ಲಕ್ಷ್ಮೀನಿವಾಸ ಧಾರಾವಾಹಿ ನೋಡಿ ಜೀವನಪಾಠ ಕಲಿತ ವೀಕ್ಷಕ!

Published : Apr 17, 2025, 09:19 PM ISTUpdated : Apr 17, 2025, 09:43 PM IST
ಲಕ್ಷ್ಮೀನಿವಾಸ ಧಾರಾವಾಹಿ ನೋಡಿ ಜೀವನಪಾಠ ಕಲಿತ ವೀಕ್ಷಕ!

ಸಾರಾಂಶ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಒಡಹುಟ್ಟಿದವರ ನಡುವಿನ ಹಣದ ಜಗಳ ವೀಕ್ಷಕರೊಬ್ಬರ ಮನಸ್ಸಿಗೆ ನಾಟಿತು. ತನಗೆ ಒಡಹುಟ್ಟಿದವರಿಲ್ಲದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಧಾರಾವಾಹಿಯಲ್ಲಿ ಮಗಳ ತಿಥಿ ಕಾರ್ಯದ ನಡುವೆಯೂ ಅಣ್ಣ ತಮ್ಮಂದಿರ ನಡುವೆ ಐದು ಲಕ್ಷ ರೂಪಾಯಿಗಾಗಿ ಜಗಳ ನಡೆಯುತ್ತದೆ. ಮಗಳು ಜಾಹ್ನವಿ ಜೀವಂತವಾಗಿದ್ದು, ಸೈಕೋ ಗಂಡನಿಂದ ತಪ್ಪಿಸಿಕೊಂಡಿದ್ದಾಳೆ.

ಮಹಾತ್ಮ ಗಾಂಧಿ ಸತ್ಯಹರಿಶ್ಚಂದ್ರ ನಾಟಕ ನೋಡಿ ಮನಪರಿವರ್ತನೆ ಮಾಡಿಕೊಂಡಂತೆ, ಇಲ್ಲೊಬ್ಬ ಯುವಕ ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಧಾರಾವಾಹಿಯನ್ನು ನೋಡಿ ತನ್ನ ಜೀವನವನ್ನೇ ಅರ್ಥ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾನೆ.

ಇದೇನಪ್ಪಾ ಇದು, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅಂತಹ ಪ್ರಸಂಗವೇನು ನಡೆದಿದೆ ಎಂದು ಕೇಳಿದರೆ ನೀವು ವರದಿ ಓದಿದರೆ ಖಂಡಿತಾ ವೀಕ್ಷಕನ ಮಾತನ್ನು ಒಪ್ಪಿಕೊಳ್ಳುತ್ತೀರಿ. ಇನ್ನು ಕೆಲವರು ಬೇರೆಯದೇ ಅಭಿಪ್ರಾಯವನ್ನು ವ್ಯಕ್ತಪಡಿಸಲೂಬಹುದು. ಮಹಾತ್ಮ ಗಾಂಧೀಜಿ ಅವರಿಗೆ ಸತ್ಯಹರಿಶ್ಚಂದ್ರ ನಾಟಕವನ್ನು ಮನಪರಿವರ್ತನೆಗೊಂದು ತಮ್ಮ ಜೀವನವನ್ನು ಬದಲಿಸಿಕೊಂಡರು. ಅದೇ ರೀತಿ ಇಲ್ಲೊಬ್ಬ ವೀಕ್ಷಕ ತನ್ನ ಕುಟುಂಬದಲ್ಲಿ ತಾನೊಬ್ಬನೇ ಮಗನಿರುವುದಕ್ಕೆ ಖುಷಿಯಿಂದ ಧಾರಾವಾಹಿ ಪ್ರೋಮೋ ವಿಡಿಯೋಗೆ ತನ್ನ ಅಭಿಪ್ರಾಯ ಕಾಮೆಂಟ್ ಮಾಡಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸ್ವತಃ ಒಡ ಹುಟ್ಟಿದ ಅಣ್ಣ, ತಮ್ಮಂದಿರು 5 ಲಕ್ಷ ರೂ. ಹಣಕ್ಕಾಗಿ ಪರಸ್ಪರ ಜಗಳ ಮಾಡುವುದನ್ನು ನೋಡಿ ಬೇಸರಗೊಂಡಿದ್ದಾರೆ. ಈ ಕುರಿತ ಪ್ರೋಮೋ ವಿಡಿಯೋವನ್ನು ನೋಡಿದ ವೀಕ್ಷಕ ಸ್ವಸ್ತಿಕ್ ಬಿ. ಶೆಟ್ಟಿ ಎನ್ನುವವರು 'ಇದನ್ನ ನೋಡಿ ನನ್ಗೆ ಏನ್ ಅನ್ನಿಸ್ತು ಅಂದ್ರೆ, ನನ್ನ ಅಮ್ಮಂಗೆ ನಾನು ಒಬ್ಬನೆ ಮಗ. ಅಂದರೆ ನನ್ಗೆ ಒಡಹುಟ್ಟಿದವರು ಯಾರು ಇಲ್ದೆ ಇರೋದು ಒಳ್ಳೇದ್ ಆಯಿತು. ಇಲ್ಲ ಅಂದ್ರೆ ಒಂದಲ್ಲ ಒಂದಿನ ಇದೆ ರೀತಿ ಕಿತಾಡ್ಬೇಕು' ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸುಬ್ಬಿಗೆ ಸೀತಮ್ಮನೇ ಹೆತ್ತತಾಯಿ ಎನ್ನೋ ಸತ್ಯ ಹೇಳಿದ ಸ್ವಾಮಿ ತಾತ!

