ಬಿಗ್‌ಬಾಸ್ ಸೀಸನ್ 11ರಲ್ಲಿ ಜಗದೀಶ್ ಮತ್ತು ಹಂಸಾ ನಡುವಿನ ವರ್ತನೆ ವೀಕ್ಷಕರಿಗೆ ಮುಜುಗರ ತಂದಿದೆಯಂತೆ. ಅವರನ್ನು 6ನೇ ಸೀಸನ್‌ನ ಜೋಡಿಗೆ ಹೋಲಿಸಲಾಗುತ್ತಿದೆ. ಹೊರ ಜೀವನ ಮರೆತು ಮಿತಿ ಮೀರುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಬೆಂಗಳೂರು: ಈ ಬಾರಿಯ ಬಿಗ್‌ಬಾಸ್ ಸೀಸನ್ 11ರಲ್ಲಿಯ ಸ್ಪರ್ಧಿಗಳಾದ ಜಗದೀಶ್ ಮತ್ತು ಹಂಸಾ ಆಟ ವೀಕ್ಷಕರಿಗೆ ಮುಜುಗರವನ್ನುಂಟು ಮಾಡುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಬಿಗ್‌ಬಾಸ್ ಸೀಸನ್ 6ರಲ್ಲಿದ್ದ ಜೋಡಿಯನ್ನು ವೀಕ್ಷಕರು ನೆನಪು ಮಾಡಿಕೊಳ್ಳುತ್ತಿದ್ದಾರೆ. ಆ ಜೋಡಿಗೆ ಜಗದೀಶ್ ಮತ್ತು ಹಂಸ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಜಗದೀಶ್ ಮತ್ತು ಹಂಸಾ ಇಬ್ಬರು ವಿವಾಹಿತರಾಗಿದ್ದು, ವಯಸ್ಸಿನಲ್ಲಿ ಹಿರಿಯರು. ಮನೆಯ ಕ್ಯಾಪ್ಟನ್ ಆಗಿರುವ ಹಂಸಾ ಅವರಿಗೆ ಜಗದೀಶ್ ಐ ಲವ್ ಯು ಎಂದು ಹೇಳಿದ್ದು ವೈರಲ್ ಆಗುತ್ತಿದೆ.
ನರಕವಾಸಿಯಾಗಿರುವ ಜಗದೀಶ್ ಪದೇ ಪದೇ ಕ್ಯಾಪ್ಟನ್ ಹಂಸಾ ಅವರನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಲವ್ ಸ್ಟೋರಿ ಶುರವಾಗಿಲ್ಲ. ನಾವ್ಯಾಕೆ ಶುರು ಮಾಡಬಾರದು ಎಂದು ಹಂಸಾ ಅವರಿಗೆ ಹೇಳುತ್ತಾರೆ. ಐ ಲವ್ ಯೂ ಕ್ಯಾಪ್ಟನ್ ಎಂದು ಜಗದೀಶ್ ಪ್ರಪೋಸ್ ಮಾಡಿದ್ದು, ಇದರಿಂದ ಇರಿಟೇಟ್ ಆಗಿರುವ ಹಂಸ ಕ್ಯಾಪ್ಟನ್ ಗೆ ಎಲ್ಲರೂ ಮರ್ಯಾದೆ ಕೊಡಿ ಎಂದು ಹೆಳಿದ್ದಾರೆ. ಆದ್ರೂ ಹಂಸಾ ಹಿಂದೆಯೇ ಜಗದೀಶ್ ಬಿದ್ದಂತೆ ಕಾಣಿಸುತ್ತಿದೆ. ಜಗದೀಶ್ ಅತಿಯಾದ ತರಲೆ ನೋಡುಗರಿಗೆ ಇರಿಸು ಮುರಿಸು ಮಾಡುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.
ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ದೊಡ್ಡವರ ಲವ್ ಸ್ಟೋರಿ ಶುರುವಾಗಿದೆ ಎಂದು ನೆಟ್ಟಿಗರು ಪ್ರೋಮೋಗೆ ಕಮೆಂಟ್ ಮಾಡುತ್ತಿದ್ದಾರೆ. ನಟ ಧರ್ಮ ಕೀರ್ತಿರಾಜ್ ಮತ್ತು ನಟಿ ಐಶ್ವರ್ಯಾ ಸಿಂಧೋಗಿ ನಡುವೆ ಪ್ರೀತಿಯ ಹೂ ಅರಳುತ್ತಿದೆ ಎಂದು ಮನೆಯಲ್ಲಿರೋ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಅನುಷಾ ಸಹ ಧರ್ಮ ಬಗ್ಗೆ ಸಾಫ್ಟ್ ಆಗಿ ಮಾತನಾಡುತ್ತಿರೋದನ್ನು ನೋಡಬಹುದು. ಭಾನುವಾರದ ಸಂಚಿಕೆಯಲ್ಲಿಯೂ ಸುದೀಪ್ ಈ ಬಗ್ಗೆ ಮಾತನಾಡಿದ್ದರು. ಹಾಗೇನೂ ಇಲ್ಲ ಎಂದು ನಾಚಿಕೊಂಡು ಧರ್ಮ ಕೀರ್ತಿರಾಜ್ ಸ್ಪಷ್ಟನೆ ನೀಡಿದ್ದರು.
ಐ ಲವ್ ಯೂ ಕ್ಯಾಪ್ಟನ್ ಎಂದ ಲಾಯರ್ ಜಗದೀಶ್ ಎದೆ ಮೇಲೆ ಕಾಲಿಟ್ಟ ಹಂಸ… ದೊಡ್ಮನೆಯಲ್ಲಿ ಏನಾಗ್ತಿದೆ?
6ನೇ ಸೀಸನ್ ಜೋಡಿ ಜೊತೆ ಹೋಲಿಕೆ
ಬಿಗ್‌ಬಾಸ್ ವೀಕ್ಷಕರು 6ನೇ ಸೀಸನ್ ಸ್ಪರ್ಧಿಯಾಗಿದ್ದ ರಾಕೇಶ್-ಅಕ್ಷತಾ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಆರನೇ ಸೀಸನ್ ಮುಗಿಯವರೆಗೂ ಇಬ್ಬರ ನಡುವೆ ಇದ್ದಿದ್ದು ಪ್ರೀತಿನಾ? ಸ್ನೇಹನಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಆ ಇಬ್ಬರ ಹಾದಿಯಲ್ಲಿಯೇ ಜಗದೀಶ್ ಮತ್ತು ಹಂಸಾ ಸಾಗುತ್ತಿದ್ದಾರಾ ಎಂಬುಬರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ. ಬಿಗ್‌ಬಾಸ್ ಮನೆಗೆ ಬಂದ ಕೂಡಲೇ ಹೊರಗಿನ ಜೀವನ ಸಂಪೂರ್ಣ ಮರೆಯಬಾರದು ಅಂತಾನೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಗ್‌ಬಾಸ್‌ನಲ್ಲಿ ಎಲ್ಲರಿಗೂ ಒಂದು ನ್ಯಾಯ ಆದ್ರೆ, ಯಮುನಾ ಶ್ರೀನಿಧಿಗೆ ಮತ್ತೊಂದು ನ್ಯಾಯ ಏಕೆ?