ಕಾನೂನು v/s ವಾತ್ಸಲ್ಯ: ಮಗಳನ್ನು ಕರೆದೊಯ್ಯಲು ಬಂದ ಮೇಘಶ್ಯಾಮ್​! ಸಂಕಟದಲ್ಲಿ ಸಿಹಿ- ಗೆಲುವು ಯಾರಿಗೆ?

Published : Oct 18, 2024, 11:53 AM IST
ಕಾನೂನು v/s  ವಾತ್ಸಲ್ಯ:  ಮಗಳನ್ನು  ಕರೆದೊಯ್ಯಲು ಬಂದ ಮೇಘಶ್ಯಾಮ್​! ಸಂಕಟದಲ್ಲಿ ಸಿಹಿ- ಗೆಲುವು ಯಾರಿಗೆ?

ಸಾರಾಂಶ

ಸಿಹಿಯನ್ನು ಕರೆದುಕೊಂಡು ಹೋಗಲು ಮೇಘಶ್ಯಾಮ್​ ರಾಮ್​ ಮನೆಗೆ ಬಂದಿದ್ದಾನೆ. ಮುಂದೇನು? ಸಿಹಿ ಸೀತಾ-ರಾಮರ ಕೈತಪ್ಪಿ ಹೋಗ್ತಾಳಾ?  

ಒಂದೆಡೆ ಕಾನೂನು, ಇನ್ನೊಂದೆಡೆ ಮಾತೃ-ಪಿತೃ ವಾತ್ಸಲ್ಯ. ಇವೆರಡರ ನಡುವೆ ಒಂದನ್ನು ಆಯ್ಕೆ ಮಾಡಿ ಎಂದರೆ ಬಹುತೇಕ ಎಲ್ಲರೂ ಹೇಳುವುದು ವಾತ್ಸಲ್ಯದ ಮುಂದೆ ಎಲ್ಲವೂ ನಗಣ್ಯ ಎನ್ನುವುದು. ಆದರೆ ಕಾನೂನು ಹಾಗೆ ಹೇಳಲ್ಲ. ಕಾನೂನು ಎಂಬುದು ಬಂದರೆ ಅದರ  ಮುಂದೆ ಎಲ್ಲವೂ-ಎಲ್ಲರೂ ತಲೆಬಾಗಲೇಬೇಕು ಎನ್ನುವುದು ಸತ್ಯ.  ಆದ್ದರಿಂದ ಯಾವುದು ಮೇಲು ಎಂಬ ಪ್ರಶ್ನೆಗೆ ಉತ್ತರಿಸೋದು ಬಲು ಕಷ್ಟ. ಇದೀಗ ಸೀತಾರಾಮ ಸೀರಿಯಲ್​ ಸೀತಾ-ರಾಮರ ಕಥೆಯೂ ಇದೇ ಆಗಿದೆ. ಮೇಘಶ್ಯಾಮ್​ಗೆ ಸಿಹಿಯೇ ತನ್ನ ಮಗಳು ಎನ್ನುವ ಸತ್ಯ ಗೊತ್ತಾಗಿದೆ. ಈ ಸತ್ಯವನ್ನು ರಾಮ್​ಗೆ ಸೀತಾ ತಿಳಿಸಿದ್ದರೂ ಆತ ಮಲಗಿದ್ದ ಕಾರಣ ಅದನ್ನು ಕಿವಿಯ ಮೇಲೆ ಹಾಕಿಕೊಂಡಿರಲೇ ಇಲ್ಲ.  ಆದ್ರೆ ಮೇಘಶ್ಯಾಮ್​ನಿಂದಾಗಿ ಆ ಸತ್ಯವೂ ರಾಮ್​ಗೆ ತಿಳಿದಿದೆ.

ರಾಮ್​ ತನ್ನಿಂದ ಸತ್ಯ ಮುಚ್ಚಿಟ್ಟ ಎಂದೇ ಮೇಘಶ್ಯಾಮ್​ ಅಂದುಕೊಂಡಿದ್ದಾರೆ. ನೇರವಾಗಿ ರಾಮ್​ ಮನೆಗೆ ಬಂದು ಸೀತಾಳ ವಿರುದ್ಧ ಕಿಡಿ ಕಾರಿದ್ದಾನೆ. ಸಿಹಿ ನನ್ನ ಮಗಳು ಎಂದಿದ್ದಾನೆ. ಇದನ್ನು ಕೇಳಿ ಪುಟಾಣಿ ಸಿಹಿ ನಲುಗಿ ಹೋಗಿದ್ದಾಳೆ. ಸೀತಾಗೆ ಬರಸಿಡಿಲು ಬಡಿದಂತೆ ಆಗಿದೆ. ಭಾರ್ಗವಿಗೆ ಒಳಗೊಳಗೆ ಖುಷಿಯಾದರೂ ಬಾಡಿಗೆ ತಾಯಿಯ ಮಾತು ಕೇಳಿ ಶಾಕ್​ ಆಗಿದೆ. ಅಷ್ಟರಲ್ಲಿಯೇ ಸಿಹಿ ಅಪ್ಪಾ ಎಂದಿದ್ದಾಳೆ. ಮೇಘಶ್ಯಾಮ್​ನನ್ನೇ ಅಪ್ಪ ಎಂದು ಕರೆದಳು ಎಂದು ಸೀತಾ ಶಾಕ್​ ಆದಳು.  ಆದರೆ ಅಸಲಿಗೆ ಸಿಹಿ ಅಪ್ಪಾ ಎಂದಿದ್ದು ಹಿಂದುಗಡೆ ನಿಂತಿದ್ದ ರಾಮ್​ನನ್ನು. 

