ಬಿಗ್ ಬಾಸ್ ತ್ರಿವಿಕ್ರಮ್ ಅವರು ಮುದ್ದು ಸೊಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಮುಗಿದ ನಂತರದಲ್ಲಿ ತ್ರಿವಿಕ್ರಮ್ ಅವರು ಏನು ಮಾಡ್ತಾರೆ ಅಂತ ಸಾಕಷ್ಟು ಜನರಿಗೆ ಕುತೂಹಲ ಇತ್ತು. ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ಭದ್ರ ಎನ್ನುವ ಪಾತ್ರವನ್ನ ಮಾಡ್ತಿದ್ದಾರೆ.
ನಿಮ್ಮ ರಿಯಲ್ ಮನೆಗೆ ರಿಯಲ್ ಮನೆಗೆ ʼಮುದ್ದು ಸೊಸೆʼಯನ್ನು ಕರ್ಕೊಂಡು ಬರ್ತೀರಾ ಅಂತ ವೀಕ್ಷಕರು ಕಾಯ್ತಿದ್ರು. ಈಗ ʼಮುದ್ದು ಸೊಸೆʼ ಧಾರಾವಾಹಿಯಲ್ಲಿ ಆಕ್ಟ್ ಮಾಡ್ತಿದ್ದೀರಾ.
ನನ್ನ ತಾಯಿಯಾಗಲೀ, ನನಗಾಗಲೀ ಮದುವೆ ಬಗ್ಗೆ ಅರ್ಜೆಂಟ್ ಇಲ್ಲ. ನೋಡೋಣ, ಆರಾಮಾಗಿ ಮದುವೆ ಮಾಡ್ಕೊಳ್ಳೋಣ ಅಂತಿದೀವಿ. ಮದುವೆ ಬಗ್ಗೆ ಯಾವ ನಿರೀಕ್ಷೆಯೂ ಇಲ್ಲ. ಲವ್ವರ್ ಇದ್ದಿದ್ರೆ ತಾಯಿಗೆ ಹೇಳಿ ಮದುವೆ ಆಗ್ತಿದ್ದೆ. ನನಗೆ ಸೆಟ್ ಆಗೋ ಹುಡುಗಿ ಸಿಕ್ಕಿರೆ ಮುಂದೆ ಮದುವೆ ಆಗ್ತೀನಿ.
Bigg Boss ತ್ರಿವಿಕ್ರಮ್ 'ಮುದ್ದು ಸೊಸೆ' ಧಾರಾವಾಹಿ ಪ್ರಸಾರದ ಟೈಮ್ ರಿವೀಲ್ ಮಾಡಿದ ವಾಹಿನಿ!
ಈಗ ಬಿಗ್ ಬಾಸ್ ನಿಂದ ಸಿಕ್ಕಂತಹ ಜನಪ್ರಿಯತೆಯನ್ನ ಬಳಸಿಕೊಂಡು ಬಹುತೇಕರು ಸಿನಿಮಾ ಮಾಡಬೇಕು ಅಂತ ಆಸೆ ಇಟ್ಕೊಂಡಿರ್ತಾರೆ. ನೀವು ಧಾರಾವಾಹಿ ಮಾಡ್ತಿದ್ದೀರಾ?
