'ಕರಿಮಣಿ' ಸೀರಿಯಲ್ ಜೋಡಿ ಕರ್ಣ ಮತ್ತು ಸಾಹಿತ್ಯ ಅರ್ಥಾತ್ ನಟರಾದ ಅಶ್ವಿನ್ ಮತ್ತು ಸ್ಪಂದನಾ ರಿಯಲ್ ಲೈಫ್ನಲ್ಲಿಯೂ ಮದ್ವೆಯಾಗ್ತಿದ್ದಾರಾ? ಇವರು ಹೇಳಿದ್ದೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್ಗೆ ಇದೀಗ ಒಂದು ಕುತೂಹಲದ ಟ್ವಿಸ್ಟ್ ಸಿಕ್ಕಿದೆ. ಇಷ್ಟು ದಿನ ಗುಟ್ಟಾಗಿ ಇದ್ದ ಬ್ಲ್ಯಾಕ್ ರೋಸ್ ಯಾರು ಎಂದು ತಿಳಿಯುವ ಕಾಲ ಬಂದಿದೆ. ಗಂಡಸಿನ ದನಿಯಲ್ಲಿ ಮಾತನಾಡುತ್ತಿದ್ದ ಬ್ಲ್ಯಾಕ್ ರೋಸ್ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ಮಲತಾಯಿ ಅರುಂಧತಿನೇ ಎನ್ನುವುದು ಕರ್ಣನಿಗೆ ತಿಳಿಯಬೇಕಿದೆ. ಇದರ ನಡುವೆಯೇ, ಸಾಹಿತ್ಯ ಮತ್ತು ಕರ್ಣನ ಮದುವೆಯೂ ಆಗಿಬಿಟ್ಟಿದೆ. ಕರ್ಣನನ್ನು ಮದುವೆಯಾಗಲು ಸಿಂಚನಾ ತುಂಬ ಪ್ರಯತ್ನಮಾಡುತ್ತಿದ್ದಳು. ಆದರೆ ವಿಧಿಯ ಆಟ ಬೇರೆಯದ್ದೇ ಆಗಿ, ಸಾಹಿತ್ಯ ಮತ್ತು ಕರ್ಣ ದಂಪತಿಯಾಗಿದ್ದಾರೆ. ಒತ್ತಾಯಪೂರ್ವಕವಾಗಿ ತನ್ನನ್ನು ಮದುವೆಯಾಗಿರುವ ಕರ್ಣನನ್ನು ಕಂಡರೆ ಸಾಹಿತ್ಯಳಿಗೆ ಇನ್ನಿಲ್ಲದ ಕೋಪ. ಇದರ ಹೊರತಾಗಿಯೂ ಇವರ ಕ್ಯೂಟ್ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಇದು ರೀಲ್ ಲೈಫ್. ಹಾಗಿದ್ರೆ ರಿಯಲ್ ಲೈಫ್ನಲ್ಲಿಯೂ ಸಾಹಿತ್ಯ ಮತ್ತು ಕರ್ಣ ಮದ್ವೆಯಾಗ್ತಿದ್ದಾರಾ? ಇವರಿಬ್ಬರೂ ಲವ್ ಮಾಡ್ತಿದ್ದಾರಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಅಷ್ಟಕ್ಕೂ ಒಂದು ಸೀರಿಯಲ್ನಲ್ಲಿ ಇಬ್ಬರೂ ಅವಿವಾಹಿತರಿದ್ದು ಅವರ ಜೋಡಿ ಆನ್ಸ್ಕ್ರೀನ್ ಹಿಟ್ ಆದರೆ, ಅವರನ್ನೇ ರಿಯಲ್ ಆಗಿಯೂ ಮದುವೆಯಾಗುವಂತೆ ಅಭಿಮಾನಿಗಳು ಕೇಳಿಕೊಳ್ಳುವುದು, ಅವರ ಜೋಡಿಯನ್ನು ತಾವೇ ಕಲ್ಪಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಇವತ್ತು ಒಂದು ಸೀರಿಯಲ್ನಲ್ಲಿ ಅವರೇ ಇನ್ನೊಬ್ಬರ ಜೊತೆ ನಟಿಸಿ, ನಾಳೆ ಮತ್ತೊಂದು ಸೀರಿಯಲ್ನಲ್ಲಿ ಮತ್ತೊಬ್ಬರ ಜೊತೆ ನಟಿಸಿದರೂ, ಆ ಟೈಮ್ನಲ್ಲಿ ಅಭಿಮಾನಿಗಳಿಗೆ ಇವರೇ ಬೆಸ್ಟ್ ಜೋಡಿ ಎನ್ನಿಸುವುದು ಉಂಟು. ಕೆಲವು ಸಂದರ್ಭದಲ್ಲಿ ರಿಯಲ್ ಲೈಫ್ನಲ್ಲಿಯೂ ಆ ಜೋಡಿಗಳು ಒಂದಾಗುವುದೂ ಉಂಟು. ಅದೇ ರೀತಿ ಇದೀಗ ಸಾಹಿತ್ಯ ಮತ್ತು ಕರ್ಣನ ಜೋಡಿಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ.
ಮಗನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!
ಸೀರಿಯಲ್ನಲ್ಲಿ ಇವರ ಮದುವೆ ದೃಶ್ಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಅಭಿಮಾನಿಗಳ ಹುಚ್ಚು ಇನ್ನಷ್ಟು ಹೆಚ್ಚಾಗಿತ್ತು. ಕೆಲವರು ನಿಜಕ್ಕೂ ಇವರು ಮದ್ವೆಯಾಗಿದ್ದಾರೆ ಎಂದುಕೊಂಡು ಬಿಟ್ಟಿದ್ದರು. ಆದರೆ ಕೊನೆಗೆ ಅದು ಸೀರಿಯಲ್ ದೃಶ್ಯ ಎಂದು ಗೊತ್ತಾಗಿತ್ತು. ಆದರೆ ಇದೀಗ ಈ ಜೋಡಿ ರಿಯಲ್ ಲೈಫ್ನಲ್ಲಿಯೂ ಮದ್ವೆಯಾಗ್ತಾರಾ ಎನ್ನುವುದನ್ನು ಅವರೇ ಖುದ್ದು ಹೇಳಿ ಸದ್ಯ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಜೋಡಿ ಸೀರಿಯಲ್ ಹಾಗೂ ತಮ್ಮ ರಿಯಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ಅಂದಹಾಗೆ, ಕರ್ಣನ ಪಾತ್ರ ಮಾಡುತ್ತಿರುವ ನಟನ ರಿಯಲ್ ಹೆಸರು ಅಶ್ವಿನ್ ಹಾಗೂ ಸಾಹಿತ್ಯ ಪಾತ್ರ ಮಾಡುತ್ತಿರುವ ನಟಿಯ ರಿಯಲ್ ಹೆಸರು ಸ್ಪಂದನಾ ಸೋಮಣ್ಣ. ಇವರಿಬ್ಬರೂ ತಮ್ಮ ರಿಯಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ತಮ್ಮಿಬ್ಬರ ನಡುವೆ ಗಾಸಿಪ್ ಹರಡ್ತಿರೋದು ನಮ್ಮ ಗಮನಕ್ಕೂ ಬಂದಿದೆ. ಅದರಲ್ಲಿಯೂ ಮದುವೆಯ ಫೋಟೋ ವೈರಲ್ ಆದ ಮೇಲೆ ರಿಯಲ್ ಲೈಫ್ನಲ್ಲಿಯೂ ಮದುವೆಯಾಗಿರುವುದಾಗಿ ತಿಳಿದುಕೊಂಡವರು ಕೆಲವರಾದರೆ, ನಮ್ಮಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಮತ್ತಷ್ಟು ಮಂದಿ ಕಮೆಂಟ್ ಮೂಲಕ ತಿಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮಿಬ್ಬರನ್ನು ಹಲವರು ರಿಯಲ್ ಗಂಡ-ಹೆಂಡತಿ ರೀತಿಯೇ ನೋಡುತ್ತಿದ್ದಾರೆ ಎಂದು ಇವರಿಬ್ಬರು ಹೇಳಿದ್ದರೆ, ನಟಿ ಸ್ಪಂದನಾ, ಎಷ್ಟೋ ಮಂದಿ ನಾನು ಹೊರಗೆ ಹೋದಾಗ ಕೆಲವೊಮ್ಮೆ, ಯಾಕಮ್ಮ ನಿನ್ನ ಗಂಡನಿಗೆ ಹಾಗೆ ಬೈತಿಯಾ ಎಂದು ಪ್ರಶ್ನಿಸಿದ್ದೂ ಇದೆ ಎಂದಿದ್ದಾರೆ. ಜನರು ನಮ್ಮ ಮೇಲೆ ತೋರುತ್ತಿರುವ ಪ್ರೀತಿಗೆ ನಾವು ಅಭಾರಿಯಾಗಿದ್ದೇವೆ ಎನ್ನುತ್ತಲೇ ರಿಯಲ್ ಲೈಫ್‌ನಲ್ಲಿ ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ. ನಮ್ಮ ಮಧ್ಯೆ ಏನೂ ಇಲ್ಲ. ಹಾಗೆಲ್ಲಾ ಸುಮ್ಮನೆ ಏನೋ ಅಂದುಕೊಳ್ಳಬೇಡಿ ಎನ್ನುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಸ್ಪಂದನಾ ಮತ್ತು ಅಶ್ವಿನ್ ಉತ್ತರ ಕೊಟ್ಟಿದ್ದಾರೆ.
ಗೆಳತಿ ಗೌತಮಿ ಹಾದಿಯಲ್ಲಿ ನಡೆದ ಉಗ್ರಂ ಮಂಜು! ಮದ್ಯ- ಮಾಂಸಕ್ಕೆ ಅಂತ್ಯ; ಮುಖದ ಹೊಳಪಿನ ಗುಟ್ಟು ರಿವೀಲ್