ಹೊಸ ಸೈಟ್ ಖರೀದಿಸಿದ ಮಧು- ನಿಖಿಲ್. ಯುಟ್ಯೂಬ್‌ನಿಂದ ಬರುವ ಹಣದಿಂದ ಇಷ್ಟೆಲ್ಲಾ ಸಾಧ್ಯನಾ ಅಂದ್ರು ನೆಟ್ಟಿಗರು....
ಟಿಕ್‌ಟಾಕ್, ರೀಲ್ಸ್, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ಮಿಂಚುತ್ತಿರುವ ಮಧು ಗೌಡ ಮತ್ತು ನಿಶಾ ನಿಖಿಲ್ ಬಹುತೇಕ ಕನ್ನಡಿಗರಿಗೆ ಗೊತ್ತಿದ್ದಾರೆ. ವಿಭಿನ್ನವಾಗಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ವೀಕ್ಷಕರನ್ನು ಮನೋರಂಜಿಸುತ್ತಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಮಧು ಮತ್ತು ನಿಖಿಲ್ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದಾದ ಮೇಲೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಬರ್ತಿದೆ ಎಂದು ಭಾವುಕರಾಗಿದ್ದರು. ಈಗ ಮತ್ತೊಂದು ಗುಡ್ ನ್ಯೂಸ್ ಮೂಲಕ ಮುಂದೆ ಬಂದಿದ್ದಾರೆ.
ಹೌದು! ಮಧು ಗೌಡ ಮತ್ತು ನಿಖಿಲ್ ರವೀಂದ್ರ ಬೆಂಗಳೂರಿನ ಕುಬೇರನ ಮೂಲೆ ಆಗಿರುವ ರಾಜ ರಾಜೇಶ್ವರಿ ನಗರದ ಸಮೀಪದಲ್ಲಿ ಇರುವ ಒಂದು ಲೇಔಟ್‌ನಲ್ಲಿ ಜಾಗ ಖರೀದಿ ಮಾಡಿದ್ದಾರೆ. ಹಲವು ದಿನಗಳಿಂದ ಈ ಕೆಲಸ ನಡೆಯುತ್ತಿತ್ತು ಮೊನ್ನೆ ರಿಜಿಸ್ಟ್ರೇಶನ್ ಮಾಡಿಸಿದ್ದಾರೆ. ವ್ಲಾಗ್ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡರು.
ನಿಶ್ಚಿತಾರ್ಥ ಆದ್ಮೇಲೆ ಮಾತನಾಡೋಕೆ ಭಯ ಶುರುವಾಗಿದೆ; ಕಣ್ಣೀರಿಟ್ಟ ಯುಟ್ಯೂಬರ್ ಮಧು- ನಿಶಾ!
'ರಾಜರಾಜೇಶ್ವರಿ ನಗರದ ಹತ್ತಿರದಲ್ಲಿ ಇರುವ ಲೇಔಟ್‌ನಲ್ಲಿ ಜಾಗ ಖರೀದಿ ಮಾಡಿದ್ದೀವಿ ಹೀಗಾಗಿ ಆರ್‌ಆರ್ ನಗರ ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ಇಂದು ಕೆಲಸವಿತ್ತು. ತುಂಬಾ ದಿನಗಳಿಂದ ಈ ಕೆಲಸಗಳು ನಡೆಯುತ್ತಿತ್ತು, ಸ್ವಲ್ಪ ದುಡ್ಡು ಕೊಟ್ಟು ರಿಜಿಸ್ಟರ್ ಮಾಡಿಸಿತ್ತು. ಮೊದಲು ನಾನು ಅಣ್ಣ ಪ್ಲ್ಯಾನ್ ಮಾಡಿದ್ದು ಅದು ಆಗದ ಕಾರಣ ನಾನು ನಿಖಿಲ್ ಖರೀದಿ ಮಾಡಿದ್ದು. ನಿಮ್ಮ ಪ್ರೀತಿಯಿಂದ ಖರೀದಿ ಮಾಡಲು ಸಾಧ್ಯವಾಗಿತ್ತು' ಎಂದು ಮಧು ಮಾತನಾಡಿದ್ದಾರೆ. 'ಈಗ ಒಂದು ಖರೀದಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಒಂದು ಎರಡು ಆಗಲಿ ಎರಡು ಮೂರು ಆಗಲಿ ಮೂರು ನಾಲ್ಕು ಆಗಲಿ ಚೆನ್ನಾಗಿ ಬೆಳೆಯಬೇಕು ನೀವು' ಎಂದು ಮಧು ಸಹೋದರ ಮಧನ್ ವಿಶ್ ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ಮಧು ಮತ್ತು ನಿಖಿಲ್ ಮದುವೆ ಸಮಾರಂಭ ಆರಂಭವಾಗಲಿದೆ. ಮದುವೆ ಅಂದ್ಮೇಲೆ ಖರ್ಚು ಜಾಸ್ತಿ ಇರುತ್ತದೆ ಹೀಗಿರುವಾಗ ಜಾಗ ಖರೀದಿ ಮಾಡಿದ್ದೀರಿ ದುಡ್ಡು ಎಲ್ಲಿಂದ ಬರುತ್ತೆ? ಹೇಗ್ ಬರುತ್ತೆ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.