ಲಕ್ಷ್ಮಿ ಕೀರ್ತಿಯಾಗಿ ಬದಲಾಗಿದ್ದು ಹೇಗೆ? ಶೂಟಿಂಗ್​ ಸಮಯದಲ್ಲಿ ನಡೆದದ್ದೇನು? ಮೇಕಿಂಗ್ ವಿಡಿಯೋ ವೈರಲ್​

By Suchethana D  |  First Published Sep 13, 2024, 6:09 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಥ್ರಿಲ್ಲರ್​ ರೂಪ ಪಡೆದಿರುವ  ಲಕ್ಷ್ಮೀ ಬಾರಮ್ಮಾ ಶೂಟಿಂಗ್​ನಲ್ಲಿ ಏನೇನಾಯ್ತು? ಇದರ ಫುಲ್​ ಡಿಟೇಲ್ಸ್​ ಕೊಟ್ಟಿದ್ದಾರೆ ಗಂಗಾ ಪಾತ್ರಧಾರಿ ಹರ್ಷಿತಾ
 


ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಲಕ್ಷ್ಮೀ ಬಾರಮ್ಮಾ ಸಕತ್​ ಟ್ವಿಸ್ಟ್​ ಪಡೆದುಕೊಂಡಿದೆ. ಸದಾ ಮುಗ್ಧೆಯಂತಿದ್ದ ಲಕ್ಷ್ಮೀ ಈಗ ಸತ್ಯ ತಿಳಿಯಲು ಭೂತ ಆಗಿ ಕಾವೇರಿಯನ್ನು ಕಾಡುತ್ತಿದ್ದಾಳೆ. ಕೀರ್ತಿಯ ಆತ್ಮವನ್ನು ತನ್ನ ಮೇಲೆ ತರಿಸಿಕೊಂಡಿರುವಂತೆ ನಾಟಕವಾಡುತ್ತಿದ್ದಾಳೆ.  ಆದರೆ ಇದು ನಾಟಕ ಎನ್ನುವುದು ಹಲವು ಎಪಿಸೋಡ್​ಗಳವರೆಗೂ ವೀಕ್ಷಕರಿಗೆ ತಿಳಿದಿರಲಿಲ್ಲ. ಆದರೆ ಈಗ ಆಕೆಯ ನಾಟಕ ವೀಕ್ಷಕರ ಎದುರು ಮಾತ್ರ ಬಯಲಾಗಿದೆ. ಆದರೆ ಕಾವೇರಿಗೆ ಈ ಬಗ್ಗೆ ತಿಳಿದಿಲ್ಲ. ಕೀರ್ತಿ ಸತ್ತು ಹೋಗಿದ್ದಾಳೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಕೀರ್ತಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಲಕ್ಷ್ಮೀ ಹಾಗೂ ಗಂಗಾ ಸೇರಿ ಹೊಸ ಪ್ಲಾನ್‌ ಮಾಡಿದ್ದಾರೆ. ಕೀರ್ತಿಯ ಆತ್ಮವನ್ನು ತರಿಸಿಕೊಂಡು ಕಾವೇರಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾಳೆ ಲಕ್ಷ್ಮೀ.  ಕೀರ್ತಿಯನ್ನು ಬೆಟ್ಟದ ಮೇಲಿಂದ ನೂಕಿ ಸಾವಿನ ದವಡೆಗೆ ನೂಕಿದ್ದಾಳೆ ಕಾವೇರಿ. ಆದರೆ ಎಲ್ಲರೆದುರು ಒಳ್ಳೆಯವಳಾಗಿ ಇರಲು ನೋಡಿದ್ದಾಳೆ. ಆದರೆ ಎಲ್ಲವೂ ಎಡವಟ್ಟಾಗಿದೆ.  ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ ಸೇರಿಕೊಂಡಿದೆ. ಇದರಿಂದ ಕಾವೇರಿಗೆ ಇನ್ನಿಲ್ಲದ ಸಂಕಟವಾಗಿವೆ.

