
ಭೂತಗಳು ಗಾಳಿಯಲ್ಲಿ ಹೇಗೆ ಚಲಿಸ್ತವೆ ಎಂದು ಪ್ರಶ್ನಿಸಿದರೆ, ಅವು ಭೂತ, ಅದಕ್ಕೇ ಹೇಗೆ ಬೇಕಾದ್ರೂ ಚಲಿಸ್ತವೆ ಎಂದು ತಮಾಷೆಯ ಉತ್ತರ ಕೊಡಬಹುದು. ಆದರೆ ಇಲ್ಲಿ ಹೇಳ್ತಿರೋದು ನಿಜವಾದ ಭೂತ-ಪ್ರೇತಗಳ ಬಗ್ಗೆ ಅಲ್ಲ, ಸಿನಿಮಾಗಳಲ್ಲಿ, ಸೀರಿಯಲ್ಗಳಲ್ಲಿ ಭೂತಗಳು ಹೇಗೆ ಚಲಿಸ್ತವೆ ಎನ್ನುವ ಬಗ್ಗೆ. ಇದಾಗಲೇ ಹಾರರ್ ಸಿನಿಮಾಗಳಿಗೆ ಡಿಮಾಂಡ್ ಹೆಚ್ಚಿದ್ದ ಹಿನ್ನೆಲೆಯಲ್ಲಿ ಹಲವು ಸೀರಿಯಲ್ಗಳನ್ನೂ ಹಾರರ್ ಮಾಡಲಾಗ್ತಿದೆ. ಅದರಲ್ಲಿ ಒಂದು ಜೀ ಕನ್ನಡದಲ್ಲಿ ಬರ್ತಿರೋ ನಾ ನಿನ್ನ ಬಿಡಲಾರೆ. 1979ರಲ್ಲಿ ಬಿಡುಗಡೆಯಾಗಿದ್ದ ಅನಂತ್ ನಾಗ್ ಮತ್ತು ಜ್ಯೂಲಿ ಲಕ್ಷ್ಮೀ ಅಭಿನಯದ ನಾ ನಿನ್ನ ಬಿಡಲಾರೆ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಅದನ್ನೇ ಇಟ್ಟುಕೊಂಡು ಆದರೆ ಕಥೆಯನ್ನು ಬದಲಿಸಿ ಹಾರರ್ ಸೀರಿಯಲ್ ಕೆಲ ದಿನಗಳ ಹಿಂದೆ ಆರಂಭವಾಗಿದೆ.
ಈ ಸೀರಿಯಲ್ನಲ್ಲಿ ಸಕತ್ ಗ್ರಾಫಿಕ್ಸ್ ಬಳಸಲಾಗಿದೆ. ಅದರಂತೆಯೇ ಭೂತದ ಪಾತ್ರವನ್ನು ಮಾಡುವಾಗ ಗಾಳಿಯಲ್ಲಿ ತೇಲಾಡುವ ದೃಶ್ಯವನ್ನು ಹೇಗೆ ಮಾಡಲಾಗಿದೆ ಎನ್ನುವ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಈ ಸೀರಿಯಲ್ನಲ್ಲಿ ದುರ್ಗಾಗಳಾಗಿ ನಟಿಸ್ತಿರೋ ರಿಷಿಕಾ ಅವರು ಕೆಲವೊಮ್ಮೆ ಯಾವುದೇ ಸಹಾಯವಿಲ್ಲದೇ ಕಾರಿನ ಮೇಲೆ ನಡೆಯುವ ಸಾಹಸವನ್ನೂ ಮಾಡಿರುವುದನ್ನು ನೋಡಬಹುದು. ಆದರೆ ಗಾಳಿಯಲ್ಲಿ ತೇಲಾಡುವ ದೃಶ್ಯಗಳನ್ನು ಮಾಮೂಲಿಯಂತೆ ಹಗ್ಗಗಳನ್ನು ಕಟ್ಟಿ ನೇತು ಹಾಕಲಾಗುತ್ತದೆ. ಶೂಟಿಂಗ್ ಮಾಡುವ ಸಮಯದಲ್ಲಿ ನೀಲಿ ಇಲ್ಲವೇ ಹಸಿರು ಪರದೆಯನ್ನು ಹಾಕಿರಲಾಗುತ್ತದೆ. ನಂತರ ಎಡಿಟಿಂಗ್ ಸಮಯದಲ್ಲಿ, ಪರದೆಯನ್ನು ತೆಗೆದರೆ, ಹಗ್ಗ ಜನರಿಗೆ ಕಾಣಿಸುವುದಿಲ್ಲ. ನಟ-ನಟಿಯರು ಕೇವಲ ಗಾಳಿಯಲ್ಲಿ ತೇಲಾಡುವಂತೆ ಕಾಣಿಸುತ್ತದೆ. ಇದರಲ್ಲಿಯೂ ಅದೇ ತಂತ್ರವನ್ನು ಬಳಸಲಾಗಿದ್ದು, ಅದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವರ್ಷವೇ 'ಅನುಪತಿ' ಆಗಮನ ಎಂದ ಆ್ಯಂಕರ್ ಅನುಶ್ರೀ: ಭಾವಿ ಗಂಡನ ಬಗ್ಗೆ ನೇರಪ್ರಸಾರದಲ್ಲಿ ಮಾತು...
