33 ವರ್ಷಕ್ಕೆ ಬೆಂಗಳೂರಿನಲ್ಲಿ ಮನೆ ಮಾಡಿದ್ದೀನಿ, ಡೆಲಿವರಿ ಹುಡುಗರಿಗೆ 'ನಮ್ಮನೆ'ಗೆ ಬನ್ನಿ ಅಂದ್ರೆ ಕನ್ಫ್ಯೂಸ್ ಆಗ್ತಾರೆ: ಅನುಪಮಾ

By Vaishnavi Chandrashekar  |  First Published Oct 18, 2024, 11:10 AM IST

ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಬೇಡ ಮನೆನೇ ಬೇಕು ಎಂದು ಆಲೋಚನೆ ಮಾಡಲು ಕಾರಣವೇನು? ಅನುಪಮಾ ಗೌಡ ಮಾತುಗಳು....
 


ಕನ್ನಡ ಕಿರುತೆರೆಯ ನಿರೂಪಕಿ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಅನುಪಮಾ ಗೌಡ, ಕೆಲವು ದಿನಗಳ ಹಿಂದೆ ತಮ್ಮ ಸ್ವಂತ ಮನೆ ಕಟ್ಟಿಸಿ ನಮ್ಮನೆ ಎಂದು ಹೆಸರಿಟ್ಟು ಗೃಹ ಪ್ರವೇಶ ಮಾಡಿದ್ದರು. ಈ ಜರ್ನಿ ಬಗ್ಗೆ ತಮ್ಮ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

'ಇವತ್ತು ನಮ್ಮ ಮನೆಯೆ ಗೃಹಪ್ರವೇಶ ನಡೆದಿದೆ. ಎಲ್ಲರಿಗೂ ಆಸೆ ಇರುತ್ತದೆ ಮನೆ ಗೃಹ ಪ್ರವೇಶ ಮಾಡಬೇಕು ಅಂತ...ಕೊನೆಗೂ 33 ವರ್ಷಕ್ಕೆ ಒಂದು ಮಾಡಿ ಆಯ್ತು. ನನಗೆ ತುಂಬಾ ಖುಷಿ ಆಗುತ್ತಿದೆ ಜೊತೆ ನನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ನಮ್ಮನೆಗೆ 'ನಮ್ಮನೆ' ಅಂತ ಹೆಸರಿಟ್ಟಿದ್ದೀನಿ. ಯಾರೇ ಬಂದರು ನಮ್ಮನೆ ನಮ್ಮನೆ ಅಂತ ಹೇಳಿದಾಗ ಕೇಳಿಸಿಕೊಳ್ಳಲು ಖುಷಿಯಾಗುತ್ತದೆ. 14 ವರ್ಷಗಳ ಬಣ್ಣದ ಜರ್ನಿಯಲ್ಲಿ ನಾನು ಕೆಲಸ ಮಾಡಿರುವ ಪ್ರತಿಯೊಬ್ಬರನ್ನು ಆದಷ್ಟು ನೆನಪು ಇಟ್ಟುಕೊಂಡು ಕರೆದಿದ್ದೀನಿ. ಕರೆದಿರುವ ಪ್ರತಿಯೊಬ್ಬರು ಬಂದು ಮನೆಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದರೆ ಅಷ್ಟೇ ಸಾಕು. ಜಾಸ್ತಿ ಕೆಲಸ ಬರಲಿ ಎಂದು ಆಶೀರ್ವಾದ ಮಾಡಿ ಆಗ ನಾನು ಲೋನ್ ತೀರಿಸಲು ಸುಲಭವಾಗುತ್ತದೆ. 

Tap to resize

Latest Videos

undefined

ಲಾಯರ್ ಜಗದೀಶ್ -ರಂಜಿತ್ ಹೊರ ಬಂದಿಲ್ಲ?; ಬಿಗ್ ಬಾಸ್ ಪ್ರಥಮ್ ಕೊಟ್ಟ ಹೇಳಿಕೆ ವೈರಲ್!

