
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಪುಟ್ಟಕ್ಕಳಿಗೆ ಗಂಡು ಮಗು ಆಗಿಲ್ಲ ಎಂದು ಗೋಪಾಲಯ್ಯ ಅವಳನ್ನು ಬಿಟ್ಟು ಬೇರೆ ಮದುವೆ ಆದನು. ಈಗ ಎಲ್ಲ ತಪ್ಪುಗಳನ್ನು ಮರೆತು ಮತ್ತೆ ಪುಟ್ಟಕ್ಕನ ಮನೆಯಲ್ಲಿ ಇದ್ದಾನೆ. ಈಗ ಪುಟ್ಟಕ್ಕಳಿಗೆ ಮತ್ತೆ ಮದುವೆ ಆಗುವ ಯೋಗ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ.
ಪುಟ್ಟಕ್ಕಳ ಮನೆಯಲ್ಲಿ ಗೋಪಾಲಯ್ಯ
ಸಹನಾ, ಸ್ನೇಹ, ಸುಮಾ ಎಂಬ ಮೂವರು ಮಕ್ಕಳಿದ್ದಾರೆ. ಬರೀ ಹೆಣ್ಣು ಮಕ್ಕಳಾದರು, ಗಂಡು ಇಲ್ಲ ಅಂತ ಗೋಪಾಲಯ್ಯ ಪತ್ನಿ ಪುಟ್ಟಕ್ಕಳನ್ನು ಬಿಟ್ಟು ರಾಜೇಶ್ವರಿಯನ್ನು ಮದುವೆಯಾಗಿದ್ದನು. ರಾಜಿಗೆ ಪುರುಸಿ ಎನ್ನುವ ಮಗ ಹುಟ್ಟಿದ್ದಾನೆ. ಸಹನಾ, ಸ್ನೇಹ ಮದುವೆ ಆದಬಳಿಕ ಗೋಪಾಲಯ್ಯನಿಗೆ ತನ್ನ ತಪ್ಪಿನ ಅರಿವಾಯ್ತು. ಹೀಗಾಗಿ ಅವನು ಪುಟ್ಟಕ್ಕ ಮನೆಗೆ ಬಂದಿದ್ದಾನೆ.
Puttakkana Makkalu Serial: ರವಿಚಂದ್ರನ್ ಸಲಹೆಯಂತೆ ವೈರಿಗಳ ಹೆಡೆಮುರಿ ಕಟ್ಟಿದ ಕಂಠಿ
ಮತ್ತೊಂದು ಅವಕಾಶ ಕೊಟ್ಟ ಪುಟ್ಟಕ್ಕ
ಕಳೆದ ಕೆಲ ಸಮಯದಿಂದ ಪುಟ್ಟಕ್ಕ ಜೊತೆಗೆ ಗೋಪಾಲಯ್ಯ ನಿಂತಿದ್ದಾನೆ. ಸ್ನೇಹಾ, ಸುಮಾ ಮಾತ್ರ ಗೋಪಾಲಯ್ಯನನ್ನು ಅಪ್ಪಾ ಅಂತ ಕರೆದಿಲ್ಲ. ಪುಟ್ಟಕ್ಕನ ಹಿರಿಯ ಮಗಳು ಸಹನಾ ಮಾತ್ರ ತಂದೆಯನ್ನು ಅಪ್ಪಾ ಅಂತ ಕರೆದಿದ್ದಾಳೆ. ಒಟ್ಟಿನಲ್ಲಿ ಗೋಪಾಲಯ್ಯ ಮಾಡಿದ ತಪ್ಪನ್ನು ಎಲ್ಲರೂ ಕ್ಷಮಿಸಿಲ್ಲ. ಗೋಪಾಲಯ್ಯನ ತಪ್ಪನ್ನು ಪುಟ್ಟಕ್ಕ ಕ್ಷಮಿಸದೆ ಇದ್ದರೂ ಕೂಡ ಅವನಿಗೆ ಮನೆಯಲ್ಲಿ ಇರಲು ಅವಕಾಶ ಕೊಟ್ಟಿದ್ದಾಳೆ.
2ನೇ ಮದುವೆಗೆ ಗಂಡು ರೆಡಿ ಇದ್ದ; ಮಗಳ ಆ ಮಾತಿಗೆ ಸಿಂಗಲ್ ಆಗಿ ಉಳಿದ ನಟಿ ಉಮಾಶ್ರೀ, ಯಾಕೆ?
