
ರಾಜೇಶ್ ನಟರಂಗ ಎಂದರೆ ಬಹುಶಃ ಸೀರಿಯಲ್ ಪ್ರಿಯರಿಗೆ ಯಾರು ಎಂದು ತಿಳಿಯದೇ ಹೋಗಬಹುದು. ಆದರೆ, ಗೌತಮ್ ದಿವಾನ್ ಇಲ್ಲವೇ ಡುಮ್ಮ ಸರ್ ಎಂದಾಕ್ಷಣ ಅಮೃತಧಾರೆಯ ನಾಯಕ ಕಣ್ಣೆದುರಿಗೆ ಬರುತ್ತಾರೆ. ತಮ್ಮ ಎಲ್ಲ ಪಾತ್ರಗಳಿಗೂ ಕಣ್ಣಲ್ಲೇ ನಟಿಸಿ, ಜೀವ ತುಂಬುವ ಅದ್ಭುತ ಪ್ರತಿಭೆ ರಾಜೇಶ್ ಅವರದ್ದು. ಮಧ್ಯವಯಸ್ಕರ ಮದುವೆ, ಪ್ರೀತಿಯ ಕಥಾಹಂದರವನ್ನು ಹೊಂದಿರುವ ತಮ್ಮ ಪಾತ್ರಕ್ಕೆ ಅಷ್ಟೇ ಸುಂದರವಾಗಿ ಜೀವ ತುಂಬಿ ವೀಕ್ಷಕರಿಗೆ ಮನಮೆಚ್ಚುವ ಪತಿಯಾಗಿದ್ದಾರೆ ರಾಜೇಶ್. ಇದ್ದರೆ ಗೌತಮ್ ದಿವಾನ್ನಂಥ ಗಂಡ ಇರಬೇಕಪ್ಪಾ ಎಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಇದೀಗ ಇದೇ ಗೌತಮ್‌ಗೆ ಫಜೀತಿ ಎದುರಾಗಿದೆ. ಭೂಮಿಕಾ ಆತನಿಗೆ ಇನ್ನೊಂದು ಮದುವೆ ಮಾಡಿಸಲು ಹೋಗಿದ್ದಾಳೆ. ತನಗೆ ಮಕ್ಕಳಾಗುವುದಿಲ್ಲ ಎನ್ನುವ ಸತ್ಯ ತಿಳಿದ ತಕ್ಷಣ, ಕುತಂತ್ರಿ ಅತ್ತೆಯ ಮೋಸದ ಜಾಲಕ್ಕೆ ಒಳಗಾಗಿ ಮಧುರಾ ಎನ್ನುವ ಯುವತಿಯನ್ನು ಸೆಟ್ ಮಾಡಿಯೇ ಬಿಟ್ಟಿದ್ದಾಳೆ.
ಇದೀಗ ಇವರಿಬ್ಬರೂ ಒಟ್ಟಿಗೇ ಇರುವಂತೆ ಮಾಡಿದ್ದಾಳೆ ಭೂಮಿಕಾ. ಮದುವೆಯ ಪರಿವೇ ಇಲ್ಲದ ಗೌತಮ್, ಮಧುರಾಳನ್ನು ಕರೆದುಕೊಂಡು ಹೋಟೆಲ್ಗೆ ಹೋಗಿದ್ದಾನೆ. ಅಲ್ಲಿ ಮಾತು ಮಾತಿಗೆ, ನಾನು ನಿಮ್ಮನ್ನು ಮದುವೆಯಾಗುವವಳು ಅಲ್ಲವೆ ಎಂದು ಮಧುರಾ ಕೇಳಿದಾಗ, ಗೌತಮ್‌ಗೆ ಬರಸಿಡಿಲು ಬಡಿದಂತಾಗಿದೆ. ಇದರ ಪ್ರೊಮೋ ಬಿಡುಗಡೆ ಮಾಡುತ್ತಿದ್ದಂತೆಯೇ, ನೆಟ್ಟಿಗರಿಂದ ಒಂದೇ ಸಮನೆ ಬೈಗುಳಗಳ ಸುರಿಮಳೆಯಾಗುತ್ತಿದೆ. ಅಸಲಿಗೆ ಗೌತಮ್ ಪಾತ್ರಧಾರಿ ರಾಜೇಶ್ ಅವರಿಗೆ ನಿಜ ಜೀವನದಲ್ಲಿ ಇದಾಗಲೇ ಮದುವೆಯಾಗಿದ್ದು, ಚೈತ್ರಾ ಅವರ ಪತ್ನಿ, ಹಾಗೂ ಓರ್ವ ಪುತ್ರಿ ಇದ್ದಾಳೆ. ಇದನ್ನು ಪರಿಗಣನೆಗೆ ತೆಗೆದುಕೊಂಡರೆ ಅಮೃತಧಾರೆಯಲ್ಲಿ ಇದಾಗಲೇ ಭೂಮಿಕಾ ಜೊತೆ ಮದುವೆಯಾಗಿದ್ದು, ಈಗ ಮತ್ತೊಂದು ಮದುವೆ. ಅಂದ್ರೆ 3ನೇ ಮದುವೆ. ರಾಜೇಶ್ ಅವರಿಗೆ ಇದೀಗ 47 ವರ್ಷ ವಯಸ್ಸಾಗಿದ್ದು, ಮೂರನೆಯ ಮದ್ವೆಗೆ ರೆಡಿಯಾಗಿದ್ದಾರೆ ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.
