ಕಿಚ್ಚ ಸುದೀಪ್ ಬಿಗ್ ಬಾಸ್ ಶೋಗೆ 'ಟಾಟಾ ಬೈಬೈ' ಹೇಳಲು ಕಾರಣ ಇದು, ಮತ್ತೇನೂ ಇಲ್ಲ!

By Shriram Bhat  |  First Published Dec 19, 2024, 7:21 PM IST

'ಎಲ್ಲರನ್ನೂ ಹ್ಯಾಂಡಲ್‌ ಮಾಡೋದು ಕಷ್ಟ ಆಗಲ್ಲ. ತುಂಬಾ ತಿಳ್ಕೊಂಡಿದ್ರೆ, ತುಂಬಾ ಸಾರ್ಟಡ್ ಆಗಿದ್ರೆ, ಎಲ್ಲಾ ವಿಚಾರದಲ್ಲೂ ಕರೆಕ್ಟ್ ಇದ್ರೆ, ಅಂಥವ್ರನ್ನ ಹ್ಯಾಂಡಲ್‌ ಮಾಡೋದು ಕಷ್ಟ ಆಗುತ್ತೆ.. ಕನ್‌ಫ್ಯೂಸನ್‌ನಲ್ಲಿ ಇರೋರು, ಗಲಾಟೆ ಮಾಡ್ಕೊಂಡು ಇರೋರು, ನಾಳೆ ಏನ್ಮಾಡ್ಬೇಕು ಅಂತ ಗೊತ್ತಿಲ್ಲ..


ಸ್ಯಾಂಡಲ್‌ವುಡ್ ಸ್ಟಾರ್ ನಟ, ಬಿಗ್ ಬಾಸ್ ಕನ್ನಡ ಹೋಸ್ಟ್ ಕಿಚ್ಚ ಸುದೀಪ್ (Kichcha Sudeep) ಅವರು ತಾವು ಇಲ್ಲಿಯವರೆಗೂ ನಡೆಸಿಕೊಂಡು ಬಂದಿರುವ ಬಿಗ್ ಬಾಸ್ ಶೋ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ಬಿಗ್ ಬಾಸ್ ಕನ್ನಡದ ಈ 11ರ ಸೀಸನ್ ಕೊನೆ, ಮುಂದೆ ನಾನು ಹೋಸ್ಟ್ ಮಾಡಲ್ಲ ಎಂದು ಈಗಾಗಲೆ ಸುದೀಪ್ ಹೇಳಿ ಆಗಿದೆ. ಆದರೆ, ಸಡನ್ನಾಗಿ ನಟ ಸುದೀಪ್ ಯಾಕಿಂತ ನಿರ್ಧಾರ ತೆಗೆದುಕೊಂಡರು? ಸುದೀಪ್ ಇಲ್ಲದೇ ಮುಂದಿನ ಬಿಗ ಬಾಸ್ ಕಥೆಯೇನು ಎಂಬುದು ಹಲವರ ಮನದಲ್ಲಿ ಮೂಡುತ್ತಿರುವ ಪ್ರಶ್ನೆ. ಇದಕ್ಕೆ ಸ್ವತಃ ನಟ ಸುದೀಪ್ ಅವರೇ ಉತ್ತರಿಸಿದ್ದಾರೆ. 

ಹಾಗಿದ್ದರೆ ನಟ ಸುದೀಪ್ ಈ ಬಗ್ಗೆ ಏನು ಹೇಳಿದ್ದಾರೆ? ಯಾಕೆ ಅವರು ಬಿಗ್ ಬಾಸ್ ನಿರೂಪಣೆಯನ್ನು ಮುಂದಿನ ಸೀಸನ್‌ನಿಂದ ಬೇರೆಯವರಿಗೆ ಬಿಡುವ ಬಗ್ಗೆ ನಿರ್ಧರಿಸಿದ್ದಾರೆ? ಈ ಬಗ್ಗೆ ನಟ ಸುದೀಪ್ ಹೀಗೆ ಹೇಳಿದ್ದಾರೆ. 'ಬಿಗ್ ಬಾಸ್‌ ಶೋವನ್ನು ಚೆನ್ನಾಗಿಯೇ ನಡೆಸಿಕೊಂಡು ಬಂದಿದ್ದೇವೆ. ಬುರ್ಜ್‌ ಖಲೀಪಾ ತರ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗಿದೆ. ಹಾಗಂತ ನಾನೇ ಮುಂದುವರಿಯಬೇಕು, ನಾನೇ ಮಾಡ್ಬೇಕು ಅಂತ ಆಸೆ ಏನೂ ಇಲ್ವಲ್ಲ. ಬೇರೆಯವರು ಮುಂದೆ ನಡೆಸಿಕೊಂಡು ಹೋದರೆ ಬೇಸರವೇನೂ ಇಲ್ಲ. 

Tap to resize

Latest Videos

undefined

ವೈರಲ್ ಆಗ್ತಿದೆ ದರ್ಶನ್ ಅಪ್ಪಟ ಅಭಿಮಾನಿ ಪತ್ರ; ಆದ್ರೆ ಮಾಮೂಲಿ ಅಲ್ಲ ನೆಕ್ಸ್ಟ್‌ ಲೆವೆಲ್‌!

