
ನಿರೂಪಕಿ ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಅನ್ನೋರಿಗೆ ಸಿಹಿಸುದ್ದಿ ಸಿಕ್ಕಿದೆ.
ಮದುವೆ ಯಾವಾಗ?
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ಜೊತೆ ಅನುಶ್ರೀ ಮದುವೆ ನಡೆಯಲಿದೆ. ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ಮದುವೆ ನಡೆಯಲಿದೆ.
ಆಗಾಗ ಅಂತೆ ಕಂತೆಗಳು ಕೇಳಿ ಬಂದಿತ್ತು
ಕೆಲ ಫೇಕ್ ಸೋಶಿಯಲ್ ಮೀಡಿಯಾ ಪೇಜ್‌ಗಳು ಅನುಶ್ರೀ ಆ ನಟನ ಜೊತೆ ಮದುವೆ ಆಗಲಿದ್ದಾರೆ, ಈ ನಟನ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿಸುತ್ತಿತ್ತು. ಆಗೆಲ್ಲ ಅನುಶ್ರೀ ಅವರೇ “ಇದೆಲ್ಲ ಸುಳ್ಳು” ಎಂದು ಹೇಳುತ್ತಿದ್ದರು. ಸಾಕಷ್ಟು ಜನರ ಜೊತೆ ಅನುಶ್ರೀ ಹೆಸರು ಥಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಸ್ಪಷ್ಟನೆ ನೀಡುತ್ತಿದ್ದ ಅನುಶ್ರೀ, ಆಮೇಲೆ ಇದೇ ವಿಷಯವನ್ನು ಹಾಸ್ಯವಾಗಿ ತಗೊಂಡಿದ್ದೂ ಇದೆ.
ಈ ಬಾರಿ ಮದುವೆ ಆಗ್ತೀನಿ!
“ಈ ಬಾರಿ ನಾನು ಮದುವೆ ಆಗ್ತೀನಿ, ಈ ವರ್ಷವೇ ಮದುವೆ ನಡೆಯುತ್ತದೆ” ಎಂದು ಅನುಶ್ರೀ ಅವರು ʼಸರಿಗಮಪʼ ಸೇರಿದಂತೆ ʼಮಹಾನಟಿʼ ಶೋನಲ್ಲಿ ಸಾಕಷ್ಟು ಬಾರಿ ಹೇಳಿದ್ದರು. ಅದೀಗ ನಿಜವಾಗ್ತಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತ ಹೇಳಿಕೆ ನೀಡಬೇಕಿದೆ. ಅಂದಹಾಗೆ ಅನುಶ್ರೀ ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಅನುಶ್ರೀ ಅವರು ಮಂಗಳೂರಿನವರಾಗಿದ್ದು, ಆ ಬಳಿಕ ದುಡಿಯಲು ಆರಂಭಿಸಿದರು. ಈಗ ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿಕೊಂಡಿದ್ದಾರೆ.
ನಂ 1 ನಿರೂಪಕಿ ಅನುಶ್ರೀ
ರಿಯಾಲಿಟಿ ಶೋ ಇರಲೀ, ಸಿನಿಮಾ ಕಾರ್ಯಕ್ರಮವಿರಲೀ ಎಲ್ಲರೂ ಅನುಶ್ರೀಗೆ ಮದುವೆ ಯಾವಾಗ ಅಂತ ಪ್ರಶ್ನೆ ಮಾಡುವವರೇ. ಆಗೆಲ್ಲ ಅನುಶ್ರೀ ಒಂದಲ್ಲ ಒಂದು ಉತ್ತರ ಕೊಡುತ್ತಿದ್ದರು. ಯಾವುದೇ ವೇದಿಕೆಯಿದ್ದರೂ ಪಟ ಪಟ ಅಂತ ಮಾತನಾಡುವ ಅನುಶ್ರೀ ಅವರು, ಕಾಮಿಡಿ ಸೃಷ್ಟಿ ಮಾಡುತ್ತಾರೆ. ಕನ್ನಡ ಕಿರುತೆರೆಯಲ್ಲಿ ನಂ 1 ಆಂಕರ್ ಆಗಿರುವ ಅನುಶ್ರೀ ಅವರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ.
ಸಿನಿಮಾದಲ್ಲಿಯೂ ನಟಿಸಿದ್ರು!
ಇಲ್ಲಿಯವರೆಗೆ ಸಾಕಷ್ಟು ರಿಯಾಲಿಟಿ ಶೋಗಳ ನಿರೂಪಣೆ ಮಾಡಿರುವ ಅನುಶ್ರೀ ಸಾವಿರಾರು ಇವೆಂಟ್‌ಗಳ ನಿರೂಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾದಲ್ಲಿಯೂ ಹೀರೋಯಿನ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದರು. ʼಉಪ್ಪು ಹುಳಿ ಖಾರʼ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.
ಬಿಗ್ ಬಾಸ್ ಕನ್ನಡ, ಡ್ಯಾನ್ಸ್ ಶೋನಲ್ಲಿಯೂ ಅನುಶ್ರೀ ಅವರು ಭಾಗವಹಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.