ವಿದೇಶದಿಂದ ಬರ್ತಾರೆ, 'ಶುದ್ಧ ಆರ್ಯ'ರಿಂದ ಗರ್ಭ ಧರಿಸಿ ಹೋಗ್ತಾರೆ... ಗರ್ಭಧಾರಣೆ ಪ್ರವಾಸೋದ್ಯಮದ ಕೌತುಕ ಇಲ್ಲಿದೆ...
ಅದರೆ ಸೀರಿಯಲ್ ವಿಷಯದಲ್ಲಿ ಸಿಕ್ಕಾಪಟ್ಟೆ ಕೋಪಗೊಂಡಿರುವ ವೀಕ್ಷಕರು ದಯವಿಟ್ಟು ಅವರ ಪತ್ನಿ ಭೂಮಿಕಾಳನ್ನು ಸಾಯಿಸಿಬಿಡಿ. ಆಗ ಮತ್ತೊಂದು ಮದ್ವೆ ಮಾಡಿಸಿ, ಈ ಅಸಹ್ಯವನ್ನು ನಮ್ಮ ಕೈಯಲ್ಲಿ ನೋಡಲು ಆಗುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಒಂದು ಸುಂದರ ಸೀರಿಯಲ್ ಅನ್ನು ಹೇಗೆ ಹಾಳು ಮಾಡುವುದು ಎನ್ನುವುದನ್ನು ತೋರಿಸುತ್ತಿರುವಿರಾ ಎಂದು ನಿರ್ದೇಶಕರನ್ನು ನೆಟ್ಟಿಗರು ತರಾಟೆಗೂ ತೆಗೆದುಕೊಳ್ಳುತ್ತಿದ್ದಾರೆ. ಭೂಮಿಕಾಳನ್ನು ಸಾಯಿಸಿ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದಿರುವ ನೆಟ್ಟಿಗರು, ಇದೇ ವೇಳೆ ತುಂಬಾ ಬುದ್ಧಿವಂತೆ ಅಂದುಕೊಂಡಿದ್ದ ಭೂಮಿಕಾಳ ಈ ಹುಚ್ಚುತನಕ್ಕೂ ಶಪಿಸುತ್ತಿದ್ದಾರೆ.
ಭೂಮಿಕಾಳ ಪೆದ್ದುತನಕ್ಕೆ ವೀಕ್ಷಕರು ಹಿಡಿಶಾಪ ಹಾಕುತ್ತಿದ್ದಾರೆ. ಇಷ್ಟು ಬೇಗ ಭೂಮಿಕಾ ಪೆದ್ದಿ ಆಗಿದ್ದು ಯಾಕೆ? ಅದೂ ತಮ್ಮನ್ನು ಸಾಯಿಸಲು ಹೊಂಚು ಹಾಕಿರುವ ಅತ್ತೆಯ ಬಗ್ಗೆ ಆಕೆಗೆ ಚೆನ್ನಾಗಿ ಗೊತ್ತು. ಆಕೆ ದುಷ್ಟಳು ಎನ್ನುವುದೂ ಗೊತ್ತು. ಹಾಗಿರುವಾಗ ಅಂಥ ಅತ್ತೆಯ ಮಾತಿನ ಹಿಂದೆ ಎಂಥ ಕುತಂತ್ರ ಇರುತ್ತದೆ ಎನ್ನುವುದು ಇವಳಿಗೆ ಯಾಕೆ ತಿಳಿದಿಲ್ಲ? ತನ್ನನ್ನು ಮತ್ತು ಗಂಡನನ್ನು ದೂರ ಮಾಡಲು ಈ ಹಿಂದೆ ಎಷ್ಟು ಸರ್ಕಸ್ ಮಾಡಿದ್ದಳು ಎಂದು ಅರಿತಿರುವ ಭೂಮಿಕಾ ಮಿಸ್ಸು, ಇಲ್ಲಿ ಮಿಸ್ಸು ಹೊಡೆದದ್ದೇಕೆ? ಇಂಥ ಅವಿವೇಕತನದಿಂದ ಸೀರಿಯಲ್ ಯಾಕೆ ಹಾಳು ಮಾಡುತ್ತೀರಿ ಎಂದೆಲ್ಲಾ ಅಭಿಮಾನಿಗಳು ಗರಂ ಆಗುತ್ತಿದ್ದಾರೆ. ಅಷ್ಟಕ್ಕೂ ಇವಳು ಹೇಳಿದ ಮಾತ್ರಕ್ಕೆ ಗೌತಮ್ ಏನೂ ಬೇರೆ ಮದ್ವೆಯಾಗುವುದಿಲ್ಲ ಎನ್ನುವುದು ನಿಜವಾದರೂ, ಆಣೆ-ಗೀಣೆ ಮಾಡಿಸಿ ಮದ್ವೆ ಮಾಡಿಸಿಬಿಟ್ಟರೆ ಎನ್ನುವ ಚಿಂತೆ ಅಭಿಮಾನಿಗಳಿಗೆ!
ಒಂದು ಹಾಡಿಗಾಗಿ 6 ತಿಂಗಳು ಶೂಟಿಂಗ್ ನಿಲ್ಲಿಸಿದ್ದ ಡಾ.ರಾಜ್: ದ್ವೈತ-ಅದ್ವೈತ ಚರ್ಚೆಗೆ ಸಿಕ್ಕಿತ್ತು ರೋಚಕ ಟ್ವಿಸ್ಟ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.