ಇದರ ಮೇಕಿಂಗ್​ ವಿಡಿಯೋ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ಗಂಗಾ ಪಾತ್ರಧಾರಿ  ಹರ್ಷಿತಾ ಅವರು ಶೇರ್​ ಮಾಡಿದ್ದಾರೆ. ಇದರ ಶೂಟಿಂಗ್​ ಹೇಗೆ ನಡೆದಿದೆ ಎನ್ನುವುದನ್ನು ಹರ್ಷಿತಾ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ತೋರಿಸಿದ್ದಾರೆ. ಲಕ್ಷ್ಮಿ ಕೀರ್ತಿಯಾಗಿ ಬದಲಾಗಿದ್ದು ಹೇಗೆ ಎಂಬ ಶೀರ್ಷಿಕೆ ಕೊಟ್ಟು ಶೂಟಿಂಗ್​ ಹೇಗೆ  ಮಾಡಲಾಗಿದೆ ಎಂಬ ಬಗ್ಗೆ ವಿವರಿಸಿದ್ದಾರೆ ಹರ್ಷಿತಾ. ಶೂಟಿಂಗ್​ ಸಮಯದಲ್ಲಿ ಯಾವ ರೀತಿಯ ಸೆಟ್​ಅಪ್​ ಇರುತ್ತದೆ ಎನ್ನುವುದನ್ನು ಅವರು ತೋರಿಸಿದ್ದಾರೆ. ಅಂದಹಾಗೆ ಸೀರಿಯಲ್​ನಲ್ಲಿ,  ಸೀರೆಯುಟ್ಟು, ಕಿವಿಗೆ ಇಯರ್ ಫೋನ್ ಇಟ್ಕೊಂಡು, ಕೈಯಲ್ಲಿ ಸೌಟ್ ಇಡ್ಕೊಂಡು, ಎಲ್ಲರನ್ನೂ ನಗಿಸುತ್ತಿರುವ ಹಾಗೂ ಲಕ್ಷ್ಮೀಗೆ ಧೈರ್ಯ ತುಂಬುವ ಪಾತ್ರ ಗಂಗಾಳದ್ದು. ಇವಳಿಗೆ ಮಾತ್ರ ಗೊತ್ತಿದೆ ಇದು ಎಲ್ಲಾ ರೀಲ್​ ಎಂದು. 

Tap to resize

Latest Videos

undefined

ದುಡ್ಡು ಆಮೇಲೆ ಕೊಡು ಎಂದು ಕಾರು ಕೊಟ್ಟ- ಆಮೇಲೆ ನೋಡಿದ್ರೆ ಅವನ ಆಸೆ... ತನಿಷಾ ಶಾಕಿಂಗ್​ ವಿಷ್ಯ ರಿವೀಲ್​

