Lakshmi Baramma Serial: ಕರ್ಮ ರಿಟರ್ನ್ಸ್‌ ಅಂತಾರಲ್ಲ..ಇದೇ ಇರಬೇಕು ಕಾವೇರಿ...! ಕಾದೈತೆ ರೋಚಕ ಎಪಿಸೋಡ್‌

Published : Mar 04, 2025, 05:20 PM ISTUpdated : Mar 04, 2025, 05:36 PM IST
Lakshmi Baramma Serial: ಕರ್ಮ ರಿಟರ್ನ್ಸ್‌ ಅಂತಾರಲ್ಲ..ಇದೇ ಇರಬೇಕು ಕಾವೇರಿ...! ಕಾದೈತೆ ರೋಚಕ ಎಪಿಸೋಡ್‌

ಸಾರಾಂಶ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೇದಿಕೆ ಮೇಲೆ ವೈಷ್ಣವ್‌ ತನ್ನ ಪತ್ನಿ ಲಕ್ಷ್ಮೀಯನ್ನು ಹೊಗಳ್ತಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇನ್ನು ಲಕ್ಷ್ಮೀ ಕೂಡ ಫುಲ್‌ ಖುಷಿ ಆಗಿದ್ದಾಳೆ. ಇನ್ನೊಂದು ಕಡೆ ವಿಧಿ ಮದುವೆ ಆಗೋಕೆ ರೆಡಿ ಆಗಿದ್ದಾಳೆ. 

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ ಹಾಗೂ ಲಕ್ಷ್ಮೀ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಹೋಗಿದ್ದರು. ಅದೇ ಮದುವೆಗೆ ವಿಧಿ ತನ್ನ ಬಾಯ್‌ಫ್ರೆಂಡ್‌ ಜೊತೆ ಹೋಗಿದ್ದಾಳೆ. ಮನೆಯಲ್ಲಿ ನಮ್ಮ ಲವ್‌ಗೆ ಒಪ್ಪಿಗೆ ಕೊಡಲ್ಲ ಅಂತ ಅವಳು ಗುಟ್ಟಾಗಿ ಮದುವೆಯಾಗಲು ನಿರ್ಧಾರ ಮಾಡಿದ್ದಳು. ಆ ಮದುವೆ ಕಾರ್ಯಕ್ರಮಕ್ಕೆ ತನ್ನ ಸ್ವಂತ ಅಣ್ಣ-ಸೊಸೆಯೇ ಅತಿಥಿಗಳು ಅಂತ ಅವಳಿಗೆ ಗೊತ್ತೇ ಇರಲಿಲ್ಲ. ಇನ್ನೊಂದು ಕಡೆ ವೈಷ್ಣವ್‌ ವೇದಿಕೆ ಮೇಲೆ ತನ್ನ ಪತ್ನಿಯ ಗುಣಗಾನ ಮಾಡಿರೋದು ಆಶ್ಚರ್ಯ ಮೂಡಿಸಿದೆ. 

ಪತ್ನಿಯನ್ನು ಹೊಗಳಿದ ವೈಷ್ಣವ್‌ 
“ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗಿರತ್ತೆ ಅಂತಾರೆ. ಆದರೆ ವಾಸ್ತವದಲ್ಲಿ ಮದುವೆ ಆದ್ಮೇಲೆ ಜೀವನ ಸ್ವರ್ಗ ಆಗತ್ತೆ, ಮದುವೆ ಆದ್ಮೇಲೆ ಜೀವನ ಬದಲಾಗತ್ತೆ, ನಮ್ಮ ಲೈಫ್‌ಸ್ಟೈಲ್‌ ಬದಲಾಗತ್ತೆ, ನಮ್ಮ ಜೀವನ ಚೆನ್ನಾಗಿರತ್ತೆ, ನನ್ನ ಜೀವನದಲ್ಲಿ ಬದಲಾವಣೆ ತಂದಿದ್ದು ನನ್ನ ಹೆಂಡ್ತಿ ಮಹಾಲಕ್ಷ್ಮೀ. ಹೆಂಡ್ತಿ ಬೆಂಬಲ ಇದ್ರೆ ಗಂಡ ಏನು ಬೇಕಿದ್ರೂ ಮಾಡಬಹುದು. ನನ್ನ ಜೀವನದಲ್ಲಿ ಎಲ್ಲ ಕೆಲಸಗಳಿಗೆ ನನ್ನ ಹೆಂಡ್ತಿ ಬೆಂಬಲ ಇದ್ದೇ ಇದೆ. ಗಂಡ-ಹೆಂಡ್ತಿ ಜೊತೆಯಲ್ಲಿದ್ದಾಗ, ಕಷ್ಟ-ಸುಖದಲ್ಲಿ ಜೊತೆಯಾಗಿ ನಿಂತಾಗ ಲೈಫ್‌ಸುಲಭ ಆಗುತ್ತದೆ. ಸಂಬಂಧಗಳನ್ನು ಹ್ಯಾಂಡಲ್‌ಮಾಡೋದು ಕಷ್ಟ. ಆದರೆ ನಮ್ಮ ಸಂಗಾತಿ ಮುಂದೆ ಇಗೋ ಇಟ್ಟುಕೊಳ್ಳಬಾರದು. ನಂದೇ ನಡೆಯಬೇಕು, ನಂದೇ ಎಲ್ಲ ಅಂದ್ರೆ ಆಗೋದಿಲ್ಲ. ಸೋತು ಗೆಲ್ಲೋದು ಸುಖ ಸಂಸಾರದ ಗುಟ್ಟು" ಎಂದು ವೈಷ್ಣವ್‌ ಹೇಳಿದ್ದಾನೆ. 

