ವೀಣಕ್ಕನ ಕಪಾಳಕ್ಕೆ ಬಾರಿಸಿಬಿಡೋದಾ ತಿರುಬೋಕಿ ಸಂತೋಷ, ಥೂ ಇವ್ನ ಜನ್ಮಕ್ಕೆ ಅಂತ ಝಾಡಿಸ್ತಿದ್ದಾರೆ ನೆಟ್ಟಿಗರು!

By Bhavani Bhat  |  First Published Sep 13, 2024, 9:22 PM IST

ಸಂತೋಷನ ಈ ವರ್ತನೆ  'ಲಕ್ಷ್ಮೀ ನಿವಾಸ' ಸೀರಿಯಲ್ ಫ್ಯಾನ್ಸ್‌ ಅನ್ನು ಕೆರಳಿಸಿದೆ. ಮೊದಲಿಂದಲೂ ಈ ಪಾತ್ರ ಕಂಡರೆ ಹೊಡೆಯುವಷ್ಟು ಸಿಟ್ಟಾಗುತ್ತಿದ್ದ ಜನ ಈಗ ಈ ಸಂತೋಷ ಬೀದಿಯಲ್ಲೆಲ್ಲಾದರೂ ನಡ್ಕೊಂಡು ಹೋದ್ರೆ ಚಚ್ಚಿ ಹಾಕಿ ಬಿಡಬಹುದು ಅನಿಸುತ್ತೆ.



ಜೀ ಕನ್ನಡದ 'ಲಕ್ಷ್ಮೀ ನಿವಾಸ' ಸೀರಿಯಲ್‌ ಸದ್ಯ ಟಿಆರ್‌ಪಿಯಲ್ಲಿ ನಂಬರ್‌ ೧ ಪ್ಲೇಸ್‌ ಅನ್ನು ಯಾರಿಗೂ ಬಿಟ್ಟುಕೊಡದೇ ಮುನ್ನುಗ್ಗುತ್ತಿದೆ. ಜೀ ಕನ್ನಡದ 'ಲಕ್ಷ್ಮೀ ನಿವಾಸ'ದಲ್ಲಿ ವೀಣಕ್ಕನ ಸ್ಥಿತಿ ಯಾರಿಗೂ ಬೇಡ. ಅವಳ ಮೇಲೆ ಕೈ ಮಾಡಿದ ಸಂತೋಷಂಗೆ ತಾರಾಮಾರ ಝಾಡಿಸ್ತಿದ್ದಾರೆ ನೆಟ್ಟಿಗರು. ಶ್ರೀನಿವಾಸ್ ಮಗ ಸಂತೋಷ್ ವರ್ತನೆ ಎಲ್ಲ ವೀಕ್ಷಕರಿಗೂ ಬೇಸರ ತರಿಸುತ್ತಲಿದೆ. ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಈ ಪುಣ್ಯಾತ್ಮ ತನ್ನ ಹೆಂಡತಿಯ ಮೇಲೆಯೇ ಕೈ ಮಾಡಿ ವೀಕ್ಷಕರಿಂದ ಚೆನ್ನಾಗಿ ಝಾಡಿಸಿಕೊಳ್ತಾ ಇದ್ದಾನೆ. ಹಾಗೆ ನೋಡಿದರೆ ಮೊದಲಿಗೆ ತನ್ನ ನಾಲಗೆಯನ್ನೇ ಅಸ್ತ್ರ ಮಾಡಿಕೊಂಡು ಸಿಕ್ಕ ಸಿಕ್ಕವರ ಮೇಲೆಲ್ಲ ನಂಜು ಕಾರುತ್ತಿದ್ದ ಸಂತೋಷ ಇದೀಗ ಹೊಡೆಯೋದಕ್ಕೂ ಶುರು ಮಾಡಿದ್ದಾನೆ. ತನ್ನ ಪತ್ನಿ ವೀಣಾ ಮೇಲೆಯೇ ಕೈ ಮಾಡಿದ್ದಾನೆ. ಸಂತೋಷನ ಈ ವರ್ತನೆ ಈ ಸೀರಿಯಲ್ ಫ್ಯಾನ್ಸ್‌ ಅನ್ನು ಕೆರಳಿಸಿದೆ. ಮೊದಲಿಂದಲೂ ಈ ಪಾತ್ರ ಕಂಡರೆ ಹೊಡೆಯುವಷ್ಟು ಸಿಟ್ಟಾಗುತ್ತಿದ್ದ ಜನ ಈಗ ಈ ಸಂತೋಷ ಬೀದಿಯಲ್ಲೆಲ್ಲಾದರೂ ನಡ್ಕೊಂಡು ಹೋದ್ರೆ ಚಚ್ಚಿ ಹಾಕಿ ಬಿಡಬಹುದು ಅನಿಸುತ್ತೆ. ಯಾಕೆಂದರೆ ಈತ ವೀಣಕ್ಕನ ಮೇಲೆ ಕೈ ಮಾಡೋ ಪ್ರೋಮೋಕ್ಕೆ ವೀಕ್ಷಕರು ನೀಡಿದ ಕಾಮೆಂಟ್ ಹಾಗಿದೆ. 

