ಲಕ್ಷ್ಮಿ ಬಾರಮ್ಮ ಸೀರಿಯಲ್ ಅಭಿಮಾನಿಗಳ ಎದೆಬಡಿತ ಮತ್ತಷ್ಟು ಹೆಚ್ಚಾಗಿದೆ. ಇಷ್ಟು ದಿನ ಕಾವೇರಿ ಕುತಂತ್ರ ನೋಡ್ತಿದ್ದ ಅಭಿಮಾನಿಗಳಿಗೆ ಈಗ ಕಾವೇರಿ ಬೆಚ್ಚಿಬೀಳೋದನ್ನು ನೋಡುವ ಅವಕಾಶ ಸಿಕ್ಕಿದೆ. ಲಕ್ಷ್ಮಿ ಆಕ್ಟಿಂಗ್, ಕೀರ್ತಿ ದೆವ್ವ ಎಲ್ಲವೂ ಹೊಸ ನಿರೀಕ್ಷೆ ಹುಟ್ಟಿಸಿದೆ.
ಕಲರ್ಸ್ ಕನ್ನಡದ ಲಕ್ಷ್ಮಿ ಬಾರಮ್ಮ (Colors Kannada Lakshmi Baramma) ಸೀರಿಯಲ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೀರ್ತಿ (Kirthi) ಸತ್ತ ಮೇಲೆ ಆಕೆ ಪಾತ್ರವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳೋದಾಗಿ ಹೇಳಿದ್ರು. ಆದ್ರೀಕ ಕೀರ್ತಿ ಅಭಿಮಾನಿಗಳಿಗೆ ಮತ್ತೆ ಕೀರ್ತಿ ನೋಡೋ ಅವಕಾಶ ಸಿಗ್ತಿದೆ. ಅದು ಲಕ್ಷ್ಮಿ ದೇಹದಲ್ಲಿ. ಯಸ್, ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ದೆವ್ವ (devil) ಲಕ್ಷ್ಮಿ ಮೇಲೆ ಬಂದಂತಿದೆ. ಈಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಲಕ್ಷ್ಮಿ, ಕೀರ್ತಿಯ ದೆವ್ವದಂತೆ ಕಾವೇರಿಗೆ ಕಾಣ್ತಿದ್ದಾಳೆ.
ಕಲರ್ಸ್ ಕನ್ನಡ, ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಹೊಸ ಪ್ರೋಮೋ ರಿಲೀಸ್ ಮಾಡಿದೆ. ಅದ್ರಲ್ಲಿ ತಣ್ಣನೆಯ ಗಾಳಿ ಬೀಸುತ್ತೆ. ನಿದ್ರೆಯಲ್ಲಿದ್ದ ಲಕ್ಷ್ಮಿ ನಿಧಾನವಾಗಿ ಎದ್ದು ಕುಳಿತುಕೊಳ್ತಾಳೆ. ನಂತ್ರ ಮನೆಯಿಂದ ಹೊರಗೆ ಹೋಗಲು ಶುರು ಮಾಡ್ತಾಳೆ. ಆಕೆಯನ್ನು ನೋಡುವ ಕಾವೇರಿ ಭಯಗೊಳ್ತಾಳೆ. ಸ್ವಲ್ಪ ದೂರ ಹೋಗಿ ಲಕ್ಷ್ಮಿ ತಿರುಗಿ ನೋಡಿದಾಗ, ಕೀರ್ತಿಯ ಭಯಾನಕ ಮುಖ ಕಾವೇರಿಗೆ ಕಾಣಿಸುತ್ತೆ. ಭಯದಲ್ಲಿ ಕಾವೇರಿ ಕಿರುಚಿಕೊಳ್ತಾಳೆ. ನಂತ್ರ ಲಕ್ಷ್ಮಿ ಹಾಗೂ ಕೀರ್ತಿ ಒಂದೇ ಡ್ರೆಸ್ ನಲ್ಲಿ ಡಾನ್ಸ್ ಮಾಡ್ತಿದ್ದು, ಇದು ಲಕ್ಷ್ಮಿನಾ ಇಲ್ಲ ಕೀರ್ತಿನಾ ಎನ್ನುವ ಪ್ರಶ್ನೆ ಮೂಡುವಂತೆ ಪ್ರೋಮೋ ಸಿದ್ಧಪಡಿಸಲಾಗಿದೆ.
ಈ ಸೀಕ್ರೆಟ್ ಗೊತ್ತಾ ನಿಮ್ಗೆ..? ಡಾ ರಾಜ್‌ಕುಮಾರ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ...!
