'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ವಿಡಿಯೋ ಇಲ್ಲಿದೆ...

Published : Feb 27, 2025, 07:17 PM ISTUpdated : Feb 28, 2025, 10:11 AM IST
'ಪುಟ್ಟಕ್ಕನ ಮಕ್ಕಳು'ಗೆ ರವಿಚಂದ್ರನ್​ ಎಂಟ್ರಿ ಕೊಟ್ಟಾಗ ಶೂಟಿಂಗ್​ ಸೆಟ್​ನಲ್ಲಿ ಬೆಂಕಿ ಬಿದ್ದದ್ದು ಹೇಗೆ? ವಿಡಿಯೋ ಇಲ್ಲಿದೆ...

ಸಾರಾಂಶ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾಳ ಮೇಲಿನ ಕಳಂಕ ತೊಡೆದುಹಾಕಲು ಪುಟ್ಟಕ್ಕ ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ರವಿಚಂದ್ರನ್ ರಕ್ಷಿಸುತ್ತಾರೆ. ಕಂಠಿ ಮತ್ತು ಇತರರು ಸಿಂಗಾರಮ್ಮನ ಕುತಂತ್ರ ಬಯಲು ಮಾಡುತ್ತಾರೆ. ಇತ್ತೀಚೆಗೆ 900 ಸಂಚಿಕೆಗಳನ್ನು ಪೂರೈಸಿದ ಈ ಧಾರಾವಾಹಿಯು ಟಿಆರ್‌ಪಿಯಲ್ಲಿ ತನ್ನ ಸ್ಥಾನ ಕಳೆದುಕೊಳ್ಳುತ್ತಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಾರೆ. ರವಿಚಂದ್ರನ್ ಅವರ ಎಂಟ್ರಿಯಿಂದ ಧಾರಾವಾಹಿ ಮತ್ತೆ ಯಶಸ್ಸು ಗಳಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ಇದಾಗಲೇ ಕ್ರೇಜಿಸ್ಟಾರ್​ ರವಿಚಂದ್ರನ್​ ಎಂಟ್ರಿ ಆಗಿದ್ದು, ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ಪುಟ್ಟಕ್ಕನನ್ನು ರಕ್ಷಿಸಿಯಾಗಿದೆ. ಅಷ್ಟಕ್ಕೂ, ಸ್ನೇಹಾಳಿಗೆ ಅಂಟಿರುವ ಕಳಂಕವನ್ನು ತೊಡೆದು ಹಾಕಲು ಪುಟ್ಟಕ್ಕ ಪಣತೊಟ್ಟಿದ್ದಳು. ರಾಜಿಯ ಕುತಂತ್ರದಿಂದ ಡಿಸಿಯಾಗಿದ್ದ ಸಂದರ್ಭದಲ್ಲಿ ಸ್ನೇಹಾ  ಮೋಸ ಮಾಡಿದ್ದಾಳೆ ಎಂದೇ ಜನರು ಅಂದುಕೊಂಡಿದ್ದರು. ಆದರೆ ತನ್ನ ಮಗಳು ನಿಷ್ಠಾವಂತಳು, ಅವಳು ಯಾವ ತಪ್ಪೂ ಮಾಡಿಲ್ಲ ಎಂದು ಪುಟ್ಟಕ್ಕ ಹೋರಾಟ ಮಾಡುತ್ತಿದ್ದಳು. ಒಂದು ಹಂತದಲ್ಲಿ ಸೋತ ಪುಟ್ಟಕ್ಕ  ನಡುಬೀದಿಯಲ್ಲಿ ಬೆಂಕಿಹಚ್ಚಿಕೊಳ್ಳಲು ಮುಂದಾಗಿದ್ದಳು. ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಇನ್ನೇನು ಕಡ್ಡಿಗೀರಬೇಕು ಎನ್ನುವಷ್ಟರಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ಎಂಟ್ರಿಯಾಗಿತ್ತು. ಪುಟ್ಟಕ್ಕ ಸಾಯುವುದರಿಂದ ರವಿಚಂದ್ರನ್​ ತಡೆದಿದ್ದರು.  ಪುಟ್ಟಕ್ಕನ ಜೊತೆಯಲ್ಲಿ ತಾವೂ ಸ್ನೇಹಾಳಿಗೆ ನ್ಯಾಯ ಒದಗಿಸಲು ಕುಳಿತಿದ್ದರು. ಕೊನೆಗೆ ಕಂಠಿ ಮತ್ತು ಇತರರು ಸೇರಿ ಸಿಂಗಾರಮ್ಮಾ ಮತ್ತು ಟೀಂ ಕುತಂತ್ರ ಬಯಲು ಮಾಡಿದ್ದಾರೆ. ಪುಟ್ಟಕ್ಕನಿಗೆ ಜಯ ಸಿಕ್ಕಿದೆ.

