
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ವಿಶ್ವ ಮನೆಗೆ ಜಾನು ಬರೋದಂತೂ ಪಕ್ಕಾ ಆಗಿದೆ. ಈಗ ವಿಶ್ವ, ಜಾನು ಒಂದಾಗೋಕೆ ಜಯಂತ್ ಅಡ್ಡಿ ಆಗಿರೋದಂತೂ ಸತ್ಯ. ಈಗ ಜಾನು ಪ್ರಾಣವನ್ನೇ ಜಯಂತ್ ತೆಗೆದರೂ ಆಶ್ಚರ್ಯ ಇಲ್ಲ.
ತೊಂದರೆ ಕೊಡುವ ಜಯಂತ್!
ನಾನು ಪ್ರೀತಿಸುವ ವ್ಯಕ್ತಿಗಳು ನನ್ನ ಜೊತೆಯೇ ಇರಬೇಕು, ಎಲ್ಲಿಯೂ ಹೋಗಬಾರದು ಎನ್ನುವ ಉದ್ದೇಶಕ್ಕೆ ಜಯಂತ್ ಜಾನುಳನ್ನು ಕಟ್ಟಿಹಾಕಿದ್ದನು. ಇಡೀ ಮನೆಯಲ್ಲಿ ಜಾನು ಒಬ್ಬಳೇ ಇರಬೇಕು, ಅವಳು ಗೇಟ್‌ನಿಂದ ಆಚೆ ಹೋಗಬಾರದು, ಯಾರ ಜೊತೆಯೂ ಫೋನ್‌ನಲ್ಲಿ ಮಾತನಾಡಬಾರದು, ನನ್ನ ಬಗ್ಗೆಯೇ ಯೋಚಿಸಬೇಕು ಎಂದು ಜಯಂತ್ ಅಂದುಕೊಳ್ತಾನೆ. ಇದಕ್ಕೋಸ್ಕರ ಅವನು ಈಗ ಸಾಕಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾನೆ.
ವಿಶ್ವನ ಜಗತ್ತಿಗೆ ಜಾನು ಪ್ರವೇಶ; ಹುಚ್ಚನಾದ ಸೈಕೋ ಜಯಂತ್ ಬದುಕಿಗೆ ಶಾಂತಮ್ಮನ ಎಂಟ್ರಿ? ಏನಿದು ಬಿಗ್ ಟ್ವಿಸ್ಟ್
ನರಸಿಂಹಯ್ಯನ ಮನೆಯಲ್ಲಿ ಜಾನು!
ನನ್ನ ಗಂಡ ನನ್ನನ್ನು ಅತಿಯಾಗಿ ಪ್ರೀತಿಸ್ತಾನೆ ಎನ್ನೋದು ಸರಿ. ನನಗೋಸ್ಕರ ಬೇರೆಯವರ ಜೀವ ತೆಗೆಯೋಕೆ ಮುಂದಾಗುವ ಗಂಡನ ಜೊತೆ ಬದುಕೋಕೆ ಆಗೋದಿಲ್ಲ ಎಂದು ಜಾಹ್ನವಿ ಸಮುದ್ರಕ್ಕೆ ಹಾರಿದ್ದಳು. ಅವಳ ಆಯಸ್ಸು ಗಟ್ಟಿ ಇದ್ದಿದ್ದಕ್ಕೆ ಅವಳು ಬದುಕಿ ಬಂದಳು. ಚೆನ್ನೈನಲ್ಲಿ ನರಸಿಂಹಯ್ಯನಿಗೆ ಅಪಘಾತ ಆಗೋದರಲ್ಲಿತ್ತು, ಆಗ ಅವಳು ಅದನ್ನು ತಡೆದಳು. ಈಗ ನರಸಿಂಹಯ್ಯನ ಮನೆಗೆ ಜಾನು ಬಂದಿದ್ದಾಳೆ.
ಹುಚ್ಚನಾಗಿರೋ ಜಯಂತ್!
