ಮೂರನೇ ಪತ್ನಿಗೂ ರಾಹುಲ್‌ ಮಹಾಜನ್‌ ವಿಚ್ಛೇದನ, 4ನೇ ಪ್ರೀತಿಯ ಹುಡುಕಾಟದಲ್ಲಿ ಬಿಗ್‌ ಬಾಸ್‌ ಸ್ಟಾರ್‌!

By Santosh Naik  |  First Published Jul 31, 2023, 1:11 PM IST


ಸಿನಿಮಾರಂಗದಲ್ಲಿ ಇರುವ ವ್ಯಕ್ತಿಗಳ ವಿಚ್ಛೇದನ ಹೊಸ ವಿಚಾರವೇನಲ್ಲ. ಫರ್ದೀನ್‌ ಖಾನ್‌ ಬಳಿಕ ಈಗ ರಿಯಾಲಿಟಿ ಶೋ ಸ್ಟಾರ್‌ ಹಾಗ ಬಿಜೆಪಿಯ ಮಾಜಿ ನಾಯಕ ಪ್ರಮೋದ್‌ ಮಹಾಜನ್‌ ಅವರ ಪುತ್ರ ರಾಹುಲ್‌ ಮಹಾಜನ್‌ ವಿಚ್ಛೇದನ ಮೂಲಕ ಸುದ್ದಿಯಾಗಿದ್ದಾರೆ. ಇದು ರಾಹುಲ್‌ ಮಹಾಜನ್‌ ಅವರ ಮೂರನೇ ವಿಚ್ಛೇದನ ಎನ್ನುವುದು ನಿಮ್ಮ ಗಮನಿಕ್ಕಿರಲಿ.


ಮುಂಬೈ (ಜು.31): ಕೆಲಸಕ್ಕಿಂತ ಹೆಚ್ಚಾಗಿ ತಾನು ಆದ ಮದುವೆಗಳಿಂದಲೇ ಸುದ್ದಿಯಾಗಿದ್ದ ರಿಯಾಲಿಟಿ ಶೋ ಸ್ಟಾರ್‌ ಹಾಗೂ ಮಾಜಿ ಪೈಲಟ್‌ ರಾಹುಲ್‌ ಮಹಾಜನ್‌ಗೆ ಮತ್ತೊಂದು ವಿಚ್ಛೇದನವಾಗಿದೆ. ಕಜಾಕ್‌ಸ್ತಾನದ ಮಾಡೆಲ್‌ ನಟಾಲಿಯಾ ಇಲಿನಾ ಜೊತೆಗಿನ ನಾಲ್ಕು ವರ್ಷದ ದಾಂಪತ್ಯ ಕೊನೆಯಾಗಿದೆ ಎಂದು ವರದಿಯಾಗಿದೆ. ಒಂದು ವರ್ಷದ ಹಿಂದಯೇ ಇಲಿನಾ ವಿಚ್ಛೇದನಕ್ಕಾಗಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ ಅಧಿಕೃತವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದನ್ನು ಮೂಲಗಳು ಕೂಡ ಖಚಿತಪಡಿಸಿವೆ. ಇದಕ್ಕೂ ಮುನ್ನ ರಾಹುಲ್‌ ಮಹಾಜನ್‌, ಡಿಂಪು ಗಂಗೂಲಿ ಎನ್ನುವವರನ್ನು ಮದುವೆಯಾಗಿದ್ದರು. ಬಳಿಕ ಆಕೆಗೆ ವಿಚ್ಛೇದನ ನೀಡಿ ನಟಾಲಿಯಾ ಇಲಿನಾರನ್ನು ಮದುವೆಯಾಗಿದ್ದರು. ಇನ್ನೊಂದೆಡೆ ಡಿಂಪಿ ಗಂಗೂಲಿ ಕೂಡ ಈಗ ಇನ್ನೊಬ್ಬರನ್ನು ವಿವಾಹವಾಗಿದ್ದಾರೆ.

ದಂಪತಿಯ ಆಪ್ತ ಮೂಲಗಳು ಈ ಸುದ್ದಿಯನ್ನು ಖಚಿತಪಡಿಸಿವೆ. 'ಮೊದಲಿನಿಂದಲೂ ಇಬ್ಬರ ನಡುವೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹಾಗಿದ್ದರೂ, ಅವರು ತಮ್ಮ ಮದುವೆಯನ್ನು ಅಂದಾಜು ಮೂರು ವರ್ಷಗಳ ಕಾಲ ಮುಂದುವರಿಸಿದ್ದರು. ಆದರೆ, ಕಳೆದ ವರ್ಷದ ವೇಳೆಗೆ ಅವರು ಬೇರೆ ಬೇರೆಯಾಗಿ ಬದುಕಲು ಆರಂಭ ಮಾಡಿದ್ದು, ವಿಚ್ಛೇದನಕ್ಕೆ ಕೂಡ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತಾದ ದಾಖಲೆಗಳನ್ನೂ ಕೂಡ ಸಲ್ಲಿಕೆ ಮಾಡಲಾಗಿದೆ. ವಿಚ್ಛೇದನ ಪ್ರಕ್ರಿಯೆ ಪೂರ್ತಿ ಆಗಿದೆಯೇ ಅಥವಾ ಇನ್ನೂ ಪ್ರಕ್ರಿಯೆಯಲ್ಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ನಟಾಲಿಯಾ, ರಾಹುಲ್ ಅವರ ಮೂರನೇ ಪತ್ನಿ. ಅವರು ಮೊದಲು 2006-2008ರಲ್ಲಿ ಶ್ವೇತಾ ಸಿಂಗ್ ಅವರನ್ನು ವಿವಾಹವಾಗಿದ್ದರೆ,  ನಂತರ ಅವರು 'ರಾಹುಲ್ ದುಲ್ಹನಿಯಾ ಲೇ ಜಾಯೇಗಾ' ರಿಯಾಲಿಟಿ ಶೋನಲ್ಲಿ ಭೇಟಿಯಾದ ಡಿಂಪಿ ಗಂಗೂಲಿ ಅವರನ್ನು ವಿವಾಹವಾದರು. ಡಿಂಪಿ ಮತ್ತು ರಾಹುಲ್ 2010 ರಲ್ಲಿ ವಿವಾಹವಾಗಿ, 2015 ರಲ್ಲಿ ಬೇರೆ ಬೇರೆಯಾಗಿದ್ದರು.

