ಲಾಯರ್ ಜಗದೀಶ್ -ರಂಜಿತ್ ಹೊರ ಬಂದಿಲ್ಲ?; ಬಿಗ್ ಬಾಸ್ ಪ್ರಥಮ್ ಕೊಟ್ಟ ಹೇಳಿಕೆ ವೈರಲ್!

Published : Oct 18, 2024, 10:22 AM IST
ಲಾಯರ್ ಜಗದೀಶ್ -ರಂಜಿತ್ ಹೊರ ಬಂದಿಲ್ಲ?; ಬಿಗ್ ಬಾಸ್ ಪ್ರಥಮ್ ಕೊಟ್ಟ ಹೇಳಿಕೆ ವೈರಲ್!

ಸಾರಾಂಶ

ಬಿಗ್ ಬಾಸ್‌ ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸಖತ್ ಕೂಲ್ ಆಗಿ ಉತ್ತರಿಸಿದ ಬಿಗ್ ಬಾಸ್ ಪ್ರಥಮ್. ಜಗ್ಗಿ ಹೊರ ಬಂದಿಲ್ವಾ?

ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳೆದು ಜಗದೀಶ್ ಮತ್ತು ರಂಜಿತ್ ಹೊಡೆದಾಡಿ ಎಲಿಮಿನೇಟ್ ಆಗಿದ್ದಾರೆ ಅನ್ನೋ ಸುದ್ದಿ ವೈರಲ್ ಆಗುತ್ತಿದೆ. ಜಗದೀಶ್ ಹೊರ ಬಂದಿರುವ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ ಎಂದು ಪತ್ನಿ ಹೇಳಿದ್ದಾರೆ. ಹಾಗಿದ್ರೆ ಜಗದೀಶ್ ಎಲಿ ಹೋದರು? ರಂಜಿತ್‌ಗೆ ರೆಡ್‌ ಕಾರ್ಡ್ ಕೊಟ್ಟಿದ್ದಾರಾ? ಜನರ ಗೊಂದಲಕ್ಕೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ರಿಯಾಕ್ಟ್ ಮಾಡಿದ್ದಾರೆ. 

'ಬಿಗ್ ಬಾಸ್ ಮನೆಯಲ್ಲಿ ಆಂಗ್ಲ ಮಾತನಾಡುವುದನ್ನು ಕಂಡಿಸುತ್ತೀನಿ. ನನ್ನ ಚಿಕ್ಕಪ್ಪ ಡಿಸಿ, ನಮ್ಮ ಅತ್ತೆ ಎಬ್ಬೆಟ್ಟು...ಆಕೆ ಟಿವಿ ನೋಡುವಾಗ ಇವರು ಟಸು ಪುಸು ಅಂತ ಮಾತನಾಡಿದರೆ ಏನೂ ಅರ್ಥವಾಗುವುದಿಲ್ಲ. ಈ ರೀತಿ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಲೇ ಬೇಕು ಎಂದು ಆಂಗ್ಲ ಮಾತನಾಡಿದವರಿಗೆ ನಾನು ಕಂಡಿಸುತ್ತಿದ್ದೆ. ಬಿಗ್ ಬಾಸ್ ಕಾರ್ಯಕ್ರಮ ನನಗೆ ಲೈಫ್‌ ಕೊಟ್ಟ ಶೋ ಹೀಗಾಗಿ ತಪ್ಪದೆ ನೋಡುತ್ತೀನಿ' ಎಂದು ಪ್ರಥಮ್ ಮಾತನಾಡಿದ್ದಾರೆ.