ಮುಂದೆ ಏನಾಗುವುದು?
ಈಗ ಕಲ್ಯಾಣೋತ್ಸವ ನಡೆಯುತ್ತದೆ. ಆ ಕಲ್ಯಾಣೋತ್ಸವದಲ್ಲಿ ಪುಟ್ಟಕ್ಕಳಿಗೆ ಮತ್ತೆ ತಾಳಿ ಕಟ್ಟಿ ತಾನು ಮಾಡಿದ ತಪ್ಪನ್ನು ಸರಿ ಮಾಡಬೇಕು ಅಂತ ಗೋಪಾಲಯ್ಯ ಅಂದುಕೊಂಡಿದ್ದಾನೆ, ಇದಕ್ಕೆ ಸುಮಾ ಒಪ್ಪಿಗೆ ಕೊಡ್ತಿಲ್ಲ. ಇನ್ನು ಪುಟ್ಟಕ್ಕ ಕೂಡ ರೆಡಿ ಇಲ್ಲ. ಈ ರೀತಿ ಮಾಡೋದು ಎಲ್ಲರಿಗೂ ಇಷ್ಟ ಇಲ್ಲ ಅಂತ ಗೋಪಾಲಯ್ಯನಿಗೂ ಗೊತ್ತಿದೆ. ಆದರೂ ಅವನು ತನ್ನ ಆಸೆಯನ್ನು ಎಲ್ರ ಮುಂದೆ ಹೇಳಿಕೊಂಡಿದ್ದಾನೆ. ಒಟ್ಟಿನಲ್ಲಿ ಪುಟ್ಟಕ್ಕ-ಗೋಪಾಲಯ್ಯ ಮದುವೆ ಆಗಲಿದೆ. ಇದಂತೂ ಪಕ್ಕಾ. ಗೋಪಾಲಯ್ಯ-ಪುಟ್ಟಕ್ಕ ಮರು ಮದುವೆಗೆ ರಾಜೇಶ್ವರಿ ಅಡ್ಡಗಾಲು ಹಾಕ್ತಾಳಾ? ತೊಂದರೆ ಕೊಡ್ತಾಳಾ ಅಂತ ಕಾದು ನೋಡಬೇಕಿದೆ. ಯಾವಾಗಲೂ ವಿಷ ಕಾರುವ ಪುಟ್ಟಕ್ಕ ಈ ಬಾರಿ ಕೂಡ ಏನಾದರೊಂದು ಸಮಸ್ಯೆ ಕೊಟ್ಟೇ ಕೊಡುತ್ತಾಳೆ. ಇದಂತೂ ಪಕ್ಕಾ.
ಕಥೆ ಏನು?
ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ರ್ಯಾಕ್‌ಗಳಿವೆ. ಸ್ನೇಹ-ಕಂಠಿ ಲವ್‌ಸ್ಟೋರಿ, ಮುರಳಿ-ಸಹನಾ ಲವ್ ಕಥೆ, ಸುಮಾ ಲವ್‌ಸ್ಟೋರಿ ಇದೆ. ಇದರ ಜೊತೆಗೆ ಬಂಗಾರಮ್ಮನ ಬಡ್ಡಿ ವ್ಯವಹಾರವೂ ಇದೆ. ಈ ಧಾರಾವಾಹಿ ಮೂಲಕ ಸಾಕಷ್ಟು ಕಥೆಗಳನ್ನು ಹೇಳುತ್ತ, ಸಂದೇಶವನ್ನು ಕೂಡ ಹೇಳಲಾಗಿದೆ.
ಪಾತ್ರಧಾರಿಗಳು
ಪುಟ್ಟಕ್ಕ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ, ಗೋಪಾಲಯ್ಯ ಪಾತ್ರದಲ್ಲಿ ರಮೇಶ್ ಪಂಡಿತ್, ಸಹನಾ ಪಾತ್ರದಲ್ಲಿ ಅಕ್ಷರಾ, ಸ್ನೇಹ ಪಾತ್ರದಲ್ಲಿ ಸಂಜನಾ ಬುರ್ಲಿ, ಸುಮಾ ಪಾತ್ರದಲ್ಲಿ ಶಿಲ್ಪಾ ಅವರು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.