ಜಾನುಗೆ ಏನಾಯ್ತು? ಜಾನು ಗಂಡ ಹೇಗೆ ಅಂತ ವಿಶ್ವನಿಗೆ ಗೊತ್ತಾಗಬಹುದು. ಅಷ್ಟೇ ಅಲ್ಲದೆ ಜಾನುಳನ್ನು ವಿಶ್ವ ಲವ್ ಮಾಡಿದ್ದ ಎನ್ನೋದು ಕೂಡ ರಿವೀಲ್ ಆಗಬಹುದು. ಒಟ್ಟಿನಲ್ಲಿ ಇವರಿಬ್ಬರು ಒಂದಾಗುವ ಸಾಧ್ಯತೆ ಜಾಸ್ತಿ ಇದೆ. ಹೀಗಿರುವಾಗ ಜಯಂತ್ ಹುಚ್ಚನಂತಾಗಿದ್ದಾನೆ.
ಸುಳ್ಳು ಹೇಳಿರೋ ಜಯಂತ್!
ತನ್ನ ಚಿನ್ನುಮರಿ ಮನೆಯಲ್ಲಿಲ್ಲ ಎನ್ನುವ ಕಾರಣಕ್ಕೆ ಅವನು ಒಬ್ಬೊಬ್ಬನೇ ಮಾತನಾಡುತ್ತಿದ್ದಾನೆ. ನನ್ನಿಂದ ಕಷ್ಟ ಆಗ್ತಿದೆ, ನನ್ನ ಪ್ರೀತಿ ಉಸಿರುಗಟ್ಟಿಸ್ತಿದೆ ಅಂತ ಅಂದ್ರೆ ಅದನ್ನು ಹೇಳಬಹುದಿತ್ತು, ನನಗೆ ಹೇಳದೆ ಯಾಕೆ ನನ್ನ ಬಿಟ್ಟು ಹೋದ್ರಿ ಅಂತ ಅವನು ಒಮ್ಮೆ ಕೂಗಾಡ್ತಾನೆ. ಇನ್ನೊಮ್ಮೆ ಸಿಟ್ಟು ಮಾಡಿಕೊಳ್ತಾನೆ. ನನಗೆ ಇನ್ಯಾರೂ ಇಲ್ಲ ಅಂತ ಅವನು ಬೇಸರ ಮಾಡಿಕೊಳ್ತಾನೆ. ನನ್ನಿಂದ ಜಾನು ಪ್ರಾಣ ಕಳೆದುಕೊಂಡಳು ಅಂತ ಅವನು ಯಾರ ಬಳಿಯೂ ಹೇಳೋಕೆ ರೆಡಿ ಇಲ್ಲ. ಶ್ರೀನಿವಾಸ್ ಮನೆಯಲ್ಲಿಯೂ ಕೂಡ ಜಾನು ಕಾಲುಜಾರಿ ಸಮುದ್ರಕ್ಕೆ ಬಿದ್ದಳು ಅಂತ ಸುಳ್ಳು ಹೇಳಿ ಎಲ್ಲರೂ ನಂಬುವ ಹಾಗೆ ಮಾಡಿದ್ದನು.
ಭಾಗ್ಯನಿಗೆ ಬಂದೇ ಬಿಡ್ತು ನೆನಪು: ಶಕುಂತಲಾ ಕಥೆ ಫಿನಿಷ್! ಅಮೃತಧಾರೆ ಸೀರಿಯಲ್ಲೂ ಮುಗಿದೋಯ್ತಾ?
ಜಾಹ್ನವಿ ಸಾಯ್ತಾಳಾ?
