
ಲಕ್ಷ್ಮೀ ನಿವಾಸ ಧಾರಾವಾಹಿಯ ಚಿನ್ನುಮರಿ ಜಾನು ಮತ್ತೊಮ್ಮೆ ಮನೆ ಬಿಟ್ಟು ಹೊರಗೆ ಹೋಗಿದ್ದಾಳೆ. ಮಗುವನ್ನು ಕಳೆದುಕೊಂಡಿರುವ ಜಾನು ಮಾನಸಿಕವಾಗಿ ಖಿನ್ನತೆಗೆ ಜಾರುತ್ತಿದ್ದಾಳೆ ಅನ್ನೋ ಅನುಮಾನ ವೀಕ್ಷಕರಲ್ಲಿ ಮೂಡಿದೆ. ತಾನು ಮಗು ಕಳೆದುಕೊಂಡಿರೋದಕ್ಕೆ ಗಂಡ ಜಯಂತ್ ಕಾರಣ ಎಂದು ಜಾನು ಕೋಪಗೊಂಡಿದ್ದಾಳೆ. ಜಾನು ಎಷ್ಟೇ ಬೈದರೂ ಜಯಂತ್ ಏನು ಮಾತನಾಡದೇ ಅಸಹಾಯಕನಾಗಿದ್ದಾನೆ. ಜೀವನ ಅನ್ನೋದು ನಿಂತ ನೀರು ಆಗಬಾರದು. ಹರಿಯುವ ನೀರಿನ ರೀತಿಯಲ್ಲಿ ಜೀವನ ಸಾಗುತ್ತಿರಬೇಕು. ಕೆಟ್ಟ ವಿಷಯಗಳನ್ನು ಬಿಟ್ಟು ಮುಂದೆ ಸಾಗಬೇಕು ಎಂದು ಪತ್ನಿಗೆ ಜಯಂತ್ ಹೇಳಿದ್ದಾನೆ. ಇನ್ನೆಲ್ಲಿಂದ ಸಂತೋಷ ಎಂದು ಜಾನು ಕೋಪಗೊಂಡಿದ್ದಾಳೆ.
ಶಿವರಾತ್ರಿ ಪೂಜೆಗೆ ಜಯಂತ್ ಎಲ್ಲಾ ಸಿದ್ಧತೆ ಮಾಡಿಕೊಂಡರೂ ಜಾನು ಮಾತ್ರ ಸ್ನಾನ ಮಾಡದೇ ಕುಳಿತಿದ್ದಾಳೆ. ಜಯಂತ್ ಎಷ್ಟೇ ಹೇಳಿದರೂ ಜಾನು ಕೋಪ ಮಾತ್ರ ಕಡಿಮೆಯಾಗುತ್ತಿಲ್ಲ. ಇದೀಗ ಒಂಟಿಯಾಗಿರುವ ಮನೆಯಲ್ಲಿ ಕುಳಿತಿರುವ ಜಾನುಗೆ ತನ್ನ ಮಗು ಕೂಗುತ್ತಿರುವ ಹಾಗೆ ಕೇಳುತ್ತಿದೆ. ಮನೆ ತುಂಬಾ ಅಮ್ಮಾ.. ಅಮ್ಮಾ.. ಎಂಬ ಕೂಗು ಕೇಳಿಸುತ್ತಿದೆ. ಇದರಿಂದ ಜಾನು ಭಯಗೊಂಡು ಹಾಲ್‌ನಿಂದ ಹೋಗಿ ಬೆಡ್‌ರೂಮ್‌ಗೆ ಹೋದರೂ.. ಅಮ್ಮಾ ಅನ್ನೋ ಕೂಗು ಚಿನ್ನುಮರಿಯ ಬೆನ್ನ ಹಿಂದೆಯೇ ಬಂದಿದೆ.
ಒಂಟಿಯಾಗಿದ್ದ ಬದುಕಿಗೆ ಮಗು ಜೊತೆಯಾಗಿತ್ತು. ಅದರ ಜೊತೆ ಆಟ ಆಡುತ್ತಾ, ಮಗುವಿನ ತುಂಟಾಟ ನೋಡ್ಕೊಂಡು ಜೀವನ ನಡೆಸಬೇಕೆಂದು ಕನಸು ಕಂಡಿದ್ದೆ. ಮಗು ನನ್ನೊಂದಿಗೆ ಇದ್ದಿದ್ರೆ ಈ ಒಂಟಿತನ ದೂರವಾಗುತ್ತಿತ್ತು. ಆದರೆ ದೇವರು ಇದಕ್ಕೆ ಅವಕಾಶ ಕೊಡಲಿಲ್ಲ. ನನ್ನ ಜೀವನ ಈಗ ಬಂಗಾರದ ಪಂಜರದಲ್ಲಿರೋ ಗಿಳಿಯಂತಾಗಿದೆ. ಇಲ್ಲಿಂದ ಹೊರಗೆ ಹೋಗಲು ಆಗದೆ, ಏನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ ಎಂದು ಜಾಹ್ನವಿ ಕೊರಗುತ್ತಿದ್ದಾಳೆ.
