ಯಾರ್ಯಾರನ್ನೋ ಮದ್ವೆ ಮಾಡಿಕೊಳ್ಳಲು ಆಗಲ್ಲ, ಕೊರಗಜ್ಜನ ಮೇಲೆ ಬಿಡ್ತೀನಿ: ಲೈವ್‌ನಲ್ಲಿ ಅನುಶ್ರೀ ಸ್ಪಷ್ಟನೆ

By Vaishnavi Chandrashekar  |  First Published Mar 14, 2023, 10:53 AM IST

 ಪದೇ ಪದೇ ಮದುವೆ ಬಗ್ಗೆ ಪ್ರಶ್ನೆ ಹೇಳುವ ಅಭಿಮಾನಿಗಳಿಗೆ ಇನ್‌ಸ್ಟಾ ಲೈವ್‌ನಲ್ಲಿ ಉತ್ತರ ಕೊಟ್ಟ ಆನುಶ್ರೀ...
 


ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ ಅನುಶ್ರೀ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಸಾವಿರಾರೂ ಟಿವಿ ಶೋಗಳು ಹಾಗೂ ಖಾಸಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಮದುವೆ ಮಾಡಿಕೊಳ್ಳಿ ನನ್ನ ಮದುವೆ ಆಗಿ ನಮ್ಮನೆ ಸೊಸೆಯಾಗಿ ಬಾರಮ್ಮ ಎಂದು ಅನೇಕರು ಬೇಡಿಕೆ ಮುಂದಿಟ್ಟಿದ್ದಾರೆ. ಇನ್ನು ಸಮಯ ಇದೆ ಇನ್ನು ಸಮಯ ಇದೆ ಎಂದು ದಿನ ಮುಂದೂಡುತ್ತಿರುವ ಅನುಶ್ರೀ ಕೊನೆಗೂ ಮೌನ ಮುರಿದಿದ್ದಾರೆ. ಮದುವೆ ಅಂದರೆ ಏನು ಎಂದು ಸರಳವಾಗಿ ವಿವರಿಸಿದ್ದಾರೆ.

'ನಾನು ಎಲ್ಲೇ ಹೋದರು ಜನರು ನನ್ನ ಮದುವೆ ಯಾವಾಗ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ಮದುವೆ ಅನ್ನೋದು ಒಂದು ಸುಂದರ ಅನುಭವ ಸುಮ್ಮನೆ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನನ್ನ ಮದುವೆ ಬಗ್ಗೆ ಮಾತ್ರ ಕೇಳಬೇಡಿ. ಎಷ್ಟು ಸಲ ಹೇಳಿದ್ದರೂ ಅಭಿಮಾನಿಗಳು ಅದೇ ಹೇಳುತ್ತಾರೆ' ಎಂದು ಅನುಶ್ರೀ ಲೈವ್ ಆರಂಭಿಸಿದ್ದರು.

Tap to resize

Latest Videos

Anchor Anushree: ತಮಿಳು ನಟನ ಜೊತೆ ಅನುಶ್ರೀ ಫೋಟೋ ವೈರಲ್, ಕನ್ನಡಿಗರ ತರಾಟೆ

'ಒಬ್ಬ ವ್ಯಕ್ತಿ ಮದುವೆಯ್ನು ಯಾವಾಗ ಯಾಕೆ ಆಗುತ್ತಾರೆ ಗೊತ್ತಾ? ಈ ಮದುವೆ ಅನ್ನೋದು ಒಂದು ಬ್ಯೂಟಿಫುಲ್ ಅನುಭವ ನಾವು ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ, ಈ ಸಂಬಂಧದ ಒಳಗೆ ಇಬ್ಬರು ಹೇಗ್ಬೇಕು ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕಾಗುತ್ತದೆ. ನಿಮಗೆ ಏಜ್ ಆಯ್ತು ನಿಮ್ಮ ವಯಸ್ಸುಎ ಷ್ಟು ಅಂತಾ ಕೇಳುತ್ತಾರೆ ಹೀಗೆ ಹೇಳಿದರು ಎಂದು ನಾನು ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜನ ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ' ಎಂದು ಅನುಶ್ರೀ ಹೇಳಿದ್ದಾರೆ. 

'ಜೀವನದಲ್ಲಿ ನನಗೆ ಇರುವುದು ಒಂದೇ ಭಯ ನನ್ನನ್ನು ಯಾರಾದ್ರೂ ಬಿಟ್ಟು ಹೋಗುತ್ತಾರೆ ಅಂತ. ನನಗೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಖಂಡಿತ ಇಲ್ಲ. ದಯವಿಟ್ಟು ಇಂತಹ ವಿಚಾರಗಳನ್ನು ಕೇಳಬೇಡಿ' ಎನ್ನುತ್ತಲೇ ಅನು ಭಾವುಕರಾಗಿದ್ದಾರೆ. 

Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್​ ಅನುಶ್ರೀ ಬಾಯಲ್ಲಿ!

'ಮದುವೆ ಆಗಬೇಕು ಎಂದು ಮದುವೆ ಬಗ್ಗೆ ನನ್ನ ತಾಯಿ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಮನೆಯಲ್ಲಿ ಏನೇ ನಡೆದರೂ ಮೊದಲು ನೀನು ಮದುವೆ ಆಗು ಎನ್ನುತ್ತಾರೆ. ನೀನು ಮದುವೆ ಮಾಡಿಕೋ ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾರೆ. ಹೀಗೆಲ್ಲಾ ಹೇಳ್ತಾರೆ ಅಂತ ಮದುವೆ ಮಾಡಿಕೊಳ್ಳಲು ಆಗಲ್ಲ. ಇಲ್ಲಿ ಜನರು ನೀವು ಅರೇಂಜ್ಡ್‌ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಆಗ್ತೀರಾ ಎಂದು ಕೇಳುತ್ತಾರೆ....ಈ ವಿಚಾರದ ಬಗ್ಗೆ ನಾನು ಯೋಚನೆ ಮಾಡಿಲ್ಲ ಮೊದಲು ಲವ್ ಆಗಬೇಕು ಅಲ್ವಾ ನಮ್ಮನ್ನು ಯಾರು ಲವ್ ಮಾಡ್ತಾರೆ ಬಿಡಿ' ಎಂದಿದ್ದಾರೆ ಅನುಶ್ರೀ. 

ಅನುಶ್ರೀ ಅಭಿಮಾನಿಗಳ ಜೊತೆ ಲೈವ್‌ನಲ್ಲಿ ಮಾತನಾಡುವಾಗ ಹಿಂದೆ ಪುನೀತ್ ಫೋಟೋ ನೋಡಿದ್ದಾರೆ ನಟ್ಟಿಗರು. ತೋರಿಸಿ ಎಂದು ಮೆಸೇಜ್ ಮಾಡುತ್ತಿದ್ದ ಕಾರಣ ಮನೆಯಲ್ಲಿ ಎಲ್ಲಾ ಅಪ್ಪು ಫೋಟೋಗಳನ್ನು ತೋರಿಸಿದ್ದಾರೆ.

click me!