ಇಂಥ ಮಗನಿಗೆ ಅಮ್ಮ ಕೈಮುಗಿಬೇಕಾ? ಗಂಡಿಲ್ಲದೇ ಹೆಣ್ಣಿಗೆ ಬಾಳಲು ಆಗೋದಿಲ್ವಾ? ಯಾವ ಕಾಲದಲ್ಲಿದ್ದೀರಾ ಸ್ವಾಮಿ?

By Suchethana D  |  First Published May 31, 2024, 3:52 PM IST

ಭಾಗ್ಯಳಿಗೆ ಡಿವೋರ್ಸ್ ಕೊಡುವಂತೆ ಮತ್ತೆ ತಾಂಡವ್‌ ದುಂಬಾಲು  ಬಿದ್ದರೆ ಅಮ್ಮ ಕುಸುಮಾ ಮಗನಲ್ಲಿ ಬೇಡಿಕೊಳ್ಳುತ್ತಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ಧಾರೆ. ಅವರು ಹೇಳ್ತಿರೋದೇನು?
 


 ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಹೋಟೆಲ್‌ನಲ್ಲಿ ಕೆಲಸ ಸಿಕ್ಕಿತು. ಆದರೆ ಯಾರದ್ದೋ ಹೆಸರಿನಲ್ಲಿ ಭಾಗ್ಯಳಿಗೆ ಕೆಲಸ ಸಿಕ್ಕಿತ್ತು. ಅದು ಅವಳಿಗೆ ಗೊತ್ತಿರಲಿಲ್ಲ. ಕೊನೆಗೆ ಅಲ್ಲಿ ಕೆಲಸ ಕಳೆದುಕೊಂಡಿದ್ದಾಳೆ, ಮನೆಗೆ ವಾಪಸಾಗಿದ್ದಾಳೆ. ಅದೇ ಇನ್ನೊಂದೆಡೆ ಅತ್ತೆ ಕುಸುಮಾ ಸ್ಥಿತಿ ಕೂಡ ಇದೇ ರೀತಿಯಾಗಿದೆ. ಹೋಟೆಲ್‌ನಲ್ಲಿ ಜಗಳವಾಡಿಕೊಂಡು ಮನೆಗೆ ವಾಪಸಾಗಿದ್ದಾಳೆ.

ಇದರ ನಡುವೆಯೇ ಮತ್ತು ಪತಿ-ಪತ್ನಿ ನಡುವೆ ಡಿವೋರ್ಸ್‌ ಚರ್ಚೆ ಶುರುವಾಗಿದೆ. ಇದಾಗಲೇ ಹಲವು ಬಾರಿ ತಾಂಡವ್‌ ಹೇಳಿರುವಂತೆ ಈಗ ಮಕ್ಕಳ ಎದುರಿಗೇ ವಿಚ್ಛೇದನ ಬಗ್ಗೆ ಮಾತನಾಡಿದ್ದಾನೆ. ಇದನ್ನು ಕೇಳಿ ಮಕ್ಕಳಿಗೆ ಶಾಕ್‌ ಆಗಿದೆ. ಭಾಗ್ಯ ಮಕ್ಕಳನ್ನು ಸಾಂತ್ವನ ಮಾಡುತ್ತಿದ್ದಾಳೆ. ಆದರೆ ಸ್ವಲ್ಪವೂ ಅಳುಕು ಇಲ್ಲದೇ ಡಿವೋರ್ಸ್‌ ಬೇಕೇ ಬೇಕು ಅಂತಿದ್ದಾನೆ ತಾಂಡವ್‌.

Tap to resize

Latest Videos

ಪಕ್ಕದಲ್ಲೇ ಇರ್ತಾಳೆ ಸಿಗಲ್ಲ.. ಒಂದೇ ಜಾಗಕ್ಕೆ ಹೋಗ್ತಾರೆ ಕಾಣಲ್ಲ... ನೆಟ್ಟಿಗರಾದ್ರು ನಿರ್ದೇಶಕರು!

