
ಈಗ ಯಾವ ಕಾಲ ಅಂದ್ರೆ ಕನ್ಫ್ಯೂಸ್ ಆಗೋದು ಗ್ಯಾರಂಟಿ. ಬೆಳಿಗ್ಗೆ ಚಳಿ, ಮಧ್ಯಾಹ್ನ ಬಿಸಿಲು, ಸಂಜೆ ಮಳೆ. ಈ ಮಳೆಗಾಲ ಬಿಡೋ ಹಂಗೆ ಕಾಣ್ತಾನೆ ಇಲ್ಲ. ದೀಪಾವಳಿ ಹಬ್ಬಕ್ಕೂ ಮಳೆ ಕಾಟ ತಪ್ಪಲಿಲ್ಲ. ಸಾಮಾನ್ಯ ಜನರಿಗೆ ಮಾತ್ರವಲ್ಲ ದೆವ್ವಕ್ಕೂ ಮಳೆ ಕಾಟ. ಮಳೆಯಿಂದ ಬೇಸತ್ತ ದೆವ್ವ, ಈಗ ಮಳೆ ಓಡಿಸೋ ಪ್ಲಾನ್ ಮಾಡಿದೆ. ಆದ್ರೆ ದೆವ್ವ, ಉಶ್ ಉಶ್ ಅಂದ್ರೆ ಮಳೆ ಮಾಯವಾಗುತ್ತಾ? ಈ ಪ್ರಶ್ನೆಗೆ ನಮ್ಮ ಅಂಬಿಕಾ ದೆವ್ವ ಉತ್ತರ ಕಂಡ್ಕೊಳ್ಳೋ ಪ್ರಯತ್ನ ಮಾಡಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ನಾ ನಿನ್ನ ಬಿಡಲಾರೆ ಸೀರಿಯಲ್ (Naa Ninna Bidalaare) ದೆವ್ವ ಅಂಬಿಕಾ, ಮಳೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ಮಳೆಯಿಂದಾಗಿ ನಾ ನಿನ್ನ ಬಿಡಲಾರೆ ಸೀರಿಯಲ್ ಶೂಟಿಂಗ್ ಗೆ ತೊಂದ್ರೆ ಆಗ್ತಿದೆ. ಹಾಗಾಗಿ, ಮಳೆಯಲ್ಲಿ ನಿಂತು ಉಶ್ ಉಶ್ ಅಂತ ಅತ್ತ ಇದ್ದ ಕೈ ಬೀಸಿದ್ದಾರೆ. ಅವರು ಕೈ ಬೀಸ್ತಿದ್ದಂತೆ ಒಂದು ಕ್ಷಣ ಮಳೆ ನಿಂತಿದ್ದು ಸತ್ಯ. ಮಳೆಯಿಂದ ನಿಂತಿದ್ದ ಶೂಟಿಂಗ್ ರೀ ಶುರುವಾಗುತ್ತೆ. ದೆವ್ವ ಮಳೆ ನಿಲ್ಲಿಸ್ತು ಅಂತ ಅಂಬಿಕಾ ಖುಷಿ ಕೂಡ ಆಗ್ತಾರೆ. ಆದ್ರೆ ಈ ಖುಷಿ ಕೆಲ ಸಮಯ ಮಾತ್ರ. ನಂತ್ರ ಆಗಿದ್ದೆಲ್ಲ ಉಲ್ಟಾ. ದೆವ್ವದ ಕೈನಲ್ಲಿ ಮಳೆ ಓಡಿಸೋಕೆ ಸಾಧ್ಯನೇ ಆಗ್ಲಿಲ್ಲ. ದೆವ್ವ ಮಾಡಿದ ಆಟಕ್ಕೆ ಮಳೆ ನಿಲ್ಲೋ ಬದ್ಲು ಜೋರಾಗಿ ಸುರಿದಿದೆ.
ವೈರಲ್ ಬಿಗ್ ನ್ಯೂಸ್.. 'ಹಲ್ಕಾ ಡಾನ್' ಭೇಟಿಯಾಗಲು ಬಂದ್ರು 'ಹಾಟ್ ಕ್ಯೂಟ್' ಜ್ಯೋತಿ ರೈ !
