
ಶ್ರೀರಸ್ತು ಶುಭಮಸ್ತು ಸೀರಿಯಲ್ ಜೀಕನ್ನಡದಲ್ಲಿ ಪ್ರಸಾರವಾಗ್ತಿದೆ. ಟಿಆರ್‌ಪಿಯಲ್ಲಿ ಯಾವತ್ತೂ ಟಾಪ್ ಐದರೊಳಗೆ ಒಂದು ಸ್ಥಾನ ಪಡೀತಿರೋದು ಈ ಸೀರಿಯಲ್ ಯಾವ ಲೆವೆಲ್‌ಗೆ ಪಾಪ್ಯುಲರ್ ಆಗಿದೆ ಅನ್ನೋದನ್ನು ಹೇಳುತ್ತೆ. ಈ ಸೀರಿಯಲ್‌ನ ಕ್ಯೂಟ್ ಜೋಡಿ ಮಾಧವ ಮತ್ತು ತುಳಸಿ. ಇಬ್ಬರೂ ಮಧ್ಯ ವಯಸ್ಸು ದಾಟುವ ಹಂತದಲ್ಲಿದ್ದಾರೆ. ತುಳಸಿ ಮಗನಿಗೆ ಮದುವೆ ಆಗಿದೆ. ಅತ್ತ ಮಾಧವನ ಮಗನಿಗೂ ಮದುವೆ ಆಗಿದೆ. ಇನ್ನೇನು ಮಕ್ಕಳ ಮದುವೆಯಾಗಿ ಮೊಮ್ಮಕ್ಕಳು ಬರೋ ಟೈಮಲ್ಲಿ ಈ ಇಬ್ಬರೂ ಲವ್ವಲ್ಲಿ ಬೀಳೋದು ಒಂಥರಾ ಚೆನ್ನಾಗಿದೆ ಅಂತಾರೆ ವೀಕ್ಷಕರು. ಶೆಫಾಲಿ ಷಾ, ನೀರಜ್ ಕಬಿ ನಟಿಸಿರೋ ಹಿಂದಿಯ ಒಂದು ಸಿನಿಮಾ ಇದೆ. ಅದರ ಹೆಸರು, 'ಒನ್ಸ್ ಅಗೈನ್' ಅಂತ. ಅದರ ಕಥೆಯೂ ಸ್ವಲ್ಪ ಹೀಗೇ. ವಯಸ್ಸಿಗೆ ಬಂದ ಮಕ್ಕಳ ಹೆತ್ತವರಲ್ಲಿ ಆಗುವ ಪ್ರೇಮದ ಕಥೆ. ಚಿಕ್ಕ ವಯಸ್ಸಿನ ಪ್ರೀತಿಗೆ ಸಿಗುವ ಮನ್ನಣೆ, ಒಪ್ಪಿಗೆ ಎಲ್ಲ ಈ ವಯಸ್ಸಿನ ಪ್ರೇಮಕ್ಕೆ ಸಿಗೋದಿಲ್ಲ. ಇವರು ಎದುರಿಸೋ ಸವಾಲುಗಳು ಡಬಲ್ ಆಗಿರುತ್ತವೆ.
ಸೋ ಈಗ ಕನ್ನಡದಲ್ಲಿ ಬರ್ತಿರೋ 'ಶ್ರೀರಸ್ತು ಶುಭಮಸ್ತು' ಸೀರಿಯಲ್ ಕಥೆಯೂ ಕೊಂಚಮಟ್ಟಿಗೆ ಈ ಸಿನಿಮಾವನ್ನೇ ಹೋಲುತ್ತೆ ಅನ್ನಬಹುದು. ಆದರೆ ಭಿನ್ನತೆ ಇದ್ದೇ ಇದೆ. ಸೋ ಈ ಸೀರಿಯಲ್ ನೋಡೋರಿಗೆಲ್ಲ ಮಾಧವ ತುಳಸಿಯನ್ನು ಪ್ರೇಮಿಸುತ್ತಿರುವ ವಿಚಾರ ಗೊತ್ತೇ ಇರುತ್ತೆ. ಆದರೆ ಮನೆಯಲ್ಲಿ ಒಬ್ಬರನ್ನು ಬಿಟ್ಟರೆ ಮತ್ತೆಲ್ಲರಿಂದಲೂ ಇದಕ್ಕೆ ವಿರೋಧ ಬರುತ್ತಲೇ ಇದೆ. ಇನ್ನೊಂದು ಕಡೆ ಫೇಮಸ್ ಶೆಫ್ ಮಾಧವ ಫ್ಯಾನ್ ತುಳಸಿ ಅದಾಗಲೇ ತನ್ನ ಕೈ ರುಚಿಯಿಂದ ಶೆಫ್ ಮಾಧವನ ಮನಸ್ಸು ಕದ್ದಿದ್ದಾಳೆ. ಆದರೆ ಸದ್ಯಕ್ಕೆ ಅವಳಿಗೆ ಮಾಧವನ ಬಗ್ಗೆ ಸ್ನೇಹವಿದೆ. ಪ್ರೇಮ ಒಳಗೊಳಗೇ ಇದ್ದರೂ ತನಗೆ ಆತನಲ್ಲಿ ಪ್ರೇಮವಿದೆ ಅನ್ನೋದು ಆಕೆಗೆ ಗೊತ್ತಾಗುತ್ತಿಲ್ಲ. ಮತ್ತು ಇಡೀ ಜಗತ್ತು ತಮ್ಮಿಬ್ಬರನ್ನು ಅಂಥದ್ದೊಂದು ಗುಮಾನಿಯಿಂದ ನೋಡುತ್ತಿರುವುದು ಆಕೆಯ ಬಿಪಿ ಹೆಚ್ಚು ಮಾಡಿದೆ.
