
ಲಕ್ಷ್ಮೀ ನಿವಾಸದ ಚಿನ್ನುಮರಿ ಜಾಹ್ನವಿ ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದು ಸದ್ಯ ಸೀರಿಯಲ್‌ನಲ್ಲಿ ವಿಶ್ವನ ಮನೆ ತಲುಪಿದ್ದಾಳೆ. ವಿಶ್ವನ ಕಾರಿನ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದ ಜಾನು, ಅವನಿಗೂ ಅರಿವಿಲ್ಲದೇ ಮನೆಗೆ ಬಂದಿದ್ದಾಳೆ. ಅತ್ತ ತನ್ನ ಪತ್ನಿ ಸತ್ತೇ ಹೋದಳು ಎಂದು ಜಯಂತ್ ಗೋಗರೆಯುತ್ತಿದ್ದಾನೆ. ಅತ್ತ ಗಂಡ ಸಿದ್ದೇಗೌಡ್ರ ಜೊತೆ ಮೋಸದಿಂದ ಮದುವೆಯಾಗಿರುವ ಕಾರಣಕ್ಕೆ ಗಂಡನ ಕಂಡರೆ ಕೋಪಗೊಂಡಿದ್ದ ಜಾನು ಅಕ್ಕ ಭಾವನಂತೆ ಆತನ ಮೇಲೆ ಲವ್ ಶುರುವಾಗಿದೆ. ಈ ಮೂಲಕ ಸದ್ಯ, ಲಕ್ಷ್ಮೀ ನಿವಾಸ ಸೀರಿಯಲ್ ಇದೀಗ ಸಾಕಷ್ಟು ಕುತೂಹಲ ಹಂತ ತಲುಪಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್ ಸ್ಟೋರಿ. ಇನ್ನೊಂದೆಡೆ ಭಾವನಾ ಮತ್ತು ಸಿದ್ದೇಗೌಡ್ರು ಸ್ಟೋರಿ. ತಂಗಿ ಗಂಡನಿಂದ ಬೇರೆಯಾಗುತ್ತಿದ್ದರೆ, ಅಕ್ಕ ಗಂಡನ ಹತ್ತಿರ ಬರುತ್ತಿದ್ದಾಳೆ. ಅತ್ತ ದಾಂಪತ್ಯದಲ್ಲಿ ವಿರಸ, ಇತ್ತ ಸರಸ...
ಇದೀಗ, ವಿಶ್ವನ ಮನೆ ಸೇರಿರೋ ಜಾಹ್ನವಿ ಅಲ್ಲಿಂದಲೂ ಹೊರಗೆ ಹೋಗುವ ಕಾಲ ಬಂದಿದೆ. ಏಕೆಂದರೆ ವಿಶ್ವನಿಗೆ ಜಾಹ್ನವಿ ತನ್ನದೇ ಮನೆಯಲ್ಲಿ ಇದ್ದಾಳೆ ಎನ್ನುವ ಗುಮಾನಿ ಶುರುವಾಗಿದೆ. ಆದ್ದರಿಂದ ಜಾಹ್ನವಿ ಮನೆಯಿಂದ ಹೋಗಲು ನೋಡಿದರೂ ಅದು ಸಾಧ್ಯವಾಗಲಿಲ್ಲ. ಅದೇ ಇನ್ನೊಂದೆಡೆ, ಸೈಕೋ ಜಯಂತ್ಗೆ ತನ್ನ ಪತ್ನಿ ಬದುಕಿದ್ದಾಳೆ ಎಂದೇ ಎನ್ನಿಸುತ್ತಿದೆ. ಆದ್ದರಿಂದ ಅವಳನ್ನು ಹುಡುಕಲು ಡಿಟೆಕ್ಟಿವ್ನ ಇಟ್ಟಿದ್ದಾನೆ. ಈಗ ಜಾಹ್ನವಿ ಬದುಕಿದ್ದಾಳೆ ಎನ್ನುವ ಸುಳಿವು ಅವನಿಗೆ ಸಿಕ್ಕಿದೆ. ಇನ್ನೇನು ಜಾಹ್ನವಿ ಏನಾದ್ರೂ ಅವನ ಕೈಗೆ ಸಿಕ್ಕರೆ ಮುಗೀತು ಕಥೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ರೋಚಕ ಹಂತಕ್ಕೆ ಬಂದು ನಿಂತಿದೆ.
ಮದ್ವೆ ಫಿಕ್ಸ್ ಆದಾಗ್ಲೂ ನನ್ನಮ್ಮಂಗೆ ಆ ಜಯಂತನೇ ಕಾಡ್ತಿದ್ದ, ಮದ್ವೆ ಮಾಡಿಸೋಕೆ ಹೆದರಿದ್ರು ಎಂದ 'ಚಿನ್ನುಮರಿ'
ಜಾಹ್ನವಿ ಮನೆಬಿಟ್ಟಾಗ ಜಯಂತ್ ಪಡುವ ಕಷ್ಟ ನೋಡಿ ಅಯ್ಯೋ ವಾಪಸ್ ಬಾಮ್ಮಾ ಎಂದು ಹಲವರು ಹೇಳಿದ್ದರೆ, ಅವನ ಕೈಗೆ ಸಿಗುವ ಬದಲು ವಿಶ್ವ ಮತ್ತು ಜಾಹ್ನವಿ ಒಂದಾಗಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಆದರೆ ಇಲ್ಲಿ ನೋಡಿದ್ರೆ ಇಬ್ಬರನ್ನೂ ಬಿಟ್ಟು ನಮ್ ಚಿನ್ನುಮರಿ ರುದ್ರನ ಜೊತೆ ರೊಮಾನ್ಸ್ ಮಾಡ್ತಾ ಇದ್ದಾಳೆ! ಹೌದು. ಜಾಹ್ನವಿ ಪಾತ್ರಧಾರಿ ಚಂದನಾ ಅನಂತಕೃಷ್ಣ ಅವರು, ಜೀ ಕನ್ನಡದ ಸರಿಗಮಪ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಚಂದನಾ ಅದ್ಭುತ ಗಾಯಕಿ ಮಾತ್ರವಲ್ಲದೇ ನೃತ್ಯಗಾತಿ ಕೂಡ. ಭರತನಾಟ್ಯ ಕಲಾವಿದೆಯೂ ಹೌದು. ಆದರೆ ಇದೀಗ ಈ ವೇದಿಕೆಯಲ್ಲಿ ಸಿನಿಮಾ ನೃತ್ಯಕ್ಕೆ ಸ್ಟೆಪ್ ಹಾಕಿದ್ದಾರೆ. ನನ್ನ ಜೊತೆ, ನನ್ನ ಕಥೆ ಹಾಡಿಗೆ ಡಾನ್ಸ್ ಮಾಡಿದ್ದಾರೆ.
ರುದ್ರ ಮತ್ತು ಚಂದನಾ ಅವರ ಕೆಮೆಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರಿಬ್ಬರೂ ಕೆಂಪು ಡ್ರೆಸ್ನಲ್ಲಿ ಸಕತ್ ಆಗಿ ಕಾಣಿಸಿಕೊಂಡಿದ್ದು, ಚಂದನಾ ಅವರ ಟ್ಯಾಲೆಂಟ್ಗೆ ವೀಕ್ಷಕರು ಭೇಷ್ ಎನ್ನುತ್ತಿದ್ದಾರೆ. ನಟಿ ಚಂದನಾ ಅವರು ಚಿನ್ನುಮರಿ ಆಗುವ ಮುನ್ನ, ರಾಜಾ ರಾಣಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರ ಫೇಮಸ್ ಆಗಿದ್ದು, ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ. ಬಿಗ್ ಬಾಸ್ ಕನ್ನಡ 7 ಹಾಗೂ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮಗಳಲ್ಲಿ ಇವರು ಸ್ಪರ್ಧಿಸಿದ್ದರು. ಹೂಮಳೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ಚಂದನಾ ಅನಂತಕೃಷ್ಣ ಇದೀಗ ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಇವರ ಮದುವೆ ಉದ್ಯಮಿ ಪ್ರತ್ಯಕ್ಷ್ ಜೊತೆ ನೆರವೇರಿದೆ.
ನವವಧು ಚಂದನಾಗೆ ಪ್ರಾಂಕ್ ಕಾಲ್ ಮಾಡಿ ಸುಸ್ತು ಮಾಡಿದ ಲಕ್ಷ್ಮೀ ನಿವಾಸ ಸೈಕೋ ಜಯಂತ್! ಹೀಗಿತ್ತು ನೋಡಿ ಮಜಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.