 ಈ ಮೊದಲು ಗೋಡೆಯ ಮೇಲೆ ರಕ್ತದಲ್ಲಿ ಗೋಡೆಯ ಮೇಲೆ ನಾನು ನಿನ್ನನ್ನು ಬಿಡುವುದಿಲ್ಲ ಎನ್ನುವ ಬರಹಗಳೆಲ್ಲಾ ಕಾಣಿಸಿಕೊಂಡಿದ್ದು, ಅದರ ವಿಡಿಯೋ ಹೇಗೆ ಮಾಡಿದ್ದರು ಎನ್ನುವುದನ್ನು ಗಂಗಾ ಶೇರ್​ ಮಾಡಿಕೊಂಡಿದ್ದರು.  ಕಾವೇರಿಗೆ ಆತ್ಮ ಸಿಕ್ಕಾಪಟ್ಟೆ  ತೊಂದರೆ ಕೊಡುತ್ತಿದೆ. ಇದರಿಂದ ಹೆದರಿದ ಕಾವೇರಿ, ಲಕ್ಷ್ಮಿಯನ್ನು ಕರೆದುಕೊಂಡು ಆಶ್ರಮಕ್ಕೆ ಬಂದಿದ್ದಾಳೆ.    ಕೀರ್ತಿಯ ಆತ್ಮವನ್ನು ಬಿಡಿಸುವ ಎಲ್ಲಾ ತಯಾರಿ ನಡೆಯುತ್ತಿದೆ.  ಅನ್ಯಾಯ ಮಾಡಿರೋದು ನನಗೆ ನನ್ನ ಮುಂದೆ ಸತ್ಯ ಹೇಳಬೇಕು, ನನ್ನ ಬಳಿ ಕ್ಷಮೆ ಕೇಳಬೇಕು ಎನ್ನುತ್ತಾಳೆ ಲಕ್ಷ್ಮೀ. ಮಗನಿಗಾಗಿ ಕಾವೇರಿ ಎಲ್ಲರ ಮುಂದೆ ಸತ್ಯ ಹೇಳಲೇಬೇಕಾದ ಪರಿಸ್ಥಿತಿ ಬಂದಿದೆ. ಲಕ್ಷ್ಮೀಯ ಮೈಯಿಂದ ಕೀರ್ತಿಯ ದೆವ್ವವನ್ನು ಓಡಿಸಲು ಬಂದಿದ್ದ ಕಾವೇರಿಗೆ, ಲಕ್ಷ್ಮೀಯ ಈ ಹೊಸ ಆಟ ನಡುಕ ಹುಟ್ಟಿಸಿದೆ.  
 
ಇನ್ನು ಗಂಗಾ ಪಾತ್ರಧಾರಿಯ ಕುರಿತು ಹೇಳುವುದಾದರೆ, ಹರ್ಷಿತಾ ಅವರು,  ತುಮಕೂರು ಜಿಲ್ಲೆಯ ಮಧುಗಿರಿಯವರು.  ಹರ್ಷಿತಾ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸೆಟ್‌ನಲ್ಲಿದ್ದಾಗಲೇ ಹೆಚ್ಚು ರೀಲ್ಸ್ ಅನ್ನು ಮಾಡುತ್ತಾರೆ. ಮಾಡರ್ನ್​ ಡ್ರೆಸ್​ ಹಾಕಿಕೊಂಡು ಫೋಟೋ ಶೂಟ್​ ಮಾಡಿಸುತ್ತಿರುತ್ತಾರೆ. ಇವರು ಒಳ್ಳೆಯ ನೃತ್ಯಗಾತಿ ಕೂಡ.  'ಲಕ್ಷ್ಮೀ ಬಾರಮ್ಮ' ಸೆಟ್‌ನಲ್ಲಿ ಇರುವವರೆಲ್ಲರೂ ರೀಲ್ಸ್ ಮಾಡುವುದರಲ್ಲಿ ಎಕ್ಸ್ ಪರ್ಟ್‌ಗಳೇ. ಹೀಗಾಗಿ ಗ್ಯಾಪ್ ಸಿಕ್ಕಿದರೆ ಸಾಕು ಹರ್ಷಿತಾ ಕೂಡ ಟೀಂ ಜೊತೆ ರೀಲ್ಸ್ ಮಾಡುತ್ತಾ ಇರುತ್ತಾರೆ. ಇದೀಗ ಯೂಟ್ಯೂಬ್​ ಚಾನೆಲ್​ ಅನ್ನೂ ಓಪನ್​ ಮಾಡಿದ್ದು, ಅದರಲ್ಲಿ ಮೇಕಿಂಗ್​ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. 

ಲಕ್ಷ್ಮೀ ನಿವಾಸದ ವಿಲನ್​ ಕಾವೇರಿ ಡಾನ್ಸ್​ ನೋಡಿರುವಿರಾ? ಸೈಂಟಿಸ್ಟ್​ ಆದಾಕೆ ನಟಿಯಾದ ರಿಯಲ್​ ಸ್ಟೋರಿ ಇಲ್ಲಿದೆ...

click me!