ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾದ ಕಾರು ಮಾನಸರನ್ನು ಕರೆದುಕೊಂಡು ಹೋಯ್ತಾ? ಅಥವಾ ಮತ್ಯಾರು ಎಲಿಮಿನೇಟ್

By Gowthami K  |  First Published Oct 27, 2024, 4:47 PM IST

ಬಿಗ್‌ ಬಾಸ್‌ ಕನ್ನಡ 11 ರಲ್ಲಿ ಅಚ್ಚರಿಯ ಎಲಿಮಿನೇಷನ್‌. ಈ ವಾರ ತುಕಾಲಿ ಮಾನಸ ಹೊರ ಹೋಗಿದ್ದಾರೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಸೃಜನ್ ಲೋಕೇಶ್ ಎಲಿಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟರು.


ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಅಚ್ಚರಿಯ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಶನಿವಾರದ ಎಪಿಸೋಡ್‌ ನಲ್ಲಿ ಮನೆಯೊಳಗೆ ವಿಕಟ ಕವಿ ಯೋಗರಾಜ್ ಭಟ್‌ ಬಂದಿದ್ರು. ಭಾನುವಾರದ ಎಪಿಸೋಡ್‌ ನಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸೃಜನ್ ಲೋಕೇಶ್ ಅವರು ಓರ್ವ ಸ್ಪರ್ಧಿಯನ್ನು ಮನೆಯಿಂದ ಕರೆದುಕೊಂಡು ಹೋಗಲು ಬಂದಿದ್ದಾರೆ. ಎಲಿಮಿನೇಟ್ ಆಗಿರುವ ಸ್ಪರ್ಧಿಯನ್ನು ಮನೆಯನ್ನು ಕಾರಿನಲ್ಲಿ ಮನೆಯಿಂದ ಕರೆದುಕೊಂಡು ಹೋಗಲಾಗಿದೆ.

ಏರು ಧ್ವನಿಯಿಂದಲೇ ಟ್ರೋಲ್‌ ಆಗಿದ್ದ ತುಕಾಲಿ ಮಾನಸ ಅವರು ಈ ವಾರ ಮನೆಯಿಂದ ಹೊರಹೋಗಿದ್ದಾರೆಂದು ಹೇಳಲಾಗುತ್ತಿದೆ. ಇನ್ನು ಕಿಚ್ಚನಿಲ್ಲದ ಕಾರಣಕ್ಕಾಗಿ ಮನೆಯಲ್ಲಿ ವಿಭಿನ್ನವಾಗಿ ಎಲಿಮಿನೇಶನ್‌ ಮಾಡಲಾಗಿದೆ. ಮನೆಯ ಗಾರ್ಡನ್ ಏರಿಯಾಗೆ ಎರಡು ಕಾರುಗಳು ಬಂದಿದ್ದು, ಒಂದೊಂದರಲ್ಲಿ ಅತ್ಯಂತ ಕಡಿಮೆ ಓಟಿಂಗ್ ಪಡೆದಿರುವ ಸ್ಪರ್ಧಿಗಳನ್ನು ಕೂರಿಸಿ ಕಳುಹಿಸಲಾಗಿದೆ. ಎರಡು ಕಾರುಗಳಲ್ಲಿ ಕುಳಿತ ಸ್ಪರ್ಧಿಗಳು ಯಾರು ಎಂಬುದು ಸದ್ಯದ ಕುತೂಹಲವಾಗಿದೆ. ಹೊರಗಡೆ ಹೋದ ಕಾರ್‌ ನಲ್ಲಿ ಸೇಫ್ ಆಗಿ ಮನೆಗೆ ಬಂದವರು ಯಾರು ಅನ್ನೋದು ಕಾದು ನೋಡಬೇಕಿದೆ.

Tap to resize

Latest Videos

ಕಿಚ್ಚ ಸುದೀಪ್ ಅವರ ತಾಯಿಯ ಅಗಲಿಕೆಯ ಕಾರಣದಿಂದ ಈ ವಾರ ಬಾದ್‌ಶಾ ಕಾರ್ಯಕ್ರಮ ನಡೆಸಿಕೊಡುತ್ತಿಲ್ಲ. ಹೀಗಾಗಿ ಶನಿವಾರದ ಎಪಿಸೋಡ್‌ ಗೆ ಯೋಗರಾಜ್ ಭಟ್ ಮತ್ತು ಭಾನುವಾರದ ಎಪಿಸೋಡ್‌ ಗೆ ಸೃಜನ್‌ ಬಂದಿದ್ದಾರೆ. ಮನೆಯೊಳಗೆ ಬಂದ ಸೃಜನ್‌ ಯಾರ್ ಯಾರಿಗೆ ಇಲ್ಲಿ ಸೇಫ್ ಆಗುತ್ತೀನಿ ಅನ್ನೋ ಕಾನ್ಫಿಡೆನ್ಸ್ ಇದೆ ಎಂದು ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಇದೇ ವೇಳೆ ಇಲ್ಲಿ ಮಾತನಾಡೋದು ನೋಡಿದರೆ ನಾನೇನೂ ಮಾಡಿಲ್ಲವೇನೋ ಎಂದು ಅನ್ನಿಸುತ್ತಿದೆ ಎಂದು ಮಾನಸ ಅತ್ತಿದ್ದಾರೆ.

click me!