ಪವರ್ ಸ್ಟಾರ್ ಅಪ್ಪು ಜೊತೆಯಲ್ಲಿಯೂ ನಟಿಸಿದ್ದಾರೆ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ

Published : Oct 08, 2024, 01:51 PM IST
ಪವರ್ ಸ್ಟಾರ್ ಅಪ್ಪು ಜೊತೆಯಲ್ಲಿಯೂ ನಟಿಸಿದ್ದಾರೆ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ

ಸಾರಾಂಶ

ಲಕ್ಷ್ಮೀ ನಿವಾಸ ಧಾರಾವಾಹಿಯ ಜನಪ್ರಿಯ ನಟಿ ಲಕ್ಷ್ಮಿ ಹೆಗಡೆ ಅವರು ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದಾರೆ. ಈ ಸಿನಿಮಾ 2009ರಲ್ಲಿ ಬಿಡುಗಡೆಯಾಗಿತ್ತು.

ಬೆಂಗಳೂರು: ಸೊಸೆ ಅಂದ್ರೆ ಹೀಗಿರಬೇಕು ಅನ್ನೋವಷ್ಟರಮಟ್ಟಿಗೆ ಲಕ್ಷ್ಮೀ ನಿವಾಸ ಧಾರಾವಾಹಿಯ ವೀಣಾ ಪಾತ್ರ ಕರುನಾಡಿನ ಜನತೆಗೆ ಇಷ್ಟವಾಗಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯ ವೀಣಾ ಪಾತ್ರದಲ್ಲಿ ನಟಿಸುತ್ತಿರೋದು ನಟಿ  ಲಕ್ಷ್ಮಿ ಹೆಗಡೆ. ಈ ಧಾರಾವಾಹಿಯಲ್ಲಿ ಜಿಪುಣನ ಪತ್ನಿ ಹಾಗೂ ತುಂಬು ಕುಟುಂಬದ ಹಿರಿಯ ಸೊಸೆ ಪಾತ್ರದಲ್ಲಿ ಲಕ್ಷ್ಮಿ ಹೆಗಡೆ ಅದ್ಭುತವಾಗಿ ನಟಿಸುತ್ತಿದ್ದಾರೆ. ತುಂಬು ಕುಟುಂಬವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ವೀಣಾ ಪಾತ್ರ ನೋಡಿ ಕಲಿಯುಬೇಕು ಎಂದು ಕರುನಾಡಿನ ಅತ್ತೆಯರು ಹೇಳುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ನಟಿ ಲಕ್ಷ್ಮಿ ಹೆಗಡೆ ಈ ಧಾರಾವಾಹಿಗೂ ಮೊದಲು ಹಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದವರಾದ  ಲಕ್ಷ್ಮೀ ಹೆಗಡೆ, ಪದವಿವರೆಗೂ ಓದಿದ್ದು, ನಟನೆ ಜೊತೆಯಲ್ಲಿ ಉತ್ತಮ ಗಾಯಕಿಯಾಗಿದ್ದಾರೆ. ಲಕ್ಷ್ಮೀ ಹೆಗಡೆ  ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲೂ ಬಣ್ಣ ಹಚ್ಚಿದ್ದರೂ,  ಲಕ್ಷ್ಮಿ ನಿವಾಸ ಧಾರಾವಾಹಿಯ ಸೊಸೆ ವೀಣಾ ಪಾತ್ರ ದೊಡ್ಡಮಟ್ಟದ ಹೆಸರನ್ನು ತಂದುಕೊಟ್ಟಿದೆ. 

