ನನ್‌ ಗಂಡನನ್ನು ನಾನು ಹಾಳು ಮಾಡಿಲ್ಲ, ಗೊತ್ತಿಲ್ಲದೆ ಮಾತಾಡಬೇಡಿ: ಶ್ರೀರಸ್ತು ಶುಭಮಸ್ತು ನಟಿ ಸಪ್ನಾ ದೀಕ್ಷಿತ್

ಶ್ರೀರಸ್ತು ಶುಭಮಸ್ತು ಧಾರಾವಾಹಿ ನಟಿ ಸಪ್ನಾ ದೀಕ್ಷಿತ್‌ ಅವರ ಪತಿ ಅಶ್ವಿನ್‌ ಅವರು ಕಳೆದ ಕೆಲ ವರ್ಷಗಳ ಹಿಂದೆ ಹದಿನಾರು ವರ್ಷಗಳಲ್ಲಿ ನಿರಂತರವಾಗಿ ಕೆಲಸ ಮಾಡಿರಲಿಲ್ಲ. ಈ ಬಗ್ಗೆ ಅವರು Asianet Suvarna News ಜೊತೆಗೆ ಮಾತನಾಡಿದ್ದಾರೆ.
 

shrirasthu shubhamasthu kannada serial actress sapna deekshith speaks about husband ashwin

ನಟಿ ಸಪ್ನಾ ದೀಕ್ಷಿತ್‌ ಅವರು ಪತಿ ಅಶ್ವಿನ ಜೊತೆಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆಯೇ ಅವರು ಹದಿನಾರು ವರ್ಷಗಳಲ್ಲಿ ಪತಿ ನಿರಂತರವಾಗಿ ಯಾಕೆ ಕೆಲಸ ಮಾಡಿಲ್ಲ ಎಂದು ಹೇಳಿದ್ದರು. ಈಗ ಅವರು ಪತಿಯ ಉದ್ಯೋಗದ ಬಗ್ಗೆ Asianet Suvarna News ಜೊತೆಗೆ ಮಾತನಾಡುತ್ತಿದ್ದಾರೆ.

ʼಗೋಲ್ಡನ್ ಸ್ಟಾರ್ʼ ಗಣೇಶ್ ಅವರು ನಿಮ್ಮ ಪತಿಗೆ ಕೆಲಸ ಕೊಡಿಸಿದ್ದರು. ಆ ಕೆಲಸ ಏನಾಗಿದೆ? 
ʼಗೋಲ್ಡನ್ ಸ್ಟಾರ್ʼ ಗಣೇಶ್ ಅವರು ಕೆಲಸ ಕೊಡಸಿರಲಿಲ್ಲ. ಶೈಲಮ್ಮ ಎನ್ನೋರು ನನಗೆ ತುಂಬಾ ಪರಿಚಯ ಇದ್ರು ,ನಾನು ಅವರ ಬಳಿ ನನ್ನ ಗಂಡನಿಗೆ ಕೆಲಸ ಕೊಡಿ ಎಂದು ಕೇಳಿಕೊಂಡೆ. ಆಗ ಅವರು ಎಡಿಬಲ್ ಪ್ರೋ ಅಂತ ಕಂಪನಿ ಇದೆ ಎಂದು ಹೇಳಿ ಕೆಲಸ ಕೊಟ್ಟರು. ಆ‌ ಲೆಟರ್‌ನ್ನು ಚಾನೆಲ್ ಅವರು ಕೇಳಿದ್ರು, ಶೋನಲ್ಲಿ ಕೆಲಸ ಸಿಕ್ಕಿದೆ ಅಂತ ರಿವೀಲ್‌ ಆಯ್ತು. ನನ್ನ ಗಂಡ ಇವತ್ತಿಗೂ ಅಲ್ಲೇ ಕೆಲಸ ಮಾಡ್ತಿದ್ದಾರೆ, ನನ್ನ ಗಂಡ ಈಗ ಕೆಲಸ ಮಾಡ್ತಿದ್ದಾರೆ ಎನ್ನೋದು ಖುಷಿ ಆಗುತ್ತೆ. 