'ಲಕ್ಷ್ಮೀ ಬಾರಮ್ಮ' ವಿಲನ್​ ನಿನ್ನಮ್ಮ ಅಲ್ಲ, ಕಾವೇರಿ ಆಂಟಿ ಅಷ್ಟೇ ಎಂದು ಮಗಳ ತಲೆ ತುಂಬ್ತಾ ಇರ್ತೇನೆ ಎಂದ ನಟಿ ಸುಷ್ಮಾ

ಈಗ ಇರುವ ಪ್ರಶ್ನೆ ಏನು? 
ವೈಷ್ಣವ್‌ ಮಾತುಗಳನ್ನು ಕೇಳಿ ಲಕ್ಷ್ಮೀ ಫುಲ್‌ ಖುಷಿ ಆಗಿದ್ದಾಳೆ. ಎಲ್ಲರ ಮುಂದೆ ಹೊಗಳಬೇಕು ಅಂತ ಹೊಗಳ್ತಿದ್ದಾನೋ ಅಥವಾ ಮನಸ್ಸಾರೆ ಹೊಗಳ್ತಿದ್ದಾನೋ ಎನ್ನೋದು ರಿವೀಲ್‌ ಆಗಬೇಕಿದೆ. ಒಟ್ಟಿನಲ್ಲಿ ಈ ಎಪಿಸೋಡ್‌ ಅನೇಕರಿಗೆ ಖುಷಿ ಕೊಟ್ಟಿದೆ. ಯಾರಿಗೂ ಗೊತ್ತಾಗದೆ ಮದುವೆ ಆಗ್ತಿರೋ ವಿಧಿಯನ್ನು ತಂದೆ ನೋಡಿದ್ದಾರೆ. ಈಗ ಈ ಮದುವೆ ನಡೆಯತ್ತಾ? ವೈಷ್ಣವ್-ಲಕ್ಷ್ಮೀ ಕಣ್ಣಿಗೆ ಬಿದ್ದು ಈ ಮದುವೆ ನಿಲ್ಲತ್ತಾ ಎಂದು ಕಾದು ನೋಡಬೇಕಿದೆ. 

ಕೊನೆಗೂ ವೀಕ್ಷಕರ ಬಹುದಿನದ ಆಸೆ ಈಡೇರಿಸಿದ ʼಭಾಗ್ಯಲಕ್ಷ್ಮೀʼ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ತಂಡ!

ಮುಂದೆ ಏನಾಗಬಹುದು? 
ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಲಕ್ಷ್ಮೀ ಬರಬೇಕು ಅಂತ ವೈಷ್ಣವ್‌ ಒತ್ತಾಯ ಮಾಡಿದನು. ಇದು ಕಾವೇರಿಗೆ ಇಷ್ಟ ಇರಲಿಲ್ಲ. ತಾಯಿ ಆಸೆ ವಿರುದ್ಧವಾಗಿ ಅವನು ಪತ್ನಿಯನ್ನು ತನ್ನ ಜೊತೆ ಕರೆದುಕೊಂಡು ಹೋದ. ಲಕ್ಷ್ಮೀಯಿಂದ ದೂರ ಇರೋ ವೈಷ್ಣವ್‌ ಈಗ ಮತ್ತೊಂದು ಮದುವೆ ಆಗೋದಾಗಿ ಹೇಳಿದ್ದಾನೆ. ನಿಜಕ್ಕೂ ಇವನು ಮದುವೆ ಆಗ್ತಾನಾ ಎನ್ನೋದು ಒಂದು ಪ್ರಶ್ನೆಯಾದರೆ, ಎಲ್ಲರ ಮುಂದೆ ತನ್ನ ಮನಸ್ಸಿನಲ್ಲಿರೋದನ್ನೆಲ್ಲ ಹೇಳಬೇಕು ಅಂತ ಕರೆದುಕೊಂಡು ಹೋದ್ನಾ ಎನ್ನೋದು ಇನ್ನೊಂದು ಪ್ರಶ್ನೆ ಆಗಿದೆ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ರೋಚಕತೆ ಇದೆ.

ಮಗ ವೈಷ್ಣವ್‌ ನನಗೆ ಮಾತ್ರ ಆದ್ಯತೆ ಕೊಡಬೇಕು ಅಂತ ಕಾವೇರಿ ಒದ್ದಾಡುತ್ತಿದ್ದಳು. ಈಗ ಮಗಳು ವಿಧಿ ಯಾರನ್ನೋ ಮದುವೆ ಆದರೆ ಏನು ಮಾಡ್ತಾಳೋ ಏನೋ! ವೀಕ್ಷಕರಂತೂ ಈ ಎಪಿಸೋಡ್‌ ನೋಡಿ ಫುಲ್‌ ಖುಷಿ ಆಗಿದ್ದಾರೆ. ಕರ್ಮ ರಿಟರ್ನ್ಸ್‌ ಎನ್ನೋದು ಇದೇ ಇರಬೇಕು ಎಂದು ಹೇಳುತ್ತಿದ್ದಾರೆ. 

ಪಾತ್ರಧಾರಿಗಳು
ವೈಷ್ಣವ್‌ ಪಾತ್ರದಲ್ಲಿ ಶಮಂತ್‌ ಬ್ರೊ ಗೌಡ, ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌, ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ, ವಿಧಿ ಪಾತ್ರದಲ್ಲಿ ಲಾವಣ್ಯಾ ಹಿರೇಮಠ ಅವರು ನಟಿಸುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!
ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್‌!