ಈ ನಡುವೆ, ರವಿಚಂದ್ರನ್​ ಅವರ ಎಂಟ್ರಿಯಾದಾಗ, ಶೂಟಿಂಗ್​ ಸೆಟ್​ನಲ್ಲಿ ಬೆಂಕಿಯ ದೃಶ್ಯ ಹೇಗೆ ಮಾಡಲಾಗಿತ್ತು ಎನ್ನುವ ತೆರೆಮರೆ ಹಿಂದಿನ ವಿಡಿಯೋ ಅನ್ನು ಡಿವಿ ಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಪುಟ್ಟಕ್ಕ ಬೆಂಕಿ ಹಚ್ಚಿಕೊಳ್ಳಲು ಮುಂದಾದಾಗ ರವಿಚಂದ್ರನ್​ ಬಂದು ಅದನ್ನು ತಡೆಯುವ ಸಂದರ್ಭದಲ್ಲಿ ಅಲ್ಲಿ ಬೆಂಕಿಯನ್ನು ಹೇಗೆ ಕ್ರಿಯೇಟ್​ ಮಾಡಲಾಗಿತ್ತು. ಯಾವ ರೀತಿಯಲ್ಲಿ ಶೂಟಿಂಗ್​ ಸೆಟ್​ ಮಾಡಲಾಗಿತ್ತು ಎನ್ನುವುದು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ, ಈಚೆಗಷ್ಟೇ 900 ಸಂಚಿಕೆಗಳನ್ನು ಪೂರೈಸಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್​ಗೆ ತಿರುವು ಕೊಟ್ಟು ಮತ್ತಷ್ಟು ಜೀವ ತುಂಬಲು ನಿರ್ದೇಶಕರು ಹರಸಾಹಸ ಪಡುತ್ತಿದ್ದಾರೆ. 12ನೇ ಡಿಸೆಂಬರ್​ 2021ರಿಂದ ಶುರುವಾಗಿದ್ದ ಸೀರಿಯಲ್​ ಮೂರು ವರ್ಷ ಎರಡು ತಿಂಗಳುಗಳನ್ನು ಪೂರೈಸಿದೆ. ಸದಾ ಟಿಆರ್​ಪಿಯಲ್ಲಿ ನಂಬರ್​ 1 ಸ್ಥಾನವನ್ನು ವರ್ಷಗಟ್ಟಲೆ ಕಾದುಕೊಂಡಿದ್ದ ಸೀರಿಯಲ್​, ಬರಬರುತ್ತಾ ಉಳಿದ ಬಹುತೇಕ ಸೀರಿಯಲ್​ಗಳಂತೆ ತನ್ನತನವನ್ನು ಕಳೆದುಕೊಂಡು ಸಾಗುತ್ತಿದೆ ಎನ್ನುವುದು ಇದರ ವೀಕ್ಷಕರ ಅಭಿಮತ. 

ನೀರು ಕೊಡಿ ಅಂದ್ರೆ ಬರೀ ಡೈಲಾಗೇ ಕೊಡ್ತಾರೆ, ಏನ್​ ಮಾಡ್ಲಿ: ಶೂಟಿಂಗ್​ ಸೆಟ್​ನಲ್ಲಿ ನಟಿ ಉಮಾಶ್ರೀ ಗೋಳು ಕೇಳಿ...