ಹಾಗೆ ನೋಡಿದರೆ ಈ ತಿರುಬೋಕಿ ಈ ಮೊದಲು ಮೂಕ ವೆಂಕಿ ಮೇಲೆ ಕೈ ಮಾಡಿದ್ದ. ಮೊದಲಿಂದಲೂ ಮೂಕ ವೆಂಕಿಯನ್ನು ಕಂಡರೆ ಸಂತೋಷ್‌ಗೆ ಅಷ್ಟಕಷ್ಟೆ ಆಗಿತ್ತು. ಆದರೀಗ ವೆಂಕಿಗೆ ಕಳ್ಳತನ ಅಪವಾದವನ್ನು ಹೊರಸಿ ಚೆನ್ನಾಗಿ ಥಳಿಸಿದ್ದ ಸಂತೋಷ್‌.

Tap to resize

Latest Videos

undefined

ಸಂತೋಷನ ಅಪ್ಪ ಗಣೇಶ ಹಬ್ಬದ ಸಂದರ್ಭವಾದ ಕಾರಣ ಮನೆಯಲ್ಲಿ ಪುಟ್ಟ ಮಕ್ಕಳಿಗೆ ಸೇರಿದಂತೆ ಮನೆಯ ಇತರ ಸದಸ್ಯರಿಗೆ ಚಂದ್ರನ ಕಥೆ ಹೇಳಿದ್ದಾರೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಖಂಡಿತ ಅಪವಾದ ತಪ್ಪಲ್ಲ ಎಂದು ಕಥೆ ಹೇಳಿದಾಗ, ವೆಂಕಿ ತಾನು ಚಂದ್ರನನ್ನು ನೋಡಿರುವುದಾಗಿ ಹೇಳಿದ್ದಾನೆ. ಹೀಗೆ ಕೇಳುತ್ತಿದ್ದಂತೆ ವೆಂಕಿ ಪತ್ನಿ ಚೆಲುವಿ ಹಾಗೂ ಅಪ್ಪ ಗಾಬರಿಯಾಗುತ್ತಾರೆ. ಆ ಹೊತ್ತಿಗೆ ಸಂತೋಷ್‌ ತಲೇಲಿ ಮಾತ್ರ ವೆಂಕಿಯೇ ತನ್ನ ಹಣ ಕದ್ದ ಎಂದು ಮನಸ್ಸಿನಲ್ಲಿಯೇ ಯೋಚಿಸಿ ಬುಸುಗುಡುತ್ತಾನೆ.

ಸಂತೋಷ್‌ ಬಳಿಕ ವೆಂಕಿಯನ್ನು ದೂರದಲ್ಲಿ ಕರೆದುಕೊಂಡು ಹೋಗಿ ವೆಂಕಿಯ ಬಳಿ 'ಅಪ್ಪ ಕಥೆ ಹೇಳುವಾಗ, ನಾನೇ ಕದ್ದಿರುವ ರೀತಿ ನೀನು ಬಿಲ್ಡಪ್‌ ಕೊಟ್ಯಲ್ಲ..ಯಾಕೆ? ನನ್ನ ಹಣ ಕದ್ದೇ ಮದುವೆ ಬೇರೆ ಆಗಿದ್ಯಾ?' ಎಂದು ಕಳ್ಳತನದ ಅಪವಾದ ಹೊರಿಸಿ ಚೆನ್ನಾಗಿ ಥಳಿಸಿಬಿಟ್ಟಿದ್ದ ಸಂತೋಷ್‌. ಈ ಸನ್ನಿವೇಶ ಕಂಡ ಪ್ರೇಕ್ಷಕರು ಕೂಡ 'ಇಷ್ಟು ದಿನ ಸಂತೋಷ್‌ ಬಾಯಿ ಮಾತಲ್ಲಿ ಮಾತ್ರ ವೆಂಕಿಗೆ ನೋವು ಕೊಡ್ತಿದ್ದ..ಇದೀಗ ಹೊಡೆಯಲು ಶುರು ಮಾಡಿದ್ದಾನೆ. ಇದು ಓವರ್‌ ಆಯ್ತು' ಎಂದು ಕಮೆಂಟ್‌ ಮಾಡಿದ್ದರು.

