ಹಾಲು ಬೆರೆಸಿ ಕಾಶ್ಮೀರಿ ಚಿಕನ್ ಮಾಡಿದ ನಿವೇದಿತಾ ಗೌಡ

By Sathish Kumar KH  |  First Published Sep 13, 2024, 9:18 PM IST

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಚಮಚದಲ್ಲಿ ರಾಗಿ ಮುದ್ದೆ ತಿಂದಿದ್ದಕ್ಕೆ ಪ್ರಸಿದ್ಧಿ ಪಡೆದಿದ್ದರು. ಇದೀಗ, ಸವಿರುಚಿ ಸೀಸನ್ 3 ರಲ್ಲಿ ಕಾಶ್ಮೀರಿ ಚಿಕನ್ ಮಾಡಲು ಆಗಮಿಸಿದ್ದಾರೆ. ಅವರ ಅಡುಗೆಯ ಪ್ರಯತ್ನ ಮತ್ತು ವೀಕ್ಷಕರ ಪ್ರತಿಕ್ರಿಯೆಗಳು ಕುತೂಹಲ ಕೆರಳಿಸಿವೆ.


ಬೆಂಗಳೂರು (ಸೆ.13): ರೀಲ್ಸ್ ರಾಣಿ, ಬಾರ್ಬಿಡಾಲ್ ಎಂದೇ ಖ್ಯಾತವಾಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡಗೆ ಅಡುಗೆ ಮಾಡಲು ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇನ್ನು ಹಳೆ ಮೈಸೂರು ಭಾಗದ ರಾಗಿಮುದ್ದೆಯನ್ನು ಚಮಚದಲ್ಲಿ ತಿಂದಿದ್ದ ಇದೇ ನಿವೇದಿತಾ ಗೌಡ ನೀವು ಮನೆಯಲ್ಲಿಯೂ ಕೂತು ಸವಿಯಬಹುದಾದ ಕಾಶ್ಮೀರಿ ಚಿಕನ್ ಮಾಡಲು ಸವಿರುಚಿ ಸೀಸನ್-3ಕ್ಕೆ ಬಂದಿದ್ದಾಳೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಬಂದಿದ್ದು, ನೀನೇ ಅಂತಾರಾಷ್ಟ್ರೀಯ ಮುದ್ದೆ ವಿಜೇತೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಹೌದು ನಿವೇದಿತಾ ಗೌಡ ಎಂದಾಕ್ಷಣ ಅಡುಗೆ ವಿಚಾರದಲ್ಲಿ 100ಕ್ಕೆ ಶೇ.3 ಪರ್ಸೆಂಟ್ ಮಾರ್ಕ್ಸ್ ಕೊಡುವುದಕ್ಕೂ ಜನರು ಮುಂದಾಗುವುದಿಲ್ಲ. ಇದಕ್ಕೆ ಕಾರಣ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ ನಿವೇದಿತಾ ಗೌಡ ರಾಗಿ ಮುದ್ದೆಯನ್ನು ಚಮಚದಲ್ಲಿ ತಿಂದಿದ್ದಳು. ಇನ್ನು ಅಡುಗೆ ಮನೆಯಲ್ಲಿ ಕಾಫಿ ಮಾಡುವುದನ್ನು ಬಿಟ್ಟರೆ ಬೇರೇನೂ ಅಡುಗೆ ಮಾಡದೇ ಬಿಗ್ ಬಾಸ್ ಸೀಸನ್ ಮುಗಿಸಿದ್ದಳು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದು ರ್ಯಾಪರ್ ಚಂದನ್ ಶೆಟ್ಟಿಯನ್ನು ಮದುವೆ ಮಾಡಿಕೊಂಡು ನಾಲ್ಕು ವರ್ಷಗಳು ಸಂಸಾರ ಮಾಡಿದರೂ ಅಡುಗೆ ಮಾಡುವ ಕಲೆಯನ್ನೇನೂ ಸಿದ್ಧಿಸಿಕೊಂಡಂತೆ ಕಂಡಿರಲಿಲ್ಲ. ಆದರೆ, ಇದೀಗ ದಿಢೀರನೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿರೂಪಕಿ ಜಾನವಿ ನಡೆಸಿಕೊಡುವ ಸವಿರುಚಿ ಸೀಸನ್ 3ರಲ್ಲಿ ಕಾಶ್ಮೀರಿ ಚಿಕನ್ ಮಾಡಲು ಕುಕ್ ಆಗಿ ಬಂದಿದ್ದಾಳೆ.

