ಕಷ್ಟಪಟ್ಟ ತಗೊಂಡ ಕಾರು ಮಾರಿದೆ, ಈಗ EMI ಕಟ್ಟಲು ಮನೆ ಖರ್ಚು ನೋಡಿಕೊಳ್ಳುವಷ್ಟು ಇದೆ: ಧರ್ಮ ಕೀರ್ತಿರಾಜ್

Published : Mar 05, 2025, 10:21 AM ISTUpdated : Mar 05, 2025, 10:25 AM IST
ಕಷ್ಟಪಟ್ಟ ತಗೊಂಡ ಕಾರು ಮಾರಿದೆ, ಈಗ EMI ಕಟ್ಟಲು ಮನೆ ಖರ್ಚು ನೋಡಿಕೊಳ್ಳುವಷ್ಟು ಇದೆ: ಧರ್ಮ ಕೀರ್ತಿರಾಜ್

ಸಾರಾಂಶ

ಕನ್ನಡ ನಟ ಕೀರ್ತಿ ರಾಜ್ ಪುತ್ರ ಧರ್ಮ, 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿದ್ದರು. ಕೋವಿಡ್ ಸಮಯದಲ್ಲಿ ಕಾರು ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಕಷ್ಟಪಟ್ಟು ದುಡಿದ ಹಣದಿಂದ ಆಡಿ ಕಾರು ಖರೀದಿಸಿ, ನಂತರ ಮರಳಿ ಪಡೆದರು. ತಂದೆ ತಾಯಿಗೆ ಸಹಾಯ ಮಾಡಿದ್ದೇನೆ. ಮೊದಲ ಸಿನಿಮಾಗೆ ದರ್ಶನ್ ಸರ್ ಚೆಕ್ ನೀಡಿದರು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಕೀರ್ತಿ ರಾಜ್‌ ಪುತ್ರ ಧರ್ಮ ಕೂಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಕಾಲೇಜ್‌ನಲ್ಲಿ ಓದುತ್ತಿರುವಾಗಲೇ ನವಗ್ರಹ ಆಫರ್‌ ಪಡೆದರು. ಅದಾದ ಮೇಲೆ ಸುಮಾರು 20 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿ 50 ದಿನಗಳನ್ನು ಪೂರೈಸಿದ್ದರು. ತಮ್ಮ ಜೀವನದಲ್ಲಿ ಹಣ ವಹಿಸಿರುವ ಪಾತ್ರವನ್ನು ಹಂಚಿಕೊಂಡಿದ್ದಾರೆ. 

'ನಾನು ದುಡಿದಿರುವುದರಲ್ಲಿ ಸಾಧನೆ ಮಾಡಿರುವುದರ ಬಗ್ಗೆ ನನಗೆ ತೃಪ್ತಿ ಇಲ್ಲ. ಖಂಡಿತಾ ಮುಂದೆ ತುಂಬಾ ಮಾಡಬೇಕಿದೆ. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ನೋಡಿದ್ದೀನಿ. ಕೋವಿಡ್‌ ಸಮಯದಲ್ಲಿ ನನ್ನ ಕಾರನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿತ್ತು. ನಾನು ಕಷ್ಟ ಪಟ್ಟು ಖರೀದಿ ಮಾಡಿರುವ ಕಾರು ಅದು ಆಗಲೇ ಒಂದು ಲಕ್ಷ ಕಿಮೀ. ಓಡಾಡಿತ್ತು ಹೀಗಾಗಿ ಬೇಡಪ್ಪ ಮುಂದೆ ಒಂದು ದಿನ ತೆಗೆದುಕೊಳ್ಳಬಹುದು ಅಂತ ಸುಮ್ಮನಾದೆ. ನಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಆಡಿ ಏ 4 ಕಾರನ್ನು ಖರೀದಿಸಿದ್ದು. ನಾಲ್ಕು ವರ್ಷ ಇಟ್ಟುಕೊಂಡ ಕಾರಿಗೆ ನಾನು ಡೌನ್ ಪೇಮೆಂಟ್ ಮಾಡಿದೆ EMIಗಳನ್ನು ಕಟ್ಟಿದೆ ಆದರೆ ಪರಿಸ್ಥಿತಿ ಈ ರೀತಿ ಆದಾಗ ನಾನು ಮಾರಾಟ ಮಾಡಿದೆ. ನನಗೆ ಎಲ್ಲೂ ಮುಜುಗರ ಇರಲಿಲ್ಲ ಏಕೆಂದರೆ ನನ್ನ ಕಷ್ಟಕ್ಕೆ ಆಗಿ ಬಂತು. ಆ ಸಮಯ ಕಳೆದ ಮೇಲೆ ಮತ್ತೆ ಹೊಸ ಕಾರು ಖರೀದಿಸಿ ಬೌನ್ಸ್ ಬ್ಯಾಕ್ ಮಾಡಿದೆ. ತಂದೆ ತಾಯಿಗೆ ಮಗನಾಗಿ ಏನು ಮಾಡಿಕೊಡಬೇಕಿತ್ತು ಅದನ್ನು ಮಾಡಿದ್ದೀನಿ. ಇರುವೆಗೆ ಅದರದ್ದೇ ಚಿಂತೆ, ಆನೆಗೆ ಅದರದ್ದೇ ಚಿಂತೆ ಅನ್ನೋದು ಸತ್ಯ. ಸದ್ಯಕ್ಕೆ ಮನೆ ನಡೆಸಲು ಎಷ್ಟು ಬೇಕು, ಅಪ್ಪ ಅಮ್ಮನಿಗೆ ಎಷ್ಟು ಬೇಕೋ ನನ್ನ EMIಗಳು ಕಟ್ಟಲು ಎಷ್ಟು ಬೇಕು...ಇದಕ್ಕೆ ಯಾವುದೇ ಸಮಸ್ಯೆ ಇಲ್ಲ. ನನ್ನ ಅಪ್ತರಿಗೆ ಒಂದಿಷ್ಟು ಮಾಡುವುದು, 6 ತಿಂಗಳಿಗೆ ಒಮ್ಮೆ ವಿದೇಶ ಟ್ರಿಪ್ ಹೋಗುವುದು ಮಾಡಲು ಅಷ್ಟೇ ಆಗುತ್ತಿರುವುದು. ಮುಂದೆ ಹಂತವಾಗಿ ಬೆಳೆಯಬೇಕು ಏಕೆಂದರೆ ಲೆಕ್ಕಾಚಾರ ಹಾಕಿ ನಾನು ಜೀವನದ ನಡೆಸಬಾರದು. ಖಂಡಿತಾ ಹಣ ಬರುವಂತೆ ಆದರೆ ಅದಕ್ಕೆ ಅಗೌರವ ಕೊಡುವುದಿಲ್ಲ' ಎಂದು ಧರ್ಮ ಕೀರ್ತಿರಾಜ್ ಮಾತನಾಡಿದ್ದಾರೆ. 