ಸರಸಮ್ಮನ ಸಮಾಧಿ, ಕುರುನಾಡು, ಜೊತೆಗಾತಿ, ಟ್ಯಾಬ್ ಸೇರಿ ಹಲವಾರು ಸಿನಿಮಾಗಳಲ್ಲಿ ಲಕ್ಷ್ಮಿ ಹೆಗಡೆ ನಟಿಸಿದ್ದಾರೆ. ಕೆಲ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಪಾತ್ರಕ್ಕೂ ಲಕ್ಷ್ಮಿ ಹೆಗಡೆ ನ್ಯಾಯ ಒದಗಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಯಲ್ಲಿಯೂ ಲಕ್ಷ್ಮೀ ಹೆಗಡೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಮಣಿ, ಕುರಿ ಪ್ರತಾಪ್, ರಂಗಾಯಣ ರಘು,  ಶ್ರೀನಾಥ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಚಿತ್ರ 2009ರಲ್ಲಿ ಬಿಡುಗಡೆಗೊಂಡಿತ್ತು. ಇದೇ ಚಿತ್ರದಲ್ಲಿಯೇ ಲಕ್ಷ್ಮೀ ಹೆಗಡೆ ಸಹ ನಟಿಸಿದ್ದಾರೆ. 

ಎಲ್ಲರಿಗೂ ಅಚ್ಚುಮೆಚ್ಚಿನ ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಮನೇಲಿ ಹೇಗಿರ್ತಾರೆ, ಇವರ ರಿಯಲ್‌ ಅತ್ತೆ ಇವರ ಬಗ್ಗೆ ಏನಂತಾರೆ?

2009ರಲ್ಲಿ ಬಿಡುಗಡೆಗೊಂಡ 'ರಾಮ್' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್, ಪ್ರಿಯಾಮಣಿ ಜೊತೆ ಲಕ್ಷ್ಮೀ ಹೆಗಡೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮದುವೆಯಾಗುತ್ತಿರುವ ಗೆಳೆಯನ ಪ್ರೇಯಸಿಯ ಬದಲು ಬೇರೆ ವಧುವನ್ನು ಕಿಡ್ನ್ಯಾಪ್ ಮಾಡುತ್ತಾರೆ. ಕಲ್ಯಾಣ ಮಂಟಪದ ಹೆಸರು ತಪ್ಪಾಗಿ ಹೇಳಿದ್ದರಿಂದ ಬೇಡದ ಮದುವೆಗೆ ಸಿದ್ಧವಾಗಿದ್ದ ವಧು ಪ್ರಿಯಾಮಣಿಯನ್ನು ಅಪಹರಿಸಲಾಗುತ್ತದೆ. ಪುನೀತ್ ರಾಜ್‌ಕುಮಾರ್ ಹಾಗೂ ಗೆಳೆಯರು ವಧುವಿನ ಅಪಹರಣ ಮಾಡುತ್ತಾರೆ. ಈ ಗೆಳೆಯರ ಗುಂಪಿನಲ್ಲಿ ಲಕ್ಷ್ಮೀ ಹೆಗಡೆ ಸಹ ಇದ್ದಾರೆ. 

ಕಲ್ಯಾಣಮಂಟಪದಿಂದ ಅಪಹರಿಸಿದ ನಂತರ ಪುನೀತ್ ರಾಜ್‌ಕುಮಾರ್-ಪ್ರಿಯಾಮಣಿ ಜೊತೆಯಲ್ಲಿ ಲಕ್ಷ್ಮೀ ಹೆಗಡೆ ಕಾಣಿಸಿಕೊಂಡಿದ್ದಾರೆ. ಜೀನ್ಸ್-ಟೀ ಶರ್ಟ್ ಧರಿಸಿದ ಕಾರಣ ಒಂದು ಕ್ಷಣ ಇವರೇನಾ ನಮ್ಮ ವೀಣಾ ಅತ್ತಿಗೆ ಎಂದು ಕನ್ಫ್ಯೂಸ್ ಆಗೋದು ಗ್ಯಾರಂಟಿ. 

ಲಕ್ಷ್ಮೀ ನಿವಾಸದ ವೀಣಾ ಅತ್ತಿಗೆ ಅಂದ್ರೆ ವೀಕ್ಷಕರ ಫೇವರಿಟ್… ಈ ನಟಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!