ಲೇಡಿ ರಾಮಾಚಾರಿ ಸತ್ಯ ಸೀರೆ ಉಟ್ಕೊಂಡೇ ರೌಡಿಗಳ ಜೊತೆ ಹೆಂಗೆ ಫೈಟ್ ಮಾಡ್ತಿದ್ದಾಳೆ ನೋಡಿ!
ಸೀರಿಯಲ್‌ನಲ್ಲಿ ತುಳಸಿಯ ಮಾವ ದತ್ತ ಆಕೆಯಲ್ಲಿ ಮಾಧವನ ಸಂಬಂಧದ ವಿಚಾರ ಮಾತನಾಡಲು ಹೊರಟಿದ್ದಾನೆ. ಇನ್ನೊಂದೆಡೆ ತನ್ನ ಮನೆಯವರ ಕುತಂತ್ರದಿಂದ ಬೇಸತ್ತ ಮಾಧವ ತುಳಸಿಯಿಂದ ದೂರಾಗುವ ತೀರ್ಮಾನಕ್ಕೆ ಬರುವ ಹಂತದಲ್ಲಿದ್ದಾನೆ. ಈ ನಡುವೆ ಈ ಕ್ಯೂಟ್ ಜೋಡಿಯ ನಡುವೆ ಲವ್ ಪ್ರೊಪೋಸ್ ಸೀನ್ ನಡೆದಿದೆ. ಬೀದಿ ಬದಿಯಲ್ಲೊಂದು ಕಲ್ಲು ಬೆಂಚು. ಅದು ಆಗಾಗ ಮಾಧವ ಮತ್ತು ತುಳಸಿ ಭೇಟಿ ಆಗುವ ಜಾಗ. ಅಲ್ಲಿ ಕೂತು ಒಂದಿಷ್ಟು ಹರಟೆ ಹೊಡೆದು ಇಬ್ಬರೂ ಬೀದಿಯುದ್ದ ನಡೆದಿದ್ದಾರೆ. ನಡುವೆ ಕಡ್ಲೆಕಾಯಿ ಮಾರೋ ಯಮ್ಮನಿಂದ ಕಡ್ಲೆಕಾಯಿ ತಗೊಂಡು ತುಳಸಿಗೆ ಕೊಟ್ಟಿದ್ದಾನೆ ಮಾಧವ. ಇನ್ನೊಂದು ಕಡೆ ಮ್ಯಾಜಿಕಲ್ ಆಗಿ ಕೈಗೆ ಬಂದ ಗುಲಾಬಿಯನ್ನು ತುಳಸಿಯ ಮುಂದೆ ಹಿಡಿದು ಜೀವನ ಪೂರ್ತಿ ನನ್ನ ಜೊತೆ ಹೀಗೇ ಹೆಜ್ಜೆ ಹಾಕ್ತೀರಾ ಅಂತ ಪ್ರೊಪೋಸ್ ಮಾಡಿದ್ದಾನೆ. ಕೊಂಚ ಅನುಮಾನಿಸಿದ ತುಳಸಿ ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ.
ಅಂದ್ರೆ ಇನ್ಮುಂದೆ ಮನೆಯವರ ವಿರೋಧದ ನಡುವೆ ಇವರಿಬ್ಬರೂ ಮದುವೆ ಆಗ್ತಾರ, ಇಲ್ಲಾ ಲೈಫ್‌ಲಾಂಗ್ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುತ್ತಾರ ಅನ್ನೋ ಪ್ರಶ್ನೆ ಬರಬಹುದು. ಆದರೆ ಈ ದೃಶ್ಯ ಇನ್ನೇನು ಸೀರಿಯಲ್‌ನಲ್ಲಿ ಬರಬಹುದು ಅಂತ ನೀವು ಕಾಯುತ್ತಾ ಕೂತರೆ ಏಪ್ರಿಲ್ ಅಲ್ಲದಿದ್ದರೂ ಏಪ್ರಿಲ್ ಫೂಲ್ ಆಗ್ತೀರ. ದಾವಣಗೆರೆಯಲ್ಲಿ ತಾರೆಯರ ಜಾತ್ರೆ ನಡೀತಿದೆ. ಅಲ್ಲಿ ಪುಟ್ಟಕ್ಕನ ಮಕ್ಕಳು, ಅಮೃತಧಾರೆ ಹಾಗೂ ಶ್ರೀರಸ್ತು ಶುಭಮಸ್ತು ಸೀರಿಯಲ್ ಕಲಾವಿದರು ಹಾಗೂ ಅಭಿಮಾನಿಗಳ ಮುಖಾಮುಖಿ ನಡೆಯಿತು. ಈ ವೇಳೆ ತುಳಸಿ ಮಾಧವನ ಪ್ರೇಮ ಪ್ರಹಸನವೂ ಸ್ಟೇಜ್ ಮೇಲೆ ನಡೆದಿದೆ. ಈ ದೃಶ್ಯ ಈ ಸೀರಿಯಲ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ. ತುಳಸಿ ಪಾತ್ರದಲ್ಲಿ ಸುಧಾರಾಣಿ, ಮಾಧವನಾಗಿ ಅಜಿತ್ ಹಂದೆ ನಟಿಸಿದ್ದಾರೆ.
ಮಳೆಯಲಿ ಜೊತೆಯಲಿ.. ಕನ್ನಡ ಸೀರಿಯಲ್‌ನಲ್ಲಿ ರೈನ್ ರೊಮ್ಯಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.