
ಈ ವಾರದ ಟಿಆರ್‌ಪಿ ಹೊರಗಡೆ ಬಂದಿದೆ. ಕಳೆದ ಬಾರಿಯಂತೆ ಈ ವಾರವೂ ಕರ್ಣ ಧಾರಾವಾಹಿ ಟಾಪ್ 1 ಸ್ಥಾನದಲ್ಲಿದೆ. ಅಂದಹಾಗೆ ʼಅಣ್ಣಯ್ಯʼ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ಉಳಿದ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ?
ಕಲರ್ಸ್ ಕನ್ನಡ ಧಾರಾವಾಹಿಗಳು
ಕರಿಮಣಿ ಧಾರಾವಾಹಿ 1.7
ದೃಷ್ಟಿಬೊಟ್ಟು ಧಾರಾವಾಹಿ 2.7
ಭಾಗ್ಯಲಕ್ಷ್ಮೀ ಧಾರಾವಾಹಿ 3.7
ಮುದ್ದುಸೊಸೆ ಧಾರಾವಾಹಿ 4.5
ನಿನಗಾಗಿ ಧಾರಾವಾಹಿ 3.8
ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ 4.4
ನಂದಗೋಕುಲ ಧಾರಾವಾಹಿ 4.9
ಯಜಮಾನ ಧಾರಾವಾಹಿ 3.9
ರಾಮಾಚಾರಿ ಧಾರಾವಾಹಿ 2.7
ಕಲರ್ಸ್ ಕನ್ನಡ ವಾಹಿನಿಯಲ್ಲಿ ʼಮುದ್ದುಸೊಸೆʼ ಧಾರಾವಾಹಿ ಇತ್ತೀಚೆಗೆ ಆರಂಭವಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಅಂದಹಾಗೆ ಹೊಸದಾಗಿ ಆರಂಭವಾದ ಎರಡು ಕುಟುಂಬದ ಕಥೆ ʼನಂದಗೋಕುಲʼ ಕೂಡ ಒಳ್ಳೆಯ ಟಿಆರ್‌ಪಿ ಪಡೆಯುತ್ತಿದೆ. ಈ ಹಿಂದಿನ ಹಳೆಯ ಧಾರಾವಾಹಿಗಳ ಟಿಆರ್‌ಪಿ ಕಡಿಮೆ ಆಗಿದೆ. ಹೀಗಾಗಿ ಹಳೆಯ ಧಾರಾವಾಹಿಗಳು ಮುಕ್ತಾಯವಾಗಿ, ಆ ಜಾಗಕ್ಕೆ ಬಿಗ್ ಬಾಸ್ ಎಂಟ್ರಿ ಕೊಡಲೂಬಹುದು.
ಜೀ ಕನ್ನಡ ಧಾರಾವಾಹಿಗಳು
ಶ್ರೀರಸ್ತು ಶುಭಮಸ್ತು ಧಾರಾವಾಹಿ 3.1
ಪುಟ್ಟಕ್ಕನ ಮಕ್ಕಳು ಧಾರಾವಾಹಿ 5.1
ಅಮೃತಧಾರೆ ಧಾರಾವಾಹಿ 8.8
ಅಣ್ಣಯ್ಯ ಧಾರಾವಾಹಿ 9.3
ಕರ್ಣ ಧಾರಾವಾಹಿ 10.4
ಲಕ್ಷ್ಮೀ ನಿವಾಸ ಧಾರಾವಾಹಿ 9.0
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ 8.6
ನಾ ನಿನ್ನ ಬಿಡಲಾರೆ ಧಾರಾವಾಹಿ 8.9
ಬ್ರಹ್ಮಗಂಟು ಧಾರಾವಾಹಿ 7.2
ಕರ್ಣ ಧಾರಾವಾಹಿ ಪ್ರಸಾರ ಆರಂಭಿಸಿ, ಇದು ಎರಡನೇ ವಾರ. ಎರಡನೇ ವಾರವೂ ಟಿಆರ್‌ಪಿಯಲ್ಲಿ ಡಬಲ್ ಡಿಜಿಟ್ ಕಾಪಾಡಿಕೊಂಡಿರೋದು ಒಳ್ಳೆಯ ವಿಷಯ. ಆದರೆ ಜಿದ್ದಾಜಿದ್ದಿಗೆ ಬಿದ್ದು ವೀಕ್ಷಕರನ್ನು ರಂಜಿಸುವಲ್ಲಿ ಧಾರಾವಾಹಿ ಎಪಿಸೋಡ್‌ಗಳನ್ನು ಪ್ರಸಾರ ಮಾಡಲಾಗ್ತಿದೆ.
ಸ್ಟಾರ್ ಸುವರ್ಣ ಧಾರಾವಾಹಿ
ಗೌರಿಶಂಕರ ಧಾರಾವಾಹಿ 2.3
ಶಾರದೆ ಧಾರಾವಾಹಿ 2.2
ಆಸೆ ಧಾರಾವಾಹಿ 3.8
ನಿನ್ನ ಜೊತೆ ನನ್ನ ಕಥೆ ಧಾರಾವಾಹಿ 5.2
ಅಂದಹಾಗೆ ಸ್ಟಾರ್ ಸುವರ್ಣ ಧಾರಾವಾಹಿಗಳ ಟಿಆರ್‌ಪಿ ಚೆನ್ನಾಗಿ ಬರುತ್ತಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವೀಕ್ಷಕರು ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಗಳನ್ನು ಹೆಚ್ಚೆಚ್ಚು ನೋಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.