ಬೆಂಗಳೂರಿನಲ್ಲಿ ಮನೆ ಮಾಡುವುದು ಅಷ್ಟು ಸುಲಭವಲ್ಲ, ಈಗ ಅಂತಲ್ಲ ಹಲವು ವರ್ಷಗಳ ಹಿಂದೆ ಕೂಡ ಅಷ್ಟು ಸುಲಭವಾಗಿ ಇರಲಿಲ್ಲ. ಜೀವನದಲ್ಲಿ ನನಗೆ ಒಂದು ಗುರಿ ಇತ್ತು...ಏನಾಗಬೇಕು ಅಥವಾ ಏನು ಮಾಡಬೇಕು ಎಂದು ಯಾರಾದರೂ ಕೇಳಿದಾಗ ನನಗೆ ಸ್ವಂತ ಮನೆ ಮಾಡಬೇಕು ಅಂತ ಆಸೆ ಇತ್ತು. ಆರಂಭದಲ್ಲಿ ಅಪಾರ್ಟ್ಮೆಂಟ್ ಅಂತ ಯೋಚನೆ ಮಾಡುತ್ತಿದ್ದೆ ಆಮೇಲೆ ಮನೆನೇ ಬೇಕು ನಿರ್ಧಾರ ಮಾಡಿದೆ, ಮನೆಯಲ್ಲಿ ಕೆಲವೊಂದು ಭಾಗಗಳು ಹೀಗೆ ಇರಬೇಕು ಎಂದು ಆಸೆ ಇರುತ್ತದೆ. ನನಗೆ ಇದ್ದ ಶಕ್ತಿ ಮತ್ತು ಲಿಮಿಟ್‌ನಲ್ಲಿ ಈ ಮನೆಯನ್ನು ಮಾಡಿರುವೆ. ಎಲ್ಲರೂ ಮದುವೆ ಆಗು ಮದುವೆ ಆಗು ಅಂತ ಹೇಳುತ್ತಿದ್ದರೆ ಆದರೆ ನನಗೆ ಮೊದಲು ಮನೆ ಮಾಡಬೇಕಿತ್ತು. ನನ್ನ ಕನಸು ನನಸು ಆದ ಕ್ಷಣ ಇದು. 

ಸುಮಾರು ಒಂದು ವರ್ಷದಿಂದ ಕಾದು ಈ ಮನೆ ಬಗ್ಗೆ ಯಾರಿಗೂ ಹೇಳದೆ ಇವತ್ತು ಗೃಹಪ್ರವೇಶ ಆಯ್ತು. ಗೃಹಪ್ರವೇಶದ ಸಮದಯಲ್ಲಿ ನನಗೆ ಒಂದು ಬೇಸರ ಇದೆ, ಅಪ್ಪ ಮತ್ತು ತಂಗಿ ನನ್ನ ಜೊತೆ ಇದ್ದಾರೆ ಆದರೆ ಅಪ್ಪ ಇಲ್ಲ ಅನ್ನೋ ಬೇಸರ ಇದೆ. ಅಪ್ಪನ ಫೋಟೋ ತಂದು ಇಟ್ಟಿದ್ದೀನಿ. ಮೊದಲು ಮನೆಯ ಹೆಸರನ್ನು 'ಆನಂದ ಮನೆ' ಎಂದು ಇಡಬೇಕು ಅನ್ನೋ ಯೋಚನೆ ಇತ್ತು ಆಮೇಲೆ ಹೆಸರು ಬಳಕೆ ಬೇರೆ ಬೇರೆ ರೀತಿನೂ ಆಗಬಹುದು ಅಂತ ನಮ್ಮನೆ ಎಂದು ಆಯ್ಕೆ ಮಾಡಿಕೊಂಡೆ. 

2 ಹೆಣ್ಣುಮಕ್ಕಳು ಇರುವುದಕ್ಕೆ ಪಾತ್ರ ಆಯ್ಕೆ ಜವಾಬ್ದಾರಿಯಿಂದ ಮಾಡಬೇಕು; 90ರ ಗ್ಲಾಮರ್

ನನ್ನ ಸ್ನೇಹಿತರು ರೇಗಿಸುತ್ತಿದ್ದರು. ಈಗ ಯಾರಾದರೂ ಆರ್ಡರ್‌ ಡೆಲಿವರಿ ಮಾಡಲು ಬಂದಾಗ ಕಾಲ್ ಮಾಡಿ ಮೇಡಂ ಎಲ್ಲಿಗೆ ಬರಬೇಕು ಎಂದು ಕೇಳಿದಾಗ ನಮ್ಮನೆಗೆ ಬನ್ನಿ ಅಂತ ಹೇಳಬೇಕು ...ಆಗ ಅವರು ನಿಮ್ಮ ಮನೆಗೆ ಬರುವುದು ಹೆಸರು ಹೇಳಿ ಅಂತಾರೆ ಆಗ ನಾನು ನಮ್ಮನೆ ಅಂತ ಹೇಳುತ್ತೀನಿ..ಕನ್ಫ್ಯೂಷನ್‌ ಮಜಾ ಇದೆ ಅಂತಿದ್ದರು. 

click me!