ಇಲ್ಲಿಯವರೆಗೆ ರೌದ್ರಾವತಾರ ತೋರುತ್ತಿದ್ದ ಅಮ್ಮ ಕುಸುಮಾ, ಮಗನ ಎದುರಿಗೆ ಇಲಿಮರಿಯಂತಾಗಿದ್ದಾಳೆ. ನೀನು ಹೇಳಿದಂತೆ ಕೇಳುತ್ತೇನೆ. ಏನು ಬೇಕಾದರೂ ಮಾಡುತ್ತೇನೆ. ಡಿವೋರ್ಸ್ ಬಗ್ಗೆ ಮಾತ್ರ ಹೇಳಬೇಡ ಎಂದು ಮಗನ ಎದುರೇ ಕೈಮುಗಿದು ಬೇಡಿಕೊಳ್ಳುತ್ತಾಳೆ. ಇದ್ಯಾಕೋ ಅತಿರೇಕದ ಪರಮಾವಧಿ ಎನ್ನುತ್ತಿದ್ದಾರೆ ವೀಕ್ಷಕರು. ಭಾಗ್ಯಲಕ್ಷ್ಮಿ ಸೀರಿಯಲ್‌ನ ಈ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡುತ್ತಿದ್ದಂತೆಯೇ, ಭಾರಿ ಕಮೆಂಟ್‌ಗಳ ಸುರಿಮಳೆಯಾಗಿದೆ.

ಈ ಭಾಗ್ಯಳ ಗೋಳು ನೋಡಿ ನೋಡಿ ಸಾಕಾಗಿದೆ. ಅದೆಷ್ಟು ಅಂತ ಹೆಣ್ಣನ್ನು ಅಸಾಯಕಳ ರೀತಿಯಲ್ಲಿ ತೋರಿಸುವಿರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇಂಥ ದರಿದ್ರ ಮಗನ ಎದುರು ತಾಯಿ ಬೇಡಿಕೊಳ್ಳುವುದು ಎಂದರೆ ಏನರ್ಥ? ಗಂಡು ಇಲ್ಲದಿದ್ದರೆ ಮನೆ ನಡೆಯುವುದಿಲ್ಲ ಎಂದೋ, ಅಥವಾ ಗಂಡ ಇಲ್ಲದಿದ್ದರೆ ಹೆಣ್ಣು ಜೀವನ ನಡೆಸಲು ಸಾಧ್ಯವಿಲ್ಲವೆಂದೋ.? ಏನನ್ನು ತೋರಿಸುವ ಪ್ರಯತ್ನ ನಡೆದಿದೆ. ಅದೂ ಈ ಕಾಲದಲ್ಲಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಹೆಣ್ಣಿನಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಬಿಟ್ಟು ಗಂಡನೇ ಸರ್ವಸ್ವ, ಮನೆಗೆ ಮಗನೇ ಭೂಷಣ ಎಂದು ತೋರಿಸುವುದು ಎಷ್ಟು ಸರಿ ಎನ್ನುವುದು ವೀಕ್ಷಕ ಪ್ರಶ್ನೆ. ಮಕ್ಕಳ ಸಲುವಾಗಿ ಭಾಗ್ಯ ಗಂಡನನ್ನು ಸಹಿಸಿಕೊಳ್ಳುವ ಅಗತ್ಯವೇ ಇಲ್ಲ. ಮಕ್ಕಳಿಗೂ ಈಗ ಅಪ್ಪ ಏನು ಎಂದು ತಿಳಿದಿದೆ. ಅಷ್ಟಾದ ಮೇಲೆ ಗಂಡೇ ಸರ್ವಸ್ವ ಎಂದು ತೋರಿಸುವ ಮೂಲಕ ಸಮಾಜಕ್ಕೆ ಯಾವ ಸಂದೇಶ ಕೊಡಲು ಬಯಸಿರುವಿರಿ ಎಂದು ಗರಂ ಆಗಿದ್ದಾರೆ ವೀಕ್ಷಕರು. 
 

ಗಿಡ ಬೆಳಿಯದೇ ಇರುವ ಕಾಡು ಯಾವುದು ಎಂದು ಪ್ರಶ್ನಿಸಿ ಟ್ರೋಲಾದ ಸೀತಾರಾಮ ಸೀತಾ!

click me!