
ಸಿಹಿಕಹಿ ಚಂದ್ರು ಕನ್ನಡ ಚಿತ್ರರಂಗದ ಖ್ಯಾತ ನಟ, ನಿದೇರ್ಶಕ ಮತ್ತು ನಿರ್ಮಾಪಕ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. 1986 -87ರ ಅವಧಿಯಲ್ಲಿ 'ಸಿಹಿಕಹಿ' ಎಂಬ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದ ಚಂದ್ರು ಅವರ ಹೆಸರಿಗೆ ಸಿಹಿಕಹಿ ಸೇರಿಕೊಂಡಿತು. ನಂತರ 1990ರಲ್ಲಿ ಗಣೇಶನ ಮದುವೆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು, ನಟನೆಗೆ ಕಾಲಿಟ್ಟ ಅವರು, ಇದುವರೆಗೆ ಹಲವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ. ನಟನಿಗಿಂತಲೂ ಹೆಚ್ಚಾಗಿ ಇವರು ಗುರುತಿಸಿಕೊಂಡಿರುವುದು ಅಡುಗೆಯಿಂದಾಗಿ. ಆಧುನಿಕ ನಳ ಮಹಾರಾಜ ಎಂದೂ ಇವರನ್ನು ಹಲವರು ಕರೆಯುವುದು ಉಂಟು. ಏಕೆಂದರೆ ಅಡುಗೆ ಮಾಡುವುದರಲ್ಲಿ ಇವರು ನಿಪುಣರು. ಸ್ಟಾರ್ ಸುವರ್ಣದಲ್ಲಿ ಸುದೀರ್ಘ ಅವಧಿಯಿಂದ ಪ್ರಸಾರ ಆಗ್ತಿರೋ ಬೊಂಬಾಟ್ ಭೋಜನವೇ ಇದಕ್ಕೆ ಸಾಕ್ಷಿಯಾಗಿದೆ.
ಚಂದ್ರು ಅವರು ಕೇವಲ ಹಾಸ್ಯ ನಟ ಮಾತ್ರನಲ್ಲ. ಹಾಡುಗಳನ್ನೂ ಬರೆಯುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈಗ ಪತ್ನಿಯರ ಬಗ್ಗೆ Rap Song ಒಂದನ್ನು ಬರೆದಿದ್ದಾರೆ! ತಮಾಷೆಯಾಗಿ ಪ್ರಾಸಬದ್ಧವಾಗಿ ಹೆಂಡತಿಯ ಬಗ್ಗೆ ಈ ಸಾಂಗ್ ಬರೆದಿದ್ದಾರೆ. ಅಷ್ಟಕ್ಕೂ ಗಂಡ- ಹೆಂಡ್ತಿಯರ ಮೇಲೆ ಇರುವಷ್ಟು ಮೀಮ್ಸ್ಗಳು ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಣ್ಣುಮಕ್ಕಳನ್ನು ತಮಾಷೆ ಮಾಡುವುದು ಒಂದು ಕೈ ಮೇಲೆಯೇ ಇದೆ. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ ಎಂದು ಮೈಸೂರು ಅನಂತಸ್ವಾಮಿ ಅವರು ಹೇಳಿದ್ದರೆ, ಹೆಂಡತಿಯ ಬಗ್ಗೆ ತಮಾಷೆಯಾಗಿ ಬರೆದವರೇ ಹೆಚ್ಚು. ಇದೀಗ ಅವರ ಸಾಲಿಗೆ ಸೇರಿದ್ದಾರೆ ಸಿಹಿಕಹಿ ಚಂದ್ರು. ಜಗತ್ತಿನ ಹೆಂಡತಿಯರೆಲ್ಲಾ ಒಂದೇ ಎಂದು ತಮಾಷೆಯಾಗಿ ಅವರು ರ್ಯಾಪ್ ಸಾಂಗ್ ಬರೆದಿದ್ದು ಅದನ್ನು ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ನಲ್ಲಿ ಹೇಳಿದ್ದಾರೆ.