ನನ್ನ ತಪ್ಪು ಅಂತ ಯಾರಿಗೂ ಗೊತ್ತಾಗಬಾರದು ಎನ್ನೋದು ಅವನ ಉದ್ದೇಶ ಆಗಿತ್ತು. ಪ್ರೀತಿಸಿ ಮದುವೆಯಾದ ಹೆಂಡ್ತಿ ಸತ್ತಳು ಎನ್ನೋ ಬೇಸರ ಒಂದು ಕಡೆಯಾದರೆ, ನನ್ನ ತಪ್ಪು ಯಾರಿಗೂ ಗೊತ್ತಾಗಬಾರದು ಎನ್ನುವ ಮನಸ್ಥಿತಿ ಇನ್ನೊಂದು ಕಡೆ. ಈ ರೀತಿ ಮನಸ್ಥಿತಿ ಇರೋ ಜಯಂತ್, ಮುಂದೆ ಜಾನು-ವಿಶ್ವ ಮದುವೆ ಆದರೆ ಸುಮ್ಮನೆ ಇರ್ತಾನಾ? ನನಗೆ ಸಿಗದ ಚಿನ್ನುಮರಿ ಯಾರಿಗೂ ಸಿಗಬಾರದು ಅಂತ ಅವನು ಅವಳನ್ನು ಕೊಂದ್ರೂ ಆಶ್ಚರ್ಯ ಇಲ್ಲ.
ಭಾರೀ ಕುತೂಹಲ ಮೂಡಿಸಿದ ಎಪಿಸೋಡ್‌ಗಳು
ಜಾನು ಬದುಕಿದ್ದಾಳೆ ಅಂತ ಗೊತ್ತಾದಮೇಲೆ ಅವನು ವಿಶ್ವ ಮನೆಗೆ ಹೋಗಿ ಅವಳನ್ನು ಮನವೊಲಿಸುವ ಪ್ರಯತ್ನಮಾಡಬಹುದು. ಜಾನು ಮಾತ್ರ ಒಪ್ಪಿಕೊಂಡು ಜಯಂತ್ ಮನೆಗೆ ಹೋಗೋದು ಡೌಟ್. ಹೀಗಾಗಿ ಅವನು ವಿಶ್ವನ ಮೇಲೆ ಸಿಟ್ಟುಮಾಡಿಕೊಂಡು ಅವನಿಗೆ ಅಪಾಯ ತರಲೂಬಹುದು. ಒಟ್ಟಿನಲ್ಲಿ ಮುಂಬರುವ ಕಥೆಗಳು ಭಾರೀ ಕುತೂಹಲ ಮೂಡಿಸುತ್ತಿವೆ.
ಕಥೆ ಏನು?
ಲಕ್ಷ್ಮೀ ಹಾಗೂ ಶ್ರೀನಿವಾಸ್ ದಂಪತಿಯ ಮಗಳು ಜಾಹ್ನವಿಯನ್ನು ಜಯಂತ್ ಪ್ರೀತಿಸಿ ಮದುವೆಯಾಗಿದ್ದಾನೆ. ಜಯಂತ್ ಸೈಕೋ ಬುದ್ಧಿ ಇರುವವನು. ಈ ಸೈಕೋ ಬುದ್ಧಿ ತಡೆಯಲಾರದೆ ಜಾನು ಆತ್ಮಹತ್ಯೆಗೆ ಪ್ರಯತ್ನಪಟ್ಟರೂ ಕೂಡ ಬದುಕಿಬಂದಳು. ವಿಶ್ವ ಎನ್ನುವವನು ಕಾಲೇಜಿನಲ್ಲಿ ಜಾನುಳನ್ನು ಪ್ರೀತಿಸುತ್ತಿದ್ದ. ಈಗ ವಿಶ್ವ ಮನೆಗೆ ಜಾನು ಬಂದಿದ್ದಾಳೆ.
ಪಾತ್ರಧಾರಿಗಳು
ಜಾಹ್ನವಿ- ಚಂದನಾ ಅನಂತಕೃಷ್ಣ
ಜಯಂತ್- ದೀಪಕ್ ಸುಬ್ರಹ್ಮಣ್ಯ
ವಿಶ್ವ- ಭವಿಷ್ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.