ದೊಡ್ಮನೆಲಿ ಗೊತ್ತಿದ್ದೋ ಗೊತ್ತಿಲ್ದೇನೋ ಒಂದು ಹಾರ್ಟ್ ಕ್ಯಾಪ್ಚರ್ ಆಯ್ತು; ಲಾಯರ್ ಜಗದೀಶ್!

By Shriram Bhat  |  First Published Oct 27, 2024, 5:06 PM IST

ಬಿಗ್ ಬಾಸ್ ಮೆನೆಲ್ಲಿ ಇರೋ ಆ ಗೋಲ್ಡ್ ನಮ್ಮಿಬ್ಬರ ಮಧ್ಯೆ ಏನೋ ತಂದಿಟ್ಬಿಟ್ಟು ಮಜಾ ನೋಡೋನು. ಅವ್ನು 'ಏಯ್, ನಿಮ್ ಡಾರ್ಲಿಂಗ್ ಬಂದ್ರು ನೋಡು, ಟೀ ಕೇಳೋ' ಅನ್ನೋನು. ಆಮೇಲೆ ಅವ್ರು ಪ್ರತಿಕ್ರಿಯೆ ರಿವರ್ಸ್ನಲ್ಲಿ ಬಂದಾಗ ಅವ್ನು ಎಂಜಾಯ್ ಮಾಡೋನು!..


ಬಿಗ್ ಬಾಸ್ ಮನೆಯಿಂದ ಮೂರೇ ವಾರಕ್ಕೆ ಕಾಲು ಕಿತ್ತಿರೋ ಸ್ಪರ್ಧಿ ಲಾಯರ್ ಜಗದೀಶ್ ಅವರು, ಅಲ್ಲಿನ ಕೆಲವೊಂದು ಘಟನೆ, ವ್ಯಕ್ತಿ ಹಾಗು ವ್ಯಕ್ತಿತ್ವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ಅದರಲ್ಲೂ ಪ್ರಮುಖವಾಗಿ ಅಲ್ಲಿದ್ದ ದಿನಗಳಲ್ಲಿ ನಟಿ ಹಂಸ ಜೊತೆ ಚೆನ್ನಾಗಿದ್ದ ತಮ್ಮ ಕೆಮೆಸ್ಟ್ರಿ, ತಮ್ಮಬ್ಬರ ಜುಗಲ್ಬಂಧಿ ಉದ್ಧೇಶ ಹಾಗೂ ಎಂಟರ್‌ಟೈನ್‌ಮೆಂಟ್‌ ಬಗ್ಗೆ ಲಾಯರ್ ಜಗದೀಶ್ ಮಾತನಾಡಿದ್ದಾರೆ. ಅವರೇನು ಹೇಳಿದ್ದಾರೆ, ನೋಡಿ.. 

ನಮ್ಮಿಬ್ರಿಗೂ ಎರಡು ಕತ್ತೆ ಅಷ್ಟು ವಯಸ್ಸಾಗಿದೆ. ಹಂಸ ಮತ್ತೆ ನಾನು ಮಾಡಿದ್ದು ಕೇವಲ ಎಂಟರ್‌ಟೈನ್‌ಮೆಂಟ್‌ ಸಲುವಾಗಿ ಅಷ್ಟೇ. ಅವ್ರು ಒಂಥಾರಾ ವ್ಯಕ್ತಿ, ಯಾವುದನ್ನೂ ಒಂದ್‌ ಸಾರಿ ಹೇಳಿದ್ರೆ ಮಾಡಲ್ಲ. ಅವ್ರು ಕುಡಿದ ಮೇಲೆ ಗ್ಲಾಸ್ ಅಲ್ಲೇ ಇಟ್ಬಿಡ್ತಾರೆ, ಆದ್ರೆ ಬೇರೆಯವ್ರಿಗೆ ಬಿಗ್ ಬಾಸ್ ಮನೆ ರೂಲ್ಸ್ ಹೇಳ್ತಾರೆ. ಏನಾದ್ರೂ ಹೇಳಿದ್ರೆ ಅದಕ್ಕೆ ಲಕ್ಷ ಕೊಡಲ್ಲ, ನಂಗೆ ಟೀ ಬೇಕು ಅಂದ್ರೆ, ಹೋಗಲೋ ಅಂದ್ಬಿಟ್ಟು ಓಡೋ ಹೋಗ್ತಾರೆ. ನಂಗೇ ಅದೇ ಬೇಕಾಗಿತ್ತು, ಅಲ್ಲಿ ಎಲ್ರಿಗೂ ನಗೆ ತರಿಸ್ಬೇಕು ಅಂತ!

