1987-88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಕಾಲಿಯಾ 36 ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
1987-88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಯಾರಿಗೆ ತಾನೆ ನೆನಪಿಲ್ಲ. ಟಿ.ವಿ ಇನ್ನೂ ಕೆಲವೇ ಕೆಲವರ ಮನೆಯನ್ನು ಅಲಂಕರಿಸಿತ್ತು. ಆ ಸಮಯದಲ್ಲಿ ರಾಮಾಯಣ ಧಾರಾವಾಹಿಯನ್ನು ನೋಡುವುದಕ್ಕಾಗಿ ಪ್ರತಿ ಭಾನುವಾರ ಎಷ್ಟೋ ದೂರದ ಮನೆಗಳಿಗಳಿಗೆ ಹೋಗಿ ನೋಡಿದವರೂ ಇದ್ದಾರೆ. ಅಷ್ಟೊಂದು ರೀತಿಯಲ್ಲಿ ಈ ಧಾರಾವಾಹಿ (Serial) ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಬಹುತೇಕ ಮನೆಗಳಲ್ಲಿ, ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದವರಿಗೂ ಕೊರತೆಯೇನಿಲ್ಲ. ಇಂದು ಸಿನಿಮಾ ಚಿತ್ರ ನಟ ನಟಿಯರನ್ನು ದೇವರಂತೆ ಆರಾಧಿಸುವವರಿಗಿಂತಲೂ ಭಿನ್ನವಾಗಿ ಅಂದಿನ ಸ್ಥಿತಿ ಇತ್ತು.
ಅದರಲ್ಲಿಯೂ ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್, ಸೀತೆಯ ಪಾತ್ರಧಾರಿ ದೀಪಿಕಾ ಚಿಖಲಿಯಾ(Deepika Chikhalia)ಯಾಗಿದ್ದ , ಲಕ್ಷ್ಮಣನಾಗಿದ್ದ ಸುನಿಲ್ ಲಹರಿ, ಹನುಮಂತನಾಗಿದ್ದ ಧಾರಾ ಸಿಂಗ್ (Dhara singh) ಅವರನ್ನು ಖುದ್ದು ದೇವರೆಂದು ಪೂಜಿಸಿದವರೂ ಇದ್ದಾರೆ. ಅವರು ಹೋದ ಕಡೆಗಳಲ್ಲಿ ದೇವರೇ ಮನೆಗೆ ಬಂದವಂತೆ ಪೂಜೆ, ಪುನಸ್ಕಾರ ಮಾಡಿದವರೂ ಇದ್ದಾರೆ. ಅದೇ ರೀತಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರು ನಿಜ ಜೀವನದಲ್ಲಿಯೂ ಕೆಟ್ಟವರೆಂದು ಬಿಂಬಿಸಿದವರೂ ಇದ್ದಾರೆ. ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು.
Deepika Chikhalia: ಸೀತಾಮಾತೆಯ ಒನ್ಪೀಸ್ ಡ್ರೆಸ್ಗೆ ನೆಟ್ಟಿಗರ ಆಕ್ರೋಶ
36 ವರ್ಷಗಳ ಹಿಂದೆ ಬಂದ ರಾಮಾಯಣದ ನಂತರ ಈಗ ಈ ಜೋಡಿ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದೆ. ರಾಮ್ ಸೀತಾ ಅಂದರೆ ಅರುಣ್ ಗೋವಿಲ್ (Arun Govil) ಮತ್ತು ದೀಪಿಕಾ ಚಿಖಾಲಿಯಾ ತಮ್ಮ ಹೊಸ ಪ್ರಾಜೆಕ್ಟ್‌ನ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಈ ಧಾರಾವಾಹಿಯ ಸೆಟ್‌ನಿಂದ ದೀಪಿಕಾ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ, ದೀಪಿಕಾ ಚಿಖಾಲಿಯಾ ಅವರು ಗುಲಾಬಿ ಬಣ್ಣದ ಸೀರೆ, ಮಂಗಳಸೂತ್ರವನ್ನು ಧರಿಸಿ ಮನೆಯ ಅಂಗಳದಲ್ಲಿ ತುಳಸಿಯನ್ನು ಪೂಜಿಸುತ್ತಾರೆ. ಇನ್ನೊಂದು ದೃಶ್ಯದಲ್ಲಿ, ಅವರು ವ್ಯಾನಿಟಿ ವ್ಯಾನ್‌ನಲ್ಲಿ ತಮ್ಮ ಸ್ಕ್ರಿಪ್ಟ್ ಓದುತ್ತಿರುವುದನ್ನು ಕಾಣಬಹುದು. ಈ ಧಾರಾವಾಹಿಯಲ್ಲಿ ಅವರ ಹೆಸರು ಶಾರದಾ. ಅದೇ ಸಮಯದಲ್ಲಿ, ಧಾರಾವಾಹಿಯ ಮತ್ತೊಂದು ದೃಶ್ಯದಲ್ಲಿ, ದೀಪಿಕಾ ಮತ್ತು ಅರುಣ್ ಗೋವಿಲ್ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾರೆ. ದೀಪಿಕಾ ಅರುಣ್ ಅವರ ಈ ವೀಡಿಯೋ ನೋಡಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರ ಜೋಡಿಯನ್ನು ಒಟ್ಟಿಗೆ ನೋಡಿದ ಬಳಕೆದಾರರು ಫುಲ್ ಖುಷ್ ಆಗಿದ್ದಾರೆ. ನಮ್ಮ ಸಿಯಾರಾಮ್ ಮತ್ತೊಮ್ಮೆ ಒಟ್ಟಿಗೆ ಎಂದಿದ್ದಾರೆ.
ಅಂದಹಾಗೆ 58 ವರ್ಷದ ದೀಪಿಕಾ ಚಿಖಾಲಿಯಾ ಅವರು 14 ನೇ ವಯಸ್ಸಿನಿಂದ ವಾಣಿಜ್ಯ ಜಾಹೀರಾತುಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಮಗಳು ಸಿನಿಮಾದಲ್ಲಿ ಕೆಲಸ ಮಾಡುವುದು ಅವರ ತಂದೆಗೆ ಇಷ್ಟವಿರಲಿಲ್ಲ, ಆದರೆ ದೀಪಿಕಾ ತಾಯಿ ಮೊದಲಿನಿಂದಲೂ ಮಗಳಿಗೆ ಬೆಂಬಲ ನೀಡುತ್ತಿದ್ದರು. ದೀಪಿಕಾ ರಾಮಾಯಣಕ್ಕೆ ಸಹಿ ಹಾಕಿದಾಗ ಅವರಿಗೆ ಕೇವಲ 20 ವರ್ಷ. ರಾಮಾಯಣದ ಹೊರತಾಗಿ, ದೀಪಿಕಾ ಕೆಲವು ಗುಜರಾತಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಜನವರಿ 12, 1958 ರಂದು ಮೀರತ್‌ನಲ್ಲಿ ಜನಿಸಿದ ಅರುಣ್ ಗೋವಿಲ್ ಅವರಿಗೆ 65 ವರ್ಷ. ಅವರು ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿದಾಗ, ಅವರಿಗೆ 27 ವರ್ಷ. ಅರುಣ್ ಗೋವಿಲ್ ಅವರು ನಟಿ ಶ್ರೀಲೇಖಾ (Shreelekha) ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಮಗ ಅಮಲ್ ಗೋವಿಲ್ ಮತ್ತು ಮಗಳು ಸೋನಿಕಾ ಗೋವಿಲ್. ಅರುಣ್ ಗೋವಿಲ್ 1977 ರಲ್ಲಿ 'ಪಹೇಲಿ' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದಾದ ನಂತರ ಅವರು ರಮಾನಂದ್ ಸಾಗರ್ ಅವರನ್ನು ಭೇಟಿಯಾದರು ಮತ್ತು ಅವರು 'ವಿಕ್ರಮ್ ಔರ್ ಬೇತಾಲ್' ಶೋನಲ್ಲಿ ರಾಜ ವಿಕ್ರಮಾದಿತ್ಯನ (Vikramaditya) ಪಾತ್ರವನ್ನು ನೀಡಿದರು.
ಸಲ್ಮಾನ್ ಖಾನ್ ನನ್ನ ಅಪ್ಪನಂತೆ ಎಂದ ನಟಿ ಪಾಲಕ್: ಬಿಡ್ತಾರೆಯೇ ಟ್ರೋಲಿಗರು?