
ಮುಂಬೈ (ಮಾ.13): ಭಿನ್ನ, ವಿಭಿನ್ನ ಡ್ರೆಸ್ ಗಳ ಮೂಲಕ ತನ್ನ ಅಭಿಮಾನಿಗಳನ್ನು ಆಗಾಗ್ಗೆ ಹೊಸ ಲೋಕಕ್ಕೆ ಕೊಂಡೊಯ್ಯುವ ಬಾಲಿವುಡ್ ನಟಿ, ಉರ್ಫಿ ಜಾವೇದ್(Uorfi Javed) ಇದೀಗ ಬಿದಿರಿನಿಂದ ಮಾಡಿದ ಡ್ರೆಸ್ ನಲ್ಲಿ ನಲಿದಿರುವ ವಿಡಿಯೋವೊಂದು ವೈರಲ್(video viral) ಆಗಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆ(Instagram account)ಯಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಉರ್ಫಿ ಜಾವೇದ್, ಬಿದಿರಿನ ಟೋಕ್ರಿ( tokri) (ಬುಟ್ಟಿ) ಯಿಂದ ತಯಾರಿಸಲಾದ ಡ್ರೆಸ್ ನಲ್ಲಿ ಫೋಸ್ ನೀಡಿದ್ದಾರೆ. ಈಗ ಅಸ್ವಿತ್ವ ಕಳೆದುಕೊಳ್ಳುತ್ತಿರುವ ಬಿದಿರಿನಿಂದ ಹೇಗೆ ಉತ್ಪನ್ನಗಳನ್ನು ತಯಾರಿಸಬಹುದು ಎಂದು ಬರೆದುಕೊಂಡಿದ್ದಾರೆ.
ಕುಶಲ ಕರ್ಮಿಗಳು ಅದ್ಬುತವಾದ ಕುರ್ಚಿಗಳು, ಟೇಬಲ್ ತಯಾರಿಸಲು ಬಿದಿರಿನ ದಾರಗಳನ್ನು ಹೇಗೆ ಬಳಸುತ್ತಾರೆ ಎಂಬುದು ನನಗೆ ಯಾವಾಗಲೂ ಅಶ್ಚರ್ಯವನ್ನುಂಟು ಮಾಡುತ್ತದೆ. ನನ್ನ ಮನಸ್ಸನ್ನು ಬೆಚ್ಚಿ ಬೀಳಿಸುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಉರ್ಫಿಯ ಈ ಅವತಾರಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.