Lakshmi Nivasa Serial: ಇಷ್ಟುದಿನ ಬಚ್ಚಿಟ್ಟಿದ್ದ ವಿಶ್ವ-ಜಾಹ್ನವಿ ಸತ್ಯ ಒಂದೇ ಬಾರಿಗೆ ಸ್ಫೋಟ! ಮುಂದೇನ್‌ ಕಥೆ?

Published : Jul 18, 2025, 09:37 AM ISTUpdated : Jul 18, 2025, 09:57 AM IST
lakshmi nivasa serial

ಸಾರಾಂಶ

Lakshmi Nivasa Serial Today Episode: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಶ್ವ ಮತ್ತು ಜಾನು ಕೊನೆಗೂ ಭೇಟಿಯಾಗಿದ್ದಾರೆ. ಜಾನು ತನ್ನನ್ನು ಪ್ರೀತಿಸಿದ್ದು ವಿಶ್ವ ಎಂದು ತಿಳಿದು ಬೇಸರ ಮಾಡಿಕೊಂಡಿದ್ದಾಳೆ. ಇವರಿಬ್ಬರ ಭೇಟಿಯಿಂದ ಮುಂದೇನಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ( Lakshmi Nivasa Serial ) ಕೊನೆಗೂ ವಿಶ್ವ-ಜಾನು ಭೇಟಿಯಾಗಿದೆ. ಈ ಎಪಿಸೋಡ್‌ಗೋಸ್ಕರ ವೀಕ್ಷಕರು ಕಾಯುತ್ತಿದ್ದರು. ತನ್ನ ಮನೆಯಲ್ಲಿರೋದು ಜಾನುನಾ ಅಥವಾ ಬೇರೆ ಹುಡುಗಿಯಾ ಎನ್ನೋದು ವಿಶ್ವನಿಗೆ ಡೌಟ್‌ ಆಗಿತ್ತು. ನಿಶ್ಚಿತಾರ್ಥ ದಿನ ಮುಸುಕು ಹಾಕಿದ ಹುಡುಗಿ ಹಾಡಿದ್ದಳು, ಆ ಹುಡುಗಿಯೇ ಜಾನು ಇರಬಹುದಾ ಎಂದು ವಿಶ್ವನಿಗೂ ಡೌಟ್‌ ಕೂಡ ಬಂದಿತ್ತು. ಕೊನೆಗೂ ಸತ್ಯ ಗೊತ್ತಾಗಿದ್ದು, ಈಗ ವಿಶ್ವ-ಜಾನು ಮುಖಾಮುಖಿಯಾಗಿದ್ದಾರೆ.

ಅಂದು ನಕ್ಕಿದ್ದ ಜಾಹ್ನವಿ!

ಕಾಲೇಜಿನಲ್ಲಿದ್ದಾಗ ಜಾನು ಹಾಗೂ ವಿಶ್ವ ಒಳ್ಳೆಯ ಫ್ರೆಂಡ್ಸ್‌ ಆಗಿದ್ದರು. ಪದೇ ಪದೇ ಜಾನು ಬಳಿ “ನಾನು ಪ್ರೀತಿಸಿದ ಹುಡುಗ ಯಾರು ಅಂತ ಹೇಳ್ತೀನಿ” ಅಂತ ವಿಶ್ವ ಹೇಳುತ್ತಿದ್ರೂ ಕೂಡ ಹೆಸರು ರಿವೀಲ್‌ ಮಾಡಿರಲಿಲ್ಲ. ಒಮ್ಮೆ ವಿಶ್ವ ಜಾನುಗೆ ಪ್ರೇಮ ನಿವೇದನೆ ಮಾಡಿದರೂ ಕೂಡ ಅವಳು ಇದೆಲ್ಲ ಜೋಕ್‌ ಎಂದು ನಕ್ಕಿದ್ದಳು.

ಬೇಸರ ಮಾಡಿಕೊಂಡಿರೋ ಜಾನು!

ಈಗ ಜಾನು ಸತ್ಯ ಗೊತ್ತಾಗಿದ್ದು, ತನ್ನನ್ನು ಪ್ರೀತಿಸಿದ್ದು ವಿಶ್ವ ಎನ್ನೋದು ಅರಿವಾಗಿದೆ. ಅಂದು ವಿಶ್ವನ ಮಾತು ಕೇಳಿ ನಕ್ಕಿದೆ ಎಂದು ಅವಳು ಬೇಸರ ಮಾಡಿಕೊಂಡಿದ್ದಾಳೆ. ಇನ್ನೊಂದು ಕಡೆ ವಿಶ್ವನ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಜಾನು ಈಗ ಅವನ ಮುಂದೆಯೇ ಬಂದಿದ್ದಾಳೆ. ಇವರಿಬ್ಬರು ಮುಖಾಮುಖಿಯಾಗಿದ್ದು, ಏನೇನು ಮಾತಾಡಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ತನ್ನ ಜೀವನದಲ್ಲಿ ಏನು ನಡೆಯಿತು? ಗಂಡ ಹೇಗಿದ್ದಾನೆ ಎಂದು ಜಾನು, ವಿಶ್ವನ ಬಳಿ ಹೇಳಬಹುದು. ಜಾನುಳನ್ನು ಮದುವೆ ಆಗೋ ಅವಕಾಶ ಇನ್ನೂ ಇದೆ ಅಂತ ಗೊತ್ತಾದರೆ ಅವನು ತನು ಜೊತೆಗಿನ ನಿಶ್ಚಿತಾರ್ಥ ಮುರಿದುಕೊಂಡರೂ ಕೂಡ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

ಧಾರಾವಾಹಿ ಕಥೆ ಏನು?