Tap to resize

Latest Videos

undefined

ಹರಿದಾಡಿದ್ದ 'ಗ್ರಾನೈಟ್' ಗಾಳಿಸುದ್ದಿಗೆ ಅಪ್ಪು ಹೇಳಿದ್ದೇನು? ನೆಟ್ಟಿಗರು ಏನಂತ ಕಾಮೆಂಟ್ ಮಾಡ್ತಿದಾರೆ?

ಅಲ್ಲಿ ಬಿಗ್ ಬಾಸ್ ಮೆನೆಲ್ಲಿ ಇರೋ ಆ ಗೋಲ್ಡ್ ನಮ್ಮಿಬ್ಬರ ಮಧ್ಯೆ ಏನೋ ತಂದಿಟ್ಬಿಟ್ಟು ಮಜಾ ನೋಡೋನು. ಅವ್ನು 'ಏಯ್, ನಿಮ್ ಡಾರ್ಲಿಂಗ್ ಬಂದ್ರು ನೋಡು, ಟೀ ಕೇಳೋ' ಅನ್ನೋನು. ಆಮೇಲೆ ಅವ್ರು ಪ್ರತಿಕ್ರಿಯೆ ರಿವರ್ಸ್ನಲ್ಲಿ ಬಂದಾಗ ಅವ್ನು ಎಂಜಾಯ್ ಮಾಡೋನು! ಡಾರ್ಲಿಂಗ್ ಬಾ ಅನ್ನೋದು, ಬಾ ಬಾರೋ ರಸಿಕ ಅನ್ನೋಳು, ಮನೆಯವ್ರೆಲ್ಲಾ ಇವ್ರಿಬ್ರು ಏನು ಸೆಟ್‌ಪ್ ಮಾಡ್ಕೊಂಡವ್ರಾ ಅಂತ ಮೊದಮೊದಲು ಅಂದ್ಕೊಂಡಿದ್ರು. ನಾವು ಜಸ್ಟ್ ಫನ್‌ಗೆ ಹಾಗೆ ಮಾಡ್ತಾ ಇದ್ದಿದ್ದು ಅಷ್ಟೇ. 

ಶುರುವಿನಲ್ಲಿ ನಾವಿಬ್ರೂ ಅದನ್ನ ಒಂದು ಎಕ್ಸ್‌ಪಿರಿಮೆಂಟ್‌ ಆಗಿ ಮಾಡಿದ್ದು. ಆದ್ರೆ ಬರ್ತಾ ಬರ್ತಾ ಅದೊಂದು ಒಳ್ಳೇ ಎಂಟರ್‌ಟೈನ್‌ಮೆಂಟ್ ಆಯ್ತು. ನಾನು ಅವ್ರಿಂದ ಪ್ರತಿಯೊಂದಕ್ಕೂ ಪರ್ಮಿಷನ್ ತಗೋತಾ ಇದ್ದೆ, 'ಮೇಡಂ ಹೀಗೆ ಹೇಳ್ಲಾ, ಹೀಗೆ ಮಾಡ್ಲಾ ಅಂತ! ಅವ್ರಿಗೆ ಮಗ ಇದಾನೆ, ಫ್ಯಾಮಿಲಿ ಇದೆ, ಸೋಷಿಯಲ್ ಸ್ಟೇಟಸ್ ಇದೆ. ನಂಗೂ ಅಷ್ಟೇ, ನಂದೇ ಆದ ಫ್ಯಾಮಿಲಿ ಇದೆ. ಅವ್ರ ಫರ್ಮಿಷನ್ ತಗೊಂಡೇ ಎಲ್ಲಾ ಮಾಡ್ತಾ ಇದ್ದಿದ್ದು. 