Latest Videos

ಸಮಸ್ಯೆ ಆಗಿ 2ನೇ ಮದುವೆಯಾದ ತುಂಬ ಜನ ಚೆನ್ನಾಗಿದ್ದಾರೆ: ಶ್ರೀರಸ್ತು ಶುಭಮಸ್ತು ನಟಿ ಸಪ್ನಾ ದೀಕ್ಷಿತ್ Interview

16 ವರ್ಷಗಳಲ್ಲಿ ಮಧ್ಯ ಮಧ್ಯದಲ್ಲಿ ಅವರು ಕೆಲಸ ಮಾಡ್ತಿದ್ರು, ಆಗ ನಿಜಕ್ಕೂ ಕಷ್ಟ ಆಗಿದ್ದು ಇದೆಯಾ? 
ನನ್ನ ಗಂಡ ಒಂದು ವರ್ಷ ಹೋಗ್ತಿದ್ರು, ಮತ್ತೆ ಆಮೇಲೆ ತುಂಬಾ ಬ್ರೇಕ್ ತಗೊಂಡು ಬಿಡ್ತಿದ್ರು. ಮತ್ತೆ ನಾನು ಗಲಾಟೆ ಮಾಡಿದಾಗ ಮತ್ತೆ ಕೆಲಸಕ್ಕೆ ಹೋಗ್ತಿದ್ರು, ಮತ್ತೆ ಆಮೇಲೆ ಏನೋ ಕಾರಣಕ್ಕೆ ಹೋಗ್ತಾನೆ ಇರ್ಲಿಲ್ಲ. ಆಗೆಲ್ಲ ನನಗೆ ತುಂಬ ಜನ ನೆಗೆಟಿವ್ ಮಾತನಾಡಿದ್ರು. ನನ್ನ ಗಂಡನ ಬಗ್ಗೆ ಹೇಗೆ ಮಾತನಾಡಿದೆ ಅಂತ ಕೆಲವರು ಕೇಳಿದ್ದುಂಟು. ನಾನು ನಡೆದು ಹೋಗಿದ್ದನ್ನು ಮಾತನಾಡಿದ್ದೆ ಅಷ್ಟೇ. ಏನೇ ಆದರೂ, ಎಷ್ಟೇ ಕಷ್ಟ ಸುಖ ಬರಲೀ ಅವರಿಗೆ ಡಿವೋರ್ಸ್‌ ಕೊಡದೆ ಅವರ ಜೊತೆಗೆ ಇದ್ದೇನೆ. ಜನರು ಯಾಕೆ ಈ ವಿಷಯವನ್ನು ಒಪ್ಪಿಕೊಳ್ಳಲ್ಲ, ಏನಾದ್ರೂ ಸರಿ, ಇವಳು ಗಂಡನನ್ನು ಬಿಟ್ಟು ಹೋಗಿಲ್ಲ, ಜೊತೆಗೆ ಇದ್ದಾಳೆ ಅಂತ ಯಾಕೆ ಮಾತಾಡಲ್ಲ? ನೀನು ನಿನ್ನ ಗಂಡನನ್ನು ಬಿಟ್ಟು ಈಗ ಏನೋ ರೀಲ್ಸ್ ಮಾಡ್ಕೊಂಡಿದ್ದೀಯ ಅಂತ ಹೇಳ್ತಾರೆ. 

ನಾನು ರೀಲ್ಸ್ ಮಾಡೋಕು ನನ್ನ ಗಂಡನ ಬಗ್ಗೆ ನಾನು ಮಾತಾಡಿದ್ದಕ್ಕೂ ಏನು ಸಂಬಂಧ? ನಿಮ್ಮ ತಲೆಯಲ್ಲಿ ನೆಗೆಟಿವಿಟಿ ಇದ್ರೆ ನಾನು ಏನು ಮಾಡೋಕೆ ಆಗಲ್ಲ. ನನ್ನ ಗಂಡನ ಜೊತೆ ನಾನು 25ನೇ ವರ್ಷದ ಆನಿವರ್ಸರಿ ಸೆಲೆಬ್ರೇಟ್ ಮಾಡ್ಕೋಬೇಕು? ನಾನು ಷಷ್ಠಿಪೂರ್ತಿ ಮಾಡಿಕೊಳ್ಳಬೇಕು, ಇದನ್ನೆಲ್ಲ ಬೇರೆಯವರ ಜೊತೆ ಊಹಿಸಿಕೊಳ್ಳೋಕೆ ಆಗೋದಿಲ್ಲ. ಅಶ್ವಿನ್‌ ದುಡಿಯದೇ ಇದ್ದಾಗ, ನಾನು ದುಡಿಯುತ್ತಿದ್ದೆ. ನನ್ನ ಪಾಲಕರು ಕೂಡ ಈಗೇನು ಅಶ್ವಿನ್ ದುಡಿತಿಲ್ಲ ಅಂದ್ರೆ ನೀನು ದುಡಿತಿದೆಯಲ್ಲ ಬಿಡು ಅಂತ ಪದೇ ಪದೇ ಜ್ಞಾಪಿಸಿದರು.

