ಸೀತಾರಾಮ ಸೀತಾಳ ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ವೈರಲ್​: ಸುಸ್ತಾದ ಫ್ಯಾನ್ಸ್​!

Published : Oct 08, 2024, 01:02 PM ISTUpdated : Oct 08, 2024, 01:17 PM IST
ಸೀತಾರಾಮ ಸೀತಾಳ ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ವೈರಲ್​:  ಸುಸ್ತಾದ ಫ್ಯಾನ್ಸ್​!

ಸಾರಾಂಶ

ಸೀತಾರಾಮ ಸೀತಾ ಉರ್ಫ್​ ವೈಷ್ಣವಿ ಗೌಡ ಬ್ಯೂಟಿ ಸಲೂನ್​ನಲ್ಲಿ ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ಶೇರ್​ ಮಾಡಿದ್ದಾರೆ. ಆದ್ರೆ ಕಮೆಂಟ್ಸ್ ಸೆಕ್ಷನ್​ ಆಫ್ ಮಾಡಿದ್ಯಾಕೆ?   

ಸೀತಾರಾಮ ಸೀರಿಯಲ್​ ಸೀತಾ ಅಂದ್ರೆ ನಟಿ  ವೈಷ್ಣವಿ ಗೌಡ ಅವರು, ಸೋಪ್​ ಒಂದರ ಜಾಹೀರಾತಿನಲ್ಲಿ ಸೊಂಟದ ಪಟ್ಟಿ ತೋರಿಸಿ ಸೋಷಿಯಲ್​  ಮೀಡಿಯಾದಲ್ಲಿ ಹಲ್​ಚಲ್​​ ಸೃಷ್ಟಿಸಿದ್ದರು. ಇದೀಗ ಬ್ಯೂಟಿ ಸಲೂನ್​ ಜಾಹೀರಾತಿನಲ್ಲಿ ಕಾಣಿಸಿಕೊಂಡು ಬಾಡಿ ಶೇವಿಂಗ್​, ಬಾಡಿ ಮಸಾಜ್​ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಇದಕ್ಕೆ ನೆಗೆಟಿವ್​ ಕಮೆಂಟ್ಸ್​ ಬರಬಹುದು ಎನ್ನುವ ಭಯದಿಂದಲೋ ಏನೋ, ಕಮೆಂಟ್ಸ್​ ಸೆಕ್ಷನ್​ ಆಫ್​ ಮಾಡಿದ್ದಾರೆ ನಟಿ! ಈ ವಿಡಿಯೋದಲ್ಲಿ ವೈಷ್ಣವಿ ಅವರು ಸಲೂನ್​ ಒಂದಕ್ಕೆ ಹೋಗುವುದನ್ನು ನೋಡಬಹುದು. ನಂತರ ಕೈ ಶೇವಿಂಗ್​ ಮಾಡಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಬಳಿಕ ಇನ್ನಷ್ಟು ಸುಂದರಿಯಾಗಿ ಕಾಣಲು ತಾವು ಯಾವೆಲ್ಲಾ ಸೌಂದರ್ಯ ಚಿಕಿತ್ಸೆಯ ಮೊರೆ ಹೋಗುತ್ತೇವೆ ಎನ್ನುವುದನ್ನು ಇದರಲ್ಲಿ ತೋರಿಸಿದ್ದಾರೆ.

ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ.  ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ,  ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.  ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಸ್ನಾನದ ವೀಡಿಯೋ ಪೋಸ್ಟ್ ಮಾಡಿದ ಸೀತಾರಾಮ ಸೀತಾಗೆ ಈಗ ಮನೆಯಲ್ಲಿರೋ ಇರುವೆ ಚಿಂತೆ!