ಪುಟ್ಟಕ್ಕನ ಗಟ್ಟಿಗಿತ್ತಿತನ, ಸ್ನೇಹಾಳ ಸ್ವಾಭಿಮಾನವೇ ಇಲ್ಲಿ ಹೈಲೈಟ್​ ಆಗಿತ್ತು. ಆದರೆ ಈಗ್ಯಾಕೋ ಬಹುತೇಕ ವೀಕ್ಷಕರನ್ನು ಈ ಸೀರಿಯಲ್​ ಕಳೆದುಕೊಂಡು ಬಿಟ್ಟಿದೆ. ಉಮಾಶ್ರೀ ಅಮ್ಮಾ ನೀವು ಈ ಸೀರಿಯಲ್​ ಅಂದೇ  ಮುಗಿಸಿಬಿಡಬೇಕಿತ್ತು ಎಂದು ಕಮೆಂಟ್ಸ್​ ತುಂಬಾ ಹಲವರು ಹೇಳುತ್ತಿದ್ದಾರೆ. ಈ ಸೀರಿಯಲ್​ಗೆ ಬಹುದೊಡ್ಡ ಹಿನ್ನಡೆಯಾಗಿದ್ದು ನಾಯಕಿ ಸ್ನೇಹಾಳ ಸಾವು! ಆಕೆಯ ಸಾವಿನ ಬೆನ್ನಲ್ಲೇ ಕಥೆ ಏನೇನೋ ತಿರುವು ಪಡೆದುಕೊಂಡು ಎಲ್ಲೆಲ್ಲಿಯೋ ಹೋಗುತ್ತಾ ಹಳಿ ತಪ್ಪುತ್ತಿದೆ ಎಂದು ವೀಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಆದ್ದರಿಂದ ಸೀರಿಯಲ್​ ಅನ್ನು ಮತ್ತೆ ಟಾಪ್​ನಲ್ಲಿ ತರುವುದಕ್ಕಾಗಿ ಇನ್ನಿಲ್ಲದ ಸಾಹಸ ಮಾಡಲಾಗುತ್ತಿದ್ದು, ರವಿಚಂದ್ರನ್​ ಅವರ ಎಂಟ್ರಿ ಕೊಡಿಸಲಾಗಿದೆ.  

ಇದೀಗ 900ರ ಸಂಚಿಕೆ ಎಂದು ಜೀ ಕನ್ನಡ ಪೋಸ್ಟ್​ ಮಾಡಿದಾಗಲೂ, ಅದಕ್ಕೆ ಬಂದಿರುವ ಕಮೆಂಟ್​ಗಳ ತುಂಬೆಲ್ಲಾ ಸೀರಿಯಲ್​ ಮುಗಿಸಿ ಎನ್ನುವ ಮಾತೇ ಕೇಳಿಬರುತ್ತಿದೆ. ಹಿಂದೊಮ್ಮೆ ಸಂದರ್ಶನದಲ್ಲಿ ಆರೂರು ಜಗದೀಶ್​ ಅವರು, 2025ರಲ್ಲಿಯೂ ಸೀರಿಯಲ್​  ಮುಂದುವರೆಯುತ್ತದೆ ಎಂದಿದ್ದರು. ರವಿಚಂದ್ರನ್​ ಎಂಟ್ರಿಯಿಂದ  , ಧಾರಾವಾಹಿ ಮತ್ತೆ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಸಫಲವಾಗುತ್ತಾ ಎಂದು ಕಾದು ನೋಡಬೇಕಿದೆ. 

900 ಸಂಚಿಕೆ ಮುಗಿಸಿದ ಪುಟ್ಟಕ್ಕನ ಮಕ್ಕಳು! ಸಾವಿನ ಹೊಡೆತಕ್ಕೆ ತತ್ತರಿಸಿದ ಸೀರಿಯಲ್​- ಮುಂದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!