ಲಕ್ಷ್ಮೀನಿವಾಸ ಧಾರಾವಾಹಿಯಲ್ಲಿ ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿ ತಮ್ಮ ಕಿರಿಯ ಮಗಳು ಜಾಹ್ನವಿ ಸತ್ತುಹೋಗಿದ್ದಾಳೆಂದು ತಿಳಿದು, ತಿಥಿ ಕಾರ್ಯ ಮಾಡವುದಕ್ಕೆ ಸಿದ್ಧತೆ ಮಾಡುತ್ತಿದ್ದಾರೆ. ವೈಕುಂಠ ಸಮಾರಾಧನೆ ಮಾಡುವುದಕ್ಕೂ ಕಾರ್ಡ್ ಮುದ್ರಣ ಮಾಡಿಸಿ, ಮಕ್ಕಳಿಗೆ ಹಂಚಿಕೆ ಮಾಡುವಂತೆ ತಿಳಿಸಿದ್ದಾರೆ. ಆದರೆ, ಈ ವೇಳೆ ದೊಡ್ಡ ಮಗ ಸಂತೋಷ್ ಬಂದು ತನ್ನ ತಮ್ಮ ಹರೀಶನೇ ತಾನು ಕೂಡಿಟ್ಟಿದ್ದ 5 ಲಕ್ಷ ರೂ. ಹಣವನ್ನು ಕದ್ದಿದ್ದಾನೆ ಎಂಬ ಸುಳಿವು ಸಿಕ್ಕು ಜಗಳ ಆರಂಭಿಸುತ್ತಾನೆ. ಮನೆಯಲ್ಲಿ ದುಃಖದ ವಾತಾವರಣ ಇದೆ ಎಂಬುದನ್ನೂ ಅರಿತುಕೊಳ್ಳದೇ ತಮ್ಮನ ಮೇಲೆ ಹಲ್ಲೆಯನ್ನೂ ಮಾಡಲು ಮುಂದಾಗುತ್ತಾನೆ.

ಆಗ ಸಂತೋಷ್ ಹಾಗೂ ಹರೀಶನ ಜಗಳವನ್ನು ಮನೆಯವರೆಲ್ಲರೂ ಬಿಡಿಸುತ್ತಾರೆ. ಆಗ ಹಲ್ಲೆ ಮಾಡುವುದಕ್ಕೆ ಕಾರಣವೇನೆಂದು ಕೇಳಿದಾಗ ನನ್ನ 5 ಲಕ್ಷ ರೂ. ಹಣ ಕಳ್ಳತನ ಮಾಡಿದ್ದು ಹರೀಶನೇ.. ಇದಕ್ಕೆ ಸಾಕ್ಷಿ ಕೂಡ ಇದೆ ಎಂದು ಮನೆಯವರ ಮುಂದೆ ಹೇಳುತ್ತಾನೆ. ಆಗ ಹರೀಶನ ಹೆಂಡತಿ ಸಿಂಚನ ಸುಖಾ ಸುಮ್ಮನೆ ಆರೋಪ ಮಾಡಬೇಡಿ ಭಾವ ಎಂದು ಹೇಳುತ್ತಾರೆ. ಇದಕ್ಕೆ ಮತ್ತೆ ಕೋಪದಿಂದಲೇ ಉತ್ತರಿಸಿದ ಸಂತೋಷ್ ನೀನು ನಿನ್ನ ನೆಕ್ಲೆಸ್ ಕಳೆದು ಹೋಗಿದೆ ಎಂದು ನನ್ನ ಹೆಂಡತಿಯ ಮೇಲೆ ಅನುಮಾನಪಟ್ಟಿದ್ದು ನೆನಪಿದೆ. ಅದನ್ನು ಕದ್ದಿದ್ದು ಕೂಡ ಈ ದೊಡ್ಡ ಮನುಷ್ಯ ನಿನ್ನ ಗಂಡ ಹರೀಶನೇ ಎಂದು ಹೇಳುತ್ತಾನೆ. ದುಃಖದ ವಾತಾವರಣದಲ್ಲಿ ಮಕ್ಕಳು ಜಗಳ ಮಾಡುವ ಘಟನೆ ನೋಡಿ ಮನೆಯ ಉಳಿದ ಸದಸ್ಯರು ಶಾಕ್ ಆಗುತ್ತಾರೆ.