Tap to resize

Latest Videos

ಇದನ್ನೂ ಓದಿ: ರೀಲ್ಸ್ ಮಾಡುವುದಕ್ಕೆಂದೇ ಡಿವೋರ್ಸ್ ಪಡೆದಳಾ ನಟಿ ನಿವೇದಿತಾಗೌಡ!

ಅಡುಗೆ ಮಾಡುವಾಗ ತಾನು ಕಳೆದ ಮೂರು ತಿಂಗಳ ಹಿಂದೆ ಆಲೂಗಡ್ಡೆ ಫ್ರೈ ಮಾಡಲು ಹೋಗಿ ಇಡೀ ಅಡುಗೆ ಮನೆಯನ್ನೇ ಸುಟ್ಟು ಹಾಕಿದ್ದಳು ಎಂಬ ಸತ್ಯವನ್ನು ಸ್ವತಃ ನಿವೇದಿತಾ ಹೊರ ಹಾಕಿದ್ದಾಳೆ. ನಾನು ಅಡುಗೆ ಮಾಡ್ತೀನಿ, ನನಗೆ ಅಡುಗೆ ಮಾಡಲು ಬರುತ್ತದೆ. ಆದರೆ, ಅಡುಗೆ ಮಾಡುವಾಗ ನಾನು ಆಚೆ ಈಚೆ ಹೋದಾಗ ಎಲ್ಲ ಅಡುಗೆ ಸೀದು ಹೋಗಿರುತ್ತದೆ ಎಂದು ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಜಾನವಿ, ನಿವೇದಿತಾ ಅಡುಗೆ ಮಾಡಲು ಬರುತ್ತಿದ್ದಾಳೆ ಎಂದರೆ ನಾನು ಹೇಗೆ ತಿನ್ನಬೇಕು ಎಂಬ ಭಯವಾಗಿತ್ತು. ಆದರೆ, ಅಡುಗೆ ರೆಸಿಪಿಯನ್ನು ಕೇಳಿ ನಿನಗೆ ತುಂಬಾ ಚೆನ್ನಾಗಿ ಅಡುಗೆ ಮಾಡಲು ಕಲಿತಿದ್ದೀಯ ಎಂಬ ನಂಬಿಕೆ ಬಂದಿದೆ ಎಂದು ಹೇಳಿದ್ದಾರೆ.

ಕಾಶ್ಮೀರಿ ಚಿಕನ್ ಮಾಡಲು ಬಂದ ನಟಿ ನಿವೇದಿತಾ ಗೌಡ ಅಡುಗೆ ಮಾಡುವುನ್ನು ನೋಡುವುದಕ್ಕಿಂದ ಟಿವಿ ವೀಕ್ಷಕರು ಆಕೆಯ ಸೌಂದರ್ಯವನ್ನೇ ನೋಡಿದ್ದಾರೆ. ಇನ್ನು ಅಡುಗೆ ಮಾಡುವಾಗ ಆಕೆ ಅಡುಗೆ ಸಾಮಗ್ರಿಗಳನ್ನು ಕೈಯಲ್ಲಿಯೇ ಮುಟ್ಟಲಿಲ್ಲ. ನಿವೇದಿತಾ ಗೌಡ ಅವರ ಕಾಶ್ಮೀರಿ ಚಿಕನ್ ಮಾಡಿದ ವಿಡಿಯೋಗೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ. ಅದರಲ್ಲಿಯೂ ಕಾಶ್ಮೀರಿ ಚಿಕನ್ ಮಾಡುವಾಗ ಒಂದು ಬಟ್ಟಲು ಹಾಲು ಹಾಕಿರುವುದು ನೆಟ್ಟಿಗರಿಗೆ ಕಿವಿ ನಿಮಿರುವಂತೆ ಮಾಡಿದೆ. ಇಲ್ಲಿವೆ ನೋಡಿ ಕೆಲ ಕಾಮೆಂಟ್‌ಗಳು...