ಹೆಂಡ್ತಿಗೂ ನಂಗೂ 10 ವರ್ಷ ವ್ಯತ್ಯಾಸ, ಮೂರ್ನಾಲ್ಕು ಸಲ ಕಠಿಣವಾದ ಜಗಳ ಆಗಿರಬಹುದು: ಮುಖ್ಯಮಂತ್ರಿ ಚಂದ್ರು

'ಮೊದಲ ಸಿನಿಮಾಗೆ ದರ್ಶನ್ ಸರ್ ಬಂದು ಚೆಕ್‌ ಕೊಟ್ಟರು. ನನಗೆ ಲಕ್ಕಿ ನಂಬರ್ 3 ಅಂತ ಮೂರು ಲಕ್ಷ ಕೈಗೆ ಇಟ್ಟಾಗ ಖುಷಿ ಆಯ್ತು. ಬಿಗ್ ಬಾಸ್‌ ಮುಗಿದ ಮೇಲೆ ಸಂಭಾವನೆ ಜಾಸ್ತಿ ಆಗಿದೆ ಅದು ಇದು ಅಂತಿದ್ದಾರೆ...ಏನೇ ಇದ್ದರೂ ನನಗೆ ಕಾಲ್ ಮಾಡಿ ಯಾವ ಮ್ಯಾನೇಜರ್‌ ಇರಲ್ಲ ಗಾಸಿಪ್‌ಗಳಿಗೆ ತಲೆ ಕೊಡಬೇಡಿ ಎನ್ನುತ್ತೀನಿ. ಬಿಗ್ ಬಾಸ್‌ಯಿಂದ ಎರಡು ಮೂರು ಲಕ್ಷ ತಂದಿದ್ದೀನಿ ನೀವು ಕೂಡ ಒಂದೆರಡು ಮೂರು ಸೇರಿಸಿ ಕೊಡಿ ಎನ್ನುತ್ತೀನಿ. 20 ಸಿನಿಮಾಗಳಿಂದ ನಾನು ತಕ್ಕ ಮಟ್ಟಕ್ಕೆ ದುಡಿದ್ದಿದ್ದೀನಿ' ಎಂದು ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಧರ್ಮ ಹೇಳಿದ್ದಾರೆ. 

ಯಶ್ ಮಗಳಿಗೆ ಕೊಟ್ಟ ಕಲಘಟಗಿ ತೊಟ್ಟಿಲಿನಲ್ಲಿ ಅಭಿಷೇಕ್‌ ಮಗನ ನಾಮಕರಣ; ಅಂಬರೀಶ್‌ ಆಸೆ ಈಡೇರಿಸಿದ್ರಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!