ಕಳೆದ ಎರಡೂವರೆ ವರ್ಷದಿಂದ ನನ್ನ ಒಂದೇ ಒಂದು ಸಿನಿಮಾ ಸಿನಿಮಾ ತೆರೆಗೆ ಬಂದಿಲ್ಲ. ಹಾಗಂತ ಅದಕ್ಕೇ ಬಿಗ್ ಬಾಸ್‌ನಿಂದ ಹೊರಗೆ ಉಳಿಯೋ ಯೋಚನೆ ಮಾಡಿಲ್ಲ. ಆದರೆ ಈಗ ಸಾಕು ಎನ್ನಿಸಿದೆ. ಅದಕ್ಕೆ ಸರಿಯಾದ ಟೈಮ್ ಕೂಡ ಕೂಡಿ ಬಂದಿದೆ. ಅಷ್ಟು ಬಿಟ್ರೆ ಮತ್ತೇನೂ ಹೇಳಲಾಗದ, ಹೇಳಬಾರದ ಕಾರಣಗಳೇನೂ ಇಲ್ಲ. ನಾನು ಇಷ್ಟು ಸಮಯ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ' ಎಂದು ಹೇಳಿದ್ದಾರೆ ನಟ ಕಿಚ್ಚ ಸುದೀಪ್. 

ಇನ್ನು, ಬಿಗ್ ಬಾಸ್ ಹೋಸ್ಟ್ ಸುದೀಪ್ ಸಂದರ್ಶನವೊಂದರಲ್ಲಿ ಬಿಗ್‌ ಬಾಸ್‌ಗೆ ಸ್ಪರ್ಧಿಗಳ ಬಗ್ಗೆಯೂ ಮಾತನ್ನಾಡಿದ್ದಾರೆ. ನಿರೂಪಕರು ಕೇಳಿದ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಉತ್ತರಿಸುತ್ತ 'ಎಲ್ಲರನ್ನೂ ಹ್ಯಾಂಡಲ್‌ ಮಾಡೋದು ಕಷ್ಟ ಆಗಲ್ಲ. ತುಂಬಾ ತಿಳ್ಕೊಂಡಿದ್ರೆ, ತುಂಬಾ ಸಾರ್ಟಡ್ ಆಗಿದ್ರೆ, ಎಲ್ಲಾ ವಿಚಾರದಲ್ಲೂ ಕರೆಕ್ಟ್ ಇದ್ರೆ, ಅಂಥವ್ರನ್ನ ಹ್ಯಾಂಡಲ್‌ ಮಾಡೋದು ಕಷ್ಟ ಆಗುತ್ತೆ.. ಕನ್‌ಫ್ಯೂಸನ್‌ನಲ್ಲಿ ಇರೋರು, ಗಲಾಟೆ ಮಾಡ್ಕೊಂಡು ಇರೋರು, ನಾಳೆ ಏನ್ಮಾಡ್ಬೇಕು ಅಂತ ಗೊತ್ತಿಲ್ಲ ಅನ್ನೋರಿಗೆ, ಹ್ಯಾಂಡಲ್‌ ಮಾಡೋದು ತುಂಬಾ ಈಸಿ. 

ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಸುದೀಪ್ 'ಏನೂ ಹೇಳಲ್ಲ' ಎನ್ನುತ್ತಲೇ ಹೇಳಿದ್ದೇನು?

ತುಂಬಾ ಗೊತ್ತಿರೋರ ಹತ್ರ ಡಿಬೇಟ್ ಮಾಡೋದು ಕಷ್ಟ, ಹೇಳೋದೂ ಕಷ್ಟ.. ಫುಲ್ ಗೊಂದಲದಲ್ಲಿ ಇರ್ತಾರಲ್ಲ, ಅವ್ರನ್ನ ಈಸಿಯಾಗಿ ಮ್ಯಾನೇಜ್ ಮಾಡ್ಬಹುದು. ಅದೇನೂ ದೊಡ್ಡ ಸಂಗತಿಯಲ್ಲ.. ಒಂದು ಅಂದ್ರೆ, ಅವ್ರಿಗೂ ಗೊತ್ತಿರಬೇಕು ನಮಗೆ ಕೋಪ ಬಂದ್ರೆ ಏನಾಗುತ್ತೆ ಅಂತ.. ನಮಗೆ ಕೋಪ ಬರೋದು ಯಾವಾಗ? ಅನಾವಶ್ಯಕ ಏನಾದ್ರೂ ಆದಾಗ.. ಇಲ್ಲ ಅಂದ್ರೆ, ಬೇರೆ ಎಲ್ಲಾನೂ ಈಸಿ, ತುಂಬಾ ಸುಲಭ. ಜನರನ್ನು ಹ್ಯಾಂಡಲ್‌ ಮಾಡೋದು ಅಷ್ಟು ಕಷ್ಟವೇನೂ ಅಲ್ಲ.

click me!