  • ಮುದ್ದೆನಾ ಸ್ಫೂನ್ ನಲ್ಲಿ ತಿಂದೋಳು. ಕಾಶ್ಮೀರಿ ಚಿಕನ್ ಎಂಗ್ ಮಾಡ್ತಳೋ ಏನೋ.. ಅದ್ ಎಂಗ್ ಇರುತೋ..
  • ಮೊದಲು ಆಕೆಯ ಬಾಯಲ್ಲಿ ಈ ಚಿಕನ್ ಮಾಡುವ ಸಾಮಗ್ರಿಗಳ ಪಟ್ಟಿಯನ್ನು ಹೇಳಿಸಿ ಸಾಕು ಸುಮ್ಮನೆ ಯಾರು ಏನು ಹೇಳಿಕೊಟ್ಟು ಮಾಡಿಸುವುದಲ್ಲ.
  • ಮುದ್ದೆನಾ ಚಮಚದಲ್ಲಿ ತಿನ್ನೋಳು ಯಾವ ಕಾಶ್ಮೀರಿ ಚಿಕನ್ ಮಾಡೋದು ಅದ್ಬುತ 🤣🤣
  • ನೀನು ಮುದ್ದೆ ಮಾಡೋದು ರೊಟ್ಟಿ ಮಾಡೋದು ನೋಡಿದ್ದೇವೆ ಚಿಕನ್ ಯಾರ್ ತಿಂತಾರೋ.
  • ಅಲ್ಲ ಇವ್ಳಿಗ್ ರಾಗಿ ಮುದ್ದೆ ತಿನ್ನೋದ್ ಹೇಗೆ ಅಂತನೆ ಗೊತ್ತಿರ್ಲಿಲ ಇವಾಗ ಅಡುಗೆ ಸ್ಪೆಷಿಯಲಿಸ್ಟ್ ...
  • ನಮ್ಮ ಕರ್ನಾಟಕದ ನಾಟಿ ಕೋಳಿ ಸಾರು, ಕೋಳಿ ಬಸಾರು, ಮಾಂಸದ ಚಾಪ್ಸ್, ಮಾಂಸದ ಸಾರು, ಕೈಮಾ ಸಾರು. ಇವುಗಳನ್ನು ಯಾರು ಕಲಿಯೋದಿಲ್ಲವಾ..
  • ಕಾಶ್ಮೀರ ಹುಡುಗ ಫಿಕ್ಸ ಆಗಿದೆಯಾ ಮಹಾರಾಣಿ ಅವರೇ..
  • ಇವಳಿಗೆ ಅಡುಗೆ ಬರಲ್ಲ ಅಂತ ಅಣ್ಣ ಬಿಟ್ಟು ಹೋದ. ಇನ್ನು ಚಿಕ್ಕನ್ ಗೊತ್ತಿಲ್ಲ ತಿಂದವರನ್ನ ದೇವರೇ ಕಾಪಾಡಬೇಕು.
  • ನಿಂಗೆ ಕರೆಕ್ಟ್ ಆಗಿ ಮನೇಲಿ ಮ್ಯಾಗಿ ಮಾಡೋಕೆ ಬರಲ್ಲ ಅಂತ ಅವತ್ತು ಚಂದನ್ ಹೇಳಿದ್ದ.... ಈ ಶೋ ಗೋಸ್ಕರ ಅಡುಗೆ ಕಲಿತು ಬಂದಿದ್ದೀಯಾ ಅನ್ಸುತ್ತೆ ಅಲ್ವಾ ಪಾಪು..? 
  • ಚಿಕನ್ ರೆಸಿಪಿಯಲ್ಲಿ ಹಾಲು ಹಾಕುತ್ತೀರಾ?
  • ನೆಟ್ಟಗೆ ಸಂಸಾರ ಮಾಡೋದು ಬಿಟ್ಟು.... ಕಾಶ್ಮೀರ ಚಿಕನ್ ಬೇರೆ ಮಾಡ್ತಾಳಂತೆ....

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 5 ಬಿಯರ್ ಬ್ರ್ಯಾಂಡ್‌ಗಳು

ಇನ್ನೂ ತರಹೇವಾರಿ ಕಾಮೆಂಟ್‌ಗಳು ಬಂದಿವೆ. ಆದರೆ, ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ಸಕ್ರಿಯವಾಗಿದ್ದು, ಅವರ ಪ್ರತಿ ಪೋಸ್ಟ್‌ಗೂ ಇದೇ ರೀತಿಯಲ್ಲಿ ಕಾಮೆಂಟ್‌ಗಳು ಬರುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳದೇ ತನ್ನ ಕೆರಿಯರ್ ಬೆಳವಣಿಗೆಯತ್ತ ಮಾತ್ರ ಚಿತ್ತ ನೆಟ್ಟಿದ್ದಾಳೆ. ಅಡುಗೆಯೇ ಬರುವುದಿಲ್ಲ, ಮುದ್ದೆಯನ್ನು ಚಮಚದಲ್ಲಿ ತಿಂದ್ದ ನಿವೇದಿತಾ ಗೌಡ ಈಗ ಕಾಶ್ಮೀರಿ ಚಿಕನ್ ಮಾಡಿರುವುದು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದವರಿಗೆ ತಿರುಗೇಟು ಕೊಟ್ಟಂತಾಗಿದೆ.

click me!