
ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಸ್ನೇಹ ಆಗಿ ಮೂರು ವರ್ಷಗಳ ಕಾಲ ಮೆರೆದಿದ್ದ ನಟಿ ಸಂಜನಾ ಬುರ್ಲಿ ಅವರು ತಮಗೆ ಬರುತ್ತಿರೋ ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆ ಹೇಗೆ ಶುರು ಆಯ್ತು?
“ಇಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಜನರು ತುಂಬಾನೇ ನೆಗೆಟಿವಿಟಿ ಹರಡುತ್ತಾರೆ. ಅದು ಒಬ್ಬೊಬ್ಬರಿಗೆ ಒಂಥರ ಪರಿಣಾಮ ಬೀರುತ್ತದೆ. ಸೋಶಿಯಲ್ ಮೀಡಿಯಾ ನೆಗೆಟಿವಿಟಿ ಅಂತ ಬಂದಾಗ, ಚಿತ್ರರಂಗಕ್ಕೆ ಬರುವ ಮುನ್ನ ನನಗೆ ಅಷ್ಟು ಐಡಿಯಾ ಇರಲಿಲ್ಲ. ನನಗೆ ಇನ್‌ಸ್ಟಾಗ್ರಾಮ್ ಹೇಗೆ ಬಳಸಬೇಕು ಎನ್ನೋದು ಗೊತ್ತಿರಲಿಲ್ಲ. 2016ರಲ್ಲಿ ನಾನು ಇನ್‌ಸ್ಟಾಗ್ರಾಮ್‌ಗೆ ಬಂದೆ. ನನ್ನ ಮೊದಲನೇ ಸೀರಿಯಲ್ ಅಂತ್ಯವಾದ ನಂತರದಲ್ಲಿ 2500 ಫಾಲೋವರ್ಸ್‌ನಿಂದ ಎರಡು ತಿಂಗಳ ಗ್ಯಾಪ್‌ನಲ್ಲಿ 10000 ಫಾಲೋವರ್ಸ್‌ವರೆಗೂ ಪಡೆದಿದ್ದೆ. ಸೋಶಿಯಲ್ ಮೀಡಿಯಾ ಎಂಗೇಜ್‌ಮೆಂಟ್ ಹೆಂಗೆ ಹೆಚ್ಚಿಸಿಕೊಳ್ಳಬೇಕು ಅಂತ ರಿಸರ್ಚ್ ಮಾಡುತ್ತಿದ್ದೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಏನೇ ಮಾಡಿದ್ರೂ ಅದನ್ನು ನಾನು ಸ್ವಂತ ಕಲಿತು ಮಾಡಿದ್ದೇನೆ” ಎಂದು ಸಂಜನಾ ಹೇಳಿದ್ದಾರೆ.
ಫೋಟೊ ಶೇರ್ ಮಾಡಿ… ನಿಮ್ ಹೃದಯ ಬಡಿತ ಹೆಚ್ಚಾಗೋದು ಖಚಿತ ಎಂದ ಸಂಜನಾ ಬುರ್ಲಿ!
ನೆಗೆಟಿವ್ ಕಾಮೆಂಟ್ಸ್ ಬಂದಿದ್ದು ಯಾಕೆ?
“ನನ್ನ ಮೊದಲ ಧಾರಾವಾಹಿ ಆರಂಭ ಆಗೋಕೂ ಮುನ್ನ ಸ್ವಲ್ಪವೂ ನೆಗೆಟಿವಿಟಿ ಇರಲಿಲ್ಲ. ಧಾರಾವಾಹಿ ಶುರು ಮಾಡಿದ್ಮೇಲೆ ಶುರು ಆಯ್ತು. ನಾವು ಒಂದು ಸಾಧನೆ ಮಾಡಬೇಕು ಅಂತ ಅಂದುಕೊಂಡಾಗ, ಅಥವಾ ಬೆಳೆಯುತ್ತಾ ಹೋದಾಗಹ ನಮ್ಮ ಕಾಲು ಎಳೆಯೋರು ಜಾಸ್ತಿ ಆಗ್ತಾರೆ. ಮೊದಲ ಧಾರಾವಾಹಿ ಬಳಿಕ ನನಗೆ ಒಂದಷ್ಟು ಆ ಕಡೆ ಈ ಕಡೆ ನೆಗೆಟಿವ್ ಕಾಮೆಂಟ್ಸ್ ಬರೋಕೆ ಶುರು ಆಯ್ತು. ವಾಹಿನಿಯಾಗಲೀ, ನನ್ನ ಪೇಜ್‌ನಲ್ಲಿ ಲುಕ್ ಬಗ್ಗೆ ಕಾಮೆಂಟ್ಸ್ ಬರುತ್ತಿದ್ದವು. ನಾನು ಮಾನಸಿಕವಾಗಿ ಗಟ್ಟಿ ಆಗಿದ್ದೆ, ಹೀಗಾಗಿ ನನಗೆ ಆ ಕಾಮೆಂಟ್ಸ್‌ಗಳು ಅಷ್ಟು ಡಿಸ್ಟರ್ಬ್ ಮಾಡುತ್ತಿರಲಿಲ್ಲ. ಆದರೆ ಆಗಲೂ ಇವರ್ಯಾರು? ನನಗೆ ಯಾಕೆ ಕಾಮೆಂಟ್ ಮಾಡ್ತಾರೆ? ನಾನ್ಯಾರು ಅಂತ ಇವರಿಗೆ ಗೊತ್ತಾ ಅಂತೆಲ್ಲ ಅನಿಸ್ತಿತ್ತು” ಎಂದು ಸಂಜನಾ ಬುರ್ಲಿ ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ಬದಲಾದಳು ಸ್ನೇಹಾ; ಬಂದಳು ರಾಮಾಚಾರಿ ರುಕ್ಕು! ಕಂಠಿ ಗತಿ ನೆನೆಸಿಕೊಂಡು ಕಣ್ಣೀರಿಡ್ತೋ ಫ್ಯಾನ್ಸ್
ಪರಿಣಾಮ ಏನಾಗುತ್ತದೆ?