ಬಿಗ್ ಬಾಸ್ ಶೋನಿಂದ ಜನಪ್ರಿಯತೆ ಸಿಕ್ತು. ಹೌದು, ಜನರು ನಮ್ಮನ್ನು ಇಷ್ಟಪಡೋದಕ್ಕೂ, ಅಭಿಮಾನಿ ಆಗೋದಕ್ಕೂ ತುಂಬ ಡಿಫರೆನ್ಸ್ ಇದೆ. ಎಲ್ಲರೂ ನನ್ನ ಇಷ್ಟ ಪಟ್ರು, ಅಭಿಮಾನಿಗಳಾಗಲಿಲ್ಲ. ಜನರು ನನ್ನ ಇಷ್ಟ ಪಟ್ಟಿರೋದು ವ್ಯಕ್ತಿಯಾಗಿ. ನನ್ನನ್ನು ಇನ್ನು ಸಿನಿಮಾ ಪಾತ್ರವಾಗಿ ಯಾರು ಇಷ್ಟ ಪಟ್ಟಿಲ್ಲ. ಜನರು ಪದ್ಮಾವತಿಯಲ್ಲಿ ಸಾಮ್ರಾಟ್ ಆಗಿ ಚೆನ್ನಾಗಿ ಮಾಡಿದ್ರಿ, ಇಷ್ಟ ಆಗಿತ್ತು ಅಂತ ಹೇಳಬಹುದು, ಆದರೆ ಥಿಯೇಟರ್‌ಗೆ ಬಂದು ನನ್ನ ಸಿನಿಮಾ ನೋಡುವಂತೆ ಆಗಬೇಕು. ಅದಕ್ಕೆ ಸ್ವಲ್ಪ ಟೈಮ್ ಬೇಕು. ಯಾವ ಥರ ವಿಷಯ ಕೊಟ್ಟರೆ ನನ್ನನ್ನು ನೋಡ್ತಾರೆ? ನಾನು ಏನು ಮಾಡಬೇಕು ಅನ್ನೋದು ಒಂದು ಐಡಿಯಾ ಬಂದಿದೆ. ಆಗ ಬಿಗ್ ಬಾಸ್ ಶೋನಲ್ಲಿ ನನಗೆ 2.45 ಕೋಟಿ ವೋಟ್ ಬಂದಿತ್ತು. ಆದರೆ ಈಗ ಐದು ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡೋಣ ಅಂತ ಯಾರಾದರೂ ಬಂದ್ರೆ ಆಗ ಓಕೆ.
ನಿಮ್ಮನ್ನು ಮಾಸ್ಟರ್‌ಮೈಂಡ್ ಅಂತ ಇದಕ್ಕೇನಾ ಕರೆಯೋದು?
ನನಗೂ, ನನ್ನ ತಾಯಿಗೂ BMTC, KSRTC ವ್ಯತ್ಯಾಸ ಗೊತ್ತಿರಲಿಲ್ಲ. ಈಗ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ಲೆಕ್ಕಾಚಾರ ಹಾಕಿರ್ತೀನಿ ಅಂತನೇ ಅರ್ಥ. ನಾನು ಯಾರ ಮೇಲೂ ಲೆಕ್ಕಾಚಾರ ಮಾಡಲ್ಲ, ನನ್ನ ಮೇಲೆ ನಾನು ಲೆಕ್ಕಾಚಾರ ಮಾಡಿಕೊಳ್ತೀನಿ.
ರಿಯಲ್ ಆಗಿ ಆಗಲ್ಲ ಎಂದು ರೀಲ್‌ನಲ್ಲಿ ವೀಕ್ಷಕರ ಆಸೆ ಈಡೇರಿಸಲು ಸಜ್ಜಾದ ʼಮುದ್ದು ಸೊಸೆʼ ಹೀರೋ ತ್ರಿವಿಕ್ರಮ್!
ಭದ್ರ ಪಾತ್ರ ಹೇಗಿದೆ?
ತುಂಬ ನಾರ್ಮಲ್ ಪಾತ್ರ ಇದು. ಕೋಪ ತೋರಿಸಲ್ಲ, ಆಟಿಟ್ಯೂಡ್ ತೋರಿಸಲ್ಲ. ಹಳ್ಳಿ ಭಾಷೆ, ಪಂಚೆ ಹಾಕ್ಕೊಂಡು, ರೇಷ್ಮೆ ಶರ್ಟ್ ಹಾಕ್ಕೊಂಡು ಇರೋದು, ಆರಾಮಾಗಿದೆ.
ಹೀರೋಯಿನ್ ಪ್ರತಿಮ ಅಂತ ಅಂದಕೂಡಲೇ ಹೇಗೆ ಅನಿಸ್ತು?