ಇನ್ನೂ ಈ ಧಾರಾವಾಹಿ ಕುರಿತು ಹೇಳುವುದಾದರೆ, ಶರತ್ ಮತ್ತು ಅಂಬಿಕಾ ಮದುವೆಯಾಗಿ ಹಿತಾ ಎನ್ನುವ ಮಗಳು ಇರುತ್ತಾಳೆ. ಇಬ್ಬರಿಗೂ ಆಕೆಯ ಮೇಲೆ ಪಂಚಪ್ರಾಣ. ಆದರೆ ಓರ್ವ ಲೇಡಿ ವಿಲನ್ ಸೀರಿಯಲ್ನಲ್ಲಿ ಇರಲೇಬೇಕಲ್ವೆ? ಅವಳೇ ಮಾಯಾ. ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳ ಕೊಲೆ ಮಾಡ್ತಾಳೆ. ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ಅದೊಂದು ಸಂದರ್ಭದಲ್ಲಿ ಅಪ್ಪನ ಮೇಲೂ ಕೋಪಿಸಿಕೊಳ್ಳುವ ಸನ್ನಿವೇಶ ಎದುರಾಗಿ ಮಾತನ್ನೇ ಬಿಡುತ್ತಾಳೆ. ಇತ್ತ ಮಾಯಾ ಹಿತಾಳನ್ನೂ ಕೊಲ್ಲಲು ಸಂಚು ರೂಪಿಸ್ತಾಳೆ. ಆಗ ಸತ್ತು ಹೋದ ತಾಯಿ ಅಂಬಿಕಾ ರಕ್ಷಣೆ ಬರುತ್ತಾಳೆ.
ಶರತ್ ಕಂಪೆನಿಯಲ್ಲಿ ಕೆಲಸ ಮಾಡುವ ಎಡವಟ್ಟು ದುರ್ಗಾ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದು, ಆಕೆಯನ್ನು ತನ್ನ ಪತಿಯ ಜೊತೆ ಮದ್ವೆ ಮಾಡಿಸಬೇಕು ಎನ್ನುವ ಆಸೆ ಅಂಬಿಕಾಗೆ. ಅವಳು ತಾನು ಯಾರೆಂದು ಹೇಳದೇ ದುರ್ಗಾಗೆ ಮಾತ್ರ ಕಾಣಿಸಿಕೊಂಡು ಫ್ರೆಂಡ್ ಆಗಿದ್ದಾಳೆ. ಆದರೆ ಆಕೆಯ ಎಡವಟ್ಟಿನಿಂದ ಶರತ್ಗೆ ಆಕೆಯನ್ನು ಕಂಡ್ರೆ ಇನ್ನಿಲ್ಲದ ಕೋಪ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ನಾಯಕ ಶರತ್ ಪಾತ್ರದಲ್ಲಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದ ನೀತಾ ಅಶೋಕ್, ಅಂಬಿಕಾ ಪಾತ್ರದಲ್ಲಿದ್ದಾರೆ. ದುರ್ಗಾಗಳಾಗಿ ರಿಷಿಕಾ ಹಾಗೂ ವಿಲನ್ ಆಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ.
ಸಮುದ್ರದಲ್ಲಿ ಬಿದ್ರೂ ಬದುಕಿದ ಲಕ್ಷ್ಮೀನಿವಾಸ ಜಾನು ಗೆಟಪ್ಪೇ ಚೇಂಜು: ಸೀರೆ ಬದ್ಲು ಫ್ರಾಕ್- ಭಾವನಾ ಜೊತೆ ಸ್ಟೆಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.