 

ಜಾಹ್ನವಿ ಸುಳಿವು ಹುಡುಕಿದ ಸೋಕೋ ಗಂಡ ಜಯಂತ್: ಶ್ರೀಲಂಕಾಗೆ ಪ್ರವಾಸಕ್ಕೆ ತೆರಳಿದ್ದ ಜಾಹ್ನವಿ ಹಾಗೂ ಜಯಂತ್ ನಡುವೆ ಎಲ್ಲವೂ ಸರಿಯಿಲ್ಲದ ಕಾರಣ ಜಾಹ್ನವಿ ಸಮುದ್ರಕ್ಕೆ ಬೀಳುತ್ತಾರೆ. ಹೀಗಾಗಿ, ಶ್ರೀಲಂಕಾದ ಪ್ರವಾಸದಲ್ಲಿ ಬೋಟಿಂಗ್ ಹೋದಾಗ ಜಾಹ್ನವಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ಸತ್ತಿದ್ದಾಳೆ ಎಂದು ಗಂಡ ಜಯಂತ್ ಹೆಂಡತಿಯ ತವರು ಮನೆಗೆ ಬಂದು ಹೇಳುತ್ತಾನೆ. ಆದರೆ, ಜಾಹ್ನವಿ ಜೀವಂತವಾಗಿದ್ದು, ತಮಿಳುನಾಡಿನ ಮೀನುಗಾರರಿಗೆ ಸಿಕ್ಕು ಬದುಕುಳಿಯುತ್ತಾಳೆ.

ಇದನ್ನೂ ಓದಿ: ಇವಳು ಹೆಡ್​ ಆಫೀಸ್​, ಅವಳು ಬ್ರ್ಯಾಂಚ್​ ಆಫೀಸ್​​ ಅಂತೆ! ಜೈದೇವ್​ ಫ್ಯಾನ್ಸ್​ ಫುಲ್​ ಖುಷ್​...

ಇದೀಗ ಮನೆಗೆ ವಾಪಸ್ ಬಂದಿದ್ದು, ಆಕೆ ತಿಥಿ ಕಾರ್ಯಕ್ಕೆ ಇಟ್ಟಿದ್ದ ಎಡೆಯನ್ನು ತಿಂದಿರುವುದು ಹಾಗೂ ಮನೆಯಲ್ಲಿ ಜಾಹ್ನವಿಯ ಕಾಲಿನ ಚೈನು ಬಿದ್ದಿರುವುದನ್ನು ಜಯಂತ್ ಗಮನಿಸುತ್ತಾನೆ. ಜಾಹ್ನವಿ ಬದುಕಿದ್ದಾಳೆ ಎಂಬುದಕ್ಕೆ ಹಲವು ಸಾಕ್ಷಿಗಳು ಕೂಡ ಸಿಕ್ಕಿದ್ದು, ಆಕೆಯನ್ನು ಹುಡುಕಲು ಕೆಲವರನ್ನು ನೇಮಕ ಮಾಡಿದ್ದಾರೆ. ಆದರೆ, ಸೈಕೋ ಗಂಡನಿಂದ ತಪ್ಪಿಸಿಕೊಳ್ಳಬೇಕು ಎಂದು ಜಾಹ್ನವಿ ಅವರ ಸೋದರಮಾವ ಹಾಗೂ ಹಳೆಯ ಪ್ರಿಯಕರ ವಿಶ್ವನ ಮನೆಯಲ್ಲಿ ಸೇರಿಕೊಂಡಿದ್ದಾಳೆ. ಮುಂದೆ ಸೈಕೋ ಗಂಡನ ಕೈಗೆ ಸಿಕ್ಕಿದರೆ ಜಾನು ಪ್ರಾಣವನ್ನು ತೆಗೆಯಲೂ ಜಯಂತ್ ಹೇಸುವುದಿಲ್ಲ ಎಂಬುದು ವೀಕ್ಷಕರ ಆತಂಕವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