ನನ್ನ ಮಗು ನನ್ನೊಂದಿಗೆ ಇದ್ದಿದ್ರೆ ಈ ರೀತಿಯ ಯೋಚನೆಗಳು ಬರುತ್ತಿರಲಿಲ್ಲ. ಆದರೆ ಈಗ ಏನು ಮಾಡೋದು ಅಂತ ಜಾನು ಯೋಚಿಸುತ್ತಿರುವಾಗಲೇ, ಪುಟ್ಟ ಮಗುವೊಂದು ಅಮ್ಮಾ ಎಂದು ಕೂಗುವ ಧ್ವನಿ ಕೇಳುತ್ತದೆ. ಜಾನು ಕಿವಿ ಮುಚ್ಚಿಕೊಂಡರೂ ಅಮ್ಮಾ.. ಅಮ್ಮಾ.. ಎಂದು ಕೇಳಿಸುತ್ತದೆ. ಮಗು ಕಳೆದುಕೊಂಡು ದುಃಖದಲ್ಲಿರುವ ಜಾಹ್ನವಿಗೆ ಒಂಟಿತನದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರೋದು ಇಂದಿನ ಸಂಚಿಕೆಯಲ್ಲಿ ಕಾಣುತ್ತಿದೆ. ಜಾಹ್ನವಿಗೆ ಈ ಸಮಯದಲ್ಲಿ ಪೋಷಕರ ಅಗತ್ಯವಿದೆ ಎಂದು ಜಯಂತ್ ಕೇಳಿಲ್ಲ. ಮನೆಗೆ ಬಂದ ಅತ್ತೆ-ಮಾವ, ವೆಂಕಿ-ಚೆಲುವಿಯನ್ನು ಸಹ ವಾಪಸ್ ಕಳುಹಿಸಿದ್ದಾನೆ.
ಇದನ್ನೂ ಓದಿ: ಕೊನೆಗೂ ಸಿಕ್ತು ಸೈಕೋ ಜಯಂತ್‌ನ ಜುಟ್ಟು; ಪ್ಲೀಸ್ ಡಮ್ಮಿ ಕ್ಯಾರೆಕ್ಟರ್ ಮಾಡ್ಬೇಡಿ ಫ್ಯಾನ್ಸ್ ಡಿಮ್ಯಾಂಡ್
ಇತ್ತ ದೊಡ್ಡ ಮನೆಯಲ್ಲಿ ಒಂಟಿಯಾಗಿರೋ ಜಾನು ಭ್ರಮೆಗೆ ಒಳಗಾಗಿದ್ದು, ಮಗು ತನ್ನೊಂದಿಗೆ ಮಾತನಾಡುತ್ತಿದೆ ಎಂದು ಕೊಂಡಿದ್ದಾಳೆ. ಅಮ್ಮಾ.. ನನ್ನನ್ನು ಯಾಕೆ ಉಳಿಸಿಕೊಳ್ಳಲಿಲ್ಲ. ನಾನು ನಿನಗೆ ಬೇಡವಾದ್ನಾ ಎಂದು ಮಗು ಕೇಳುತ್ತದೆ. ಇದಕ್ಕೆ ಜಾಹ್ನವಿ ತನ್ನದೇ ಆದ ಸ್ಪಷ್ಟನೆಯನ್ನು ಮನೆಯಲ್ಲಿರುವ ಬಾಲಕೃಷ್ಣನ ಫೋಟೋ ಮುಂದೆ ಉತ್ತರ ನೀಡುತ್ತಾಳೆ. ನೋಡಗರು ಜಾಹ್ನವಿಗೆ ಹುಚ್ಚು ಹಿಡಿತಾ ಅಂತ ಆತಂಕಕ್ಕೊಳಗಾಗಿದ್ದಾರೆ. ಸಂಚಿಕೆ ಕೊನೆಗೆ ನಾನು ಈ ಮನೆಯಲ್ಲಿ ಇರಲಾರೆ ಎಂದು ಜಯಂತ್‌ನ ಬಂಗಾರದ ಪಂಜರದಿಂದ ಜಾಹ್ನವಿಗೆ ಹೊರ ಬಂದಿದ್ದಾಳೆ. ಈಗಾಗಲೇ ಎರಡು ಬಾರಿ ಮನೆ ಬಿಟ್ಟು ಹೋಗಿದ್ದ ಜಾಹ್ನವಿಯನ್ನು ಜಯಂತ್ ಉಪಾಯವಾಗಿ ಕರೆದುಕೊಂಡು ಬಂದಿದ್ದನು.
ವಿಶ್ವನ ಬಳಿ ಹೋಗ್ತಾಳಾ ಜಾನು?
ಇನ್ನು ಜಾನು ತನ್ನ ಆಪ್ತ ಗೆಳೆಯ ವಿಶ್ವ ಮತ್ತೆ ಸಿಕ್ಕಿದ್ದಾನೆ. ಜಾನುವಿನ ಕಷ್ಟ ನೋಡಿದ ವಿಶ್ವ ಆಕೆಯ ಸಹಾಯಕ್ಕೆ ಬರೋದಾಗಿ ಭರವಸೆ ನೀಡಿದ್ದಾನೆ. ಜಯಂತ್‌ನ ಬಂಗಾರದ ಪಂಜರದಿಂದ ಹಾರಿ ಹೊರಗೆ ಬಂದಿರುವ ಗೆಳೆಯ ವಿಶ್ವನ ಬಳಿಗೆ ಜಾನು ಹೋಗ್ತಾಳಾ ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.
ಇದನ್ನೂ ಓದಿ: ಸೀರಿಯಲ್‌ನಲ್ಲಿ ಬರೋ ಡಾಕ್ಟರಮ್ಮ ಹೀಗ್ಯಾಕೆ? ತಲೆಗೆ ಹುಳು ಬಿಟ್ಕೊಂಡ್ರು ವೀಕ್ಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.