ಇನ್ನು ಸೀತಾರಾಮ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸೀತಾರಾಮ ಸೀರಿಯಲ್​ನಲ್ಲಿ ಸೀತೆಗೆ ಎಲ್ಲಿ ಮಗಳು ಸಿಹಿ ಕೈತಪ್ಪಿ ಹೋಗ್ತಾಳೋ ಎನ್ನುವ ಭಯ ಕಾಡುತ್ತಿದ್ದರೆ, ಅದೇ ಇನ್ನೊಂದೆಡೆ, ಪ್ರಿಯಾಗೆ ಕ್ಯಾನ್ಸರ್​ ಇರುವ ವಿಷಯ ತಿಳಿದು ಸೀತಾ  ತತ್ತರಿಸಿ ಹೋಗಿದ್ದಾಳೆ. ಈ ಇಬ್ಬರೂ ಸ್ನೇಹಿತೆಯರು ಬೇರೆ ಬೇರೆ ರೀತಿಯಲ್ಲಿ  ಆತಂಕದಲ್ಲಿದ್ದಾರೆ.  ಸೀತಾಳಿಗೆ ಸದ್ಯ ಮೇಘಶ್ಯಾಮ್​ ಮತ್ತು ಶಾಲಿನಿಯೇ ಸಿಹಿಯ ನಿಜವಾದ ಅಪ್ಪ-ಅಮ್ಮ ಎನ್ನುವ ವಿಷಯ ತಿಳಿದಿದೆ. ಶಾಲಿನಿ ಮೇಘಶ್ಯಾಮ್​ ಬಳಿ ಮಾತನಾಡುತ್ತಾ, ಮಗು ಸತ್ತು ಹೋಗಿದೆ ಎಂದು ಹೇಳಿದ್ದು, ಆ ಬಾಡಿಗೆ ತಾಯಿಯಲ್ಲ, ಬದಲಿಗೆ ನಾನೇ. ನೀನು ದೂರದ ದೇಶಕ್ಕೆ ಹೋಗಿದ್ದರಿಂದ ಆ ಮಗುವನ್ನು ನಾನೊಬ್ಬಳೇ ಹೇಗೆ ಸಾಕುವುದು ತಿಳಿಯದೇ ಹೆದರಿ ಮಗು ಸತ್ತು ಹೋಗಿದೆ ಎಂದು ಸುಳ್ಳು ಹೇಳಿದ್ದೆ ಎಂದಿದ್ದಾಳೆ. ಆಮೇಲೆ ಆ ಘಟನೆ ನಡೆದ ದಿನದ ಬಗ್ಗೆ ಹೇಳುತ್ತಿದ್ದಂತೆಯೇ, ಸೀತಾ ಅದನ್ನು ಕೇಳಿಸಿಕೊಂಡಿದ್ದಾಳೆ. ಸಿಹಿ ಹುಟ್ಟಿದ ದಿನ ಕೂಡ ಅದೇ ಆಗಿದ್ದ ಕಾರಣ, ಇವರೇ ಸಿಹಿಯ ಅಪ್ಪ-ಅಮ್ಮ ಎನ್ನುವ ಸತ್ಯ ಗೊತ್ತಾಗಿದೆ.

ಇನ್ನು ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರ ಪರ್ಸನಲ್​  ಲೈಫ್​ ಕುರಿತು ಹೇಳುವುದಾದರೆ, ಇವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್​ ಮಾಡುತ್ತಾರೆ.  ಟೈಂ ಸಿಕ್ಕಾಗಲೆಲ್ಲಾ  ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್​ ಮಾಡುತ್ತಾರೆ. ಬಿಜಿ ಷೆಡ್ಯೂಲ್​ ನಡುವೆ ಒಂದಿಷ್ಟು ರಿಲ್ಯಾಕ್ಸ್​  ಮೂಡಿಗೆ ಬರುತ್ತದೆ ಟೀಂ. ಅಷ್ಟಕ್ಕೂ,  ಸೀತಾ ಮತ್ತು ಸಿಹಿಯ ಜೋಡಿ ಮಾತ್ರ ಥೇಟ್​ ಅಮ್ಮ-ಮಗಳಂತೆಯೇ ಇದೆ. ಸೀರಿಯಲ್​ನಲ್ಲಿ ಇವರಿಬ್ಬರೂ ಅಮ್ಮ-ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿಯೂ ಇವರು ಅಮ್ಮ-ಮಗಳು ಇದ್ದಿರಬಹುದು ಎಂದು ಹಲವರಿಗೆ ಎನ್ನಿಸುವುದು ಉಂಟು. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಮತ್ತು ಸಿಹಿ ಪಾತ್ರಧಾರಿ ರೀತು ಸಿಂಗ್​ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ, ಇವಳು ನಿಮ್ಮ ಮಗಳು ಅಲ್ಲ ಎಂದು ಮನಸ್ಸು ಒಪ್ಪಿಕೊಳ್ಳುವುದೇ ಇಲ್ಲ ಎನ್ನುತ್ತಲೇ ಇರುತ್ತಾರೆ.  

ಬೆಡ್​ರೂಮ್​ನಲ್ಲಿ 3 ಸೊಳ್ಳೆಯಲ್ಲಿ ಒಂದು ಮಲಗಿರುತ್ತೆ, ಎರಡು ಎಚ್ಚರವಿರುತ್ತೆ, ಯಾಕೆ? ಸಿಹಿ ಪ್ರಶ್ನೆಗೆ ಉತ್ತರ ಗೊತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