶೆಟ್ಟಿ ಡಿವೋರ್ಸ್ ಕೊಟ್ಟಿದ್ದೇ ಒಳ್ಳೇದಾಯ್ತು ಎಂದು ಕೆಲವರು ಹೇಳಿದ್ದೂ ಉಂಟು. ಆದರೆ, ವಿಡಿಯೋದಲ್ಲಿ ವಿಯೆಟ್ನಾಂ ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿರುವ ಕಾರಣ ಮಾತ್ರ ನಿಗೂಢವಾಗಿದ್ದು, ಸ್ವತಃ ನಿವೇದಿತಾಳೇ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.