
ನೋಡಿ ಈ ಮದುವೆ ಅನ್ನೋದು ಎಲ್ಲೊ ಇರೋ ಇಬರನ್ನ ಒಂದಾಗೋತರ ಮಾಡೋ ಒಂದು bonding ಅಂತ ಹೇಳ್ತಾರೆ. ಆದರೆ ಅದು ನನ್ನ ಪ್ರಕಾರ ಸುಳ್ಳು. Actually ಈ ಮದುವೆ ಅನ್ನೋದು ಇದೆಯಲ್ಲ ಅದು ನಮಗೋಸ್ಕರ ಅಂತ ಹುಟ್ಟಿರೋರನ್ನ ನಮ್ಮ ಎದುರಿಗೆ ತಂದು ನಿಲ್ಲಿಸಿಬಿಡುತ್ತೆ. ಹಾಗೆ ಹೇಳಬೇಕು ಅಂದ್ರೆ ನಾವಿಬ್ಬರು ಹುಟ್ಟಿದ ತಕ್ಷಣ ನಮ್ಮ ಪ್ರೀತಿ ಕೂಡ ಹುಟ್ಟಿತು ಅಂತಾನೇ ಹೇಳಬಹುದು. ನಮ್ಮ life ige lifetime validity ಇದೆಯೋ ಇಲ್ವೋ ಗೊತ್ತಿಲ್ಲಾ ? ಆದರೇ ನಮ್ಮ ಪ್ರೀತಿಗೆ ಖಂಡಿತವಾಗಿಯೂ ಇದೆ.ಯಾಕೆ ಅಂದ್ರೆ ನಮ್ಮ ಪ್ರೀತಿನೇ ಅಂಥದ್ದು. ನನ್ನ ಉಸಿರಲ್ಲಿ ನಿಮ್ಮ ಹೆಸರು, ನಿಮ್ಮ ಉಸಿರಲ್ಲಿ ನನ್ನ ಹೆಸರು ಒಳ್ಳೆ ಪರ್ಮನೆಂಟ್ tattoo ತರ ಸೇರಿಕೊಂಡಿದೆ ಕಂಡ್ರಿ. ನೋಡಿ ಒಂದು ವೇಳೆ ನಮ್ಮ ಉಸಿರು ನಿಂತಿ ಹೋದ್ರುವೆ, ಆ ಹೆಸರು ಮಾತ್ರ ಹಾಗೆ ಇರತ್ತೆ...
- ಇದು ಅಮೃತಧಾರೆ ಸೀರಿಯಲ್ ಪಾರ್ಥನ ಮಾತು. ಗೌತಮ್ ತಮ್ಮ ಪಾರ್ಥ ಮತ್ತು ಭೂಮಿಕಾ ತಂಗಿ ಅಪೇಕ್ಷಾರ ಮದುವೆ ನಡೆದಿದೆ. ಇದೊಂದು ರೀತಿಯಲ್ಲಿ ಕುತಂತ್ರದಿಂದ ನಡೆದಿರುವ ಮದುವೆ. ಪಾರ್ಥ ಮತ್ತು ಅಪೇಕ್ಷಾ ಲವ್ ಮಾಡಿ ಮದ್ವೆಯಾಗಿದ್ರೂ, ಭೂಮಿಕಾ ಮೇಲಿನ ಸೇಡಿಗೆ ಈ ಮದುವೆಯನ್ನು ಗಾಳವಾಗಿ ಬಳಸಿಕೊಳ್ತಿದ್ದಾಳೆ ವಿಲನ್ ಅತ್ತೆ ಶಕುಂತಲಾ. ಆದರೆ ಇದು ಸದ್ಯ ಯಾರಿಗೂ ತಿಳಿಯದ ವಿಷಯ. ಅಷ್ಟಕ್ಕೂ, ಅಪೇಕ್ಷಾ ಮತ್ತು ಪಾರ್ಥ ಅವರ ಮದುವೆ ಹೇಗಾದರೂ ನಿಲ್ಲಿಸಬೇಕು ಎಂದು ವಿಲನ್ ಅತ್ತೆ ಶಕುಂತಲಾ ದೇವಿಯ ಮಾತಿಗೆ ಕಟ್ಟುಬಿದ್ದ ಭೂಮಿಕಾ, ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಬುದ್ಧಿವಂತೆ ಆಗಿದ್ದ ಭೂಮಿಕಾ, ಈ ಒಂದು ವಿಷಯದಲ್ಲಿ ಅತ್ತೆಯ ಬಲೆಯೊಳಕ್ಕೆ ಸಿಲುಕಿಬಿಟ್ಟಳು. ಈಗ ಇದನ್ನೇ ಮುಂದು ಮಾಡಿಕೊಂಡು ಅತ್ತೆ ಅಪೇಕ್ಷಾಳ ತಲೆಯಲ್ಲಿ ವಿಷ ಬೀಜ ಬಿತ್ತಿದ್ದಾಳೆ. ತನ್ನ ಅಕ್ಕ ಹೇಗೆ ಎಂದು ಹುಟ್ಟಿನಿಂದಲೂ ನೋಡಿಕೊಂಡು ಬಂದಿದ್ದ ಅಪೇಕ್ಷಾಗೆ ಈಗ ಅತ್ತೆಯ ಮಾತೇ ಪ್ರಿಯ ಆಗಿಬಿಟ್ಟಿದೆ. ಅಕ್ಕನ ಮೇಲೆ ತಿರುಗಿ ಬೀಳುತ್ತಿದ್ದಾಳೆ.
'ಕರಿಮಣಿ'ಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ- ಮುಂದಿನ ಮಾಲೀಕ ಯಾರಮ್ಮಾ ಕೇಳ್ತಿದ್ದಾರೆ ನೆಟ್ಟಿಗರು!
ಒಟ್ಟಿನಲ್ಲಿ, ಕುತಂತ್ರ ತಿಳಿಯಲು ಇನ್ನೆಷ್ಟು ಬೇಕೋ ತಿಳಿಯದು. ಆದರೆ ಪಾರ್ಥ ಮತ್ತು ಅಪ್ಪಿ ಅಂತೂ ಮದುವೆಯ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರೀತಿ, ಮದುವೆಯ ಕುರಿತು ಪಾರ್ಥ ಹೇಳಿರುವ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಥರಹೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಹಲವರು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭೇಷ್ ಭೇಷ್ ಎನ್ನುತ್ತಿದ್ದಾರೆ.
ಅಂದಹಾಗೆ ಪಾರ್ಥ ಅವರ ನಿಜವಾದ ಹೆಸರು ಕರಣ್. ಈ ಹಿಂದೆ ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿದ್ದಂತಹ ಅರಸಿ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟವರು ಕರಣ್. ಈ ಧಾರಾವಾಹಿಯಲ್ಲಿ ಇವರು ಸಿದ್ಧಾಂತ್ ಪಾತ್ರದಲ್ಲಿ ಮಿಂಚಿದ್ದರು. ಇದೇ ಧಾರವಾಹಿ ಮೂಲಕವೇ ರಚಿತಾರಾಮ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಕರಣ್ ಅವರು ಸದ್ಯ ಅಮೃತಧಾರೆ ಸಿರೀಯಲ್ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ದೊಡ್ಡ ಮಟ್ಟದ ಯಶಸ್ಸು ಗಳಿಸುತ್ತಿರುವ ಈ ಧಾರವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಜೋಡಿ ಕಿರುತೆರೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.