ನೀನು ಏನಾದರೂ ಮಾಡು, ಸಾವಿರ ಕಳ್ಕೊಂಡಿದ್ದೀಯಾ, ನೀನು ತುಂಬಾ ಬಿಸಿನೆಸ್ ಮಾಡಿದೀಯಾ, ಲಾಸ್ ಆಗಿದೆ. ನಿನಗೆ ಒಂದು ಹೆಜ್ಜೆ ಇಡಕ್ಕೂ ಭಯ ಆಗ್ತಿದೆ ಎನ್ನೋದನ್ನು ನಾನು ಒಪ್ಪಿಕೊಳ್ಳುವೆ, ಈಗ ಉದ್ಯಮ ಬೇಡ, ಕೆಲಸಕ್ಕೆ ಹೋಗು ಅಂತ ತುಂಬಾ ಮೋಟಿವೇಟ್ ಮಾಡ್ತಿದ್ದೆ. ನೀನೇ ಗಂಡನನ್ನು ಹಾಳು ಮಾಡ್ತಿದ್ದೀಯಾ, ನೀನೇ ಕೆಲಸಕ್ಕೆ ಹೋಗೋಕೆ ಬಿಡ್ತಿಲ್ಲ, ನೀನೇ ಸಾಕ್ತಾ ಇದೀಯಾ, ಅದಕ್ಕೆ ಅವನು ಆರಾಮಾಗಿದ್ದಾನೆ ಅಂತ ಜನರು ನನಗೆ ಬೈಯ್ಯೋರು. ನಾಲ್ಕು ಗೋಡೆ ಮಧ್ಯ ನಡೆಯೋದನ್ನ ನಾನು ಎಲ್ಲರ ಹತ್ರನು ಹೇಳ್ಕೊಂಡು ತಿರೋಗಾಕಲ್ಲ. ನಾನು ಹಾಗೂ ನನ್ನ ಗಂಡನ ಮಧ್ಯೆ ಏನು ಮಾತು ನಡೆಯುತ್ತಿತ್ತು ಎನ್ನೋದು ನನಗೆ ಗೊತ್ತಿದೆ. 

ಸೀರೆಯಲ್ಲಿ ಶ್ರೀರಸ್ತು ಶುಭಮಸ್ತು ದೀಪಿಕಾ ಮಾದಕ ಡಾನ್ಸ್​: ಅತ್ತೆಯಂಗೆ ನೀನೂ ಮಗು ಮಾಡ್ಕೋ ಅಂತಿರೋ ಫ್ಯಾನ್ಸ್​!

ನನ್ನ ಲೈಫ್‌ನಲ್ಲಿ ಏನಾಗ್ತಿದೆ ಅಂತ ನಿಮಗ್ಯಾರಿಗೂ ಗೊತ್ತಿಲ್ಲ, ಗೊತ್ತಿಲ್ಲದೆ ಮಾತಾಡಬೇಡಿ ಅಂತ ಸುಮಾರು ಜನರಿಗೆ ಹೇಳಿದ್ದೇನೆ. ನೀನು ಆರಾಮಾಗಿ ಕೂತಿರು, ನಾನು ದುಡ್ಕೊಂಡು ಬರ್ತೀನಿ ಅಂತ ಯಾವ ಹೆಣ್ಣು ಹೇಳ್ತಾಳೆ? ಯಾವಳು ಹೇಳಲ್ಲ. ಇಂದು ನನ್ನ ಗಂಡ ಕೆಲಸ ಮಾಡುತ್ತಿದ್ದಾರೆ. ಅವರು ತುಂಬ ಹಾರ್ಡ್ ವರ್ಕಿಂಗ್ ಎಂದು ಶೈಲಮ್ಮನು ಹೇಳಿದ್ದಾರೆ. ಅಶ್ವಿನ್‌ ಒಂದು ಸಲ ಕೆಲಸ ಮಾಡೋಕೆ ಶುರು ಮಾಡಿದ್ರೆ ತುಂಬಾ ಚೆನ್ನಾಗಿ ಕೆಲಸ ಮಾಡ್ತಾರೆ ಎಂಬ ಧೈರ್ಯ ಇತ್ತು. 

ನನಗೆ ಗೃಹಿಣಿಯಾಗಿ ಮನೆಯಲ್ಲಿ ಇರಬೇಕು ಅಂತ ಆಸೆ ಇತ್ತು. ಈ ಆಸೆ ನೆರವೇರಲೇ ಇಲ್ಲ. ನಾನು ಈಗ ದುಡಿಯುತ್ತಿದ್ದೇನೆ, ನನ್ನ ಗಂಡನೂ ಈಗ ದುಡಿಯುತ್ತಿದ್ದಾರೆ. ನಮ್ಮಿಬ್ಬರಿಂದ ಜೀವನ ನಡೆಯುತ್ತಿದೆ. 
 

vuukle one pixel image
click me!