ಲಕ್ಷ್ಮಿ ಕೀರ್ತಿಯಾಗಿ ಬದಲಾಗಿದ್ದು ಹೇಗೆ? ಶೂಟಿಂಗ್​ ಸಮಯದಲ್ಲಿ ನಡೆದದ್ದೇನು? ಮೇಕಿಂಗ್ ವಿಡಿಯೋ ವೈರಲ್​
 

ಮನೆಯಲ್ಲಿ ಅತ್ಯಂತ ಕಟುವಾಗಿ ವರ್ತಿಸುವ ಸಂತೊಷ್‌ ಕೊಂಕು ಮಾತಿಗೆ ತರಾಟೆ ತೆಗದುಕೊಳ್ಳೋದು ಮಾತ್ರ ವೀಣಾ ಮಾತ್ರ. ಅದೆಷ್ಟೋ ಬಾರಿ ಚೆಲುವಿ ವೆಂಕಿಗೆ , ಸಂತೊಷ್ ಹಿಗ್ಗಾ ಮುಗ್ಗ ಅಂದರೂ ವೀಣಾ ಮಾತ್ರ ಜೋಡಿಯನ್ನು ಸಮಾಧಾನಿಸುತ್ತಿದ್ದಳು. ಇದೀಗ ಮನೆಯಲ್ಲಿ ಭಾವನಾ ತನ್ನ ಕತ್ತಿಗೆ ಯಾರೋ ತಾಳಿ ಕಟ್ಟಿರೋದನ್ನು ಮನೆಯವರ ಮುಂದೆ ಹೇಳಿದ್ದಾಳೆ. ಅದಕ್ಕೂ ಮುನ್ನ ಈ ಸಂತೋಷನಿಗೆ ಭಾವನಾ ಕತ್ತಿಗೆ ತಾಳಿ ಬಿದ್ದಿರುವ ವಿಚಾರ ತಿಳಿದುಹೋಗಿದೆ. ಆತ ಮನೆಯವರನ್ನೆಲ್ಲ ಕರೆದು ಗಲಾಟೆ ಮಾಡಿದ್ದಾನೆ. ತನ್ನ ಕೆಟ್ಟ ಬುದ್ಧಿ ತೋರಿಸಿದ್ದಾನೆ. ಭಾವನಾ ಬಗ್ಗೆ ಈತನ ವರ್ತನೆಯನ್ನು ಟೀಕಿಸಿದ ಹೆಂಡತಿ ವೀಣಾಗೆ ಕಪಾಳಕ್ಕೆ ಬಾರಿಸಿದ್ದಾನೆ. 


ಲಕ್ಷ್ಮೀ ನಿವಾಸದ ವಿಲನ್​ ಕಾವೇರಿ ಡಾನ್ಸ್​ ನೋಡಿರುವಿರಾ? ಸೈಂಟಿಸ್ಟ್​ ಆದಾಕೆ ನಟಿಯಾದ ರಿಯಲ್​ ಸ್ಟೋರಿ ಇಲ್ಲಿದೆ...
 

ಇದು ಒಳ್ಳೆ ಸ್ವಭಾವದ ವೀಣಕ್ಕನನ್ನು ಇಷ್ಟಪಡುವ ವೀಕ್ಷಕರನ್ನು ರೊಚ್ಚಿಗೆಬ್ಬಿಸಿದೆ. ಥೂ ಇವ್ನ ಜನ್ಮಕ್ಕೆ ಅಂತೆಲ್ಲ ಅವರು ಸಂತೋಷನನ್ನು ಝಾಡಿಸುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!