ತುಂಬಿದ ಕುಟುಂಬದಲ್ಲಿ ಸುಂದರವಾದ ಮನೆ ಇಲ್ಲ, ಮನೆ ಕಟ್ಟಬೇಕು ಎಂದು ಒದ್ದಾಡುತ್ತಿರೋ ಶ್ರೀನಿವಾಸ್‌ ಹಾಗೂ ಲಕ್ಷ್ಮೀ ಜೋಡಿಗೆ ಐವರು ಮಕ್ಕಳಿದ್ದಾರೆ. ಜಾಹ್ನವಿ, ಭಾವನಾ ಮಾತ್ರ ಒಳ್ಳೆಯವರಾಗಿದ್ದು, ತಂದೆ-ತಾಯಿ ಕಷ್ಟವನ್ನು ಅರ್ಥ ಮಾಡಿಕೊಳ್ತಾರೆ. ಗಂಡು ಮಕ್ಕಳಾದ ಹರೀಶ್‌, ಸಂತೋಷ್‌ ಅವರ ಸ್ವಾರ್ಥದಿಂದಾಗಿ ಇವರಿಬ್ಬರಿಗೂ ಈಗ ಉಳಿದುಕೊಳ್ಳಲು ಒಂದು ಮನೆಯಿಲ್ಲ. ಹೀಗಾಗಿ ಇವರು ಬೀದಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಆಗರ್ಭ ಶ್ರೀಮಂತ, ತನ್ನನ್ನು ಅತಿಯಾಗಿ ಪ್ರೀತಿಸುವ ಗಂಡ ಜಯಂತ್, ಸಿಕ್ಕಾಪಟ್ಟೆ ಪೊಸೆಸ್ಸಿವ್‌, ತನಗೋಸ್ಕರ ಅವನು ಯಾರ ಜೀವವನ್ನು ಬೇಕಿದ್ರೂ ತೆಗೆಯೋಕೆ ರೆಡಿ ಎನ್ನೋದು ಜಾಹ್ನವಿಗೆ ಗೊತ್ತಾಗಿದೆ. ತನ್ನಿಂದ ಬೇರೆಯವರ ಜೀವ ಹೋಗಬಾರದು ಅಂತ ಅವಳು ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದಿದ್ದಳು. ಆದರೆ ಅವಳು ಬದುಕುಳಿದಳು. ಎಲ್ಲರೂ ಜಾಹ್ನವಿ ಸತ್ತಿದ್ದಾಳೆ ಅಂತ ಭಾವಿಸಿದರು. ಹೀಗಾಗಿ ಜಾನು ಕೂಡ ರಹಸ್ಯವಾಗಿ ವಿಶ್ವನ ಮನೆಯಲ್ಲಿ ಬದುಕುತ್ತಿದ್ದಾಳೆ.

ಈ ಧಾರಾವಾಹಿಯ 586 ಎಪಿಸೋಡ್‌ನಲ್ಲಿ ಜಾಹ್ನವಿ ಸಾವಾಗಿದೆ. ಇಂದು 721 ಎಪಿಸೋಡ್‌ನಲ್ಲಿ ವಿಶ್ವ ಹಾಗೂ ಜಾನು ಭೇಟಿ ಆಗಲಿದೆ. ಈಗಲಾದರೂ ಜಾನು, ವಿಶ್ವ ಮುಂದೆ ಮದುವೆ ಆಗ್ತಾರಾ? ಇಲ್ಲವಾ ಎಂಬುದು ಕುತೂಹಲಕರ ವಿಷಯ. ವೀಕ್ಷಕರು ಕೂಡ ಮುಂದೆ ಏನಾಗಲಿದೆ ಎಂಬ ಕುತೂಹಲದಿಂದಿದ್ದಾರೆ.

ಪಾತ್ರಧಾರಿಗಳು

ಜಾಹ್ನವಿ ಪಾತ್ರದಲ್ಲಿ ನಟಿ ಚಂದನಾ ಅನಂತಕೃಷ್ಣ, ವಿಶ್ವ ಪಾತ್ರದಲ್ಲಿ ಭವಿಷ್‌ ಗೌಡ, ಭಾವನಾ ಪಾತ್ರದಲ್ಲಿ ನಟಿ ದಿಶಾ ಮದನ್‌, ಸಂತೋಷ್ ಪಾತ್ರದಲ್ಲಿ ಮಧು ಹೆಗಡೆ, ಹರೀಶ್ ಪಾತ್ರದಲ್ಲಿ ಅಜಯ್‌ ರಾಜ್‌, ಲಕ್ಷ್ಮೀ ಪಾತ್ರದಲ್ಲಿ ಮಾಧುರಿ, ಶ್ರೀನಿವಾಸ್ ಪಾತ್ರದಲ್ಲಿ ಶ್ರೀನಿವಾಸ್‌ ಜಂಭೆ ನಟಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!