Kannada

ಹಾಲಿವುಡ್‌ನ ಎರಡು ದೊಡ್ಡ ಚಿತ್ರಗಳ ನಿರಾಕರಿಸಿದ್ದ ಐಶ್

ವಿಶ್ವ ಸುಂದರಿ ಐಶ್ವರ್ಯಾ ರೈ ಹಲವು ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿದ್ದಾರೆ, ಆದರೆ ಅವರು 4 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಗಳಿಸಿದ ಹಾಲಿವುಡ್‌ನ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸುವ ಆಫರನ್ನು ತಿರಸ್ಕರಿಸಿದ್ದರು.

Kannada

ಅತೀ ಹೆಚ್ಚು ಗಳಿಕೆ ಮಾಡಿದ್ದ ಹಾಲಿವುಡ್ ಸಿನಿಮಾಗಳು

ಐಶ್ವರ್ಯಾ ರೈ 'ಹಮ್ ದಿಲ್ ದೇ ಚುಕೆ ಸನಮ್' ಮತ್ತು 'ಧೂಮ್ 2' ನಂತಹ ಅದ್ಭುತ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರ ಅತಿ ಹೆಚ್ಚು ಗಳಿಕೆಯ ಚಿತ್ರಗಳಾಗಬಹುದಾಗಿದ್ದ ಎರಡು ಚಿತ್ರಗಳನ್ನು ಅವರು ತಿರಸ್ಕರಿಸಿದರು.

Kannada

ಒಂದು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ $487 ಮಿಲಿಯನ್‌ಗಿಂತ ಹೆಚ್ಚು ಗಳಿಸಿದೆ

ಬಾಕ್ಸ್ ಆಫೀಸ್ ಮೋಜೊ ಪ್ರಕಾರ,  ಐಶ್ ತಿರಸ್ಕರಿಸಿದ ಎರಡು ಚಿತ್ರಗಳಲ್ಲಿ ಒಂದು 2005 ರಲ್ಲಿ ವಿಶ್ವಾದ್ಯಂತ $487.3 ಮಿಲಿಯನ್ ಗಳಿಸಿತು, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 4112 ಕೋಟಿ.

Kannada

ಐಶ್ವರ್ಯಾ ರೈ ಆ ಚಿತ್ರವನ್ನು ತಿರಸ್ಕರಿಸಿದ್ದೇಕೆ?

ಮಾಧ್ಯಮ ವರದಿಗಳ ಪ್ರಕಾರ, ಐಶ್ವರ್ಯಾ ರೈ ಈ ಚಿತ್ರವನ್ನು ತಿರಸ್ಕರಿಸಲು ಕಾರಣ ಆ ಸಿನಿಮಾದಲ್ಲಿದ್ದ ಕೆಲವು ನಿಕಟ ದೃಶ್ಯಗಳು.

Kannada

ಐಶ್ ಬದಲು ಏಂಜಲೀನಾ ಜೋಲೀ ನಟನೆ

ಐಶ್ವರ್ಯಾ ರೈ ಈ ಚಿತ್ರವನ್ನು ತಿರಸ್ಕರಿಸಿದಾದ, ಹಾಲಿವುಡ್‌ನ ಮತ್ತೊಬ್ಬ ಖ್ಯಾತ ನಟಿ ಏಂಜಲೀನಾ ಜೋಲೀ ಅವರನ್ನ ಆಯ್ಕೆ ಮಾಡಲಾಯ್ತು, ಅವರು ಆ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದರು.

Kannada

ಐಶ್ವರ್ಯಾ ರೈ ತಿರಸ್ಕರಿಸಿದ ಚಿತ್ರವಿದು

ಬ್ರಾಡ್‌ ಪಿಟ್ ನಟನೆಯ 'ಮಿಸ್ಟರ್ ಮತ್ತು ಮಿಸಸ್ ಸ್ಮಿತ್' ಐಶ್ವರ್ಯಾ ರೈ ಅವರು ರಿಜೆಕ್ಟ್ ಮಾಡಿದ ಸಿನಿಮಾವಾಗಿದೆ. ಈ ಚಿತ್ರ 2005 ರಲ್ಲಿ ಬಿಡುಗಡೆಯಾಯಿತು.

 

Kannada

ಐಶ್‌ ರಿಜೆಕ್ಟ್ ಮಾಡಿದ್ದ ಮತ್ತೊಂದು ಸಿನಿಮಾ

ಐಶ್ವರ್ಯಾ ರೈ ನಟ ಬ್ರಾಡ್ ಪಿಟ್ ಎದುರು 'ಟ್ರಾಯ್' ಚಿತ್ರವನ್ನೂ ತಿರಸ್ಕರಿಸಿದರು. ಏಕೆಂದರೆ ಆ ಸಿನಿಮಾದ ನಿರ್ಮಾಪಕರು 9 ತಿಂಗಳ ಡೇಟ್ ಕೇಳಿದರು. ಆದರೆ ಅಷ್ಟು ದೀರ್ಘಕಾಲ 1 ಸಿನಿಮಾದಲ್ಲಿ ಸಿಲುಕಿಕೊಳ್ಳಲು ಐಶ್ ಬಯಸಲಿಲ್ಲ.

Kannada

ಟ್ರಾಯ್ ಗಳಿಕೆ $497 ಮಿಲಿಯನ್‌

'ಟ್ರಾಯ್' 2004 ರ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದಾಗಿದೆ, ಇದು ಬಾಕ್ಸ್ ಆಫೀಸ್‌ನಲ್ಲಿ $497.4 ಮಿಲಿಯನ್ (ಸರಿಸುಮಾರು ₹4198.8 ಕೋಟಿ) ಗಳಿಸಿದೆ.

ಹೋಟೆಲ್ ಮಾಣಿಯಿಂದ ಸೂಪರ್ ಸ್ಟಾರ್‌ವರೆಗೆ ಬೆಳೆದು ನಿಂತ ಈ ಬಾಲಕ ಯಾರು?

ಅಯ್ಯೋ.. ಇದ್ಯಾಕೆ ಐಶ್ವರ್ಯಾ ರೈ ₹4000 ಕೋಟಿ ಗಳಿಕೆಯ ಸಿನಿಮಾಗಳನ್ನು ಬೇಡವೆಂದ್ರು!

ಶಿಕ್ಷಣ ಕಡಿಮೆ ಇದ್ರೂ ಬಾಲಿವುಡ್ ಆಳಿದ ನಟ ನಟಿಯರಿವರು

ವಿದೇಶದಲ್ಲಿ ಐಷಾರಾಮಿ ಮನೆಗಳನ್ನು ಹೊಂದಿರುವ ಬಾಲಿವುಡ್ ತಾರೆಯರು