ರಾಜ್ಕುಮಾರರ ಮಟನ್ ಚಾಪ್ಸ್, ದರ್ಶನ್ ಅಮ್ಮನ ಬಟಾಣಿ ಹಲ್ವಾ... ಅಂದಿನ ಘಟನೆ ನೆನೆದ ಸಿಹಿಕಹಿ ಚಂದ್ರು
ವರೀಸ್ ಇನ್ವೈಟೆಡ್ ಫಾರ್ ಎವರ್ ಅವಳೇ ಅಂದ್ರೆ ವೈಫು,
ವೈಫ್ ಅಂದ್ರೆ ಮುದ್ದು ಮಾಡಿ ಮೂಗು ಕುಯ್ಯೋ ನೈಫು,
ವೈಫ್ನಿಂದ ದೂರ ಇದ್ರೆ ನಮ್ಮ ಲೈಫು ಸೇಫು,
ವರ್ಲ್ಡ್ವೈಡ್ ಆಲ್ ವೈಫ್ ಎಲ್ಲಾ ಒಂದೇ ಟೈಪು,
ಹೆಂಡತಿಗೆ ಜಂಭ, ಬಡಾಯಿ ಬಾಯಿ ತುಂಬಾ,
ಗಂಡ ಪಾಪ ತುಂಬಾ,
ಬಾಡಿದ ಬಾಳೆ ಕಂಬ,
ಹೆಂಡತಿ ಹೇಳಿದ್ದೇ ಸರಿ ಸರಿ,
ಅವಳು ಮಾಡ್ತಾಳೆ ಯಾವಾಗ್ಲೂ ಕಿರಿ ಕಿರಿ,
ವರಿ ವರಿ ವರಿ, ಹೆಂಡ್ತಿ ಅಂದ್ರೆ ವರಿ,
ಸರಿ ಸರಿ ಸರಿ ಹೆಂಡ್ತಿ ಹೇಳಿದ್ದೇ ಸರಿ,
ಕುರಿ ಕುರಿ ಕುರಿ, ಪತಿ ಹರಕೆ ಕುರಿ..
ಎಂದು ತಮಾಷೆಯಾಗಿ ಬರೆದಿದ್ದಾರೆ. ಇದಕ್ಕೆ ಹಲವು ಪುರುಷರು ನಿಜ ನಿಜ, 100 ಪರ್ಸೆಂಟ್ ಸರಿಯಿದೆ ಎಂದು ಕಮೆಂಟ್ ಮಾಡುತ್ತಿದ್ದರೆ, ಕೆಲವು ಮಹಿಳೆಯರು ಗರಂ ಆಗಿದ್ದಾರೆ. ನೀವು ಎಲ್ಲಾ ಹೆಂಡತಿಯರನ್ನೂ ಹೀಗೆಯೇ ಅಂದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ಪಾಪ ಸಿಹಿಕಹಿ ಗೀತಾ ಎಷ್ಟು ಒಳ್ಳೆಯವರು. ಅವರನ್ನೂ ಈ ಲಿಸ್ಟ್ಗೆ ಸೇರಿಸಿಬಿಟ್ರಾ? ಅವರು ಇದನ್ನು ಕೇಳಿ ಸುಮ್ಮನೇ ಇದ್ದಾರಾ ಎಂದೆಲ್ಲಾ ಕಾಲೆಳೆಯುತ್ತಿದ್ದಾರೆ.
ಸಾಲದ ಸುಳಿಯಲ್ಲಿ ಬೀದಿಪಾಲಾದಾಗ ದೇಗುಲದಲ್ಲಿ ಪವಾಡ: ಮರುದಿನವೇ 'ಬೊಂಬಾಟ್ ಭೋಜನ'! ಸಿಹಿಕಹಿ ಚಂದ್ರು ಕಥೆ ಕೇಳಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.