ಬಿಗ್ ಬಾಸ್ ಮನೆಗೆ ಬಂದ ವಿಕಟಕವಿ 'ಬೊಂಬೆ ಆಡ್ಸೋನು', ಕೊಟ್ಟ ಪಂಚ್ ಎಂಥದ್ದು?

ಹೀಗೆ ಮಾಡ್ಲಾ ಹಾಗೆ ಮಾಡ್ಲಾ ಅಂತ ಕೇಳಿದ್ರೆ ಅದಕ್ಕೆ ಅವ್ರು 'ಮಾಡ್ರೀ, ನಾವು ಬಂದಿರೋದೆ ಎಂಟರ್‌ಟೈನ್ ಮಾಡೋದಕ್ಕೆ, ಏನೂ ತೊಂದ್ರೆ ಇಲ್ಲ' ಅನ್ನೋರು. ನಾವು ಆರ್ಟಿಸ್ಟ್, ಮಾಡೋದೆಲ್ಲಾ ನಟನೆ ಅಂದಿದ್ರು. ಹೀಗಾಗಿ ನಾನು ನಟಿ ಹಂಸ ಜೊತೆ ಕಂಫರ್ಟೇಬಲ್ ಫೀಲ್ ಹೊಂದಿದ್ದೆ, ಹೀಗಾಗಿ ಅವೆಲ್ಲಾ ಸಾಧ್ಯ ಆಯ್ತು' ಎಂದಿದ್ದಾರೆ ಲಾಯರ್ ಜಗದೀಶ್. ಹಂಸ ಅವರು ಎದೆಯ ಮೇಲೆ ಕಾಲಿಟ್ಟಿದ್ದು, ತಮಗೆ ಯಂಗ್ ಆಗಿರೋ ಫೀಲ್ ಆಗಿದ್ದು ಎಲ್ಲವನ್ನೂ ಹಂಚಿಕೊಂಡಿದ್ದಾರೆ ಲಾಯರ್ ಜಗದೀಶ್!

'ಹಂಸ ಅವ್ರಿಗೆ ಟ್ರಿಗರ್ ಮಾಡಿದ್ರೆ ಅವ್ರು ಏನ್ ಬೇಕಾದ್ರೂ ಮಾಡ್ತಾರೆ' ಅಂದಿದಾರೆ ಲಾಯರ್ ಜಗದೀಶ್! ಅಷ್ಟೇ ಅಲ್ಲ, ಅವ್ರೊಬ್ಬ ಒಳ್ಳೇ ಎಂಟರ್‌ಟೈನರ್, ಬ್ರಾಡ್ ಮೈಂಡೆಡ್ ಪರ್ಸನ್. ಮೂರು ವಾರಗಳ ಬಿಗ್ ಬಾಸ್ ಜರ್ನಿಯಲ್ಲಿ, ದೊಡ್ಮನೆಲಿ ಗೊತ್ತಿದ್ದೋ ಗೊತ್ತಿಲ್ದೇನೋ ಒಂದು ಹಾರ್ಟ್ ಕ್ಯಾಪ್ಚರ್ ಆಯ್ತು..' ಎಂದಿದ್ದಾರೆ ಲಾಯರ್ ಜಗದೀಶ್. ಒಟ್ಟಿನಲ್ಲಿ, ಸದ್ಯ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರುವ ಲಾಯರ್ ಜಗದೀಶ್, ಬಹಳಷ್ಟು ಸಂದರ್ಶನಗಳನ್ನು ಕೊಡುತ್ತಾ ಇಡೀ ಕರ್ನಾಟಕಕ್ಕೇ ಈಗ ಖುಷಿ ಕೊಡುತ್ತಿದ್ದಾರೆ. 

ದರ್ಶನ್​ ಬೆನ್ನುಬಿದ್ದಿರೋ ಬೆನ್ನುನೋವಿನ ಬೇತಾಳ, ದಶಕದ ಹಿಂದಿನ ಆ ಯಡವಟ್ಟು!

click me!