ನಾಲ್ಕನೇ ಪ್ರೀತಿಯ ಹುಡುಕಾಟದಲ್ಲಿ ರಾಹುಲ್‌ ಮಹಾಜನ್‌:  ಇನ್ನು ರಾಹುಲ್‌ ಮಹಾಜನ್‌ ಅವರ ಆಪ್ತ ಗೆಳೆಯ ಹಾಗೂ ಪೈಲಟ್‌ ಕೂಡ ಆಗಿರುವ ವ್ಯಕ್ತಿ ಈ ಬಗ್ಗೆ ಮಾಹಿತಿ ನೀಡಿದ್ದು, ಮೂರನೇ ವಿಚ್ಛೇದನದಿಂದ ರಾಹುಲ್ ಮಹಾಜನ್‌ ಇನ್ನಷ್ಟು ಘಾಸಿಗೊಂಡಿದ್ದಾರೆ. ಅವರ ಮನಸ್ಸು ಜರ್ಜರಿತವಾಗಿದೆ. ಬ್ರೇಕಪ್‌ ಆದ ಬಳಿಕ ಅವರ ಮನಸ್ಸು ಸಂಪೂರ್ಣವಾಗಿ ಮುರಿದುಹೋಗಿತ್ತು. ಈಗಲೂ ಕೂಡ ಮೇಲ್ನೋಟಕ್ಕೆ ಉತ್ತಮವಾಗಿರುವಂತೆ ಕಂಡಿದ್ದಾರೆ. ಅವನು ಮತ್ತೆ ಎಲ್ಲ ಒಳ್ಳೆಯದನ್ನು ಮಾಡಲು ಪ್ರಯಯತ್ನ ಮಾಡುತ್ತಿದ್ದಾರೆ. ಆದರೆ, ಕಳೆದ ವರ್ಷ ಅವರ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಮತ್ತೊಂದು ಪ್ರೀತಿಯ ಹುಡುಕಾಟದಲ್ಲಿ ಅವರಿದ್ದಾರೆ. ಹಿಂದಿನ ಅನುಭವಗಳಿಂದಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡದಿರಲು ಅವರು ನಿರ್ಧರಿಸಿದ್ದಾರೆ' ಎಂದು ತಿಳಿಸಿದ್ದಾರೆ.

 

Tap to resize

Latest Videos



ವಿಚ್ಛೇದನದ ಬಗ್ಗೆ ಬಾಯ್ಬಿಡದ ರಾಹುಲ್‌-ನಟಾಲಿಯಾ:
ಆದರೆ, ರಾಹುಲ್ ಮಹಾಜನ್ ವರದಿಯನ್ನು ನಿರಾಕರಿಸಿದ್ದಾಗಲಿ, ದೃಢೀಕರಿಸಿದ್ದಾಗಲಿ ಮಾಡಿಲ್ಲ. ನನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಟ್ಟುಕೊಳ್ಳಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ನಾನು ಯಾವುದರ ಬಗ್ಗೆಯೂ ಕಾಮೆಂಟ್ ಮಾಡಲು ಇಷ್ಟಪಡುವುದಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾನು ನನ್ನ ಸ್ನೇಹಿತರೊಂದಿಗೆ ಮಾತನಾಡುವುದಿಲ್ಲ. ನಟಾಲಿಯಾ ಇಲಿನಾ ಕೂಡ ಈ ಬಗ್ಗೆ ಏನನ್ನೂ ಹೇಳಲಿಲ್ಲ. 'ಬಿಗ್ ಬಾಸ್' ರಿಯಾಲಿಟಿ ಶೋನ ಹಲವಾರು ಸೀಸನ್‌ಗಳಲ್ಲಿ ರಾಹುಲ್ ಕಾಣಿಸಿಕೊಂಡಿದ್ದರು ಮತ್ತು ನಟಾಲಿಯಾ ಜೊತೆಗೆ 'ಸ್ಮಾರ್ಟ್ ಜೋಡಿ'ಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

ಕಜಕಿಸ್ತಾನ ರೂಪದರ್ಶಿ ಜತೆ ರಾಹುಲ್‌ 3ನೇ ಮದುವೆ!

click me!