ಯಾರ ಕನಸ ಕನ್ಯೆಯೋ... ಎಂದು ಸುಧಾರಾಣಿ ಪೋಸ್​: ಪ್ಲೀಸ್​ ಮಗು ತೆಗೆಸಿ ಅಂತಿರೋ ಫ್ಯಾನ್ಸ್​!

ಮೇಘಶ್ಯಾಮ್​ ಅಂತೂ ಸಿಹಿಯನ್ನು ಬಿಡುವಂತೆ ಕಾಣುವುದಿಲ್ಲ. ಇತ್ತ ಮೇಘಶ್ಯಾಮ್​ಗೆ ಸಹಾಯ ಮಾಡಲು ಕಾನೂನಿನ ನೆರವು ಪಡೆದ ರಾಮ್​ಗೆ ಮರ್ಮಾಘಾತವಾಗಿದೆ. ಇನ್ನು ಸೀತಾಳ ವಿಷಯವಂತೂ ಹೇಳುವುದೇ ಬೇಡ. ಈಗ ಮುಂದಿರುವ ಪ್ರಶ್ನೆ ಇಬ್ಬರ ನಡುವೆ ಜರ್ಜಿತರಾಗಿರುವ ಸಿಹಿಯ ಗತಿಯೇನು? ಅಷ್ಟು ಸುಲಭದಲ್ಲಿ ಸಿಹಿಯನ್ನು ಸೀತಾ-ರಾಮ ಬಿಟ್ಟು ಕೊಡುತ್ತಾರೋ ಅಥವಾ ಸೀರಿಯಲ್​ನಲ್ಲಿ ಇನ್ನೊಂದು ಟ್ವಿಸ್ಟ್​ ಬರುತ್ತದೆಯೋ ಕಾದು ನೋಡಬೇಕಿದೆ. 

ಅದೇ ಇನ್ನೊಂದೆಡೆ,  ಶಾಲಿನಿಗೆ ಈ ಮಗು ಇಷ್ಟವಿಲ್ಲ ಎನ್ನುವುದು ಮೇಘಶ್ಯಾಮ್​ಗೆ ಗೊತ್ತು. ಬಾಡಿಗೆ ತಾಯಿ ಸುಳ್ಳು ಹೇಳಿದ್ದಲ್ಲ, ಬದಲಿಗೆ ಶಾಲಿನಿನೇ ಮಗು ಸತ್ತಿರುವುದಾಗಿ ಸುಳ್ಳು ಹೇಳಿದ್ದಾಳೆ ಎನ್ನುವ ಸತ್ಯ ಅವನಿಗೆ ತಿಳಿದಿದೆ. ಅಷ್ಟೇ  ಅಲ್ಲದೇ, ಸಿಹಿಯ ಮೇಲೆ ಸೀತಾ ಮತ್ತು ರಾಮ್​ ಅದೆಷ್ಟರಮಟ್ಟಿಗೆ ಪ್ರೀತಿಯ ಧಾರೆ ಹರಿಸುತ್ತಿದ್ದಾರೆ ಎನ್ನುವ ವಿಷಯವೂ ಅವನಿಗೆ ಗೊತ್ತು. ಹಾಗಿದ್ದರೆ ಮುಂದೇನು? ಸಿಹಿ ದೂರವಾಗ್ತಾಳಾ? ಶಾಲಿನಿ ಮಗುವನ್ನು ಒಪ್ಪಿಕೊಳ್ತಾಳಾ? ಸೀತಾಳ ಮುಂದಿನ ನಡೆ ಏನು? 
 

ದೀಪಾ v/s ಸೌಂದರ್ಯ- ನೀನಾ... ನಾನಾ... ಯಾರೂ ಊಹಿಸದ ರೋಚಕ ಟ್ವಿಸ್ಟ್​! ಕುಣಿದಾಡುತ್ತಿರುವ ಫ್ಯಾನ್ಸ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?