ನನಗೆ ಪ್ರತಿಮಾ ಯಾರು ಅಂತ ಗೊತ್ತಿರಲಿಲ್ಲ. ಆಮೇಲೆ ಚಾನೆಲ್ ಕಡೆಯಿಂದ, ಬೇರೆಯವರಿಂದ ಫೋನ್ ಬಂತು. ನಾನು ಪ್ರತಿಮಾರನ್ನು ಹತ್ತರದಿಂದ ನೋಡಿದಾಗ ಸ್ಕೂಲ್ ಹುಡುಗಿಯಾಗೂ ತುಂಬಾ ಚೆನ್ನಾಗಿ ಕಾಣಿಸ್ತಾರೆ, ಸೀರೆ ಹಾಕಿಕೊಂಡಾಗಲೂ ಕೂಡ ಚೆನ್ನಾಗಿ ಕಾಣಿಸ್ತಾರೆ. ಇನ್ನು ತೆಲುಗಿನಲ್ಲಿಯೂ ನಟಿಸಿರೋದಿಕ್ಕೆ ಅವರಿಗೆ ನಟನೆ ಗೊತ್ತಿದೆ, ಬೇಗ ಅರ್ಥ ಮಾಡಿಕೊಂಡು ನಟಿಸ್ತಾರೆ.
ಬಿಗ್ ಬಾಸ್ ಶೋನಿಂದಲೋ ಏನೋ ಈ ಧಾರಾವಾಹಿಯಲ್ಲಿ ನಿಮ್ಮ ಜೊತೆ ಭವ್ಯಾ ಗೌಡ ಇದ್ದಿದ್ರೆ ತುಂಬಾ ಚೆನ್ನಾಗಿರ್ತಿತ್ತು ಅಂತ ಕೆಲವರು ಹೇಳಿದ್ದಾರೆ.
ಈಗ ನನಗೆ ಬೆಂಜ್ ಕಾರ್ ತಗೊಂಡ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಕೆಲವರು ಹೇಳ್ತಾರೆ. ಆದರೆ ಡೌನ್ ಪೇಮೆಂಟ್ ಯಾರು ಕೊಡ್ತಾರೆ? ಪ್ರೊಡ್ಯೂಸರ್ಸ್, ಡೈರೆಕ್ಟರ್ಸ್, ಚಾನೆಲ್ ಎಲ್ಲರೂ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಭವ್ಯಾ ಗೌಡ ನನಗೆ ಚೆನ್ನಾಗಿ ಕಾಣಿಸ್ತಾಳೆ ಅಂದ್ರೆ ಮೊದಲೇ ಅವರನ್ನು ತಂದು ಕೂರಿಸ್ತಿದ್ರು. ಇಷ್ಟನೇ ಇಲ್ಲ, ಇವರು ಚೆನ್ನಾಗಿಲ್ಲ ಅಂದವರನ್ನೆಲ್ಲ ಜನರು ಕೊನೆಯ ತನಕ ಕೂರಿಸಿದ್ದಾರೆ. ಈ ಭವ್ಯಾ ಗೌಡ ನನ್ನನ್ನು ಇಷ್ಟ ಪಡುವ ಹಾಗೆ ಮಾಡಿದ್ದು ಬಿಗ್ ಬಾಸ್ ಶೋ. ಮೊದಲು ಆಂಟಿಯಂದಿರು ಮಾತಾಡ್ತಾ ಇದ್ರು, ಈಗ ಸೋಶಿಯಲ್ ಮೀಡಿಯಾದಲ್ಲಿ ಮಾತಾಡ್ತಿದ್ದಾರೆ. ಹಳ್ಳಿಕಟ್ಟೆ ಅಂತಾರಲ್ಲ, ಅಲ್ಲಿ ವಯಸ್ಸಾದವರು ಏನೇ ಮಾತಾಡಿದ್ರು ಅದು ಪ್ರಯೋಜನಕ್ಕೆ ಬರೋದಿಲ್ಲ. ಹಾಗೆ ಇದು ಕೂಡ.
