ಡ್ರೋನ್ ಪ್ರತಾಪ್‌ ರಚಿತಾ ರಾಮ್‌ ಮೇಲೆ ಕಣ್ಣು ಹಾಕಿದ್ದಾನೆ, ನನ್ನನ್ನು ಪೆದ್ದನಾಗಿ ಮಾಡ್ಬಿಟ್ಟ: ರವಿಚಂದ್ರನ್

Published : Mar 04, 2025, 03:38 PM ISTUpdated : Mar 04, 2025, 03:43 PM IST
ಡ್ರೋನ್ ಪ್ರತಾಪ್‌ ರಚಿತಾ ರಾಮ್‌ ಮೇಲೆ ಕಣ್ಣು ಹಾಕಿದ್ದಾನೆ, ನನ್ನನ್ನು ಪೆದ್ದನಾಗಿ ಮಾಡ್ಬಿಟ್ಟ: ರವಿಚಂದ್ರನ್

ಸಾರಾಂಶ

ಡ್ರೋನ್ ಪ್ರತಾಪ್, ಬಿಗ್ ಬಾಸ್‌ನಿಂದ ಜನಪ್ರಿಯತೆ ಗಳಿಸಿದರು. ನಂತರ ಗಿಚ್ಚಿ ಗಿಲಿಗಿಲಿಯಲ್ಲಿ ಭಾಗವಹಿಸಿ, ಈಗ 'ಭರ್ಜರಿ ಬ್ಯಾಚುಲರ್ಸ್‌' ಸೀಸನ್ 2 ರಲ್ಲಿ ಸ್ಪರ್ಧಿಸುತ್ತಿದ್ದಾರೆ. ರಚಿತಾ ರಾಮ್ ಮತ್ತು ರವಿಚಂದ್ರನ್ ಬೆಂಬಲ ನೀಡುತ್ತಿದ್ದಾರೆ. ಮೊದಲ ಎಪಿಸೋಡ್‌ನಲ್ಲಿ ಹುಡುಗಿಯರನ್ನು ಇಂಪ್ರೆಸ್ ಮಾಡಿದರು. ಗಗನಾ ಅವರೊಂದಿಗೆ ಮೇಕ್‌ಓವರ್ ರೌಂಡ್‌ನಲ್ಲಿ ರೆಟ್ರೋ ಲುಕ್‌ನಲ್ಲಿ ಮಿಂಚಿದರು. ರವಿಚಂದ್ರನ್, ಪ್ರತಾಪ್ ರಚಿತಾ ರಾಮ್‌ರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಮಾಷೆ ಮಾಡಿದರು.

ಡ್ರೋನ್ ಪ್ರತಾಪ್ ಮೇಲೆ ಜನರಿಗೆ ಸಿಕ್ಕಾಪಟ್ಟೆ ನೆಗೆಟಿವ್ ಅಭಿಪ್ರಾಯವಿತ್ತು ಅದನ್ನು ಬ್ರೇಕ್ ಮಾಡಿದ್ದೇ ಬಿಗ್ ಬಾಸ್ ಸೀಸನ್ 10ರ ರಿಯಾಲಿಟಿ ಶೋ. ನಾನು ಏನೂ ತಪ್ಪು ಮಾಡಿಲ್ಲ ನಾನು ಇರುವುದೇ ಹೀಗೆ ನಾನು ಇಷ್ಟು ಕಷ್ಟ ಪಟ್ಟಿರುವೆ ಎಂದು ಪ್ರತಿಯೊಂದನ್ನು ಜನರೊಟ್ಟಿಗೆ ಹಂಚಿಕೊಂಡ ಮೇಲೆ ನಿಜಕ್ಕೂ ಅಭಿಪ್ರಾಯ ಪಾಸಿಟಿವ್ ಆಗಿ ಬದಲಾಗಿದೆ. ಅಲ್ಲದೆ ತಂದೆ ತಾಯಿ ಪ್ರೀತಿ ಇಲ್ಲದೆ ಕಷ್ಟ ಪಡುತ್ತಿದ್ದ ಡ್ರೋನ್ ಪ್ರತಾಪ್‌ಗೆ ಬಿಗ್ ಬಿ ಅವರನ್ನು ಕರೆಸಿದರು. ಮೂರು ತಿಂಗಳಲ್ಲಿ ಕರ್ನಾಟಕದ ಮಗನಾಗಿಬಿಟ್ಟ ಪ್ರತಾಪ್.