2 ಹೆಣ್ಣುಮಕ್ಕಳು ಇರುವುದಕ್ಕೆ ಪಾತ್ರ ಆಯ್ಕೆ ಜವಾಬ್ದಾರಿಯಿಂದ ಮಾಡಬೇಕು; 90ರ ಗ್ಲಾಮರ್

'ಜಗದೀಶ್ ಹೊರ ಬಂದಿರುವ ಸುದ್ದಿ ಬಗ್ಗೆ ಸ್ಪಷ್ಟನೆ ಕೊಡುತ್ತೀನಿ. ಬಿಗ್ ಬಾಸ್ ಕಾರ್ಯಕ್ರಮದವರು ಶಕ್ತಿ ಮೀರಿ ನಿಮ್ಮನ್ನು ಮನೋರಂಜಿಸಲು ಪ್ರಯತ್ನಿಸುತ್ತಿದ್ದಾರೆ. ಬಿಗ್ ಬಾಸ್‌ ಕಾರ್ಯಕ್ರಮದಲ್ಲಿ ಕೆಲಸ ಮಾಡುವವರೇ 700 ರಿಂದ 800 ಜನರು ಇದ್ದಾರೆ. ಒಬ್ಬರು ಮತ್ತೊಬ್ಬರಿಗೆ ಹೊಡೆದು ಬಿಟ್ಟರೆ ನೆಕ್ಸಟ್‌ ಮೂರ್ನಾಲ್ಕು ನಿಮಿಷಗಳಲ್ಲಿ ಹೊರಗಡೆ ಇರುತ್ತಾರೆ. 10 ಜನ ಗನ್ ಮ್ಯಾನ್‌ಗಳು ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ, ಮೂರು ಜನ ಊಟಕ್ಕೆ ಹೋದರೆ ಇನ್ನು ಮೂರು ಜನ ಕಾಯುತ್ತಿರುತ್ತಾರೆ. ಯಾರು ಯಾವ ಸಮಯದಲ್ಲಿ ಬೇಕಿದ್ದರೂ ಹೊಡೆಯಬಹುದು ಹೀಗಾಗಿ ಗನ್ ಮ್ಯಾನ್ ಡ್ರೆಸ್ ಹಾಕಿಕೊಂಡು ನಿಂತಿಸುತ್ತಾರೆ. ನನ್ನ ಸೀಸನ್ ನನ್ನ ಹೆಮ್ಮೆ. ಪ್ರತಿಯೊಬ್ಬರಿಗೂ ತಮ್ಮ ಪಾಯಿಂಟ್ ಸರಿ ಎಂದು ವಾದ ಮಾಡುತ್ತಾರೆ ಆ ಭರದಲ್ಲಿ ಜಗಳದ ಮಾತುಗಳು ಬರುತ್ತದೆ. ನಿಜವಾದ ಹೊಡೆದಾಟ ಆದರೆ ಖಂಡಿತಾ ಹೊರ ಬರುತ್ತಾರೆ' ಎಂದು ಪ್ರಥಮ್ ಹೇಳಿದ್ದಾರೆ.

ಹಗ್ಗ ಹಿಡಿದು ನೇತಾಡುತ್ತಿರುವ ನಿಧಿ ಸುಬ್ಬಯ್ಯ ಫೋಟೋ ವೈರಲ್; ಫಿಟ್ ಆಗಲು ಮಾಡುತ್ತಿರುವ

'ಈಗ ಅಭಿಮಾನಿಯೊಬ್ಬ ಶನಿವಾರ ಎಲಿಮಿನೇಷನ್‌ ದಿನ ತಮ್ಮ ನೆಚ್ಚಿನ ಸ್ಪರ್ಧಿ ಜೊತೆಗೆ ಇರುವ ಹಳೆ ಫೋಟೋವನ್ನು ಅಪ್ಲೋಡ್ ಮಾಡಿದರೆ ಓ....ಈತ ಇವತ್ತು ಎಲಿಮಿನೇಟ್ ಆಗಿದ್ದಾನೆ ಅಂದುಕೊಳ್ಳುತ್ತಾರೆ. ನಿಜಕ್ಕೂ ಅವಾಗಲೇ ಕ್ಲಿಕ್ ಮಾಡಿದ್ದಾರಾ ಇಲ್ವಾ ಅನ್ನೋ ಪರೀಕ್ಷೆ ಮಾಡಿಕೊಳ್ಳಬೇಕು. ಈಗ 16 ಸ್ಪರ್ಧಿಗಳಲ್ಲಿ 12 ಜನ ನನ್ನ ಸ್ನೇಹಿತರು, ಈಗ ಯಾರಾದರೂ ಬಂದು ನನಗೆ ಅವಾಜ್ ಹಾಕಿದಾರೆ ಆಯ್ತು ಬಾರಪ್ಪ ಅಂತ ಸುಮ್ಮನೆ ಇರಲು ಆಗುತ್ತಾ? ನಾವು ಮಾತನಾಡುತ್ತೀನಿ....ಆ ಮನೆಯಲ್ಲಿ ಇಬ್ಬರು ಮಾತನಾಡಿದ್ದಾರೆ ಮತ್ತೆ ಇಬ್ಬರೂ ಸ್ವಲ್ಪ ಸಮಯಕ್ಕೆ ಸರಿ ಹೋಗುತ್ತಾರೆ. ನನಗೆ ಬಿಗ್ ಬಾಸ್ ಅನ್ನದ ಬೆಲೆ ಮತ್ತು ಜೀವನದ ಪಾಠ ಕಲಿಸಿಕೊಟ್ಟಿದ್ದೆ. ಯಾವ ವಿಡಿಯೋ ಪ್ರದರ್ಶನಕ್ಕೆ ಯೋಗ್ಯ ಅಲ್ಲವೋ ಅದನ್ನು ಪ್ರಸಾರ ಮಾಡುವುದಿಲ್ಲ..ಕೆಲವೊಂದು ಪದಗಳು ಫ್ಲೋನಲ್ಲಿ ಬರುತ್ತದೆ ಅದನ್ನು ಬೀಪ್ ಮಾಡುತ್ತಾರೆ' ಎಂದಿದ್ದಾರೆ ಪ್ರಥಮ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