ಮೇಘಾ ಶೆಟ್ಟಿ ನಿರ್ಮಾಣದ ʼಮುದ್ದು ಸೊಸೆʼ ಧಾರಾವಾಹಿ; Bigg Boss Kannada Runner Up ಹೀರೋ ಆಗ್ತಾರಾ?
ಈ ಧಾರಾವಾಹಿಯಲ್ಲಿ ನಿಮ್ಮ ಪಾತ್ರ ಅಂತೂ ತುಂಬಾ ಸ್ಟ್ರಾಂಗ್ ಆಗಿದೆ.
ನನಗೆ ಈ ಸಿನಿಮಾ ಕಥೆ ಕೇಳಿದಾಗ ರಾಜಾಹುಲಿ ಕಥೆ ಕೇಳಿದಂಗಿತ್ತು. ಅಂದ್ರೆ ಸಿನಿಮ್ಯಾಟಿಕ್ ಆಗಿ ನೋಡೋದಾದರೆ ಒಂದು ತಂದೆ ಮಗ ಸಂಬಂಧ, ಚಿಕ್ಕ ಹುಡುಗಿ ಪಾತ್ರ ನೋಡಿದಾಗ ಕಿರಾತಕ ನೆನಪಾಯ್ತು. ಆದರೆ ಅದಕ್ಕೆಲ್ಲ ನಾನು ಇದನ್ನ ಕಂಪೇರ್ ಮಾಡಲ್ಲ. ಆದರೆ ಎಲ್ಲೋ ಒಂದು ಕಡೆ ಆ ಫ್ಲೇವರ್ ಇದ. ಧಾರಾವಾಹಿಯಲ್ಲಿನ ಭಾಷೆ ತುಂಬಾ ನನಗೆ ಬೋಲ್ಡ್ ಅಂತ ಅನಿಸ್ತು. ಭದ್ರೇಗೌಡ ಏನು ಬೇಕಾದರೂ ಮಾತಾಡಬಹುದು, ಇದೇ ಅಧಿಕಾರಿ ಆಗಿದ್ರೆ ಅವನು ಲಿಮಿಟೆಡ್ ಮಾತಾಡಬೇಕು.
ಇವತ್ತು ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಇರೋದಕ್ಕೆ ತುಂಬಾ ಜನ ಸುಲಭವಾಗಿ ವಿಮರ್ಶೆ ಮಾಡುತ್ತಾರೆ. ಇದರ ಮಧ್ಯೆ ಧಾರಾವಾಹಿ ಯಶಸ್ಸು ಗಳಿಸೋದು ಎಷ್ಟು ಸವಾಲಿನ ಕೆಲಸ?
ಯೋಗ್ಯತೆ ಇಲ್ಲದವನು ಕಾಮೆಂಟ್ ಮಾಡೋನು. ಸೋಶಿಯಲ್ ಮೀಡಿಯಾದಲ್ಲಿ ಒಂದು ನಾಲ್ಕು ಜನ ಫಾಲೋವರ್ಸ್ ಇಟ್ಟುಕೊಂಡು, ಡಿಪಿಗೆ ನಿಜವಾದ ಫೋಟೋ ಹಾಕದೆ ಇರೋನು ಕಾಮೆಂಟ್ ಮಾಡ್ತಾನೆ. ನಾವು ತಿನ್ನುವ ರುಚಿಗೆ ಬೆಲೆ ಇಲ್ಲ, ನಾಲಿಗೆಗೆ ಏನು ಬೆಲೆ ಕೊಡಲ್ಲ.
ಒಂದು ಸೀರಿಯಲ್ ಮುಗಿದ ನಂತರ ಇನ್ನೊಂದು ಸೀರಿಯಲ್ ಮಾಡ್ತಾರೆ. ಜನರು ಆ ಕ್ಯಾರೆಕ್ಟರ್ ಮರೆಯಲು ಮೂರು ತಿಂಗಳು ಗ್ಯಾಪ್ ಬೇಕು.