ಈ ಪ್ರೋಮೋ ನೋಡಿದ ಅಭಿಮಾನಿಗಳು, ಇದೆಲ್ಲ ಲಕ್ಷ್ಮಿ ನಾಟಕ ಎನ್ನುತ್ತಿದ್ದಾರೆ. ಕೀರ್ತಿ ಹೇಗೆ ಸತ್ತಳು ಎನ್ನುವ ದೊಡ್ಡ ಪ್ರಶ್ನೆ ಲಕ್ಷ್ಮಿ ಮನಸ್ಸಿನಲ್ಲಿದೆ. ಅದನ್ನು ಕಾವೇರಿ ಬಾಯಿಯಿಂದ ಹೊರಗೆ ಹಾಕುವ ಪ್ರಯತ್ನದಲ್ಲಿ ಲಕ್ಷ್ಮಿ ಇದ್ದಾಳೆ. ಹಾಗಾಗಿಯೇ ಲಕ್ಷ್ಮಿ ಈ ನಾಟಕ ಮಾಡ್ತಿದ್ದಾಳೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಕೀರ್ತಿ ಇಲ್ಲದೆ ಈ ಧಾರಾವಾಹಿನೇ ಇಲ್ಲ ಅಂತ ಕೆಲ ಅಭಿಮಾನಿಗಳು ಹೇಳಿದ್ದಾರೆ. ಕೀರ್ತಿ ಸಹಾಯದಿಂದ್ಲೇ ಲಕ್ಷ್ಮಿ ಕಾವೇರಿ ಬಾಯಿ ಬಿಡಿಸ್ತಾಳೆ ಎಂಬುದು ಅಭಿಮಾನಿಗಳ ನಿರೀಕ್ಷೆ. ಲಕ್ಷ್ಮಿ ಹಾಗೂ ಕೀರ್ತಿ ಡಾನ್ಸ್ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಹೊಸ ಟ್ವಿಸ್ಟ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಅನೇಕ ವೀಕ್ಷಕರು, ಇದನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ಕಾವೇರಿ ಬಣ್ಣ ಬಯಲು ಮಾಡಲು ಲಕ್ಷ್ಮಿ ಒಳ್ಳೆ ಕೆಲಸ ಮಾಡಿದ್ದಾಳೆ ಎಂದು ವೀಕ್ಷಕರು ಹೇಳಿದ್ದಾಳೆ. ವೈಷ್ಣವ್, ಕೀರ್ತಿಗೆ ಪ್ರಪೋಸ್ ಮಾಡಿದ್ದ ಡ್ರೆಸ್ ನಲ್ಲಿಯೇ ಕೀರ್ತಿ ಹಾಗೂ ಲಕ್ಷ್ಮಿ ಡಾನ್ಸ್ ಮಾಡ್ತಿದ್ದು, ಅದೇ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ. ಇದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಲಕ್ಷ್ಮಿ ನಾಟಕವಾ ಅಥವಾ ನಿಜವಾಗ್ಲೂ ಕೀರ್ತಿ ದೆವ್ವವಾಗಿ ಬಂದಿದ್ದಾಳಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಲು ಅಭಿಮಾನಿಗಳು ಇನ್ನಷ್ಟು ದಿನ ಕಾಯ್ಲೇಬೇಕು.
ಯಾಕೆಂದ್ರೆ ಕಾವೇರಿ ಗಟ್ಟಿಗಿತ್ತಿ. ಒಂದೇ ಹೊಡೆತಕ್ಕೆ ಆಕೆ ಯಾವುದನ್ನೂ ಬಾಯಿಬಿಡೋಳು ಅಲ್ಲ. ಕೀರ್ತಿಯನ್ನು ಕಾಳ ಮಾಡಿಕೊಂಡು ಆಡ್ಸಿದ್ದಲ್ಲದೆ ಆಕೆಯನ್ನು ಕೊಂದಿದ್ದಾಳೆ. ಇಷ್ಟಾದ್ರೂ ಏನೂ ಆಗೇ ಇಲ್ಲ, ಇದ್ರಿಂದ ಲಕ್ಷ್ಮಿ ಮನಸ್ಸು ಹಾಳಾಗಿಲ್ಲ ಅಂತ ತಾಯಿಗೆ ಬುದ್ಧಿ ಹೇಳ್ತಿದ್ದಾಳೆ. ಅವಳ ಬಾಯಿಂದ ಸತ್ಯ ಹೊರಗೆ ಬರಬೇಕು ಅಂದ್ರೆ ಲಕ್ಷ್ಮಿ ಪ್ರಯತ್ನ ದುಪ್ಪಟ್ಟು ಇರ್ಬೇಕು. ಲಕ್ಷ್ಮಿ ಇದೇ ರೀತಿ ಆಕ್ಟ್ ಮಾಡಿದ್ರೆ ಮೆಚ್ಚಿನ ನಾಯಕಿ ಪಟ್ಟ ಗ್ಯಾರಂಟಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ತುಪ್ಪದ ಬೆಡಗಿ ರಾಗಿಣಿಗೆ ಮದ್ವೆ ಯಾವಾಗ? ಓಪನ್ನಾಗಿ ಮನದಾಳದ ಮಾತು ತೆರೆದಿಟ್ಟ ನಟಿ ಹೇಳಿದ್ದೇನು ನೋಡಿ...
ಇತ್ತೀಚಿಗೆ ಕೀರ್ತಿಯನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದ ಲಕ್ಷ್ಮಿಗೆ ದೊಡ್ಡ ಆಘಾತವಾಗಿದೆ. ಸ್ಮಶಾನದಲ್ಲಿ ಕೀರ್ತಿ ಅಮ್ಮ, ಕಾವೇರಿ ಮೇಲೆ ಗಂಭೀರ ಆರೋಪ ಮಾಡಿರುವುದು ಆಕೆಯ ತಲೆಯಲ್ಲಿ ನಾನಾ ಪ್ರಶ್ನೆ ಹುಟ್ಟುಹಾಕಿದೆ. ಅದಕ್ಕೆಲ್ಲ ಉತ್ತರ ಕಂಡುಕೊಳ್ಳೋದು ಈಗ ಲಕ್ಷ್ಮಿ ಗುರಿಯಾಗಿದ್ದು, ಕೀರ್ತಿ ಸತ್ತಾಗ ಹನಿ ಕಣ್ಣೀರು ಹಾಕದ ಲಕ್ಷ್ಮಿ ಅದ್ಭುತವಾಗಿ ನಟಿಸಿದ್ದಾಳೆ.