ನಾ ನಿನ್ನ ಬಿಡಲಾರೆ ಸೀರಿಯಲ್ ನಲ್ಲಿ ಕ್ಯೂಟ್ ದೆವ್ವವಾಗಿ ಅಭಿನಯ ಮಾಡ್ತಿರುವ ನೀತಾ ಅಶೋಕ್, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಹನಿ ಹನಿ ಬೀಳ್ತಿರುವಾಗ ಅಲ್ಲಿ ನಿಂತ ಅಂಬಿಕಾ , ಉಶ್ ಉಶ್ ಅಂತಾರೆ. ನಂತ್ರ ಮಳೆ ನಿಲ್ತಾ ಅಂತ ಡೈರೆಕ್ಟರ್ ಕೇಳ್ತಾರೆ. ನೋಡಿ ದೆವ್ವ ಮಳೆ ಓಡ್ಸಿದೆ ಅಂತ ಖುಷಿಯಾಗೋ ಕೆಲವೇ ಕ್ಷಣದಲ್ಲಿ ಮಳೆ ಆರ್ಭಟ ಜೋರಾಗುತ್ತೆ. ದೆವ್ವದ ಕೈನಲ್ಲಿ ಮಳೆಯನ್ನು ಮಾಯಾ ಮಾಡೋಕೆ ಆಗುತ್ತಾ ಎನ್ನುವ ವಿಡಿಯೋ ಹಂಚಿಕೊಂಡ ನೀತಾ, ಮಳೆ ಬರ್ತಿದ್ದಂತೆ ದೇವರಾಣೆ ವರ್ಕ್ ಆಗ್ಲಿಲ್ಲ. ಜೋರ್ ಆಗಿ ಮಳೆ ಬಂತು ಅಂತ ಬರೆದಿದ್ದಾರೆ. ಎಲ್ಲರು ಮಳೆ ನಿಲ್ಲೋದನ್ನು ಕಾಯ್ತಿರೋವಾಗ ದೆವ್ವ ಪವರ್ಸ್ ಜೊತೆ ನಾನಂತೂ ಮಳೆಯನ್ನೇ ನಿಲ್ಲಿಸೋ ಮಿಷನ್ ನಲ್ಲಿಅಂತ ಶೀರ್ಷಿಕೆ ಕೂಡ ಹಾಕಿದ್ದಾರೆ.
ಅವಳಿಂದ ದೂರ ಇಲ್ಲದಿದ್ರೆ ನಿಮ್ ಮಗ ಉದ್ಧಾರ ಆಗಲ್ಲಮ್ಮಾ: Bigg Boss ಸೂರಜ್ ಸಿಂಗ್ ತಾಯಿಗೆ ಫ್ಯಾನ್ಸ್ ಮನವಿ
ನಾ ನಿನ್ನ ಬಿಡಲಾರೆ ಸೀರಿಯಲ್ ಬರ್ತಿದೆ ಅಂದಾಗ ಅನೇಕರು ದೆವ್ವ ಅಂದ್ರೆ ವಿಕಾರವಾಗಿರುತ್ತೆ, ವಿಚಿತ್ರವಾಗಿರುತ್ತೆ ಅಂದ್ಕೊಂಡಿದ್ರು. ಆದ್ರೆ ಅದನ್ನು ಸುಳ್ಳು ಮಾಡಿದೋರು ಅಂಬಿಕಾ. ನಾ ನಿನ್ನ ಬಿಡಲಾರೆ ಸೀರಿಯಲ್ ನಲ್ಲಿ ಅತ್ಯಂತ ಮುದ್ದಾದ ದೆವ್ವ ಅವ್ರು. ಭೂತ, ಮಾಟ, ಮಂತ್ರಗಳಿದ್ರೂ ಜನರು ಈ ಸೀರಿಯಲ್ ಪ್ರೀತಿಯಿಂದ ನೋಡ್ತಾರೆ. ಇದಕ್ಕೆ ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಕೂಡ ಮುಖ್ಯ ಕಾರಣ. ಈ ಸೀರಿಯಲ್ ನಲ್ಲಿ ದೆವ್ವ ಕಾಟಕೊಡುವ ಬದಲು ಎಲ್ಲರನ್ನು ಕಾಪಾಡುವ ಕೆಲ್ಸ ಮಾಡುತ್ತೆ. ಇದೇ ಕಾರಣಕ್ಕ ವೀಕ್ಷಕರು ದೆವ್ವವನ್ನು ಇಷ್ಟಪಡ್ತಾರೆ. ಸೀರಿಯಲ್ ನಲ್ಲಿ ಹಿತಾ ಅಲಿಯಾಸ್ ಮಹಿತಾ ಅಲ್ದೆ, ದುರ್ಗಾ ಅಲಿಯಾಸ್ ರಿಷಿಕಾ ತಮ್ಮ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದು, ಈಗ ಮಾಯಾ ಪಾತ್ರ ಕೂಡ ಬದಲಾಗ್ತಿದೆ. ಮಾಯಾ ಪಾತ್ರಕ್ಕೆ ರುಹಾನಿ ಶೆಟ್ಟಿ ಬದಲು ಕೋಳಿ ರಮ್ಯಾ ಬರ್ತಿದ್ದು, ವೀಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.