ಬಿಗ್ ಬಾಸ್ ಮುಗಿದ ಮೇಲೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು. ಹಂತ ಹಂತವಾಗಿ ರಿಯಾಲಿಟಿ ಶೋಗಳನ್ನು ಒಪ್ಪಿಕೊಂಡು ಜನರ ಮುಂದೆ ಬರುತ್ತಿದ್ದಂತೆ ಪ್ರತಾಪ್ ಜನರಿಗೆ ಇಷ್ಟವಾಗಲು ಶುರುವಾಗಿಬಿಟ್ಟರು. ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚುಲರ್ಸ್‌ ಸೀಸನ್ 2ರಲ್ಲಿ ಪ್ರತಾಪ್ ಸ್ಪರ್ಧಿಸುತ್ತಿದ್ದಾರೆ. ತೀರ್ಪುಗಾರರಾದ ರಚಿತಾ ರಾಮ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ ಓಪನಿಂಗ್ ಎಪಿಸೋಡ್‌ನಲ್ಲಿ ಪ್ರತಾಪ್‌ ಸೆಟ್‌ನಲ್ಲಿದ್ದ ಹುಡುಗಿಯರನ್ನು ಇಂಪ್ರೆಸ್‌ ಮಾಡಿಬಿಟ್ಟಿದ್ದಾರೆ. ಅದನ್ನು ನೋಡಿ ಅಲ್ಲಿದ್ದ ಹುಡುಗರು ಹೊಟ್ಟೆ ಉರಿ ಪಟ್ಟುಕೊಂಡಿದ್ದಾರೆ. 

ತರುಣ್‌ ಸುಧೀರ್‌ ಜೊತೆ ದೇವಸ್ಥಾನ ಸುತ್ತುತ್ತಿರುವ ಸೋನಲ್; ಕತ್ತಲಿರುವ ತಾಳಿ ನೋಡಿ ಎಲ್ಲರೂ ಶಾಕ್

ಸದಾ ಸೂಟ್‌ನಲ್ಲಿ ಮಿಂಚುವ ಡ್ರೋನ್ ಪ್ರತಾಪ್‌ಗೆ ಜೋಡಿಯಾಗಿ ಬಂದಿದ್ದು ಮಹಾನಟಿ ಗಗನಾ. ಫಸ್ಟ್‌ ರೌಂಡ್‌ನಲ್ಲಿ ಹುಡುಗಿರಗೆ ಮೇಕ್‌ಓವರ್ ನೀಡಬೇಕಿತ್ತು ಹೀಗಾಗಿ ಪ್ರತಾಪ್ ಸಂಪೂರ್ಣ ಲುಕ್ ಬದಲಾಯಿಸಿಬಿಟ್ಟಿದ್ದಾರೆ ಗಗನಾ. ರೆಟ್ರೋ ಔಟ್‌ಫಿಟ್‌ನಲ್ಲಿ ಪ್ರತಾಪ್ ಎಂಟ್ರಿ ಕೊಡುತ್ತಿದ್ದಂತೆ ಬೇಬಿ ಗರ್ಲ್ಸ್‌ ಕೂಲ್ ಕೂಲ್‌ ಪದಗಳನ್ನು ಬಳಸಿದ್ದಾರೆ. ಅಲ್ಲದೆ ಡ್ಯಾನ್ಸ್ ಮೂಲಕ ರಚಿತಾ ರಾಮ್‌ನ ಇಂಪ್ರೆಸ್ ಮಾಡಿದ್ದಾರೆ.'ಪ್ರತಾಪ್ ಒಟ್ನಲ್ಲಿ ನಿಂಗೆ ಒಂದೇ ಜಡ್ಜ್‌ ಕಾಣಿಸುತ್ತಿರುವುದು ಅಂತ ನನಗೆ ಇಗ ಗೊತ್ತಾಗೋಯ್ತು. ನಿನಗೆ ನಾನು ಹೇಳೋದು ಕಿವಿಗೂ ಹೋಗುವುದಿಲ್ಲ. ಮನಸ್ಸಿಗೂ ಹೋಗಿಲ್ಲ. ನಿನ್ನ ಕಣ್ಣು ರಚ್ಚು ಮೇಲೆ ಬಿದ್ದುಬಿಟ್ಟಿದೆ. ನಾನಿಲ್ಲಿ ಏನಕ್ಕೆ ಕೂತಿದ್ದೀನಿ? ನೀನು ಕಣಿದಿದ್ದು ಹಾಡಿದ್ದು ಎಲ್ಲಾ ರಚ್ಚುಗಾಗಿ ಅಲ್ವಾ? ಎಂದು ರವಿಚಂದ್ರನ್ ಹೇಳಿದ್ದಾರೆ. 'ಇಲ್ಲ ಸರ್ ನೀವು ಲೆಜೆಂಡ್' ಎಂದು ಪ್ರತಾಪ್ ಹೇಳಿದರೂ ಸಹ 'ಅಯ್ಯೋ ನನ್ನ ಮಗನೇ ನನ್ನನ್ನು ಪೆದ್ದನಾಗಿ ಮಾಡಿಬಿಟ್ಟಲ್ಲ ಈಗ' ಎಂದು ರವಿ ಸರ್ ಹೇಳಿದ್ದಾರೆ.

ಮನೆಯಲ್ಲಿ ತಂದೆಯ ಆತ್ಮ ಓಡಾಟಕ್ಕೆ ಭಯಪಟ್ಟ ನಟಿ ಅದ್ವಿತಿ-ಅಶ್ವಿತಿ; ನಾಯಿ ಬಳಿ ಪೌಡರ್ ವಾಸನೆ ಬಂದಿದ್ದು ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!