ಸೀತಾರಾಮ ಸೀರಿಯಲ್ ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಷೋನ ಶೂಟಿಂಗ್ ಸೆಟ್ನಲ್ಲಿ ಏನೆಲ್ಲಾ ಆಯ್ತು ನೋಡಿ. ವಿಡಿಯೋ ವೈರಲ್ ಆಗಿದೆ...
ಇಂದು ಸೀರಿಯಲ್ಗಳು ಎಂದರೆ ಅವು ಕೇವಲ ಸೀರಿಯಲ್ಗಳಾಗಿರಲ್ಲ. ಅದೇ ಇನ್ನೊಂದೆಡೆ ರಿಯಾಲಿಟಿ ಷೋಗಳು ಎಂದರೆ ಮುಂಚಿನ ಹಾಗೂ ಇಲ್ಲ. ಸೀರಿಯಲ್ಗಳು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿದ್ದರೆ, ರಿಯಾಲಿಟಿ ಷೋಗಳಲ್ಲಿ ವಿಭಿನ್ನ ರೀತಿಯ ಪ್ರಯೋಗಗಳು ನಡೆಯುತ್ತಲೇ ಇವೆ. ಸೀರಿಯಲ್ನಲ್ಲಿ ಇರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಇದೀಗ ಅಂಥದ್ದೇ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಸೀತಾರಾಮ ಸೀರಿಯಲ್ ಪ್ರಿಯಾ ಅರ್ಥಾತ್ ಮೇಘನಾ ಶಂಕರಪ್ಪ ಅವರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಈ ಶೂಟಿಂಗ್ ಸ್ಪಾಟ್ನಲ್ಲಿ ಸೀತಾರಾಮ ಸೀರಿಯಲ್ ತಾರೆಯರು ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಷೋ ಕಲಾವಿದರನ್ನು ನೋಡಬಹುದು. ರಾಖಿ ಕಟ್ಟುವ ಮೂಲಕ ತಮಾಷೆ ಮಾಡಿದ್ದರೆ, ಇದು ರಾಖಿ ಹಬ್ಬ ಅಲ್ಲ, ಫ್ರೆಂಡ್ಷಿಪ್ ಡೇ ಎಂದು ಕಿಚಾಯಿಸುತ್ತಿದ್ದಾರೆ. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ರಾಮ್ ಪಾತ್ರಧಾರಿ ಗಗನ್ ಅವರಿಗೆ ರಾಖಿ ಹಬ್ಬದ ಶುಭಾಶಯ ಎಂದಿದ್ದರೆ, ಗಗನ್ ಅವರು ನೋ ವೇ. ಫ್ರೆಂಡ್ಷಿಪ್ ಡೇ ಅನ್ನಿ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಡಾನ್ಸ್ ಕರ್ನಾಟಕ ಡಾನ್ಸ್ನ ಸ್ಪರ್ಧಿಗಳನ್ನೂ ಈ ವಿಡಿಯೋದಲ್ಲಿ ನೋಡಬಹುದು.
ಸೀತಾ-ರಾಮರ ಮದ್ವೆಗೆ ಅಬ್ಬಾ ಹೇಗೆಲ್ಲಾ ಭರ್ಜರಿ ರೆಡಿ ಮಾಡಲಾಗಿದೆ ನೋಡಿ: ಶೂಟಿಂಗ್ ಸೆಟ್ ವಿಡಿಯೋ ವೈರಲ್
ಇದೇ ವಿಡಿಯೋದಲ್ಲಿ ಸೀತಾರಾಮದ ಸೀತಾ ಕೈಕೊಂಡಿರೋ ಶೂಟಿಂಗ್ ಹೇಗೆ ಮಾಡಿದ್ದು ಎನ್ನುವುದನ್ನು ತೋರಿಸಲಾಗಿದೆ. ಡಾ.ಮೇಘಶ್ಯಾಮ್ ಅವರ ಹೆಸರು ಕೇಳ್ತಿದ್ದಂತೆಯೇ ಸೀತಾ ಶಾಕ್ ಆಗಿ ಚಾಕುವಿನಿಂದ ಕೈಕೊಯ್ದುಕೊಂಡಿರುತ್ತಾಳೆ. ಹಣ್ಣನ್ನು ಕಟ್ ಮಾಡುವ ಸಂದರ್ಭದಲ್ಲಿ ಭಾರ್ಗವಿ ಪತಿ ಉದ್ದೇಶಪೂರ್ವಕವಾಗಿ ಮೇಘಶ್ಯಾಮ್ ಹೆಸರು ಉಲ್ಲೇಖ ಮಾಡಿರುತ್ತಾನೆ. ಇದನ್ನು ಕೇಳಿ ಸೀತಾಗೆ ಶಾಕ್ ಆಗಿರುತ್ತದೆ. ಆದರೆ ಇದರ ಶೂಟಿಂಗ್ ಹೇಗೆ ಮಾಡಲಾಗಿತ್ತು. ಸೀತಾಳ ಕೈಗೆ ರಕ್ತ ಹೇಗೆ ಬಂತು ಎಲ್ಲವನ್ನೂ ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಇನ್ನು ಈ ವಿಡಿಯೋ ಶೇರ್ ಮಾಡಿಕೊಂಡಿರೋ ಸೀತಾರಾಮ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಮದ್ವೆ ಅಂದ್ರೆ ಬಾಂಡಿಂಗ್ ಅಲ್ಲಾರೀ.. ಪ್ರೀತಿ ಅನ್ನೋದು ಪರ್ಮನೆಂಟ್ ಟ್ಯಾಟೂ ಥರ... ಪಾರ್ಥನ ಮಾತು ಕೇಳಿ..