ಬಿಗ್ ಬಾಸ್ ಶೋನಲ್ಲಿ ತ್ರಿವಿಕ್ರಮ್ ಇದ್ದ, ಈಗ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಭದ್ರ ಎನ್ನುವ ಪಾತ್ರ ಮಾಡ್ತಿರೋದು ಎಲ್ಲರಿಗೂ ಗೊತ್ತಿದೆ.
ಚಿಕ್ಕ ಹುಡುಗಿಯೇ. ಇವಳು ನಿಜಕ್ಕೂ ಕಿಡ್. ನನ್ನ ಶಿಕ್ಷಣ, ಕ್ರಿಕೆಟ್, ಕರಿಯರ್ ವಿಚಾರಕ್ಕೆ ಬಂದ್ರೆ ಅವಳು ಚಿಕ್ಕವಳು. ಆದರೆ ಒಳ್ಳೆಯ ನಟಿ ಅಂತ ಮಾತ್ರ ಹೇಳಬಲ್ಲೆ, ಈ ಧಾರಾವಾಹಿಗೆ ಅದು ಸಾಕು.
ʼಬಿಗ್ ಬಾಸ್ʼ ಮುಗಿತಿದ್ದಂತೆ ಹೆಣ್ಣು ನೋಡಲು ಹೋದ ತ್ರಿವಿಕ್ರಮ್; ಮನೆಗೆ ಮುದ್ದುಸೊಸೆ ಬೇಕಲ್ವೇ?
ಬಿಗ್ ಬಾಸ್ ಶೋ ಮುಗಿದ ನಂತರ ಲೈಫ್ ಹೇಗಿದೆ?
ನಾರ್ಮಲ್ ಆಗಿದೆ. ಒಂದು ನಾಲ್ಕೈದು ಜನ ಬಂದು ನನ್ನ ಜೊತೆ ಫೋಟೋ ತಗೊಳ್ತಾರೆ. ಸಂಗ್ರಹಾಲಯದಿಂದ ಸಡನ್ ಆಗಿ ಹುಲಿಯೇ ಆಚೆ ಬಂತು ಅಂತಂದ್ರೆ ನೋಡ್ತೀವಿ, ಅದು ಸುಮ್ನೆ ಕೂತಿತ್ತು ಅಂದ್ರೆ ಹೋಗಿ ಒಂದು ಸೆಲ್ಫಿ ತಗೋತೀವಿ, ಅದಾದ್ಮೇಲೆ ಹುಲಿನ ಅಲ್ಲೇ ಕೂತಿರತ್ತೆ. ನಾನು ಅಪಾರ್ಟ್‌ಮೆಂಟ್‌ಗೆ ಬಂದಾಗ ನನ್ನ ನೋಡಿ ಎಲ್ಲರೂ ಎಕ್ಸೈಟ್ ಆದರು. ಆಮೇಲೆ ಕ್ಯಾರೇ ಎನ್ನಲಿಲ್ಲ.
ನಿಮಗೆ ಯಾವ ವಿಷಯ ಮ್ಯಾಟರ್ ಆಗತ್ತೆ?
ದುಡ್ಡು
ಬಿಗ್ ಬಾಸ್ ಮನೆಯಲ್ಲಿ ತುಂಬ ತಾಳ್ಮೆಯಿಂದ ಇದ್ರಿ
ನಿಜವಾಗಿಯೂ ನಾನು ತಾಳ್ಮೆಯಿಂದ ಇರಲಿಲ್ಲ, ಬಿಹೇವ್ ಮಾಡ್ತಿದ್ದೆ ಅಷ್ಟೇ. ಅಲ್ಲಿ ಯಾರನ್ನೂ ನಾನು ಗೆಲ್ಲಿಸಲು ಆಟ ಆಡಿರಲಿಲ್ಲ, ನಾನು ಗೆಲ್ಲಬೇಕಿತ್ತು ಅಷ್ಟೇ.