“ಒಬ್ಬರಿಗೆ ಒಬ್ಬರು ಚೆನ್ನಾಗಿ ಕಾಣಿಸ್ತಾರೆ, ಇನ್ನೊಬ್ಬರಿಗೆ ಅವರು ಚೆನ್ನಾಗಿ ಕಾಣಿಸದೆ ಇರಬಹುದು. ಲುಕ್ಸ್ ಅನ್ನೋದು ನಮ್ಮ ಕೈಯಲ್ಲಿ ಇರೋದೇ ಇಲ್ಲ. ನನ್ನ ಪ್ರತಿಭೆ, ಕೌಶಲ, ಕೆಲಸದ ಬಗ್ಗೆ ಇವರು ಮಾತಾಡಿದ್ರೆ ನಾನು ಒಪ್ಪಿಕೊಳ್ತೀನಿ. ಇದನ್ನೆಲ್ಲ ತಿದ್ದಿಕೊಂಡು ಕರೆಕ್ಷನ್ ಮಾಡಿಸಿಕೊಳ್ಳಬಹುದು. ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಂತರ ಈ ನೆಗೆಟಿವಿಟಿ ಹತ್ತು ಪಟ್ಟು ಜಾಸ್ತಿ ಆಯ್ತು. ಇದು ನನ್ನ ಕುಟುಂಬಕ್ಕೆ, ಸ್ನೇಹಿತರು, ಸಂಬಂಧಿಕರಿಗೆ ಬೇಸರ ತರುತ್ತಿತ್ತು. ನಾವು ಏನೇ ಮಾಡಿದ್ರೂ ಕೆಟ್ಟ ಮಾತಾಡೋಕೆ ಜನರು ಇರುತ್ತಾರೆ. ಧಾರಾವಾಹಿಯಲ್ಲಿ ನಾವು ಸಾಂಪ್ರದಾಯಿಕ ಪಾತ್ರ ಮಾಡಿದ್ದರೂ ಕೂಡ ರಿಯಲ್ ಲೈಫ್‌ನಲ್ಲಿ ಜೀನ್ಸ್ ಹಾಕಿಕೊಳ್ತೀವಿ. ಅದಕ್ಕೂ ನೆಗೆಟಿವ್ ಕಾಮೆಂಟ್ಸ್ ಬರುತ್ತದೆ” ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.
ಏನು ಮಾಡಬೇಕು?
“ಸೋಶಿಯಲ್ ಮೀಡಿಯಾ ಕಾಮೆಂಟ್ಸ್ ಬಗ್ಗೆ ನಮ್ಮ ಧಾರಾವಾಹಿ ಸೆಟ್‌ನಲ್ಲಿ ಚರ್ಚೆ ಮಾಡುತ್ತಿದ್ದೆ. ಆಗ ಮಂಜು ಭಾಷಿಣಿ ಅವರು ಈ ಬಗ್ಗೆ ಮಾತನಾಡುತ್ತ, ನನಗೊಂದು ಮಾತು ಹೇಳಿದ್ರು, ನಿನ್ನ ಕಾಲು ಎಳಿಯೋಕೆ ಪ್ರಯತ್ನ ಪಡೋರು ಯಾವಾಗಲೂ ನೀನು ಕೆಳಗ ಇದ್ದವರೇ, ನಿನ್ನ ಮೇಲುಗಡೆ ಇರೋರು ಯಾವತ್ತು ಕೈ ಕೆಳಗೆ ಹಾಕಿ, ಕಾಲು ಎಳಿಯೋಕೆ ಪ್ರಯತ್ನ ಪಡೋಕಾಗಲ್ಲ ಎಂದು ಹೇಳಿದ್ದರು. ಈಗ ಬಾಡಿ ಬಗ್ಗೆ ಕಾಮೆಂಟ್ ಮಾಡೋದು ಬಿಡಿ. ಸೋಶಿಯಲ್ ಮೀಡಿಯಾ ಬಳಕೆಗೂ ಕಡಿವಾಣ ಬೇಕು” ಎಂದು ಸಂಜನಾ ಬುರ್ಲಿ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.